ಮಿನಿ ಸಿಲಿಂಡರ್ ಬೇಕಾದ್ರೆ ಫೋನ್ ಮಾಡಿ ತರಿಸಿಕೊಳ್ಳಿ

dial-bharatgas-mini-bpcl-5-kg-mini-gas-cylinder-just-a-call-away
ಬೆಂಗಳೂರು, ಮಾರ್ಚ್6- ದೊಡ್ಡ ಸಿಲಿಂಡರ್ ಖಾಲಿಯಾಗಿದ್ದು, ಮನೆಗೆ ನೆಂಟರು ಇಷ್ಟರು ಬೇರೆ ಬಂದಿದ್ದು, ಅಡುಗೆ ಅನಿಲಕ್ಕಾಗಿ ಪರದಾಡುತ್ತಿದ್ದರೆ ಹೆಚ್ಚು ತಲೆ ಬಿಸಿ ಮಾಡಿಕೊಳ್ಳಬೇಡಿ. ಇಂತಹ ತುರ್ತು ಸಂದರ್ಭಗಳಿಗೆಂದೇ ತೈಲ ಕಂಪನಿಗಳು ಇದೀಗ ಮಿನಿ ಸಿಲಿಂಡರುಗಳನ್ನು ಸರಬರಾಜು ಮಾಡಲು ಮುಂದಾಗಿದ್ದು, ನಿಮ್ಮ ಗ್ಯಾಸ್ ಡೀಲರ್ ಗೆ ಫೋನ್ ಮಾಡಿ, ತರಿಸಿಕೊಳ್ಳಬಹುದು.

ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯವು ಬುಧವಾರ ಇಂತಹ ಜನೋಪಯೋಗಿ ಯೋಜನೆಗೆ ಚಾಲೂ ನೀಡಲಾಗಿದೆ. Dial Bharatgas Mini ಎಂಬ ಈ ವಿನೂತನ ಯೋಜನೆಯನ್ನು ಭಾರತ್ ಪೆಟ್ರೋಲಿಯಂ ಕಂಪನಿಯವರು ಕೊಡ ಮಾಡುತ್ತಿದ್ದಾರೆ.

ಬೆಂಗಳೂರು, ಹೈದರಾಬಾದ್, ದಿಲ್ಲಿ ಮತ್ತು ಅಹಮದಾಬಾದ್ ನಗರಗಳಲ್ಲಿ ಈ ಯೋಜನೆಗೆ ಚಾಲೂ ನೀಡಲಾಗಿದೆ. ಮುಂಬೈ, ಪುಣೆ ಸೆರಿದಂತೆ ಇತರೆ ಪ್ರಮುಖ ನಗರಗಳಿಗೆ ಸದ್ಯದಲ್ಲೇ ಯೋಜನೆಯನ್ನು ವಿಸ್ತರಿಸಲಾಗುವುದು ಎಂದು ಕಂಪನಿ ಹೇಳಿದೆ. ಬೆಂಗಳೂರಿನ ಹೊಸಕೋಟೆ ಬಳಿಯಿರುವ ಕಂಬಳಿಪುರ ಗ್ರಾಮದ ಸಮೀಪವಿರುವ BPCL ಆವರಣದಲ್ಲಿ ಬಿಡುಗಡೆ ಮಾಡಲಾಗಿದೆ.

1800 224 344 ಟೋಲ್ ಫ್ರೀ ದೂರವಾಣಿ ಸಂಖ್ಯೆಗೆ ಕರೆ ಮಾಡಿ, ಹೊಸ ಮಿನಿ ಸಿಲಿಂಡರ್ ಗ್ಯಾಸ್ ಕನೆಕ್ಷನ್ ಪಡೆಯಬಹುದು ಅಥವಾ refill ಮಾಡಿಸಿಕೊಳ್ಳಬಹುದು. ಗಮನಿಸಿ ಈ ಮಿನಿ ಸಿಲಿಂಡರ್ ಅನಿಲದ ಬೆಲೆಯು ಗೃಹಬಳಕೆ ಅನಿಲದಂತೆ ಸಬ್ಸಿಡಿ ದರದಲ್ಲಿ ಸಿಗುವುದಿಲ್ಲ. ಮುಕ್ತ ಮಾರುಕಟ್ಟೆ ದರದಲ್ಲಿ ಸಿಗುತ್ತದೆ.

ಹೊಸ ಮಿನಿ ಸಿಲಿಂಡರ್ ಗ್ಯಾಸ್ ಕನೆಕ್ಷನ್ ಪಡೆಯಬೇಕಾದರೆ ಮೊದಲು 1,000 ರೂಪಾಯಿ ಮತ್ತು ತೆರಿಗೆಯನ್ನು ಪಾವತಿಸಬೇಕು. ರೆಗ್ಯುಲೇರ್ ಗಾಗಿ 250 ರೂ ತೆರಬೇಕು. ಮತ್ತು ಸಿಲಿಂಡರ್ ಬೆಲೆಯನ್ನು ಪಾವತಿಸಬೇಕು.

ಬುಕ್ ಮಾಡಿದ 2 ಗಂಟೆಗಳೊಳಗಾಗಿ ಮಿನಿ ಸಿಲಿಂಡರ್ ನಿಮ್ಮ ಮನೆಯ ಬಾಗಿಲಿಗೆ ಬರುತ್ತದೆ. ಆದರೆ ಇದಕ್ಕಾಗಿ 25 ರೂ. ಸೇವಾ ಶುಲ್ಕವನ್ನು ಭರಿಸಬೇಕಾಗುತ್ತದೆ. ದಿನ 24 ಗಂಟೆಯೂ ಈ ಸೇವೆ ಲಭ್ಯವಿರುತ್ತದಾದರೂ ಬೆಳಗ್ಗೆ 9 ಗಂಟೆಯಿಂದ ರಾತ್ರಿ 9ರವರೆಗೆ ಮಾತ್ರ ಮಿನಿ ಸಿಲಿಂಡರ್ ಡೆಲಿವರಿ ಇರುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+