DK Shivakumar: ಡಿ.ಕೆ ಶಿವಕುಮಾರ್ ದೆಹಲಿಯಲ್ಲಿ ಕಾಂಗ್ರೆಸ್ ಹೈಕಮಾಂಡ್ ಭೇಟಿ ಬಗ್ಗೆ ಕಾಂಗ್ರೆಸ್ ಅಪ್ಡೇಟ್ಸ್‌

DK Shivakumar: ಉಪ ಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ ಶಿವಕುಮಾರ್ ದೆಹಲಿಗೆ ಹೋಗಿದ್ದು ಅಭಿವೃದ್ಧಿ ವಿಚಾರ ಚರ್ಚೆ ಮಾಡುವುದಕ್ಕೆ ಎಂದು ಕಾಂಗ್ರೆಸ್ ಹೇಳಿದೆ. ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರ ದೆಹಲಿ ಭೇಟಿಯು ರಾಜಕೀಯ ಕಾರಣಕ್ಕೆ ಆಗಿರಲಿಲ್ಲ ಎಂದು ಕಾಂಗ್ರೆಸ್ ಹೇಳಿದೆ.

ನಿಮ್ಮನ್ನು ದಡ್ಡರು ಎನ್ನಬೇಕಾ, ಅತೀ ಬುದ್ಧಿವಂತರು ಎನ್ನಬೇಕಾ, ಮಂಕುದಿಣ್ಣೆ ಎನ್ನಬೇಕಾ? ಹೇಳೋದು ಒಂದು ಮಾಡುವುದು ಇನ್ನೊಂದು ಎಂದು ಬಿಜೆಪಿ ಪಕ್ಷವನ್ನು ಕಾಂಗ್ರೆಸ್ ಪಕ್ಷವು ತರಾಟೆಗೆ ತೆಗೆದುಕೊಂಡಿದೆ. ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಬಿಜೆಪಿ Vs ಕಾಂಗ್ರೆಸ್ ನಡುವೆ ಟ್ವೀಟ್ ವಾರ್ ಶುರುವಾಗಿದೆ. ನಮ್ಮ ಅಧ್ಯಕ್ಷರಾದ ಡಿ.ಕೆ ಶಿವಕುಮಾರ್ ಅವರು ದೆಹಲಿಗೆ ಹೋಗಿದ್ದು ಬೆಂಗಳೂರಿನ ಅಭಿವೃದ್ಧಿ, ರಾಜ್ಯದ ಹಿತಾಸಕ್ತಿ, ಜನರ ಕೆಲಸಕ್ಕಾಗಿ. ಕೆಲಸ ಮಾಡುವ ನಾಯಕರನ್ನು ನೋಡಿ ಬೆಚ್ಚಿಬೀಳುವುದು ನಿಮ್ಮ ಹಳೆಯ ಚಾಳಿ. ನೀವು ಆಡಳಿತದಲ್ಲಿದ್ದಾಗ ಬೆಂಗಳೂರು ಏನಾಯಿತು, ಗುಂಡಿಗಳ ನಗರ, ಟ್ರಾಫಿಕ್ ನರಕ, ಭ್ರಷ್ಟಾಚಾರದ ಅಡ್ಡೆ. ಈಗ ಅಭಿವೃದ್ಧಿಯ ಮಾತು ಬಂದರೆ ಪ್ರಶ್ನೆ ಕೇಳುವ ನೈತಿಕತೆ ನಿಮಗೆ ಎಲ್ಲಿಂದ ಬಂತು ಎಂದು ಕೇಳಿದೆ.

DK Shivakumar

ಡಿ.ಕೆ. ಶಿವಕುಮಾರ್ ಅವರ ಕೆಲಸವನ್ನು ಪ್ರಶ್ನಿಸಿ ಮೊಸರಲ್ಲಿ ಕಲ್ಲು ಹುಡುಕುವ ಪ್ರಯತ್ನ ಬಿಟ್ಟು, ನಿಮ್ಮ ಸರ್ಕಾರದ ವೈಫಲ್ಯಗಳ ಬಗ್ಗೆ ಮಾತನಾಡಿ. ಜಿಬಿಎ ಚುನಾವಣೆ ಉಸ್ತುವಾರಿ ವಹಿಸಿರುವ ನಿಮ್ಮ ಪಕ್ಷದ ನಾಯಕ ರಾಮ್ ಮಾಧವ್ ಅವರು ಭಾರತವು ಯಾವ ರೀತಿ ಅಮೆರಿಕಕ್ಕೆ ಶರಣಾಗಿದೆ ಎಂಬುದನ್ನು ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಎಳೆ ಎಳೆಯಾಗಿ ವಿವರಿಸಿದ್ದಾರೆ. ನಿಮಗೆ ನಿಜವಾಗಿಯೂ ದಮ್ಮು, ತಾಕತ್ತು ಇದ್ದರೆ ನಮ್ಮ ನಾಯಕರ ಬಗ್ಗೆ ಸುಳ್ಳು ಪ್ರಚಾರ ಮಾಡುವುದು ಬಿಟ್ಟು, ನಿಮ್ಮ ಕೇಂದ್ರ ಸರ್ಕಾರದ ಈ ದೊಡ್ಡ ಪ್ರಮಾದದ ಬಗ್ಗೆ ಮಾತನಾಡಿ. ಇಲ್ಲದಿದ್ದರೆ ಜನರಿಗೆ ನಿಮ್ಮ ದೇಶಭಕ್ತಿ ಕೇವಲ ಚುನಾವಣಾ ನಾಟಕ ಎನ್ನುವುದು ಮತ್ತೊಮ್ಮೆ ಸಾಬೀತಾಗುತ್ತದೆ ಎಂದು ಕಾಂಗ್ರೆಸ್ ಸವಾಲು ಎಸೆದಿದೆ.

ಸೋಷಿಯಲ್ ಮೀಡಿಯಾದಲ್ಲಿ ಬಿಜೆಪಿ ಟ್ವೀಟ್

ಇನ್ನು ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಟ್ವೀಟ್ ಮಾಡಿರುವ ಬಿಜೆಪಿಯು ಅತ್ಯಂತ ಪ್ರಮುಖ ನಿರ್ಣಯಗಳನ್ನು ಕೈಗೊಳ್ಳಬೇಕಿದ್ದ ಕ್ಯಾಬಿನೆಟ್ ಸಭೆಗೆ ಚಕ್ಕರ್ ಹಾಕಿ, ದೆಹಲಿಯ ಹೈಕಮಾಂಡ್ ನಾಯಕರ ಮನೆಯ ಗೇಟ್ ಕಾಯುವುದೆಂದರೆ, ಡಿಸಿಎಂ ಡಿ.ಕೆ ಶಿವಕುಮಾರ್ ಅವರಿಗೆ ಬಲು ಇಷ್ಟ ಅಲ್ವಾ ಕರ್ನಾಟಕ ಕಾಂಗ್ರೆಸ್ ಎಂದು ಪ್ರಶ್ನೆ ಮಾಡಿತ್ತು. ಈ ಟ್ವೀಟ್‌ಗೆ ಕಾಂಗ್ರೆಸ್ ಪಕ್ಷವು ಮೇಲಿನಂತೆ ಉತ್ತರಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+