ಹೈಕೋರ್ಟ್ ಮೆಟ್ಟಿಲೇರಿದ ಡಿಕೆ ರವಿ ಸಾವಿನ ಪ್ರಕರಣ
ಬೆಂಗಳೂರು, ಮಾ.18: ದಕ್ಷ, ಪ್ರಮಾಣಿಕ ರವಿ ಸಾವು ಪ್ರಕರಣದ ತನಿಖೆಯನ್ನು ಸಿಐಡಿ ಆರಂಭಿಸಿದೆ. ಸಿಬಿಐ ತನಿಖೆಗೆ ಆಗ್ರಹಿಸಿ ವಿವಿಧೆಡೆಗಳಿಂದ ಒತ್ತಡ ಹೆಚ್ಚಾಗುತ್ತಿದೆ. ಈ ನಡುವೆ ಸರ್ಕಾರ ಈ ಬಗ್ಗೆ ಮೀನಾ ಮೇಷ ಎಣಿಸುತ್ತಿರುವ ಹೊತ್ತಲ್ಲಿ ತುಮಕೂರಿನ ನಿವಾಸಿಯೊಬ್ಬರು ಹೈಕೋರ್ಟಿಗೆ ಪತ್ರ ಬರೆದು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಎಂದು ಪರಿಗಣಿಸುವಂತೆ ಕೋರಿದ್ದಾರೆ.
ರವಿ ಅವರ ಸಾವಿನ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕೆಂದು ತುಮಕೂರು ಮೂಲದ ಮಧುಸೂದನ್ ಎಂಬುವವರು ಹೈಕೋರ್ಟ್ ರಿಜಿಸ್ಟ್ರಾರ್ ಅವರಿಗೆ ಪತ್ರ ಬರೆದಿದ್ದಾರೆ. [ರವಿ ಪ್ರಕರಣ: ತನಿಖಾಧಿಕಾರಿ ಅಚ್ಚರಿ ವರ್ಗಾವಣೆ]
ಡಿ.ಕೆ.ರವಿ ಅವರ ಸಾವಿನ ಹಿಂದೆ ಮಾಫಿಯಾ ಅವರ ಕೈವಾಡವಿದೆ. ಗೃಹ ಸಚಿವ ಕೆ.ಜೆ.ಜಾರ್ಜ್ ಅವರ ಕೈವಾಡವಿದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ ಎನ್ನಲಾಗಿದೆ. ಈ ಪತ್ರವನ್ನು ಪಿಐಎಲ್ ಎಂದು ಪರಿಗಣಿಸಿ ತನಿಖೆ ನಡೆಸಬೇಕೆಂದು ಮನವಿ ಮಾಡಿದ್ದಾರೆ. ಮಧುಸೂದನ್ ಬರೆದಿರುವ ಪತ್ರವನ್ನ ಪಿಐಎಲ್ ಆಗಿ ಸುಮೋಟೋ ಕೇಸ್ ದಾಖಲಿಸಿಕೊಳ್ಳುವ ಅವಕಾಶ ಕಾನೂನಿನಲ್ಲಿದೆ. [ರವಿ ಕುಟುಂಬದಿಂದ ಸಾಮೂಹಿಕ ಆತ್ಮಹತ್ಯೆ ಬೆದರಿಕೆ]

ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕೆಂದು ಕೋರಿ ಪ್ರತಿಪಕ್ಷಗಳು ಕಳೆದೆರಡು ದಿನಗಳಿಂದ ಉಭಯ ಸದನಗಳಲ್ಲಿ ಅಹೋರಾತ್ರಿ ಧರಣಿ ನಡೆಸುತ್ತಿವೆ. ಈಗ ಮಧುಸೂದನ್ ಅವರು ಹೈಕೋರ್ಟ್ ರಿಜಿಸ್ಟ್ರಾರ್ ಅವರಿಗೆ ಪತ್ರ ಬರೆದಿರುವುದು ಪ್ರಕರಣ ಹೊಸ ತಿರುವು ಪಡೆಯುವ ಸಾಧ್ಯತೆ ಇದೆ. [ವರದಿ :ಡಿಕೆ ರವಿ ಉಸಿರುಗಟ್ಟಿ ಸಾವು ]
ಡಿಕೆ ರವಿ ಅವರ ಕುಟುಂಬ ವರ್ಗ ವಿಧಾನಸೌಧದ ಬಳಿ ಧರಣಿ ನಿರತರಾಗಿದ್ದಾರೆ. ಸಿಎಂ ಸಿದ್ದರಾಮಯ್ಯ ನಡೆಸಿದ ಸಂಧಾನ ಮಾತುಕತೆ ವಿಫಲವಾಗಿದೆ. ಸಿಬಿಐ ತನಿಖೆಗೆ ವಹಿಸುವ ಹೊರತೂ ಇಲ್ಲಿಂದ ಕದಲುವುದಿಲ್ಲ ಎಂದು ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಅವರಿಗೆ ಖಡಕ್ ಆಗಿ ಹೇಳಿದ್ದಾರೆ.












Click it and Unblock the Notifications