ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿದ್ದರಾಮಯ್ಯ ಅಡಿರುವ ಮಾತಿಗೆ ಅವರೇ ಉತ್ತರ ಕೊಡುತ್ತಾರೆ: ಡಿಕೆ ಶಿವಕುಮಾರ್

|
Google Oneindia Kannada News

ಬೆಂಗಳೂರು, ಮಾ.26: ಸಿದ್ದರಾಮಯ್ಯ ಅವರು ಸ್ವಾಮೀಜಿಗಳ ಕುರಿತು ಏನು ಮಾತನಾಡಿದ್ದಾರೋ, ಅದಕ್ಕೆ ಅವರೇ ಉತ್ತರ ಕೊಡುತ್ತಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದರು.

ಹಿಜಾಬ್ ಮತ್ತು ಸ್ವಾಮೀಜಿಗಳ ಶಿರಾವಸ್ತ್ರದ ಬಗ್ಗೆ ಸಿದ್ದರಾಮಯ್ಯ ಅವರ ಹೇಳಿಕೆ ಬಗ್ಗೆ ಪ್ರಶ್ನಿಸಿದಾಗ, ಸಿದ್ದರಾಮಯ್ಯ ಅವರು ತಮ್ಮ ಹೇಳಿಕೆ ಬಗ್ಗೆ ಅವರೇ ಉತ್ತರ ಕೊಡ್ತಾರೆ. ಈಗಾಗಲೇ ಅವರು ಟ್ವೀಟ್ ಮಾಡಿ ಸ್ಪಷ್ಟನೆ ನೀಡಿದ್ದಾರೆ. ಅವರಿಗೆ ಎಲ್ಲ ಧರ್ಮಗಳು, ಧರ್ಮಪೀಠಗಳು, ಸ್ವಾಮೀಜಿಗಳ ಬಗ್ಗೆ ಅಪಾರ ಗೌರವ ಇದೆ. ಅವರು ಸಿಎಂ ಆಗಿದ್ದಾಗ ಎಲ್ಲ ಧರ್ಮ ಪೀಠಗಳಿಗೆ ಅನೇಕ ಸಹಾಯ ಮಾಡಿದ್ದಾರೆ. ಅವರು ಏನು ಮಾತಾಡಿದ್ದಾರೋ ಅದಕ್ಕೆ ಅವರೇ ಉತ್ತರ ಕೊಡ್ತಾರೆ ಎಂದರು.

ಸ್ವಾಮೀಜಿಗಳಿಗೆ ಅವಮಾನ ಮಾಡಿಲ್ಲ, ನನ್ನ ಹೇಳಿಕೆ ತಿರುಚಲಾಗಿದೆ: ಸಿದ್ದರಾಮಯ್ಯಸ್ವಾಮೀಜಿಗಳಿಗೆ ಅವಮಾನ ಮಾಡಿಲ್ಲ, ನನ್ನ ಹೇಳಿಕೆ ತಿರುಚಲಾಗಿದೆ: ಸಿದ್ದರಾಮಯ್ಯ

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಬೆಂಗಳೂರಿನಲ್ಲಿ ಮಾಧ್ಯಮಗಳಿಗೆ ಶನಿವಾರ ನೀಡಿದ ಪ್ರತಿಕ್ರಿಯೆ

DK Shivakumar Refuses to React to Siddaramaiah Statement on Swamijis Headscarf

ಹಿಜಾಬ್ ಧರಿಸಿದರೆ ಎಸ್ಸೆಸೆಲ್ಸಿ ಪರೀಕ್ಷೆಗೆ ಅವಕಾಶವಿಲ್ಲ ಎಂಬ ಸರಕಾರದ ಆದೇಶ ಕುರಿತು ಗಮನ ಸೆಳೆದಾಗ, ಮಕ್ಕಳ ವಿದ್ಯಾಭ್ಯಾಸ ಬಹಳ ಮುಖ್ಯ. ತಂದೆ-ತಾಯಿ ಇರಬಹುದು, ಸರಕಾರ ಇರಬಹುದು ಅವರ ಶಿಕ್ಷಣದ ಬಗ್ಗೆ ಗಮನಹರಿಸಬೇಕು. ಮಕ್ಕಳು ತಪ್ಪು ಮಾಡಬಹುದು, ಅವರಿಗೆ ಹಠ ಇರಬಹುದು. ಹಾಗಂತ ಅವರ ಭವಿಷ್ಯ ಹಾಳಾಗಲು ಉತ್ತೇಜನ ಕೊಡಬಾರದು. ಕೂತುಕೊಂಡು ಅವರ ಹತ್ತಿರ ಮಾತನಾಡಿ ಮನವೊಲಿಸುವ ಕೆಲಸ ಮಾಡಬೇಕು ಎಂದರು.

ಧರ್ಮಗುರುಗಳು, ತಂದೆ-ತಾಯಂದಿರು, ಶಿಕ್ಷಕರನ್ನು ಬಳಸಿ, ಅವರಿಗೂ ಮನದಟ್ಟು ಮಾಡಿಕೊಟ್ಟು, ಮಕ್ಕಳಿಗೆ ತಿಳಿ ಹೇಳಿಸಬೇಕು. ಏಕೆಂದರೆ ಮಕ್ಕಳು ಶಿಕ್ಷಕರ ಮಾತನ್ನು ಗೌರವ ಕೊಟ್ಟು ಕೇಳುತ್ತಾರೆ. ತಾಯಿ ಮೊದಲ ಗುರು. ಶಿಕ್ಷಕರು ಎರಡನೇ ಗುರು. ಯಾರ್ಯಾರು ಯಾವ್ಯಾವ ಸಂದರ್ಭದಲ್ಲಿ ಏನೇನು ಮಾಡಬೇಕೋ ಅದನ್ನು ಮಾಡಬೇಕು ಎಂದರು.

ಶಾಲಾ ಮಕ್ಕಳಿಗೆ ದುಪ್ಪಟ್ಟ ಹಾಕಿಕೊಳ್ಳಲು ಅವಕಾಶ ಕೊಡಿ ಎಂದು ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಹೇಳಿದ್ದಾರಲ್ಲ ಎಂಬ ಬಗ್ಗೆ ಮಾತನಾಡಿದ ಅವರು, ಸಂವಿಧಾನ ಏನೆಲ್ಲಾ ಹೇಳುತ್ತಾದೋ, ಅಧಿಕಾರ, ಅವಕಾಶ ನೀಡಿದೆಯೋ ಅದರ ಪರವಾಗಿ ಕಾಂಗ್ರೆಸ್ ಇರುತ್ತದೆ. ನಮಗೆ ಅದೇ ಬೈಬಲ್, ಅದೇ ಖುರಾನ್, ಅದೇ ಭಗವದ್ಗೀತೆ. ಇದಕ್ಕಿಂತ ಹೆಚ್ಚಿಗೆ ನಾನೇನೂ ಹೇಳಲಾರೆ ಎಂದು ಹೇಳಿದರು.

ಈಗ ಕೋರ್ಟ್ ತೀರ್ಪು ಕೊಟ್ಟಿದೆ. ಕೆಲವರು ಅದನ್ನು ಒಪ್ಪುತ್ತಾರೆ. ಕೆಲವರು ಅದನ್ನು ಒಪ್ಪುವುದಿಲ್ಲ. ಸುಪ್ರೀಂ ಕೋರ್ಟಗೂ ಹೋಗಬಹುದು. ಇವತ್ತಲ್ಲ ನಾಳೆ ಜಡ್ಜ್ಮೆಂಟ್ ಬಂದು ಸೆಟ್ಲ್ ಆಗ್ತದೆ. ನ್ಯಾಯಾಲಯದ ತೀರ್ಪು ಸರಿ ಇಲ್ಲ ಅಂತ ನಾನು ಹೇಳೋಕೆ ರೆಡಿ ಇಲ್ಲ. ತೀರ್ಪು ತೀರ್ಪೆ. ಯಾರು ಬೇಕಾದರೂ ಹೋಗಿ ಅವರ ವಿಚಾರವನ್ನು ಮಂಡನೆ ಮಾಡಬಹುದು ಎಂದು ಶಿವಕುಮಾರ್ ಪ್ರತಿಕ್ರಿಯಿಸಿದರು.

Recommended Video

China ವಿದೇಶಾಂಗ ಸಚಿವರಿಗೆ ನಿರಾಸೆ ಮಾಡಿದ Modi | Oneindia Kannada

English summary
KPCC President DK Shivakumar Refuses to React to Siddaramaiah Statement on Swamijis Headscarf. He said he will answer to his statement.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X