ಡಿ.ಕೆ.ಶಿವಕುಮಾರ್ ಪುತ್ರಿ ಐಶ್ವರ್ಯಗೆ ಕಂಕಣ ಭಾಗ್ಯ: 'ವರ' ಇವರೇನಾ.?
ಬೆಂಗಳೂರು, ಜೂನ್ 4: ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಮೊಮ್ಮಗ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರ್ ವಿವಾಹ ಇತ್ತೀಚೆಗೆಷ್ಟೇ ಕುಟುಂಬಸ್ಥರ ಸಮ್ಮುಖದಲ್ಲಿ ನೆರವೇರಿದ್ದು ನಿಮಗೆಲ್ಲಾ ಗೊತ್ತೇ ಇದೆ. ಇದೀಗ ಕೆ.ಪಿ.ಸಿ.ಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕುಟುಂಬವೂ ಶುಭಕಾರ್ಯಕ್ಕೆ ಸಾಕ್ಷಿಯಾಗಲಿದೆ.
Recommended Video
ಕೆ.ಪಿ.ಸಿ.ಸಿ ಅಧ್ಯಕ್ಷ.. ಕಾಂಗ್ರೆಸ್ ಪಕ್ಷದ ಪ್ರಬಲ ನಾಯಕ ಡಿ.ಕೆ.ಶಿವಕುಮಾರ್ ರವರ ಹಿರಿಯ ಪುತ್ರಿಗೆ ಕಂಕಣ ಭಾಗ್ಯ ಕೂಡಿಬಂದಿದೆ. ಇಂಜಿನಿಯರಿಂಗ್ ಓದಿರುವ ಪುತ್ರಿ ಐಶ್ವರ್ಯಗೆ ಮದುವೆ ಮಾಡಲು ಡಿ.ಕೆ.ಶಿವಕುಮಾರ್ ಮುಂದಾಗಿದ್ದಾರೆ.
ಕರ್ನಾಟಕದ ಮಾಜಿ ಮುಖ್ಯಮಂತ್ರಿಯೊಬ್ಬರ ಮೊಮ್ಮಗ.. ಪ್ರಖ್ಯಾತ ಉದ್ಯಮಿಯ ಮಗನೊಂದಿಗೆ ತಮ್ಮ ಪುತ್ರಿ ಐಶ್ವರ್ಯ ವಿವಾಹ ಮಹೋತ್ಸವ ನಡೆಸಲು ಡಿ.ಕೆ.ಶಿವಕುಮಾರ್ ತಯಾರಿ ನಡೆಸಿದ್ದಾರೆ. ಹಾಗಾದ್ರೆ, ಯಾರು 'ಆ' ವರ.? ನೀವೇ ನೋಡಿ...

ಎಸ್.ಎಂ.ಕೃಷ್ಣ ಮೊಮ್ಮಗ
ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಮೊಮ್ಮಗ.. ಹೆಸರಾಂತ ಉದ್ಯಮಿ, ಕೆಫೆ ಕಾಫಿ ಡೇ ಸಂಸ್ಥಾಪಕ ದಿವಂಗತ ಸಿದ್ಧಾರ್ಥ ರವರ ಪುತ್ರ ಅಮಾರ್ಥ್ಯ ಹೆಗ್ಡೆಯೊಂದಿಗೆ ಡಿ.ಕೆ.ಶಿವಕುಮಾರ್ ಪುತ್ರಿ ಐಶ್ವರ್ಯ ವಿವಾಹ ನಡೆಸಲು ಮಾತುಕತೆ ನಡೆದಿದೆ.

ಅಕ್ಟೋಬರ್ ನಲ್ಲಿ ಮದುವೆ.?
ಬರುವ ಅಕ್ಟೋಬರ್ ನಲ್ಲಿ ಅಮಾರ್ಥ್ಯ ಹೆಗ್ಡೆ ಮತ್ತು ಡಿ.ಕೆ.ಶಿವಕುಮಾರ್ ಪುತ್ರಿ ವಿವಾಹ ಮಹೋತ್ಸವ ನಡೆಯಲಿದೆ ಎಂದು ಎರಡೂ ಕುಟುಂಬಗಳ ಆಪ್ತ ಮೂಲಗಳು ತಿಳಿಸಿವೆ. ಆಗಸ್ಟ್ ತಿಂಗಳಲ್ಲಿ ಅಮಾರ್ಥ್ಯ ಹೆಗ್ಡೆ-ಐಶ್ವರ್ಯ ನಿಶ್ಚಿತಾರ್ಥ ಸಮಾರಂಭ ನಡೆಯುವ ಸಾಧ್ಯತೆ ಇದೆ.

ಇಂಜಿನಿಯರಿಂಗ್ ಪದವೀಧರೆ ಐಶ್ವರ್ಯ
ಡಿ.ಕೆ.ಶಿವಕುಮಾರ್ ಪುತ್ರಿ 22 ವರ್ಷ ವಯಸ್ಸಿನ ಐಶ್ವರ್ಯ ಇಂಜಿನಿಯರಿಂಗ್ ಪದವೀಧರೆ. ಡಿ.ಕೆ.ಶಿವಕುಮಾರ್ ಒಡೆತನದ ಗ್ಲೋಬಲ್ ಅಕಾಡೆಮಿ ಆಫ್ ಟೆಕ್ನಾಲಜಿ ಸಂಸ್ಥೆಯ ಜವಾಬ್ದಾರಿಯನ್ನು ಐಶ್ವರ್ಯ ವಹಿಸಿಕೊಂಡಿದ್ದಾರೆ.

ಅಮಾರ್ಥ್ಯ ಹೆಗ್ಡೆ ಹಿನ್ನಲೆ
ಅಮೇರಿಕಾದಲ್ಲಿ ಶಿಕ್ಷಣ ಪಡೆದಿರುವ 26 ವರ್ಷದ ಅಮಾರ್ಥ್ಯ ಹೆಗ್ಡೆ, ತಾಯಿ ಮಾಳವಿಕಾ ಜೊತೆಗೆ ಕುಟುಂಬದ ಬಿಸಿನೆಸ್ ನೋಡಿಕೊಳ್ಳುತ್ತಿದ್ದಾರೆ.

ಉತ್ತಮ ಸ್ನೇಹಿತರು
ಎಸ್.ಎಂ.ಕೃಷ್ಣ, ಉದ್ಯಮಿ ಸಿದ್ದಾರ್ಥ ಮತ್ತು ಡಿ.ಕೆ.ಶಿವಕುಮಾರ್ ಮಧ್ಯೆ ಉತ್ತಮ ಬಾಂಧವ್ಯವಿದೆ. ಇಷ್ಟು ದಿನ ಉತ್ತಮ ಸ್ನೇಹಿತರಾಗಿದ್ದವರು ಇದೀಗ ಬಂಧುಗಳಾಗಲು ಹೊರಟಿದ್ದಾರೆ.

ಖಚಿತ ಪಡಿಸಿದ ಡಿ.ಕೆ.ಶಿವಕುಮಾರ್
''ಮದುವೆ ಸ್ವರ್ಗದಲ್ಲಿ ನಿಶ್ಚಯವಾಗಿರುತ್ತೆ ಅಂತಾರೆ. ಇದೆಲ್ಲ ದೇವರ ಇಚ್ಛೆ. ಸಿದ್ದಾರ್ಥ ನಿಧನರಾಗಿ ಒಂದು ವರ್ಷ ತುಂಬುವವರೆಗೂ, ಮದುವೆ ಬಗ್ಗೆ ಮುಂದುವರೆಯಲು ಆಗಲ್ಲ'' ಎಂದು ಖಾಸಗಿ ದಿನಪತ್ರಿಕೆಗೆ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.

ಸಿದ್ದಾರ್ಥ ಸಾವನ್ನಪ್ಪುವ ಮುನ್ನವೇ ನಡೆದಿತ್ತು ಮದುವೆ ಮಾತುಕತೆ
ಕಳೆದ ವರ್ಷದ ಜುಲೈ ತಿಂಗಳಿನಲ್ಲಿ ಕೆಫೆ ಕಾಫಿ ಡೇ ಸಂಸ್ಥಾಪಕ ಸಿದ್ದಾರ್ಥ ದುರಂತ ಸಾವಿಗೀಡಾಗಿದ್ದರು. ಸಿದ್ದಾರ್ಥ ಸಾವನ್ನಪ್ಪುವ ಮುನ್ನವೇ ಅಮಾರ್ಥ್ಯ ಹೆಗ್ಡೆ-ಐಶ್ವರ್ಯ ಮದುವೆ ಬಗ್ಗೆ ಮಾತುಕತೆ ನಡೆದಿತ್ತಂತೆ. ಮದುವೆ ಮಾತುಕತೆಯನ್ನು ಮುಂದುವರೆಸಲು ಸೂಕ್ತ ಸಮಯಕ್ಕಾಗಿ ಕಾಯುತ್ತಿದ್ದ ಎರಡೂ ಕುಟುಂಬಗಳೂ ಕಳೆದ ಭಾನುವಾರ ಭೇಟಿಯಾಗಿತ್ತು.
ಕಳೆದ ಭಾನುವಾರ ಬೆಂಗಳೂರಿನ ಸದಾಶಿವನಗರದಲ್ಲಿರುವ ಡಿ.ಕೆ.ಶಿವಕುಮಾರ್ ನಿವಾಸದಲ್ಲಿ.. ಎಸ್.ಎಂ.ಕೃಷ್ಣ ಉಪಸ್ಥಿತಿಯಲ್ಲಿ ಅಮಾರ್ಥ್ಯ ಹೆಗ್ಡೆ-ಐಶ್ವರ್ಯ ಮದುವೆ ಮಾತುಕತೆಯನ್ನ ಪೂರ್ಣಗೊಳಿಸಿದ್ದಾರೆ.
-
Jowar Price Today: ಕರ್ನಾಟಕದಲ್ಲಿ ಕ್ವಿಂಟಾಲ್ ಜೋಳದ ಬೆಲೆ ಎಷ್ಟಿದೆ, ಮಾರುಕಟ್ಟೆವಾರು ಪಟ್ಟಿ ಇಲ್ಲಿದೆ. -
SSLC ಗಣಿತ ಪರೀಕ್ಷೆ ವಿಶ್ಲೇಷಣೆ : ಬ್ಲೂಪ್ರಿಂಟ್ನಂತೆಯೇ ಬಂತು ಪ್ರಶ್ನೆಪತ್ರಿಕೆ, ಔಟ್ ಆಫ್ ಔಟ್ ನಿರೀಕ್ಷೆಯಲ್ಲಿ ವಿದ್ಯಾರ್ಥಿಗಳು -
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
Pratham: ನಟ ಪ್ರಥಮ್ ಬೆಂಗಳೂರು ತೊರೆಯಲು ದರ್ಶನ್ ಅಭಿಮಾನಿಗಳ ಗಲಾಟೆ ಕಾರಣವೇ? ಅಸಲಿ ಕಾರಣ ಬಿಚ್ಚಿಟ್ಟ ಒಳ್ಳೆ ಹುಡುಗ -
ಬೆಂಗಳೂರಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚುರುಕು:12 ಬ್ಲ್ಯಾಕ್ ಸ್ಪಾಟ್ ನಿರ್ಮೂಲನೆ, 35 ಲೋಡ್ ತ್ಯಾಜ್ಯ ತೆರವು -
ದಾವಣಗೆರೆಯಲ್ಲಿ ಹೈಡ್ರಾಮಾ: ಪ್ರದೀಪ್ ಈಶ್ವರ್ ಪ್ರಚಾರದ ವೇಳೆ ಚಪ್ಪಲಿ, ಪೊರಕೆ ತೋರಿಸಿದ ಬಿಜೆಪಿ ಕಾರ್ಯಕರ್ತರು -
ಬೆಂಗಳೂರಿನ ಫುಟ್ಪಾತ್ಗಳ ದುರಸ್ತಿಗೆ ಶ್ರಮಿಸಿದ್ದ ಕೆನಡಾ ಪ್ರಜೆ ಈಗ ಮಿಜೋರಾಂಗೆ ಶಿಫ್ಟ್: 'ಬೆಂಗಳೂರಿಗೆ ವಿದಾಯ' ಎಂದ Vlogger -
Vijay Mallya: ವಿಜಯ್ ಮಲ್ಯ ಆರ್ಸಿಬಿಗೆ ಇಂಗ್ಲೀಷ್ ಪದಗಳಲ್ಲಿ ಕನ್ನಡದ ವಿಶೇಷ ಸಂದೇಶ: ಭಾರೀ ವೈರಲ್ -
ಸಕಲೇಶಪುರ: ಬೆಟ್ಟದ ಭೈರವೇಶ್ವರ ದೇವಸ್ಥಾನದಲ್ಲಿ ಪ್ರೀ-ವೆಡ್ಡಿಂಗ್ ಶೂಟ್ ವೇಳೆ ಸ್ಥಳೀಯರಿಂದ ಹಲ್ಲೆ -
ಐಪಿಎಲ್ 2026: ಆರ್ಸಿಬಿ-ಎಸ್ಆರ್ಎಚ್ ಪಂದ್ಯದ ಸಮಯ, ನೇರಪ್ರಸಾರ, ಸಂಪೂರ್ಣ ತಂಡಗಳ ವಿವರ ತಿಳಿಯಿರಿ












Click it and Unblock the Notifications