Mysuru Dasara 2023: ಸರಳ ದಸರಾ ಆಚರಣೆ ಮಾಡಿದ್ದು ಏಕೆ ಗೊತ್ತಾ?

ರಾಜ್ಯದಲ್ಲಿ ನಿನ್ನೆ ದಸರಾ ಸಂಭ್ರಮ ಕಳೆಗಟ್ಟಿತ್ತು, ಅದರಲ್ಲೂ ವಿಶ್ವ ವಿಖ್ಯಾತ ಮೈಸೂರು ದಸರಾ ಕೂಡ ಸರಳವಾಗಿ ನಡೆದರೂ ಮತ್ತೊಮ್ಮೆ ಪ್ರಪಂಚದ ಗಮನ ಸೆಳೆದಿದೆ. ಆದ್ರೆ ಈ ಬಗ್ಗೆ ಇದೀಗ ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ. ಸರಳ ದಸರಾ ನಡೆಸಿದ್ದು ಏಕೆ? ಎಂಬ ಬಗ್ಗೆಯೂ ಸ್ಪಷ್ಟನೆ ನೀಡಿದ್ದಾರೆ. ಹಾಗಾದ್ರೆ ಮೈಸೂರಲ್ಲಿ ಸರಳ ದಸರಾ ನಡೆಸಿದ್ದು ಏಕೆ?

ಮೈಸೂರಿನ ರಾಜಮಾರ್ಗದಲ್ಲಿ ನಿನ್ನೆ ಎಲ್ಲಿ ನೋಡಿದ್ರೂ ಜನಸಾಗರವೇ ಇತ್ತು. ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆ ಜಂಬೂ ಸವಾರಿ ಮಂಗಳವಾರ ಸಂಜೆ ಅದ್ಧೂರಿ ಆರಂಭ ಪಡೆದಿತ್ತು. ನಿನ್ನೆ ಸಂಜೆ 5 ಕ್ಕೆ ಸಿಎಂ ಸಿದ್ದರಾಮಯ್ಯ ಅವರು ನಾಡದೇವತೆ ಚಾಮುಂಡೇಶ್ವರಿ ದೇವಿಗೆ ಪುಷ್ಪಾರ್ಚನೆ ನೆರವೇರಿಸಿ ಜಂಬೂಸವಾರಿಗೆ ಚಾಲನೆ ನೀಡಿದ್ದರು. ಈ ಮೂಲಕ 2023ರ ಮೈಸೂರು ದಸರಾ ಆಚರಣೆ ಕಳೆಗಟ್ಟಿತ್ತು. ಹಾಗೇ ಲಕ್ಷಾಂತರ ಜನಗಳು ಜಂಬೂಸವಾರಿ ಕಣ್ತುಕೊಂಡಿದ್ದರು. ಆದ್ರೆ ಸರಳ ದಸರಾ ಆಚರಣೆ ಮಾಡಿದ್ದೇಕೆ? ಎನ್ನುವ ಬಗ್ಗೆ ಸಿಎಂ ಇಂದು ಸ್ಪಷ್ಟನೆ ನೀಡಿದ್ದಾರೆ.

Discover why Karnataka Government conducted Simple Dasara celebration in Mysuru this year

ಬರದ ನಡುವೆ ಸರಳ ದಸರಾ!

ಕರ್ನಾಟಕ ಈ ಬಾರಿ ತೀವ್ರ ಮಳೆ ಕೊರತೆ ಎದುರಿಸಿದ್ದು, ರೈತರು ಮತ್ತು ಜನರು ಸಂಕಷ್ಟ ಸುಳಿಗೆ ಸಿಲುಕಿದ್ದಾರೆ. ಹೀಗಾಗಿ ಈ ಬಾರಿ ಸರಳ ದಸರಾ ಆಚರಿಸಿದೆ ಕರ್ನಾಟಕ ಸರ್ಕಾರ. ಈ ಕುರಿತು ಮಾಹಿತಿ ನೀಡಿರುವ ಸಿಎಂ ಸಿದ್ದರಾಮಯ್ಯ, 'ಬರ ಪರಿಸ್ಥಿತಿ ಹಿನ್ನೆಲೆಯಲ್ಲಿ ಈ ಬಾರಿ ಮೈಸೂರು ದಸರಾವನ್ನು ಅಚ್ಚುಕಟ್ಟಾಗಿ, ಸರಾಳವಾಗಿ ಆಯೋಜಿಸಲಾಗಿತ್ತು, ಸರಳ ದಸರಾದಲ್ಲಿ ಸಂಭ್ರಮದಿಂದ ಪಾಲ್ಗೊಂಡು, ಯಾವುದೇ ಅಹಿತಕರ ಘಟನೆಗಳಿಗೆ ಎಡೆಮಾಡಿ ಕೊಡದಂತೆ ಶಾಂತಿಯುತವಾಗಿ ನಡೆಸಿಕೊಟ್ಟ ಸಮಸ್ತ ಜನತೆಗೆ ಧನ್ಯವಾದಗಳು' ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.

ಹಾಗೇ ಸಿಎಂ ಸಿದ್ದರಾಮಯ್ಯ ತಮ್ಮ ಟ್ವಿಟ್‌ನಲ್ಲಿ ಮಾತನ್ನು ಮುಂದುವರಿಸುತ್ತಾ, 'ದಸರಾ ಉತ್ಸವವನ್ನು ಸುವ್ಯವಸ್ಥಿತವಾಗಿ ಆಯೋಜಿಸುವಲ್ಲಿ ಕೆಲಸ ಮಾಡಿದ ಎಲ್ಲಾ ಅಧಿಕಾರಿಗಳಿಗೆ, ರಕ್ಷಣಾ ಸಿಬ್ಬಂದಿಗಳಿಗೆ, ಜಿಲ್ಲಾಡಳಿತ, ದಸರಾ ಸಮಿತಿ, ಖಾಸಗಿ ಸಂಘ ಸಂಸ್ಥೆಗಳು ಹೀಗೆ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಸಹಕರಿಸಿದ ಪ್ರತಿಯೊಬ್ಬರಿಗೂ ಧನ್ಯವಾದಗಳು.' ಅಂತಾ ಹೇಳಿದ್ದಾರೆ. ಈ ಮೂಲಕ ದಸರಾ ಆಚರಣೆ ಸರಳವಾಗಿ ನಡೆದಿದ್ದು ಏಕೆ ಎಂಬುದನ್ನೂ ಈಗ ಸಿಎಂ ತಿಳಿಸಿದ್ದಾರೆ.

Discover why Karnataka Government conducted Simple Dasara celebration in Mysuru this year

ಒಟ್ನಲ್ಲಿ ನಿನ್ನೆ ನಡೆದ ಮೈಸೂರು ದಸರಾ ಸರಳವಾಗಿ ನಡೆದರೂ ಯಶಸ್ವಿಯಾಗಿ ಜಗತ್ತಿನ ಗಮನ ಸೆಳೆದಿದೆ. ಹಾಗೇ ಬರದ ನಡುವೆ ಸರಳವಾಗಿ ದಸರಾ ನಡೆಸಿದರೂ ಲಕ್ಷಾಂತರ ಜನ ಜಗತ್ತಿನ ಮೂಲೆ ಮೂಲೆಯಿಂದ ಬಂದು ಮೈಸೂರಿನ ದಸರಾ ಕಣ್ತುಂಬಿಕೊಂಡಿದ್ದಾರೆ. ಈ ಮೂಲಕ ಮತ್ತೊಮ್ಮೆ ಕನ್ನಡ ನಾಡಿನ ಹೆಮ್ಮೆ ಝಗಮಗಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+