ಗಾಂಧಿ ಕುಟುಂಬದ ಆದೇಶ ಮೇರೆಗೆ ಡಿಸಿಎಂ ಆಗಲು ಡಿಕೆಶಿ ಒಪ್ಪಿಗೆ

ನವದೆಹಲಿ, ಮೇ 18: ಕರ್ನಾಟಕ ಸಿಎಂ ಸ್ಥಾನದ ಸಮಸ್ಯೆಗೆ ಬಹುತೇಕ ಅಂತಿಮಗೊಂಡಿದೆ. ಎಐಸಿಸಿ ಜೊತೆಗೆ ಸರಣಿ ಚರ್ಚೆಗಳ ಬಳಿಕ ಮನಸ್ಸು ಬದಲಿಸಿರುವ ಡಿಕೆ ಶಿವಕುಮಾರ್ ಅವರು ತಾವು ಉಪಮುಖ್ಯಮಂತ್ರಿ (DCM) ಆಗಲು ಒಪ್ಪಿರುವುದಾಗಿ ತಿಳಿಸಿದ್ದಾರೆ.

ದೆಹಲಿಯಲ್ಲಿ ಗುರುವಾರ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಡಿಸಿಎಂ ಆಗಲು ಒಪ್ಪಿಗೆ ನೀಡುವ ಮೂಲಕ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಎಂದು ಪರೋಕ್ಷವಾಗಿ ಡಿಕೆ ಶಿವಕುಮಾರ್ ತಿಳಿಸಿದ್ದಾರೆ. ಕೆಲವೊಂದು ಸಂದರ್ಭದಲ್ಲಿ ಎಐಸಿಸಿ ಅಧ್ಯಕ್ಷರ ಹಾಗೂ ಗಾಂಧಿ ಕುಟುಂಬದವರ ಆದೇಶಕ್ಕೆ ತಲೆ ಬಾಗಲೇ ಬೇಕಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

DK Sivakumar I Have Agreed To Become DCM As Per The Gandhi Family Orders

ನಾನು ಡಿಸಿಎಂ ಆಗಲು ಒಪ್ಪಿದ್ದು, ಕರ್ನಾಟಕದ ಜನತೆಗೆ ಬದ್ಧರಾಗಿರಬೇಕು. ಲೋಕಸಭಾ ಚುನಾವಣೆ ಸಮೀಪಿಸುತ್ತಿದೆ. ಆದ್ದರಿಂದ ನಮ್ಮೆಲ್ಲರ ಚಿತ್ತ ಮುಂದಿನ ಚುನಾವಣೆಯತ್ತ. ನಾನು ಸದ್ಯ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಮತ್ತು ಗಾಂಧಿ ಕುಟುಂಬದವರ ಆದೇಶಕ್ಕೆ ತಲೆ ಬಾಗಬೇಕಿದೆ ಎಂದು ಪುನರುಚ್ಚರಿಸಿದರು.

ಸಿಎಂ ಸ್ಥಾನದ ಆಯ್ಕೆ ವಿಚಾರದಲ್ಲಿ ಹೈಕಮಾಂಡ್ ವರಿಷ್ಠರು ಸೂಚನೆಯನ್ನು ಒಪ್ಪಿ ಪಾಲಿಸಬೇಕಾಗುತ್ತದೆ. ಅವರ ಅಣತಿಯಂತೆ ನಡೆದುಕೊಳ್ಳಬೇಕಾಗುತ್ತದೆ. ಬಹುಮತ ಕಾಂಗ್ರೆಸ್‌ಗೆ ಕರ್ನಾಟಕದಲ್ಲಿ ದೊಡ್ಡ ಜವಾಬ್ದಾರಿ ಹೊಂದಿದೆ. ನೀಡಿದ ಭರವಸೆಯನ್ನು ಈಡೇರಿಸುವ ಮೂಲಕ ರಾಜ್ಯ ಜನರಿಗೆ ಉತ್ತಮ ಆಡಳಿತ ನೀಡಬೇಕಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

ಕರ್ನಾಟಕ ಚುನಾವಣೆಯ ಫಲಿತಾಂಶ ಮೇ 13ರಂದು ಹೊರ ಬಿದ್ದ ನಂತರ ಸಿಎಂ ಆಯ್ಕೆಯ ಕಸರತ್ತು ಆರಂಭವಾಯಿತು. ಎರಡೇ ದಿನದಲ್ಲಿ ಸಿಎಂ ಯಾರೆಂಬುದು ಕಗ್ಗಟ್ಟಾಗಿ ದೆಹಲಿ ಹೈಕಮಾಂಡ್ ಅಂಗಳ ತಲುಪಿತು. ನಿರಂತರ ಸಭೆಗಳ ಬಳಿಕ ಇಂದು ಗುರುವಾರ ಡಿಕೆ ಶಿವಕುಮಾರ್ ಅವರು ದೊಡ್ಡವರು ಮಾತಿಗೆ ಬೆಲೆ ಕೊಟ್ಟು ಸಿಎಂ ಸ್ಥಾನವನ್ನು ಸಿದ್ದರಾಮಯ್ಯಗೆ ಬಿಟ್ಟು ಕೊಟ್ಟಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+