ರವಿ ಮರಣೋತ್ತರ ಪರೀಕ್ಷೆ ಮತ್ತೊಮ್ಮೆ ಮಾಡಿ: ಗೌರಮ್ಮ

Subscribe to Oneindia Kannada

ಬೆಂಗಳೂರು, ಮಾರ್ಚ್, 16: ನಿಗೂಢವಾಗಿ ಸಾವನ್ನಪ್ಪಿದ ಐಎಎಸ್ ಅಧಿಕಾರಿ ಡಿಕೆ ರವಿ ನಮ್ಮನ್ನು ಅಗಲಿ ಇಂದಿಗೆ ಒಂದು ವರ್ಷ. ದೊಡ್ಡಕೊಪ್ಪಲು ಕರಿಯಪ್ಪನ ಮಗ ರವಿ ಪುಣ್ಯತಿಥಿಗೆ ತನ್ನ ಸರವನ್ನೇ ಅಡವಿಡಬೇಕಾಯಿತು ಎಂದು ನೋವು ತೋಡಿಕೊಂಡಿದ್ದ ರವಿ ತಾಯಿ ಗೌರಮ್ಮ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಲಿದ್ದಾರೆ.

ಮಗ ಡಿಕೆ ರವಿಯ ಮರಣೋತ್ತರ ಪರೀಕ್ಷೆ ಸರಿಯಾಗಿ ನಡೆದಿಲ್ಲ. ಇನ್ನೊಮ್ಮೆ ಮರಣೋತ್ತರ ಪರೀಕ್ಷೆ ಮಾಡಬೇಕು. ಆಗ ಸತ್ಯಾಂಶ ಹೊರಬರಲು ಸಾಧ್ಯವಿದೆ ಎಂದು ಗೌರಮ್ಮ ರಾಜ್ಯ ಸರ್ಕಾರಕ್ಕೆ ಆಗ್ರಹ ಮಾಡಿದ್ದಾರೆ.[ಡಿಕೆ ರವಿಯದು ಆತ್ಮಹತ್ಯೆ : ಅಂತಿಮ ಷರಾ ಬರೆದ ಸಿಬಿಐ]

dk ravi

ಸಾವಿನ ತನಿಖೆಯನ್ನು ಮತ್ತಷ್ಟು ಚುರುಕು ಮಾಡಬೇಕು. ಸಿಬಿಐ ಯಾವ ರೀತಿಯಲ್ಲಿ ವಿವರ ಕಲೆಹಾಕುತ್ತಿದೆ ಎಂಬ ಮಾಹಿತಿ ನೀಡಬೇಕು ಎಂದು ಸಿಎಂ ಸಿದ್ದರಾಮಯ್ಯ ಅವರನ್ನು ಗೌರಮ್ಮ ಒತ್ತಾಯ ಮಾಡಲಿದ್ದಾರೆ.[ಡಿಕೆ ರವಿ ಪ್ರಕರಣದ ಟೈಮ್ ಲೈನ್]

ಡಿ.ಕೆ.ರವಿ ಅವರ ಪುಣ್ಯತಿಥಿ ಭಾನುವಾರ ಮಾರ್ಚ್ 13ರಂದು ಅವರ ಹುಟ್ಟೂರು ದೊಡ್ಡಕೊಪ್ಪಲುವಿನಲ್ಲಿ ನಡೆದಿತ್ತು. ಸರ್ಕಾರ ನನ್ನ ಮಗನನ್ನು ಸಂಪೂರ್ಣವಾಗಿ ಮರೆತಿದೆ ಎಂದು ಗೌರಮ್ಮ ಆಕ್ರೋಶ ವ್ಯಕ್ತಪಡಿಸಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
A year later, the ‘suspicious' death of late IAS officer D K Ravi has not yet been solved by the Central Bureau of Investigation (CBI). DK Ravi's mother Gowramma will meet CM Siddaramaiah regarding the the solution and the probe of this case.
Please Wait while comments are loading...