ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಡಿಕೆ ರವಿ ಪ್ರಕರಣ: ತನಿಖಾಧಿಕಾರಿ ಅಚ್ಚರಿ ವರ್ಗಾವಣೆ

By Mahesh
|
Google Oneindia Kannada News

ಬೆಂಗಳೂರು, ಮಾ.18: ಐಎಎಸ್ ಅಧಿಕಾರಿ ಡಿಕೆ ರವಿ ಅವರ ಸಾವಿನ ನಿಗೂಢತೆ ಕ್ಷಣ ಕ್ಷಣಕ್ಕೆ ಹೊಸ ಸ್ವರೂಪ ಪಡೆದುಕೊಳ್ಳುತ್ತಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರದ ಆದೇಶದಂತೆ ಸಿಐಡಿ ತನ್ನ ತನಿಖೆ ಆರಂಭಿಸಿದೆ. ಈ ನಡುವೆ ದಿಢೀರ್ ಆಗಿ ತನಿಖಾಧಿಕಾರಿಗಳಾಗಿದ್ದ ಐಜಿಪಿ ಪ್ರಣಬ್ ಮೊಹಾಂತಿ ಅವರನ್ನು ಸರ್ಕಾರ ವರ್ಗಾವಣೆ ಮಾಡಿದೆ.

ಕ್ರೈಂ ಇನ್ವೆಸ್ಟಿಗೇಷನ್ ಡಿಪಾರ್ಟ್ಮೆಂಟ್(ಸಿಐಡಿ) ವಿಭಾಗದ ಇನ್ಸ್ ಪೆಕ್ಟರ್ ಜನರಲ್ ಆಫ್ ಪೊಲೀಸ್ ಪ್ರಣಬ್ ಮೊಹಾಂತಿ ಅವರು ಈ ಮೊದಲು ರವಿ ಸಾವಿನ ಪ್ರಕರಣದ ತನಿಖೆ ನಡೆಸುತ್ತಿದ್ದರು. ರಾತ್ರಿ ಕಳೆದು ಬೆಳಗಾಗುವುದರೊಳಗೆ ತನಿಖಾಧಿಕಾರಿಯನ್ನು ಸರ್ಕಾರ ಬದಲಾಯಿಸಿದೆ.[ಸಿದ್ದು ಮೇಲೆ ಸಾಕ್ಷಿ ನಾಶದ ಆರೋಪ]

ಪ್ರಣಬ್ ಮೊಹಾಂತಿ ಅವರ ಜಾಗಕ್ಕೆ ಐಜಿಪಿ ಸಿ.ಎಚ್ ಪ್ರತಾಪ್ ರೆಡ್ಡಿ ಅವರನ್ನು ನೇಮಿಸಿ ಗುರುವಾರ ಸಿದ್ದರಾಮಯ್ಯ ಅವರ ಸರ್ಕಾರ ಆದೇಶಿಸಿದೆ. ಆಗ್ನೇಯ ವಲಯದ ಡಿಸಿಪಿ ರೋಹಿಣಿ ಕಟೋಚ್ ಅವರ ತಂಡ ಘಟನೆ ನಡೆದ ದಿನದಂದು ಸಾಕ್ಷಿ, ಮಾಹಿತಿ ಕಲೆ ಹಾಕಿತ್ತು. [ರವಿ ಸೂಪರ್ ಟ್ರ್ಯಾಕ್ ರೆಕಾರ್ಡ್]

ಜೊತೆಗೆ ರವಿ ಅವರ ರೂಮ್, ಕೋರಮಂಗಲದಲ್ಲಿರುವ ಕಚೇರಿ ತಪಾಸಣೆ ನಡೆಸಿದ್ದರು.ಈ ಎಲ್ಲಾ ಮಾಹಿತಿಯನ್ನು ಈಗ ಸಿಐಡಿಗೆ ಹಸ್ತಾಂತರಿಸಿದ್ದಾರೆ. [ರವಿ ಸಾವಿಗೆ ಕಾರಣವೇನು? ಓಟ್ ಹಾಕಿ]

Officer leading probe into D.K. Ravi’s death transferred

ತನಿಖೆ ಆರಂಭಗೊಂಡಿದೆ: ಡಿ.ಕೆ. ರವಿ ನಿಗೂಢ ಸಾವಿನ ಪ್ರಕರಣ ತನಿಖೆಯನ್ನು ಸಿಐಡಿ ತಂಡ ಬೆಳಗ್ಗಿನಿಂದಲೇ ಆರಂಭಿಸಿದೆ. ಕೋರಮಂಗಲದಲ್ಲಿರುವ ವಾಣಿಜ್ಯ ತೆರಿಗೆ ಇಲಾಖೆ ಕಚೇರಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಕಚೇರಿ ಸಿಬ್ಬಂದಿ, ಡಿಕೆ ರವಿ ಅವರ ಸಹಾಯಕರು, ವಾಹನ ಚಾಲಕನ ಹೇಳಿಕೆ ಪಡೆದುಕೊಂಡಿದ್ದಾರೆ. [ರವಿ ಕುಟುಂಬದಿಂದ ಸಾಮೂಹಿಕ ಆತ್ಮಹತ್ಯೆ ಬೆದರಿಕೆ]

ಸಿಬಿಐಕ್ಕೆ ವಹಿಸುವಂತೆ ಆಗ್ರಹ: ಸಿಐಡಿ ಎಸಿಪಿ ಪುರುಷೊತ್ತಮ್​ ನೇತೃತ್ವದ ತಂಡ ತನಿಖೆ ತೀವ್ರಗೊಳಿಸಿದ್ದು, ಡಿವೈಎಸ್ಪಿ ಸಿರಿಗೌರಿ ಅವರೂ ಇದ್ದಾರೆ. ರವಿ ಸಾವಿನ ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಡಿಕೆ ರವಿ ಕುಟುಂಬಸ್ಥರು, ಸಹದ್ಯೋಗಿಗಳು, ವಕೀಲರು, ವಿದ್ಯಾರ್ಥಿಗಳು, ಮಾಧ್ಯಮ ಪ್ರತಿನಿಧಿಗಳು, ಪ್ರತಿಪಕ್ಷದವರು ಸೇರಿದಂತೆ ಅನೇಕ ಮಂದಿ ಆಗ್ರಹಿಸಿದ್ದಾರೆ. [ನಾಯಿ ರೋನಿ ರೋದನಕ್ಕಿಲ್ಲ ಉತ್ತರ]

ಮದನ್ ಗೋಪಾಲ್, ಪಂಕಜ್ ಕುಮಾರ್ ಪಾಂಡೆ, ಹರ್ಷ ಗುಪ್ತಾ, ರಶ್ಮಿ ಮಹೇಶ್ ರಂಥ ಹಿರಿಯ ಐಎಎಸ್ ಅಧಿಕಾರಿಗಳು ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದು ಸಿಬಿಐ ತನಿಖೆ ನಡೆಸುವಂತೆ ಕೋರಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಆನ್ ಲೈನ್ ಪಿಟೀಷನ್ ಮೂಲಕ ಆಗ್ರಹ ಮುಂದುವರೆದಿದೆ.

ಸರ್ಕಾರ ಮಾತ್ರ ತನ್ನ ನಿಧಾರ ಅಚಲ ಎಂದು ಹೇಳಿದೆ. ಈ ಸಮಯಕ್ಕೆ ವಿಧಾನಸೌಧದ ಬಳಿಧರಣಿ ನಿರತ ಕರಿಯಪ್ಪ -ಗೌರಮ್ಮ (ಡಿಕೆ ರವಿ ತಂದೆ ತಾಯಿ) ಸೇರಿದಂತೆ ಕುಟುಂಬವರ್ಗ ಸಿಎಂ ಸಿದ್ದರಾಮಯ್ಯ ಜೊತೆ ಮಾತುಕತೆ ನಡೆಸಿದರೂ ಮನ ಓಲೈಸುವಲ್ಲಿ ವಿಫಲರಾಗಿದ್ದಾರೆ.

English summary
Pronab Mohanty, Inspector General of Police, Crime Investigation Department (CID), who was leading the probe into the death of IAS officer D.K. Ravi, was abruptly transferred to the Lokayukta on Wednesday, a day after the case was transferred to the CID. ACP Purushotham is the new IO.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X