ಇಂಧನ ಖಾತೆಗಾಗಿ ರೇವಣ್ಣ-ಡಿಕೆಶಿ ನಡುವೆ ಪೈಪೋಟಿ ಇತ್ತು: ಕುಮಾರಸ್ವಾಮಿ
Recommended Video

ಬೆಂಗಳೂರು, ಮೇ 02: ಇಂಧನ ಖಾತೆಗಾಗಿ ಡಿಕೆ ಶಿವಕುಮಾರ್ ಹಾಗೂ ಜೆಡಿಎಸ್‌ನ ರೇವಣ್ಣ ನಡುವೆ ಪೈಪೋಟಿ ಇತ್ತು ಎಂಬುದನ್ನು ಮುಖ್ಯಮಂತ್ರಿ ಕುಮಾರಸ್ವಾಮಿ ಅವರೇ ಬಹಿರಂಗ ಪಡಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದೆ ಇಬ್ಬರೂ ಸಹ ಇಂಧನ ಇಲಾಖೆಯಲ್ಲಿ ಸೇವೆ ಸಲ್ಲಿಸಿದ್ದಾರೆ ಹಾಗಾಗಿ ಇಬ್ಬರೂ ಸಹ ಇಂಧನ ಇಲಾಖೆ ತಮಗೆ ಬೇಕೆಂಬ ಬೇಡಿಕೆ ಇಟ್ಟಿದ್ದರು ಎಂದರು.
ಆದರೆ ಜೆಡಿಎಸ್ ಪಕ್ಷವು ಯಾವುದೇ ಖಾತೆಯನ್ನು ಒತ್ತಾಯಪೂರ್ವಕವಾಗಿ ಪಡೆದುಕೊಂಡಿಲ್ಲ ಎಂದಿರುವ ಅವರು, ದೇವೇಗೌಡರು ಸಹಿತ ಖಾತೆ ಹಂಚಿಕೆಯಲ್ಲಿ ಯಾವುದೇ ಷರತ್ತುಗಳನ್ನು ವಿಧಿಸಿಲ್ಲ ಎಂದು ಹೇಳಿದರು.

ಕಾಂಗ್ರೆಸ್‌ನ ಖಾತೆಗಳನ್ನು ರಾಹುಲ್ ಗಾಂಧಿ ಅಂತಿಮ ಮಾಡಿದ್ದರೆ, ಜೆಡಿಎಸ್‌ನ ಖಾತೆಗಳನ್ನು ಪಕ್ಷದ ಮುಖಂಡರು ಅಂತಿಮ ಮಾಡಿದ್ದಾರೆ. ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್ ಅವರು ಜೆಡಿಎಸ್ ಖಾತೆಯನ್ನು ಅಂತಿಮಗೊಳಿಸಲು ದೇವೇಗೌಡರನ್ನು ಸಂಪರ್ಕ ಮಾಡಿದ್ದರಷ್ಟೆ ಎಂದರು.
ಮಾಧ್ಯಮಗಳು ಖಾತೆ ಹಂಚಿಕೆಯ ಬಗ್ಗ ಅತಿರಂಜಿತ ವರದಿಗಳನ್ನು ಪ್ರಕಟಿಸುತ್ತಿದ್ದು, 'ದೇವೇಗೌಡರ ಮಾಸ್ಟರ್ ಪ್ಲಾನ್' ಎಂಬುದಾಗಿಯೆಲ್ಲಾ ಸುದ್ದಿಗಳು ಪ್ರಸಾರವಾಗುತ್ತಿವೆ. ಆದರೆ ಈ ವರೆಗೆ ಸರ್ಕಾರ ಅಥವಾ ಖಾತೆ ಹಂಚಿಕೆ ವಿಷಯದಲ್ಲಿ ದೇವೇಗೌಡರು ಹಸ್ತಕ್ಷೇಪ ಮಾಡಿಯೇ ಇಲ್ಲ ಎಂದು ಕುಮಾರಸ್ವಾಮಿ ಸ್ಪಷ್ಟಪಡಿಸಿದರು.












Click it and Unblock the Notifications