ಕುಮಾರಣ್ಣನಿಗೆ ನನ್ನ ರಾಜೀನಾಮೆ ಬೇಕಂತೆ: ಕೊಡ್ತೀನಿ ಎಂದ ಡಿ.ಕೆ ಶಿವಕುಮಾರ್‌

ಚಿಕ್ಕಮಗಳೂರು, ಮೇ 08: ಮಹಿಳೆಯರ ವಿಡಿಯೋಗಳನ್ನು ಪೆನ್ ಡ್ರೈವ್ ಗಳಿಗೆ ತುಂಬಿ ಹಾದಿಬೀದಿಯಲ್ಲಿ ಸುರಿದ ಕಿಡಿಗೇಡಿಗಳನ್ನು ಕೂಡಲೇ ಬಂಧಿಸಿ ಕ್ರಮ ಜರುಗಿಸಬೇಕು ಹಾಗೂ ವಿಡಿಯೋ ಲೀಕ್ ಪ್ರಕರಣದಲ್ಲಿ ನೇರವಾಗಿ ಶಾಮೀಲಾಗಿರುವ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ತಕ್ಷಣವೇ ಸಂಪುಟದಿಂದ ವಜಾ ಮಾಡಬೇಕು. ಡಿ ಕೆ ಶಿವಕುಮಾರ್‌ ರಾಜೀನಾಮೆ ಕೊಡಬೇಕು ಎಂದು ಹೆಚ್‌ ಡಿ ಕುಮಾರಸ್ವಾಮಿ ಒತ್ತಾಯಿಸಿದ್ದಾರೆ.

ಈ ಕುರಿತು ಮಾಧ್ಯಮಗಳ ಜೊತೆಗೆ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್‌ ಮಾತನಾಡಿ, ಪೆನ್ ಡ್ರೈವ್ ವಿಚಾರ ಎಲ್ಲ ಕುಮಾರಸ್ವಾಮಿಗೆ ಗೊತ್ತು. ಕುಮಾರಣ್ಣನಿಗೆ ನನ್ನ ರಾಜೀನಾಮೆ ಬೇಕಂತೆ, ರಾಜೀನಾಮೆ ಕೊಡೋಣ ಒಕ್ಕಲಿಗ ನಾಯಕರ ಪೈಪೋಟಿಯಂತೆ, ರಾಜೀನಾಮೆ ಬೇಕಂತೆ ಕೊಡೋಣ ರಾಜೀನಾಮೆ ಎಂದು ಹೇಳಿದರು.

DK Shivakumar lashed out at Kumaraswamy saying that he will resign

ಮುಗಿಸುವುದೇ ಅಲ್ವಾ ಅವರ ಕೆಲಸ. ಕಿಂಗ್ ಆಫ್ ಬ್ಲಾಕ್ ಮೇಲ್. ಆಫೀಸರ್ಸು, ಪೊಲಿಟಿಷಿಯನ್ಸ್ ಗಳಿಗೆ ಹೆದರಿಸುತ್ತಿದ್ದಾರೆ ಅವರದು ಇದೇ ಕೆಲಸ. ಚರ್ಚೆ ಮಾಡಲು ಟೈಮ್ ಇದೆ ಅಸೆಂಬ್ಲಿ ಇದೆ ಎಲ್ಲಾ ತಗೊಂಡ್ ಬರ್ಲಿ ಚರ್ಚೆ ಮಾಡೋಣ. ಮೊದಲು ಅವರ ಹೆಸರು ಸ್ಟ್ಯಾಂಡ್ ಆಗಲಿ, ದೇವೇಗೌಡರು ನನ್ನ ಹೆಸರು ತೆಗೆದುಕೊಳ್ಳುವುದು ಬೇಡ ಅಂದರು, ಅವರದ್ದೇ ಬೇರೆ ಫ್ಯಾಮಿಲಿ ನಮ್ಮದೇ ಬೇರೆ ಫ್ಯಾಮಿಲಿ ಎಂದಿದ್ದಾರೆ
ಉಪ್ಪು ತಿಂದವನು ನೀರು ಕುಡಿಬೇಕು ಎಂದವರು ಈಗ ಯಾಕೆ ಉರಿ ಮಾಡಿಕೊಳ್ಳುತ್ತಿದ್ದಾರೆ. ಇವರು ಲಾಯರ್ರಾ, ಜಡ್ಜಾ. ಹೋಗಿ ವಾದ ಮಾಡಲಿ ಎಂದು ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದರು.

ಶಿವಕುಮಾರ್, ಸಿದ್ದರಾಮಯ್ಯ, ರಣದೀಪ್‌ ಸಿಂಗ್‌ ಸುರ್ಜೆವಾಲ ಇನ್ವೆಸ್ಟಿಗೇಷನ್ ಟೀಮ್. ಕಥಾನಾಯಕ, ಡೈರೆಕ್ಟರ್, ಪ್ರೋಡ್ಯೂಸರ್ ಎಲ್ಲಾ ಇವರೇ, ಎಲ್ಲಾ ಗೊತ್ತಿದೆ, ಅವರು ಕಾರ್ಯಕರ್ತರು ಅಂತೆ, ಮರ್ಯಾದೆ ಇದ್ರೆ ಹೋಗಿ ಧೈರ್ಯ ತುಂಬಲಿ. ನನ್ನ ಮೇಲೆ ಮಾಡದಿದ್ರೆ ಮಾರ್ಕೆಡ್ ಓಡಲ್ಲ. ನನ್ನ ಹೆಸರು ಇಲ್ಲದಿದ್ರೆ ಪಾಪ ನಿದ್ದೆಯೇ ಬರಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್‌ ಡಿ ಕುಮಾರಸ್ವಾಮಿ ವಿರುದ್ಧ ಕಿಡಿಕಾರಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+