ಹೊಸ ವರ್ಷ ಆಚರಣೆ; ಬೆಂಗಳೂರು ವ್ಯಾಪ್ತಿಯ ಅಧಿಕಾರಿಗಳಿಗೆ ರಜೆ ಮೇಲೆ ತೆರಳದಂತೆ ಸೂಚನೆ: ಡಿ.ಕೆ.ಶಿವಕುಮಾರ್

ಬೆಂಗಳೂರು, ಡಿಸೆಂಬರ್ 30: ನಗರದಲ್ಲಿ ಹೊಸ ವರ್ಷ ಆಚರಣೆ ಹಿನ್ನೆಲೆಯಲ್ಲಿ ಬಿಬಿಎಂಪಿ, ಬೆಸ್ಕಾಂ, ಬಿಡಬ್ಲ್ಯು ಎಸ್ ಎಸ್ ಬಿ ಇಲಾಖೆಯ ಅಧಿಕಾರಿಗಳು ರಜೆ ಮೇಲೆ ತೆರಳದಂತೆ ಹಾಗೂ ಸಿಬ್ಬಂದಿ ವರ್ಗಕ್ಕೆ ರಜೆ ನೀಡದಂತೆ ಸೂಚನೆ ನೀಡಿದ್ದೇನೆ. ಎಲ್ಲರೂ ಸಹ ನಗರದಲ್ಲಿಯೇ ಇರಬೇಕು ಎಂದು ತಿಳಿಸಲಾಗಿದೆ ಎಂದು ಉಪಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಅವರು ಹೇಳಿದರು.

ಈ ಕುರಿತು ನಗರದಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಮೂರನೇ ತಾರೀಕಿನ ತನಕ ಜನರು ಹೊಸ ವರ್ಷದ ಸಂಭ್ರಮಾಚರಣೆಯಲ್ಲಿ ಇರುತ್ತಾರೆ. ಬಹಳ ಜಾಗ್ರತೆಯಿಂದ ಎಲ್ಲಾ ವ್ಯವಸ್ಥೆ ಮಾಡಬೇಕು. ಜನರಿಗೆ ಸೇವೆಯನ್ನು ನೀಡಬೇಕು ಹಾಗೂ ಶಾಂತಿ ಸುವ್ಯವಸ್ಥೆಯನ್ನು ಕಾಪಾಡಬೇಕು. ಅದಕ್ಕಾಗಿ ಬೆಂಗಳೂರು ನಗರದ ಎಲ್ಲಾ ವಲಯದ ಅಧಿಕಾರಿಗಳು ಹಾಜರು ಇರಬೇಕು ಎಂದು ಸೂಚನೆ ನೀಡಿದ್ದೇನೆ ಎಂದು ಡಿ ಕೆ ಶಿವಕುಮಾರ್‌ ಅವರು ತಿಳಿಸಿದ್ದಾರೆ.

DK Shivakumar Gives Important Instructions To Bengaluru Area Officials

ಬಿಜೆಪಿಯು ಡಿ.ಕೆ. ಶಿವಕುಮಾರ್ ಅವರನ್ನೇ ಹೆಚ್ಚು ಗುರಿಯಾಗಿಸಿಕೊಂಡಿದೆ ಎಂದು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ಯಾರು ಹೆಚ್ಚು ಶಕ್ತಿ, ಸಾಮರ್ಥ್ಯ ಹೊಂದಿರುತ್ತಾರೋ ಅವರನ್ನು ಗುರಿಯಾಗಿಸುತ್ತಾರೆ ಎಂದು ಹೇಳಿದರು.

ಗುತ್ತಿಗೆದಾರ ಸಾವಿಗೆ ಕಾರಣವಾಗಿರುವ ಆರೋಪ ಹೊತ್ತಿರುವ ರಾಜು ಡಿ.ಕೆ.ಶಿವಕುಮಾರ್ ಅವರ ತೊಡೆಯ ಮೇಲೆ ಕುಳಿತಿರುವ ಫೋಟೋವನ್ನು ವಿಜಯೇಂದ್ರ ಅವರು ಬಿಡುಗಡೆ ಮಾಡಿರುವ ಬಗ್ಗೆ ಕೇಳಿದಾಗ, ಯಾರ್ಯಾರು, ಎಂತೆಂತಹ ವ್ಯಕ್ತಿಗಳು ಅವರ ತೊಡೆಯ ಮೇಲೆ ಕುಳಿತಿದ್ದಾರೆ ಎನ್ನುವುದನ್ನು ನಾನು ತೋರಿಸಲೇ ಎಂದು ಡಿ ಕೆ ಶಿವಕುಮಾರ್ ತಿರುಗೇಟು ನೀಡಿದರು.

ರಾಜ್ಯದ ಜನತೆಗೆ ಹೊಸವರ್ಷದ ಹಾರ್ದಿಕ ಶುಭಾಶಯಗಳು. 2025 ರ ವರ್ಷ ಎಲ್ಲರ ಪಾಲಿಗೂ ಉತ್ತಮವಾಗಿರಲಿ. ಹೊಸವರ್ಷಾಚರಣೆ ಹಿನ್ನೆಲೆಯಲ್ಲಿ ನಗರದಲ್ಲಿ ಸಾವಿರಕ್ಕೂ ಹೆಚ್ಚು ಕ್ಯಾಮೆರಾ ಅಳವಡಿಸಲಾಗಿದೆ. ಯಾವುದೇ ದುರ್ವರ್ತನೆ, ಅಹಿತಕರ ಘಟನೆಗೆ ಅವಕಾಶ ಇಲ್ಲ. ನಮಗೆ ಬೆಂಗಳೂರಿನ ಘನತೆ ಬಹಳ ಮುಖ್ಯ. ಯಾರೇ ಕಾನೂನು ಉಲ್ಲಂಘನೆ ಮಾಡಿದರೂ ಪೊಲೀಸರು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಾರೆ ಎಂದು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ತಿಳಿಸಿದರು.

ಹೊಸ ವರ್ಷಾಚರಣೆ ವೇಳೆ ಯಾರೊಬ್ಬರೂ ದುರ್ವರ್ತನೆ ಮಾಡುವಂತಿಲ್ಲ. ಕಾನೂನು ಉಲ್ಲಂಘನೆ ಮಾಡುವಂತಿಲ್ಲ. ಉಲ್ಲಂಘನೆ ಮಾಡಿದವರ ವಿರುದ್ಧ ಕಠಿಣ ಕ್ರಮ ಕಟ್ಟಿಟ್ಟ ಬುತ್ತಿ. ಇದನ್ನು ಮನವಿಯಾಗಿಯಾದರೂ ಪರಿಗಣಿಸಿ, ಇಲ್ಲವೇ ಎಚ್ಚರಿಕೆ ಎಂದಾದರೂ ಪರಿಗಣಿಸಿ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಎಚ್ಚರಿಕೆ ನೀಡಿದ್ದಾರೆ.

‌ಬೆಂಗಳೂರಿನಾದ್ಯಂತ 10 ಸಾವಿರಕ್ಕೂ ಹೆಚ್ಚು ಕ್ಯಾಮೆರಾ ಅಳವಡಿಸಲಾಗಿದ್ದು, ಎಲ್ಲರ ಚಲನವಲನಗಳ ಮೇಲೆ ಕಣ್ಣಿಡಲಾಗುವುದು. ಹೊಸವರ್ಷಾಚರಣೆ ವೇಳೆ ರಾಜ್ಯದ ಗೌರವ ಹಾಗೂ ಗಾಂಭೀರ್ಯ ಕಾಪಾಡಬೇಕು. ಹೊಸವರ್ಷಾಚರಣೆ ಮಾರ್ಗಸೂಚಿ, ಸಮಯಾವಕಾಶದ ಬಗ್ಗೆ ಪೊಲೀಸರು ಮಾಹಿತಿ ನೀಡಲಿದ್ದಾರೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಇರಬೇಕು. ಪಾಲಿಕೆ ಹಾಗೂ ಪೊಲೀಸರು ವ್ಯಾಪಾರಸ್ಥರಿಗೆ ಮಾರ್ಗಸೂಚಿ ನೀಡಲಿದ್ದಾರೆ. ಕಾಲಾವಕಾಶ ವಿಸ್ತರಣೆ ಮಾಡಿದ್ದರೂ ಯಾರೊಬ್ಬರೂ ಕಾನೂನು ಉಲ್ಲಂಘನೆ ಮಾಡುವಂತಿಲ್ಲ ಎಂದು ತಿಳಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+