ಬಿಜೆಪಿ ನನಗೆ ಬೆಂಬಲ ನೀಡಿದೆ, ಯಾವುದೇ ಷರತ್ತು ಹಾಕಿಲ್ಲ: ಸುಮಲತಾ ಅಂಬರೀಶ್
ಮಂಡ್ಯ,ಜನವರಿ12: ಬಿಜೆಪಿ ಕಾರ್ಯಕರ್ತರು ನನ್ನ ಪರ ಕೆಲಸ ಮಾಡಿದ್ದಾರೆ. ಬಿಜೆಪಿ ನನಗೆ ಬೆಂಬಲ ನೀಡಿದ್ದಾರೆ, ನನಗೆ ಬಿಜೆಪಿ ಯಾವುದೇ ಷರತ್ತು ಹಾಕಿಲ್ಲ ಎಂದು ಸಂಸದೆ ಸುಮಲತಾ ಅಂಬರೀಶ್ ಹೇಳಿದ್ದಾರೆ.
ಸುಮಲತಾ ಬಿಜೆಪಿ ಅಸೋಸಿಯೇಟ್ ಮೆಂಬರ್ ಎಂಬ ಡಿ.ಕೆ.ಶಿವಕುಮಾರ್ ಹೇಳಿಕೆ ವಿಚಾರವಾಗಿ ಗುರುವಾರ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಏನನ್ನು ವಿಚಾರಿಸದೇ ಅವರ ಅಭಿಪ್ರಾಯ ಹೇಳುವುದು ತಪ್ಪು. ನಾನು ಸಂಸದೆಯಾಗಿರುವ ಮೂರು ವರ್ಷದ ಅವಧಿಯಲ್ಲಿ ಡಿ.ಕೆ.ಶಿವಕುಮಾರ್ ಅವರ ಜೊತೆ ಮಾತಾಡಿಲ್ಲ. ಒಂದು ಪಕ್ಷದ ರಾಜ್ಯಾಧ್ಯಕ್ಷರಾದವರು ಜಿಲ್ಲೆಯಲ್ಲಿ ಏನು ಆಗುತ್ತಿದೆ ಎಂದು ತಿಳಿದುಕೊಂಡು ಮಾತಾಡ ಬೇಕು ಎಂದು ಹೇಳಿದರು.
ನನ್ನ ಗಂಡ ಅಂಬರೀಶ್ ಅವರು 25 ವರ್ಷ ಕಾಂಗ್ರೆಸ್‌ನಲ್ಲಿ ಇದ್ರು. ನಾನು ಆರಂಭದಲ್ಲಿ ನನ್ನ ಲೈಫ್‌ನಲ್ಲಿ ಮಂಡ್ಯಗೆ ಟಿಕೆಟ್ ಕೊಡಿ ಎಂದಿದ್ದು ಕಾಂಗ್ರೆಸ್‌ನನ್ನು, ನಾನು ಕಾಂಗ್ರೆಸ್‌ನ್ನು ಬಿಟ್ಟು ಬೇರೆ ಯಾವ ಪಕ್ಷದಿಂದ ಟಿಕೆಟ್ ಕೇಳಿರಲಿಲ್ಲ. ಅಂಬರೀಶ್ ಅವರಿಗೆ ಎಲ್ಲಾ ಪಕ್ಷದ ನಾಯಕರ ಜೊತೆ ಉತ್ತಮ ಒಡನಾಟ ಇತ್ತು. ನಾನು ಯಾರನ್ನು ಬೇಕಾದ್ರು ಟಿಕೆಟ್ ಕೇಳಬಹುದಿತ್ತು. ನಾನು ಕೇಳಿದ್ದು ಕಾಂಗ್ರೆಸ್ ಪಕ್ಷವನ್ನು ಮಾತ್ರ. ಅಂಬರೀಶ್ ಅವರು ಇದ್ದ ಪಕ್ಷ ಎಂದು ಕಾಂಗ್ರೆಸ್‌ನ್ನು ಕೇಳಿದ್ದೆ. ಆ ಟೈಮ್ ನಲ್ಲಿ ಟಿಕೆಟ್ ಕೊಡಲ್ಲ ಎಂದಿದ್ದೆ ಡಿ.ಕೆ.ಶಿವಕುಮಾರ್ ಎಂದರು.

ಮಂಡ್ಯ ಬೇಡಾ ನೀವು ಬೆಂಗಳೂರು ದಕ್ಷಣ, ಉತ್ತರದಲ್ಲಿ ನಿಂತುಕೊಳ್ಳಿ, ಮಂಡ್ಯದಲ್ಲಿ ತುಂಬಾ ಕಷ್ಟ ಆಗುತ್ತೆ ಮಂಡ್ಯ ಆಗಲ್ಲ ಎಂದಿದ್ದು ಡಿ.ಕೆ.ಶಿವಕುಮಾರ್, ಈ ಮಾತನ್ನು ಅವರನ್ನು ಕೇಳಿ ಅವರು ಇದನ್ನು ಒಪ್ಪಿಕೊಳ್ಳಲೇ ಬೇಕು. ಈ ಮಾತುಕಥೆಯಲ್ಲಿ ಐದಾರು ಜನ ಇದ್ದವು. ಅವರು ಟಿಕೆಟ್ ಕೊಡಲು ಆಗಲ್ಲ ಎಂದಿದ್ದಕ್ಕೆ ನಾನು ಪಕ್ಷೇತರವಾಗಿ ನಿಂತೆ. ಅವತ್ತು ಬಿಜೆಪಿ ಅಭ್ಯರ್ಥಿ ಹಾಕದೆ ನನಗೆ ಸಪೋಟ್ ಮಾಡಿದೆ, ಬಿಜೆಪಿ ಕಾರ್ಯಕರ್ತರು ನನ್ನ ಪರ ಕೆಲಸ ಮಾಡಿದ್ದಾರೆ ಬಿಜೆಪಿ ನನಗೆ ಸಪೋಟ್ ಮಾಡಿದೆ ಎನ್ನುವುದು ಸಿಕ್ರೇಟ್ ಏನಿಲ್ಲ. ನನಗೆ ಬಿಜೆಪಿ ಯಾವುದೇ ಕಂಡಿಶನ್‌ನನ್ನು ಹಾಕಿಲ್ಲ. ಗೆದ್ದ ಬಳಿಕ ನೀವು ಪಕ್ಷ ಸೇರಬೇಕು ಎಂದು ಬಿಜೆಪಿ ಹೇಳಿಲ್ಲ ಎಂದು ಹೇಳಿದರು.
ನನ್ನ ಮುಂದಿನ ನಡೆ ಏನು ಎಂದು ಎಲ್ಲೂ ಹೇಳಿಲ್ಲ.ಚಾಮುಂಡಿ ತಾಯಿ ಅಣೆ ನನಗೆ ಅನುಕೂಲ ಮಾಡಿಕೊಡಿ ಎಂದು ಯಾವ ಪಕ್ಷವನ್ನು ಕೇಳಿಕೊಂಡಿಲ್ಲ. ಪಕ್ಷೇತರವಾಗಿ ಗೆಲ್ಲಿಸಿದ ನನ್ನ ಜನರ ಋಣವನ್ನು ನಾನು ತೀರಿಸಬೇಕು, ಆ ದಾರಿಯಲ್ಲಿ ನಾನು ನಡೆದುಕೊಂಡು ಹೋಗ್ತಾ ಇದೀನಿ. ಎರಡು ಪಕ್ಷದವರು ನನ್ನ ಪಕ್ಷ ಸೇರ್ಪಡೆಗೆ ಕೇಳಿಕೊಂಡಿದ್ದಾರೆ. ಎಲ್ಲಾ ಪಕ್ಷದ ನಾಯಕರು ಮನೆಗೆ ಬಂದು ಮಾತುಕತೆ ನಡೆಸಿದ್ದಾರೆ. ನನಗೆ ಯಾರು ಏನು ಮಾಡಬೇಕಿಲ್ಲ. ಅವರು ನನ್ನ ಮಗನಿಗೆ ಸೀಟ್ ಬೇಕಾ ಎಂದ್ರು ನಾನು ಬೇಡಾ ಎಂದೆ. ನನ್ನ ಮಗನಿಗೆ ಟೈಂ ಬಂದಾಗ ಅವರೇ ನೋಡಿಕೊಳ್ಳುತ್ತಾರೆ. ಈ ಬಗ್ಗೆ ನಾನು ಕೇಳಿಲ್ಲ, ನನ್ನ ಮಗನು ಆಸೆ ಪಟ್ಟಿಲ್ಲ. ನನ್ನ ಪಕ್ಷಕ್ಕೆ ಸೇರಿಕೊಳ್ಳಲು ಕೇಳಿದವರಿಗೆ ನಾನು ಕೇಳಿರುವುದು, ನನ್ನ ಕ್ಷೇತ್ರಕ್ಕೆ ಏನು ಮಾಡಿಕೊಡುತ್ತೀರಾ, ನನ್ನ ಪರ ಇದ್ದ ಜನರಿಗೆ ಏನು ಕೊಡುತ್ತೀರಾ ಎಂದು ಕೇಳಿದ್ದೇನೆ ಎಂದು ಹೇಳಿದರು.

ಇನ್ನೂ ನನಗೆ ಬಿಜೆಪಿ ಹಾಗೂ ಕಾಂಗ್ರೆಸ್‌ನ ಕಾರ್ಯಕರ್ತರು ಸಪೋಟ್ ಮಾಡಿದ್ದಾರೆ. ಎರಡು ಪಕ್ಷದ ಸ್ಥಳೀಯ ನಾಯಕರು ಸಪೋರ್ಟ್ ಮಾಡಿದ್ದಾರೆ. ಇದಕ್ಕಾಯೇ ನಾನು ಯಾವ ನಿರ್ಧಾರವನ್ನು ಮಾಡಿಲ್ಲ. ಹೀಗಿರುವಾಗ ಡಿ.ಕೆ.ಶಿವಕುಮಾರ್ ಅವರು ಬ್ಲಾಂಕ್ ಆಗಿ ಹೇಳಿರುವುದು ತಪ್ಪು. ನನ್ನ ಬಿಜೆಪಿಯ ಅಸೋಸಿಯೇಟ್ ಮೆಂಬರ್ ಎನ್ನುವುದು ತಪ್ಪು ಎಂದು ತಿಳಿಸಿದರು.
ಮಂಡ್ಯದಲ್ಲಿ ಕಾಂಗ್ರೆಸ್ ಬಲ ಹೆಚ್ಚಿಸಬೇಕು ಅಂದಿದ್ರೆ ನನಗೂ ಅವರು ಅಭಿನಂದನೆ ಸಲ್ಲಿಸಬೇಕಿತ್ತು. ನನ್ನ ಉದ್ದೇಶ ಹಾಗೂ ಮುಂದಿನ ನಡೆಯನ್ನು ಕೇಳಬೇಕಿತ್ತು. ಡಿ.ಕೆ.ಶಿವಕುಮಾಒರ್ ಗೆ ಮಂಡ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಬಿಲ್ಡ್ ಮಾಡಬೇಕೆಂದು ಇದ್ಯಾ ಎಂಬ ಅನುಮಾನ ನನಗೆ ಇದೆ. ಕೆಲವರು ಡಿಕೆಶಿ ಮಂಡ್ಯದಲ್ಲಿ ಜೆಡಿಎಸ್ ಜೊತೆ ಹೊಂದಾಣಿಕೆ ಮಾಡಿಕೊಂಡಿದ್ದಾರೆ ಎನ್ನುತ್ತಾರೆ.
ಅವರ ಮಾತನ್ನು ಇಟ್ಟುಕೊಂಡು ಡಿಕೆಶಿ ಜೆಡಿಎಸ್ ಅಸೋಸಿಯೇಟ್ ಮೆಂಬರ್ ಎಂದು ನಾನು ಹೇಳಬಹುದು ಅಲ್ವಾ. ಹಾಗೆ ನಾನು ಹೇಳೋಕೆ ಆಗುತ್ತಾ? ಜವಾಬ್ದಾರಿ ಹುದ್ದೆಯಲ್ಲಿ ಇರುವವರು ಹೀಗೆ ಹೇಳಿವುದು ತಪ್ಪು.ಡಿ.ಕೆ.ಶಿವಕುಮಾರ್ ಗೆ ನಾನು ಕಾಂಗ್ರೆಸ್ ಸೇರಬಾರದು ಎಂಬ ಸೂಚನೆ ಕೊಡುತ್ತಿರಬಹುದು. ನನ್ನ ಯಾರು ಸ್ವಾಗತಿಸುತ್ತಾರೋ ಅಲ್ಲಿಗೆ ನಾನು ಹೋಗುತ್ತೇನೆ. ನನಗೆ ಗೌರವ ಇಲ್ಲದ ಪಕ್ಷಕ್ಕೆ ನಾನು ಹೋಗಲ್ಲ ಎಂದು ಹೇಳಿದರು.












Click it and Unblock the Notifications