DK Shivakumar: ಸೀರಿಯಲ್‌ನಲ್ಲೂ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಮಿಂಚು, ‘ಶ್ರೀಗಂಧದ ಗುಡಿ’ಯಲ್ಲಿ ಡಿಕೆಶಿ ಗುಣಗಾನ!

ಬಿಗ್‌ಬಾಸ್ ಕನ್ನಡ ಸೀಸನ್ 13ರ ರಿಯಾಲಿಟಿ ಶೋನಲ್ಲಿ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು 100 ದಿನಗಳ ಆಡಳಿತ ಬಗ್ಗೆ ಕಿಚ್ಚ ಸುದೀಪ್ ಅವರು ಮಾತನಾಡಿದ್ದು ಜನರಲ್ಲಿ ಭಾರೀ ಕುತೂಹಲ ಮೂಡಿಸಿತ್ತು. ಆದರೆ, ಇದೀಗ ಕನ್ನಡದ ಪ್ರಮುಖ ಸೀರಿಯಲ್‌ನಲ್ಲೂ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರ ಆಡಳಿತ ಹಾಗೂ ಕರ್ನಾಟಕ ಕಾಂಗ್ರೆಸ್ ಸರ್ಕಾರದ ಬಗ್ಗೆ ಮೆಚ್ಚುಗೆಯ ಮಾತುಗಳು ಕೇಳಿ ಬರುತ್ತಿವೆ. ಸಹಜವಾಗಿಯೇ ಮುಖ್ಯಮಂತ್ರಿ ಅವರ ಜಾಹೀರಾತುಗಳು ಎಲ್ಲೆಡೆ ಸದ್ದು ಮಾಡುತ್ತಿವೆ ಎನ್ನುವ ಚರ್ಚೆ ಜೋರಾಗಿದೆ.

ಕರ್ನಾಟಕದ ಮುಖ್ಯಮಂತ್ರಿಯಾಗಿ ಡಿ.ಕೆ ಶಿವಕುಮಾರ್ ಅವರು 100 ದಿನ ಪೂರೈಸಿದ ಬೆನ್ನಲ್ಲೇ ಕರ್ನಾಟಕ ಸರ್ಕಾರವು ಹಲವು ಪ್ರಮುಖ ಹಾಗೂ ವಿಶೇಷ ಯೋಜನೆಗಳನ್ನು ಪರಿಚಯಿಸಿದೆ. ಆದರೆ, ಇದೀಗ ಮೊದಲ ಬಾರಿಗೆ ಸೀರಿಯಲ್ ಹಾಗೂ ರಿಯಾಲಿಟಿ ಶೋಗಳಲ್ಲಿಯೂ ಕರ್ನಾಟಕ ಸರ್ಕಾರ ಹಾಗೂ ಡಿ.ಕೆ ಶಿವಕುಮಾರ್ ಅವರಿಗೆ ಸಂಬಂಧಿಸಿದ ಜಾಹೀರಾತುಗಳು ಹೆಚ್ಚಾಗಿವೆ. ಆಟೋ ಚಾಲಕರಾಗಿರುವ ತಂದೆಯೊಬ್ಬರು ಸಿಹಿ ತೆಗೆದುಕೊಂಡು ಮನೆಗೆ ಹೋಗುತ್ತಾರೆ.

DK Shivakumar CM s Praise Echoes in Srigandha Gudi Serial Government s 100-Day Rule Highlighted

ಅವರ ಮಗಳು ಈಗ ಏನು ವಿಶೇಷ ಅಂತ ಕೇಳ್ತಾಳೆ. ಹುಟ್ಟುಹಬ್ಬ, ಹಬ್ಬ ಅಥವಾ ಕುಟುಂಬದ ಯಾವುದೋ ಸಂಭ್ರಮಾಚರಣೆ ಅಲ್ಲ. ಕರ್ನಾಟಕ ಸರ್ಕಾರ ಅಧಿಕಾರದಲ್ಲಿ 100 ದಿನಗಳನ್ನು ಪೂರೈಸಿದೆ ಎನ್ನುವುದು. ಹೌದು ಕನ್ನಡದ ಪ್ರಮುಖ ಸೀರಿಯಲ್‌ಗಳಲ್ಲಿ ಒಂದಾಗಿರುವ ಶ್ರೀಗಂಧದ ಗುಡಿಯಲ್ಲಿ ಸೀರಿಯಲ್‌ನಲ್ಲಿ ಡಿಕೆ ಶಿವಕುಮಾರ್ ಸರ್ಕಾರ ಸಾಧನೆಗಳ ಬಗ್ಗೆ ಸುಮಾರು ಮೂರು ನಿಮಿಷಗಳ ಸಂಭಾಷಣೆ ಇದೆ.

ಸೀರಿಯಲ್ ಹಾಗೂ ಕನ್ನಡದ ರಿಯಾಲಿಟಿ ಶೋಗಳಲ್ಲಿ ಜಾಹೀರಾತು ಮಾದರಿಯಲ್ಲಿ ಅಲ್ಲದೆ ಪ್ರಮುಖ ಪಾತ್ರಧಾರಿಗಳು ಹಾಗೂ ಬಿಗ್‌ಬಾಸ್‌ ನಡೆಸಿಕೊಡುತ್ತಿರುವ ಕಿಚ್ಚ ಸುದೀಪ್ ಅವರು ಸಹ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರ ಬಗ್ಗೆ ಮೆಚ್ಚುಗೆ ಮಾತನಾಡಿದ್ದರು. ಇದೀಗ ಸೀರಿಯಲ್‌ನಲ್ಲಿ ಉದ್ಯೋಗಗಳು ಮತ್ತು ಕೃತಕ ಬುದ್ಧಿಮತ್ತೆ ವಿಶ್ವವಿದ್ಯಾಲಯದಿಂದ ಹಿಡಿದು ಬೆಂಗಳೂರಿನ ಹೊರಗಿನ ಆರೋಗ್ಯ ರಕ್ಷಣೆ, ರೈತರು ಮತ್ತು ಹೂಡಿಕೆ ವಿಚಾರದಲ್ಲಿ ಕರ್ನಾಟಕ ಸರ್ಕಾರ ತೆಗೆದುಕೊಂಡಿರುವ ನಿರ್ಧಾರಗಳ ಬಗ್ಗೆ ವಿವರಿಸಲಾಗಿದೆ.

ಶ್ರೀಗಂಧದ ಗುಡಿ ಸೀರಿಯಲ್ ಸಂಭಾಷಣೆಯಲ್ಲೇನಿದೆ ?

ಇನ್ನು ಶ್ರೀಗಂಧದ ಗುಡಿ ಸೀರಿಯಲ್‌ನಲ್ಲಿ ನಮ್ಮ ಸರ್ಕಾರ 100 ದಿನಗಳನ್ನು ಪೂರೈಸಿದೆ. ಅದನ್ನು ಆಚರಿಸಲು ಅವರು ಕಾರ್ಯಕ್ರಮವನ್ನು ಆಯೋಜಿಸಿದ್ದಾರೆ. ಅಲ್ಲಿ ನಾನು ಈ ಸ್ವೀಟ್ ತಗೊಂಡೆ. ಈ ಸರ್ಕಾರ ಜನರಿಗೆ ಚೆನ್ನಾಗಿ ಕೆಲಸ ಮಾಡುತ್ತಿದೆ ಅಂತ ತಂದೆ ಹೇಳಿದ್ದಾರೆ. ವೈಭವಿ ಪಾತ್ರಧಾರಿ ಸಿಎಂ ಉದ್ಯೋಗ್ ಮಿಷನ್ ಮತ್ತು ಯುವಜನರಿಗೆ ಉದ್ಯೋಗಾವಕಾಶಗಳು, ರೈತರ ಉತ್ಪನ್ನಗಳನ್ನು ಅಂತರರಾಷ್ಟ್ರೀಯ ಮಾರುಕಟ್ಟೆಗಳಿಗೆ ಕೊಂಡೊಯ್ಯುವ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಕರ್ನಾಟಕದ ಪ್ರಸ್ತಾವಿತ ಎಐ ವಿಶ್ವವಿದ್ಯಾಲಯ, ಗ್ರಾಮೀಣ ಆರೋಗ್ಯ ರಕ್ಷಣೆ ಮತ್ತು ಮಾದಕ ದ್ರವ್ಯ ವಿರೋಧಿ ಮಿಷನ್ ಬಗ್ಗೆ ಹೇಳಿದ್ದಾರೆ. ಕರ್ನಾಟಕವು ಹೀಗೆಯೇ ಮುಂದುವರಿಯಲಿ. ಜನರು ತೃಪ್ತಿಯಿಂದ ಬದುಕಲಿ ಎನ್ನುವ ಸಾಲುಗಳೊಂದಿಗೆ ಈ ಸಂಭಾಷಣೆ ಮುಕ್ತಾಯವಾಗಿದೆ.

ಬಿಗ್‌ಬಾಸ್‌ನಲ್ಲೂ ಡಿ.ಕೆ ಶಿವಕುಮಾರ್ ಸಾಧನೆ ಪಟ್ಟಿ!

ಇನ್ನು ಬಿಗ್‌ಬಾಸ್ ಶೋನಲ್ಲಿಯೂ ಕಿಚ್ಚ ಸುದೀಪ್ ಅವರು ಕರ್ನಾಟಕದ ಮುಖ್ಯಮಂತ್ರಿಯಾಗಿ ಡಿ.ಕೆ ಶಿವಕುಮಾರ್ ಅವರು 100 ದಿನ ಪೂರೈಸುವ ಬಗ್ಗೆ ಮಾತನಾಡಿದ್ದರು. ನಟ, ಬಿಗ್ ಬಾಸ್ ಕನ್ನಡ ನಿರೂಪಕ ಕಿಚ್ಚ ಸುದೀಪ್ ಅವರು ಶಿವಕುಮಾರ್ ಸರ್ಕಾರವನ್ನು ಹೊಗಳುವ ಮತ್ತು ಅದರ ಸಾಧನೆಗಳನ್ನು ಪಟ್ಟಿ ಮಾಡುವ ಸಂದೇಶವನ್ನು ನೀಡಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+