ಡಿಕೆ ರವಿ ಕುಟುಂಬದಿಂದ ಆತ್ಮಹತ್ಯೆ ಬೆದರಿಕೆ
ಬೆಂಗಳೂರು, ಮಾ. 18 : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಡಿಕೆ ರವಿ ಅವರ ಕುಟುಂಬದವರು ಪ್ರತಿಭಟನೆ ನಡೆಸುತ್ತಿದ್ದ ಜಾಗಕ್ಕೆ ಬಂದು ಅವರೊಂದಿಗೆ ಮಾತುಕತೆ ನಡೆಸಿದರು. ಸಿಬಿಐ ತನಿಖೆಗೆ ವಹಿಸುವ ಬಗ್ಗೆ ನಾಲ್ಕು ದಿನದಲ್ಲಿ ಅಂತಿಮ ತೀರ್ಮಾನ ಕೈಗೊಂಡು ಸದನದಲ್ಲೇ ಈ ಕುರಿತು ತೀರ್ಮಾನ ಪ್ರಕಟಿಸುತ್ತೇನೆ ಎಂದು ಭರವಸೆ ನೀಡಿದರು.
'ನೀವು ಮಗನನ್ನು ಕಳೆದುಕೊಂಡ ದುಖಃದಲ್ಲಿದ್ದೀರಿ, ನಮಗೂ ಈ ಬಗ್ಗೆ ದುಖಃವಿದೆ. ಸಿಐಡಿ ಮತ್ತು ಸಿಬಿಐ ಇಬ್ಬರೂ ನಡೆಸುವ ತನಿಖೆ ಒಂದೇ ಎಂದು ಸಿದ್ದರಾಮಯ್ಯ ಅವರು ಕುಟುಂಬದವರ ಮನವೊಲಿಸಲು ಪ್ರಯತ್ನಿಸಿದರು. ಆದರೆ, ಕುಟುಂಬದವರು ಸಿಬಿಐ ತನಿಖೆ ಆಗಲೇಬೇಕು ಎಂದು ಕುಟುಂಬದವರು ಹಠ ಹಿಡಿದರು. ಆದ್ದರಿಂದ ಈ ಬಗ್ಗೆ ಶೀಘ್ರದಲ್ಲೇ ತೀರ್ಮಾನ ಕೈಗೊಳ್ಳುತ್ತೇನೆ ಎಂದರು.

ಸಿಎಂ ಸಿದ್ದರಾಮಯ್ಯ ಅವರ ಜೊತೆ ಇಂಧನ ಸಚಿವ ಡಿಕೆ ಶಿವಕುಮಾರ್, ತುಮಕೂರು ಜಿಲ್ಲಾ ಉಸ್ತುವಾರಿ ಸಚಿವ ಟಿಬಿ ಜಯಚಂದ್ರ ಮುಂತಾದವರು ಆಗಮಿಸಿದ್ದರು. ನಂತರ ಬಿಜೆಪಿ ಮತ್ತು ಜೆಡಿಎಸ್ ಶಾಸಕರು ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್, ಮಾಜಿ ಸಿಎಂ ಕುಮಾರಸ್ವಾಮಿ ಕುಟುಂಬದವರೊಂದಿಗೆ ಮಾತುಕತೆ ನಡೆಸಿದರು.
ಪೋಷಕರಿಂದ ಧರಣಿ : ದೊಡ್ಡಕೊಪ್ಪಲು ಕರಿಯಪ್ಪ ರವಿ ನಿಗೂಢ ಸಾವಿನ ತನಿಖೆಯನ್ನು ಸಿಬಿಐಗೆ ನೀಡುವಂತೆ ಆಗ್ರಹಿಸಿ ರವಿ ಅವರ ಪೋಷಕರು ವಿಧಾನಸೌಧ ಮುಂದೆ ಪ್ರತಿಭಟನೆ ನಡೆಸುತ್ತಿದ್ದಾರೆ. ಸಿಬಿಐ ತನಿಖೆಗೆ ವಹಿಸದಿದ್ದರೆ ಸಾಮೂಹಿಕವಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.
ಬುಧವಾರ ಸಂಜೆ ವಿಧಾನಸೌಧದ ಕೆಂಗಲ್ ಹನುಮಂತಯ್ಯ ಪ್ರತಿಮೆ ಎದುರು ಡಿಕೆ ರವಿ ಅವರ ತಂದೆ ಕರಿಯಪ್ಪ, ತಾಯಿ ಗೌರಮ್ಮ, ಅಣ್ಣ ರಮೇಶ್ ಪ್ರತಿಭಟನೆ ನಡೆಸುತ್ತಿದ್ದು, ಪ್ರಕರಣವನ್ನು ಸಿಬಿಐಗೆ ನೀಡುವಂತೆ ಒತ್ತಾಯಿಸಿದರು. [ಈ ಸಾವು ನ್ಯಾಯವೇ ಮತ ಹಾಕಿ]
ಈ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಡಿಕೆ ರವಿ ಅವರ ಅಣ್ಣ ರಮೇಶ್, ಸಿಬಿಐಗೆ ವಹಿಸದಿದ್ದರೆ ನಾವು ವಿಧಾನಸೌಧ ಮುಂಭಾಗದಲ್ಲಿ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ, ಸರ್ಕಾರಕ್ಕೆ ಗುರುವಾರ ಸಂಜೆಯ ತನಕ ಕಾಲಾವಕಾಶ ನೀಡುತ್ತೇವೆ ಎಂದರು.[ಡಿಕೆ ರವಿ ಮರಣೋತ್ತರ ಪರೀಕ್ಷೆ ವರದಿ]
Bengaluru: IAS DK Ravi’s family protests outside Assembly pic.twitter.com/4Zyw3nc5eq
— ANI (@ANI_news) March 18, 2015 ಸಿಎಂ ಸಂಧಾನ ವಿಫಲ : ಪ್ರತಿಭಟನೆ ನಡೆಸುತ್ತಿರುವ ಡಿಕೆ ರವಿ ಕುಟುಂಬದವರೊಂದಿಗೆ ಸಿದ್ದರಾಮಯ್ಯ ಅವರು ಸಂಧಾನ ನಡೆಸಲು ಮುಂದಾದದರು. ತಮ್ಮ ಆಪ್ತರನ್ನು ಕುಟುಂಬದವರ ಬಳಿಗೆ ಕಳುಹಿಸಿ ತಮ್ಮ ಕಚೇರಿಗೆ ಕರೆಸಿಕೊಳ್ಳಲು ಮುಂದಾದದರು. ಆದರೆ, ಇದಕ್ಕೆ ಒಪ್ಪದ ಡಿಕೆ ರವಿ ಕುಟುಂಬಸ್ಥರು ಸಿಎಂ ಸಿದ್ದರಾಮಯ್ಯ ಅವರೇ ಸ್ಥಳಕ್ಕೆ ಬಂದು ಮಾತುಕತೆ ನಡೆಸುವಂತೆ ಒತ್ತಾಯಿಸಿದರು. [ಡಿಕೆ ರವಿ ಸಾವಿನ ಬಗ್ಗೆ ಸಿಬಿಐ ತನಿಖೆಯಾಗಲಿ]
ಕಥೆ ಕಟ್ಟಲಾಗುತ್ತಿದೆ : ಮಾಧ್ಯಮಗಳೊಂದಿಗೆ ಮಾತನಾಡಿದ ಡಿಕೆ ರವಿ ಅವರ ತಾಯಿ ಗೌರಮ್ಮ ಅವರು 'ನನ್ನ ಮಗನ ಸಾವಿನ ನಂತರ ಕೌಟುಂಬಿಕ ಕಾರಣ, ಎಂದು ಏನೋನೋ ಕಥೆಗಳ ಕಟ್ಟಲಾಗುತ್ತಿದೆ. ನನ್ನ ಮಗ ಚಿನ್ನದಂತಹವನು ಹೆಣ್ಣು ಮಕ್ಕಳನ್ನು ಒಳೆಯ ದೃಷ್ಟಿಯಿಂದ ನೋಡುತ್ತಿದ್ದ' ಎಂದು ಹೇಳಿದರು.
'ಮನೆಯಲ್ಲಿ ಯಾವ ಗಲಾಟೆಯೂ ಇರಲಿಲ್ಲ. ಮನೆಯಲ್ಲಿ ಎಲ್ಲರೂ ಹೊಂದಾಣಿಕೆಯಿಂದ ಇದ್ದೆವು ರವಿ ಸಾವಿಗೆ ಕೌಟುಂಬಿಕ ಕಾರಣಗಳು ಇಲ್ಲ. ಸಿಐಡಿಯಿಂದ ನನ್ನ ಮಗನ ಸಾವಿಗೆ ನ್ಯಾಯ ಸಿಗಲು ಸಾಧ್ಯವಿಲ್ಲ, ಆದ್ದರಿಂದ ಸಿಬಿಐ ತನಿಖೆಗೆವಹಿಸಿ' ಎಂದು ಒತ್ತಾಯಿಸಿದರು.











Click it and Unblock the Notifications