'ಬ್ಲ್ಯೂ ಫಿಲಂ' ಬಡಿದಾಟ: ತಾವು ನಡೆಸುತ್ತಿದ್ದ ಮೂವಿ ಟೆಂಟ್‌ಗಳ ಹೆಸರು ಹೇಳಿ ಎಚ್‌ಡಿಕೆಗೆ ಟಾಂಟ್‌ ಕೊಟ್ಟ ಡಿಕೆಶಿ

ಮಾಜಿ ಸಿಎಂ ಕುಮಾರಸ್ವಾಮಿ & ಡಿಸಿಎಂ ಡಿ.ಕೆ. ಶಿವಕುಮಾರ್ ತಿಕ್ಕಾಟ ಜೋರಾಗುತ್ತಿದೆ. 2018ರಲ್ಲಿ ಸಮ್ಮಿಶ್ರ ಸರ್ಕಾರ ರಚನೆಯಾದ ಸಮಯಕ್ಕೆ, ಜೋಡೆತ್ತು ಅಂತಲೇ ರಾಜ್ಯದಲ್ಲಿ ಖ್ಯಾತಿ ಗಳಿಸಿದ್ದ ಇಬ್ಬರು ನಾಯಕರ ನಡುವೆ ಈಗ ಸಮರ ಜೋರಾಗಿದೆ. ಅದ್ರಲ್ಲೂ ಇದು ವೈಯಕ್ತಿಕವಾಗಿ ವಾಗ್ದಾಳಿ ನಡೆಸುವ ಮಟ್ಟಕ್ಕೆ ಬಂದಿದೆ. ಇತ್ತೀಚೆಗೆ ಮಾಜಿ ಸಿಎಂ ಎಚ್‌ಡಿಕೆ 'ಬ್ಲ್ಯೂ ಫಿಲಂ' ತೋರಿಸಿದ ಆರೋಪ ಮಾಡಿದ್ರು ಅದಕ್ಕೆ ಈಗ ಡಿಸಿಎಂ ಡಿಕೆ ಶಿವಕುಮಾರ್ ಖಡಕ್ ಉತ್ತರ ಕೊಟ್ಟಿದ್ದಾರೆ.

ಮಾಜಿ ಸಿಎಂ ಕುಮಾರಸ್ವಾಮಿ & ಡಿಸಿಎಂ ಡಿ.ಕೆ. ಶಿವಕುಮಾರ್ ಒಕ್ಕಲಿಗ ಸಮುದಾಯದ ನಾಯಕರು. ಆದರೆ ಇಬ್ಬರ ನಡುವೆ ಭಾರಿ ದೊಡ್ಡ ತಿಕ್ಕಾಟ ನಡೆಯುತ್ತಿದೆ. 20 ವರ್ಷಗಳ ಹಿಂದೆ ಇಬ್ಬರೂ ಇದೇ ರೀತಿ ಒಬ್ಬರ ಮೇಲೆ ಮತ್ತೊಬ್ಬರು ವೈಯಕ್ತಿವಾಗಿ ವಾಗ್ದಾಳಿ ನಡೆಸಿ ಸುದ್ದಿಯಾಗಿದ್ದರು. ಆದರೆ ಬರು ಬರುತ್ತಾ ಇಬ್ಬರ ಮಧ್ಯೆ ಮುನಿಸು ಮರೆಯಾಗಿ, ಒಗ್ಗಟ್ಟು ಮೂಡಿತ್ತು. ಅದ್ರಲ್ಲೂ 2018ರಲ್ಲಿ ಸಮ್ಮಿಶ್ರ ಸರ್ಕಾರ ರಚನೆಯಾದ ವೇಳೆ ಒಟ್ಟಾಗಿ ಇದ್ರು. ಆದರೆ ಈಗ ಆಗಿರೋದು ಏನು?

Discover What DCM DK Shivakumar Answered To HD Kumaraswamy

'ಬ್ಲ್ಯೂ ಫಿಲಂ' ಆರೋಪಕ್ಕೆ ಡಿಸಿಎಂ ಗರಂ!

ಕೆಲವು ದಿನಗಳ ಹಿಂದೆ ಡಿ.ಕೆ. ಶಿವಕುಮಾರ್ ಅವರ ವಿರುದ್ಧ ಮಾತನಾಡುತ್ತಾ ಏಕವಚನ ಇರುವ ಶಬ್ಧಗಳನ್ನು ಬಳಸಿದ್ದರು ಎಚ್.ಡಿ. ಕುಮಾರಸ್ವಾಮಿ ಅವರು. ಡಿಕೆ ಶಿವಕುಮಾರ್ ಅವರ ವಿರುದ್ಧ ವಾಗ್ದಾಳಿ ನಡೆಸುತ್ತಾ, 'ಟೆಂಟಲ್ಲಿ ಬ್ಲೂ ಫಿಲಂ ತೋರಿಸಿಕೊಂಡು ಜೀವನ ಮಾಡಿಕೊಂಡು ಬಂದವರು ಅವರು, ಆ ಮನಸ್ಥಿತಿಯಲ್ಲಿ ಅವನಿಗೆ ಇನ್ನೇನು ಬರುತ್ತೆ?' ಎಂಬ ಮಾತನಾಡಿದ್ದರು ಎಚ್‌ಡಿಕೆ. ಈ ಮೂಲಕ ಇಬ್ಬರ ಮಧ್ಯೆ ದೊಡ್ಡ ಜ್ವಾಲೆಯೇ ಹೊತ್ತಿದೆ. ಅದಕ್ಕೆ ಈಗ ಉತ್ತರ ನೀಡಿದ್ದಾರೆ ಡಿಸಿಎಂ ಡಿ.ಕೆ. ಶಿವಕುಮಾರ್.

ಹೌದು ಟೆಂಟ್ ಇತ್ತು ಆದರೆ...

ಚಿಕ್ಕಮಗಳೂರಲ್ಲಿ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಮಾಡಿದ್ದ ಆರೋಪ ಇದೀಗ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ.ಕೆ.ಶಿವಕುಮಾರ್, ನಾನು ಟೆಂಟ್‌ಗಳನ್ನು ನಡೆಸಿದ್ದು ನಿಜ. ಆದರೆ ಒಂದೇ ಒಂದು ಟೆಂಟ್ ಅಲ್ಲ, ಒಟ್ಟು 3-4 ಟೆಂಟ್‌ಗಳನ್ನ ನಾನು ನಡೆಸುತ್ತಿದೆ. ಈ ಪೈಕಿ ದೊಡ್ಡಾಲಹಳ್ಳಿ, ಹಾರೋಬೆಲೆ, ಕೋಡಿ ಹಳ್ಳಿ & ಹುಣಸೆ ಹಳ್ಳಿ ಬಳಿ ಟೆಂಟ್‌ಗಳನ್ನು ನಡೆಸುತ್ತಿದ್ದೆ. ಇವುಗಳ ಪೈಕಿ ಹುಣಸೆ ಹಳ್ಳಿಯಲ್ಲಿ ಟೆಂಟ್ ಇಂದಿಗೂ ನಡೆಯುತ್ತಿದೆ. ಆದ್ರೆ ನಾವು, ಆ ಟೆಂಟ್‌ಗಳಲ್ಲಿ ಎಂದಿಗೂ ಕುಮಾರಸ್ವಾಮಿ ಅವರು ಆರೋಪ ಮಾಡಿರುವ ರೀತಿ ಸಿನಿಮಾ ಹಾಕಿಲ್ಲ. ಬೇಕಿದ್ರೆ ಈಗಲೂ ಹೋಗಿ ಮಾಧ್ಯಮಗಳು ಪರಿಶೀಲಿಸಲಿ ಎಂದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+