ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಯೋಧ್ಯೆ ತೀರ್ಪು; ಸೋಲು, ಗೆಲುವು ಎಂಬ ವಿಶ್ಲೇಷಣೆ ಬೇಡ

|
Google Oneindia Kannada News

ಬೆಂಗಳೂರು, ನವೆಂಬರ್ 09 : " ಅಯೋಧ್ಯೆ ತೀರ್ಪನ್ನು ಯಾರ ಗೆಲುವು, ಯಾರ ಸೋಲು, ಯಾರ ಪರ, ಯಾರ ವಿರುದ್ಧ ಎಂದು ವಿಶ್ಲೇಷಿಸುವುದು ಸರಿಯಲ್ಲ" ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದರು. ದಶಕಗಳ ಕಾಲದ ವಿವಾದದ ಕುರಿತು ಇಂದು ತೀರ್ಪು ಪ್ರಕಟವಾಗಿದೆ.

2.77 ಎಕರೆಯ ಅಯೋಧ್ಯೆ ವಿವಾದಿತ ಭೂಮಿಯ ಬಗ್ಗೆ ಸುಪ್ರೀಂಕೋರ್ಟ್ ಶನಿವಾರ ತೀರ್ಪು ನೀಡಿದೆ. ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿದರು. ನ್ಯಾಯಾಲಯದ ತೀರ್ಪಿನ ಬಗ್ಗೆ ಪ್ರತಿಕ್ರಿಯೆ ನೀಡಿದರು.

ಅಯೋಧ್ಯೆ ತೀರ್ಪನ್ನು ಬಿಜೆಪಿ ರಾಜಕೀಯಕ್ಕೆ ಬಳಸಿಕೊಳ್ಳಲ್ಲ ಅಯೋಧ್ಯೆ ತೀರ್ಪನ್ನು ಬಿಜೆಪಿ ರಾಜಕೀಯಕ್ಕೆ ಬಳಸಿಕೊಳ್ಳಲ್ಲ

"ಅಯೋಧ್ಯೆ ಜಮೀನು ವಿವಾದ ಸಂಬಂಧ ಸುಪ್ರೀಂಕೋರ್ಟ್ ನೀಡಿರುವ ತೀರ್ಪನ್ನು ಕಾಂಗ್ರೆಸ್ ಸ್ವಾಗತಿಸುತ್ತದೆ. ದೇಶದಲ್ಲಿ ಶಾಂತಿ ಕಾಪಾಡುವ ಜವಾಬ್ದಾರಿ ಪ್ರತಿ ಭಾರತೀಯ ಪ್ರಜೆಯ ಮೇಲಿದೆ" ಎಂದು ದಿನೇಶ್ ಗುಂಡೂರಾವ್ ಹೇಳಿದರು.

ಅಯೋಧ್ಯೆ ಐತಿಹಾಸಿಕ ತೀರ್ಪು: ಅರ್ಜಿದಾರರಿಗೆ ಸಿಹಿ-ಕಹಿಅಯೋಧ್ಯೆ ಐತಿಹಾಸಿಕ ತೀರ್ಪು: ಅರ್ಜಿದಾರರಿಗೆ ಸಿಹಿ-ಕಹಿ

ಕರ್ನಾಟಕದ ವಿವಿಧ ಪಕ್ಷಗಳ ನಾಯಕರು ಸುಪ್ರೀಂಕೋರ್ಟ್ ತೀರ್ಪಿನ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ. ಶಾಂತಿ ಕಾಪಾಡುವಂತೆ ಎಲ್ಲಾ ನಾಯಕರು ಕರೆ ಕೊಟ್ಟಿದ್ದಾರೆ.

ದಿನೇಶ್ ಗುಂಡೂರಾವ್

ದಿನೇಶ್ ಗುಂಡೂರಾವ್

ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ "ಇದನ್ನು ಯಾರ ಗೆಲುವು, ಯಾರ ಸೋಲು, ಯಾರ ಪರ, ಯಾರ ವಿರುದ್ಧ ಎಂದು ವಿಶ್ಲೇಷಿಸುವುದು ಸರಿಯಲ್ಲ. ಇದು ಯಾರ ವಯಕ್ತಿಕ ಜಯವೂ ಅಲ್ಲ. ಇದು ಎಲ್ಲರ ಗೆಲವು.ಎಲ್ಲರಲ್ಲಿಯೂ ಸಾಮರಸ್ಯ ಮತ್ತು ಶಾಂತಿ ಕಾಪಾಡುವ ಜವಾಬ್ದಾರಿಯಿಂದ ದೇಶವನ್ನು ಮುನ್ನಡೆಸುವುದು ಮುಖ್ಯ. ಹಾಗಾಗಿ ನಾವೆಲ್ಲರೂ ತೀರ್ಪನ್ನು ಗೌರವಿಸಿ, ಮಾನ್ಯತೆ ನೀಡಬೇಕು" ಎಂದು ಹೇಳಿದರು.

ನಮ್ಮೆಲ್ಲರ ಜವಾಬ್ದಾರಿ

ನಮ್ಮೆಲ್ಲರ ಜವಾಬ್ದಾರಿ

"ದೇಶದಲ್ಲಿ ಶಾಂತಿ, ನೆಮ್ಮದಿ ಕಾಪಾಡುವುದು ನಮ್ಮೆಲ್ಲರ ಜವಾಬ್ದಾರಿ. ಯಾರೂ ಕೂಡಾ ಧೃತಿಗೆಡದೇ, ಕೆಟ್ಟ ರೀತಿಯ ಅಭಿಪ್ರಾಯ ವ್ಯಕ್ತಪಡಿಸದೇ ಸರ್ವೋಚ್ಚ ನ್ಯಾಯಾಲಯದ ತೀರ್ಪನ್ನು ಒಪ್ಪಿಕೊಳ್ಳಬೇಕು. ದೇಶದಲ್ಲಿ ಐಕ್ಯತೆ ಮುಡಿಸುವಂತಾಗಬೇಕು. ದೇಶ ಅಭಿವೃದ್ಧಿ ಪಥದಲ್ಲಿ ನಡೆಯುವುದಕ್ಕೆ ಇದೊಂದು ಸನ್ನಿವೇಶ ನಮ್ಮ ಮುಂದೆ ಬಂದಿದೆ" ಎಂದು ದಿನೇಶ್ ಗುಂಡೂರಾವ್ ಹೇಳಿದರು.

ತೀರ್ಪನ್ನು ಸ್ವಾಗತಿಸುತ್ತದೆ

ತೀರ್ಪನ್ನು ಸ್ವಾಗತಿಸುತ್ತದೆ

"ಅಯೋಧ್ಯೆ ಭೂ ವಿವಾದದ ಬಗೆಗಿನ ಸುಪ್ರೀಂಕೋರ್ಟ್ ತೀರ್ಪನ್ನು ಗೌರವಿಸುತ್ತೇವೆ. ಈ ದೇಶದ ಮೂಲ ಸಿದ್ಧಾಂತ ಸರ್ವಧರ್ಮ ಸಮಭಾವ‌. ಎಲ್ಲಾ ಧರ್ಮಗಳಿಗೆ ರಕ್ಷಣೆ ನೀಡುವಂತಹಾ, ಎಲ್ಲಾ ಧರ್ಮೀಯರು ಒಂದಾಗಿ ಬಾಳುವಂತಹಾ ಸಂವಿಧಾನ ನಮ್ಮಲ್ಲಿದೆ. ತೀರ್ಪಿನಿಂದ ಜಾತ್ಯಾತೀತ ಮೌಲ್ಯಗಳಿಗೆ ಶಕ್ತಿ ಬಂದಿದ್ದು, ದಶಕಗಳ ವಿವಾದ ಬಗೆಹರಿದಿದೆ" ಎಂದು ದಿನೇಶ್ ಗುಂಡೂರಾವ್ ಹೇಳಿದರು.

ಪ್ರತಿ ಭಾರತೀಯನ ಜವಾಬ್ದಾರಿ

ಪ್ರತಿ ಭಾರತೀಯನ ಜವಾಬ್ದಾರಿ

"ಅಯೋಧ್ಯೆ ಜಮೀನು ವಿವಾದ ಸಂಬಂಧ ಸುಪ್ರೀಂಕೋರ್ಟ್ ನೀಡಿರುವ ತೀರ್ಪನ್ನು ಕಾಂಗ್ರೆಸ್ ಸ್ವಾಗತಿಸುತ್ತದೆ. ಭಾರತದ ಸರ್ವಧರ್ಮ ಸಮ್ಮಾನದೊಂದಿಗೆ ಶಾಂತಿ ಸುವಸ್ಥೆ ಕಾಪಾಡುವಂತೆ ಎಲ್ಲಾ ಸಮುದಾಯಗಳಲ್ಲಿ ಮನವಿ ಮಾಡುತ್ತೇವೆ. ದೇಶದಲ್ಲಿಯ ಜಾತ್ಯಾತೀತತೆ, ಏಕತೆ, ಸೌಹಾರ್ಧತೆಯನ್ನು ಕಾಪಾಡಿಕೊಳ್ಳುವುದು ಪ್ರತಿ ಭಾರತೀಯರ ಜವಾಬ್ದಾರಿ ಆಗಿದೆ" ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದರು.

English summary
KPCC president Dinesh Gundu Rao welcomed Ayodhya verdict by the supreme court. He requested citizens to maintain peace.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X