ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೀಟು ಹಂಚಿಕೆ: ಗೌಡ್ರ ವ್ಯವಹಾರ ಏನಿದ್ರೂ ಡೈರೆಕ್ಟ್ ರಾಹುಲ್ ಗಾಂಧಿ, ನಾಟ್ ಸಿದ್ದರಾಮಯ್ಯ

|
Google Oneindia Kannada News

Recommended Video

lok sabha elections 2019: ಸೀಟು ಹಂಚಿಕೆ: ಗೌಡ್ರ ವ್ಯವಹಾರ ಏನಿದ್ರೂ ಡೈರೆಕ್ಟ್ ರಾಹುಲ್ ಗಾಂಧಿ, ನಾಟ್ ಸಿದ್ದರಾಮಯ್ಯ

ಕಾಂಗ್ರೆಸ್-ಜೆಡಿಎಸ್ ಸಮನ್ವಯ ಸಮಿತಿ ಸಭೆಯಲ್ಲಿ ಏನೇ ಮಾತುಕತೆ ನಡೆಯಲಿ, ಏನೇ ನಿರ್ಧಾರಕ್ಕೆ ಬರಲಿ, ಅದು ಅಂತಿಮವಾಗುವುದು ಜೆಡಿಎಸ್ ವರಿಷ್ಠ ದೇವೇಗೌಡ್ರು ಷರಾ ಒತ್ತಿದೆ ಮೇಲೆಯೇ ಎನ್ನುವುದು, ರಾಜ್ಯದ ಎರಡೂ ಪಕ್ಷಗಳ ಹಿರಿಯ ಮುಖಂಡರಿಗೆ ಗೊತ್ತಿರುವ ವಿಚಾರ.

ಅಸಲಿಗೆ, ಲೋಕಸಭಾ ಚುನಾವಣೆಯಲ್ಲೂ ಹೊಂದಾಣಿಕೆ ಮಾಡಿಕೊಳ್ಳೋಣ ಎಂದು, ಸಮ್ಮಿಶ್ರ ಸರಕಾರ ಅಧಿಕಾರಕ್ಕೆ ಬಂದಾಗಲೇ, ದೇವೇಗೌಡ್ರು, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಗೆ ಆಫರ್ ನೀಡಿದ್ದರು. ಮೈತ್ರಿ ಮಾಡಿಕೊಂಡರೆ ಏನು ಲಾಭ ಎಂದು ಗೌಡ್ರು ಅಂದೇ ವಿವರಿಸಿದ್ದರು.

ಅಂದಿನಿಂದ ಇಂದಿನವರೆಗೆ ದೇವೇಗೌಡ್ರ ಸೀಟು ಹಂಚಿಕೆ ಹೊಂದಾಣಿಕೆಯ ವ್ಯವಹಾರ ಏನಿದ್ದರೂ ರಾಹುಲ್ ಗಾಂಧಿಯ ಜೊತೆಗೆಯೇ ಹೊರತು, ರಾಜ್ಯದ ಕಾಂಗ್ರೆಸ್ ಮುಖಂಡರ ಜೊತೆಗಲ್ಲ ಎನ್ನುವುದು ಅವರ ಮಾತಲ್ಲೇ ಸ್ಪಷ್ಟವಾಗಿತ್ತು.

ಮಂಡ್ಯದಿಂದ ಸ್ಪರ್ಧೆ: ಎಲ್ಲಾ ಸುದ್ದಿಗಳಿಗೆ ತೆರೆ ಎಳೆದ ನಿಖಿಲ್ ಕುಮಾರಸ್ವಾಮಿ ಮಂಡ್ಯದಿಂದ ಸ್ಪರ್ಧೆ: ಎಲ್ಲಾ ಸುದ್ದಿಗಳಿಗೆ ತೆರೆ ಎಳೆದ ನಿಖಿಲ್ ಕುಮಾರಸ್ವಾಮಿ

ಕಳೆದ ಸೋಮವಾರ (ಮಾ 4) ಸೀಟು ಹಂಚಿಕೆಯ ಸಂಬಂಧ ಜೆಡಿಎಸ್ - ಕಾಂಗ್ರೆಸ್ ಮುಖಂಡರ ನಡುವೆ ಸುದೀರ್ಘ ಚರ್ಚೆ ನಡೆದರೂ, ಯಾವುದೇ ಅಂತಿಮ ನಿರ್ಧಾರಕ್ಕೆ ಬರಲಾಗಲಿಲ್ಲ. ಹನ್ನೆರಡು ಕ್ಷೇತ್ರ ಬೇಕೆಂದು ಜೆಡಿಎಸ್, ಅಷ್ಟು ಕೊಡಲಾಗುವುದಿಲ್ಲ, ಏನಿದ್ದರೂ ಆರು ಕ್ಷೇತ್ರ ಎಂದು ಕಾಂಗ್ರೆಸ್ ಚೌಕಾಸಿ ನಡೆಸುತ್ತಿತ್ತು. ರಾಹುಲ್ ಜೊತೆ ಮಾತುಕತೆ ನಡೆಸಿ, ಹತ್ತು ಸೀಟು ಗಿಟ್ಟಿಸಿಕೊಂಡ್ರಾ, ಗೌಡ್ರು?

ರಾಹುಲ್ ಗಾಂಧಿ ಜೊತೆ ಮಾತುಕತೆ ನಡೆಸುತ್ತೇನೆ ಎಂದೇ ಹೇಳುತ್ತಾ ಬಂದಿರುವ ಗೌಡ್ರು

ರಾಹುಲ್ ಗಾಂಧಿ ಜೊತೆ ಮಾತುಕತೆ ನಡೆಸುತ್ತೇನೆ ಎಂದೇ ಹೇಳುತ್ತಾ ಬಂದಿರುವ ಗೌಡ್ರು

ಸೀಟು ಹಂಚಿಕೆಯ ಗೊಂದಲ ಎದುರಾದಾಗಲೆಲ್ಲಾ ನಾನು ದೆಹಲಿಯಲ್ಲಿ ರಾಹುಲ್ ಗಾಂಧಿ ಜೊತೆ ಮಾತುಕತೆ ನಡೆಸುತ್ತೇನೆ ಎಂದೇ ಹೇಳುತ್ತಾ ಬಂದಿರುವ ಗೌಡ್ರು, ರಾಜ್ಯ ಕಾಂಗ್ರೆಸ್ ನಾಯಕರ ಒತ್ತಡ, ಹಠಕ್ಕೆ ಅಷ್ಟಾಗಿ ಕ್ಯಾರ್ ಮಾಡಲೇ ಇಲ್ಲ. ಮಂಡ್ಯ ಕ್ಷೇತ್ರದಲ್ಲಿ ಸುಮಲತಾ ಸ್ಪರ್ಧಿಸುತ್ತಾರೆಂದಾಗ ಮಾತ್ರ, ಡಿಕೆ ಶಿವಕುಮಾರ್ ಅವರನ್ನು ಕರೆಸಿ ಗೌಡ್ರು ಮಾತುಕತೆ ನಡೆಸಿದ್ದರು ಎನ್ನುವ ಸುದ್ದಿ ಹರಿದಾಡುತ್ತಿತ್ತು.

ಕಾಂಗ್ರೆಸ್ ನಿಂದ 10 ಸೀಟು ಗಿಟ್ಟಿಸಿಕೊಂಡಿದ್ದೇವೆ ಎಂದ ದೇವೇಗೌಡ ಕಾಂಗ್ರೆಸ್ ನಿಂದ 10 ಸೀಟು ಗಿಟ್ಟಿಸಿಕೊಂಡಿದ್ದೇವೆ ಎಂದ ದೇವೇಗೌಡ

ಜೆಡಿಎಸ್ ಪಕ್ಷಕ್ಕೆ ತನ್ನ ಕೋಟೆಯನ್ನು ವಿಸ್ತರಿಸುವ ಬಯಕೆ

ಜೆಡಿಎಸ್ ಪಕ್ಷಕ್ಕೆ ತನ್ನ ಕೋಟೆಯನ್ನು ವಿಸ್ತರಿಸುವ ಬಯಕೆ

ಲೋಕಸಭಾ ಚುನಾವಣೆಯ ವೇಳೆ, ಜೆಡಿಎಸ್ ಪಕ್ಷಕ್ಕೆ ತನ್ನ ಕೋಟೆಯನ್ನು ವಿಸ್ತರಿಸುವ ಬಯಕೆ, ಕಳೆದ ಚುನಾವಣೆಯಲ್ಲಿ ಗೆದ್ದ ಕ್ಷೇತ್ರವನ್ನು ಜೆಡಿಎಸ್ ಪಕ್ಷಕ್ಕೆ ಬಿಟ್ಟುಕೊಡುವ ಒಲ್ಲದ ಮನಸ್ಸು ರಾಜ್ಯ ಕಾಂಗ್ರೆಸ್ಸಿಗೆ. ಇದಕ್ಕಿಂತಲೂ ಹೆಚ್ಚಾಗಿ, ಜೆಡಿಎಸ್ ಪಕ್ಷಕ್ಕೆ ಕ್ಷೇತ್ರವನ್ನು ಬಿಟ್ಟುಕೊಟ್ಟರೆ ಎದುರಾಗುವ ಕಾರ್ಯಕರ್ತರ, ಮುಖಂಡರ ಆಕ್ರೋಶ. ಇದೆಲ್ಲವೂ ಕಾಂಗ್ರೆಸ್ ಪಕ್ಷಕ್ಕೆ ಚುನಾವಣೆಯ ವೇಳೆ ಹಿನ್ನಡೆಯಾಗುವ ಸಾಧ್ಯತೆ ಇಲ್ಲದಿಲ್ಲ.

ಸಿದ್ದರಾಮಯ್ಯ ಸೇರಿದಂತೆ ರಾಜ್ಯದ ಕಾಂಗ್ರೆಸ್ ಮುಖಂಡರಿಗೆ ತೀವ್ರ ಮುಜುಗರ

ಸಿದ್ದರಾಮಯ್ಯ ಸೇರಿದಂತೆ ರಾಜ್ಯದ ಕಾಂಗ್ರೆಸ್ ಮುಖಂಡರಿಗೆ ತೀವ್ರ ಮುಜುಗರ

ರಾಜ್ಯದಲ್ಲಿ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳು ಮಾಜಿ ಸಿಎಂ ಸಿದ್ದರಾಮಯ್ಯನವರಿಗೆ ಒತ್ತಡ ಹೇರುತ್ತಿದ್ದರೆ, ಕಾಂಗ್ರೆಸ್ಸಿಗೆ ಎಷ್ಟು ಸೀಟು ಹಂಚಿಕೆಯಾಗುತ್ತೆ ಎನ್ನುವ ಖಚಿತ ಮಾಹಿತಿಗಳೇ ಇಲ್ಲ. ಯಾಕೆಂದರೆ, ಗೌಡ್ರು, ನೇರವಾಗಿ ಹೈಕಮಾಂಡ್ ಜೊತೆ ಸಂಪರ್ಕದಲ್ಲಿರುವುದು. ಇದು, ಸಿದ್ದರಾಮಯ್ಯ ಸೇರಿದಂತೆ ರಾಜ್ಯದ ಕಾಂಗ್ರೆಸ್ ಮುಖಂಡರಿಗೆ ತೀವ್ರ ಮುಜುಗರವನ್ನು ತಂದೊಡ್ಡುತ್ತಿದೆ.

ಹತ್ತು ಸೀಟು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದೇನೆ, ಗೌಡ್ರು

ಬುಧವಾರ (ಮಾ 6) ಎಐಐಸಿ ಅಧ್ಯಕ್ಷ ರಾಹುಲ್ ಗಾಂಧಿ, ಉಸ್ತುವಾರಿ ವೇಣುಗೋಪಾಲ್ ಜೊತೆ, ದೆಹಲಿಯಲ್ಲಿನ ದೇವೇಗೌಡರ ನಿವಾಸದಲ್ಲೇ ಮಾತುಕತೆ ನಡೆಸಿದ್ದಾರೆ. ಮಾತುಕತೆ ನಡೆದ ನಂತರ ಹೇಳಿಕೆ ನೀಡಿರುವ ಗೌಡ್ರು, ರಾಹುಲ್ ಜೊತೆ ಮಾತುಕತೆ ನಡೆಸಿದ್ದೇನೆ. ಹತ್ತು ಸೀಟು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದೇನೆ. ವೇಣುಗೋಪಾಲ್, ಡ್ಯಾನಿಶ್ ಆಲಿ ಜೊತೆ ರಾಹುಲ್ ಮಾತುಕತೆ ನಡೆಸಿ, ಅಂತಿಮ ನಿರ್ಧಾರ ಪ್ರಕಟಿಸಲಿದ್ದಾರೆಂದು ಗೌಡ್ರು ಹೇಳಿದ್ದಾರೆ.

10ಕ್ಷೇತ್ರವನ್ನು ಜೆಡಿಎಸ್ ಗಳಿಸಿದರೂ, ಹಾಲೀ ಕಾಂಗ್ರೆಸ್ ಸಂಸದರು ಕ್ಷೇತ್ರ ತ್ಯಾಗ ಮಾಡಲೇಬೇಕು

10ಕ್ಷೇತ್ರವನ್ನು ಜೆಡಿಎಸ್ ಗಳಿಸಿದರೂ, ಹಾಲೀ ಕಾಂಗ್ರೆಸ್ ಸಂಸದರು ಕ್ಷೇತ್ರ ತ್ಯಾಗ ಮಾಡಲೇಬೇಕು

ಹಾಸನ, ಮಂಡ್ಯ, ಬೆಂಗಳೂರು ಉತ್ತರ, ಶಿವಮೊಗ್ಗ, ಮೈಸೂರು, ವಿಜಯಪುರ, ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ ಮತ್ತು ಚಿತ್ರದುರ್ಗ, ರಾಯಚೂರು ಮತ್ತು ಉಡುಪಿ-ಚಿಕ್ಕಮಗಳೂರು ಕ್ಷೇತ್ರಗಳನ್ನು ಜೆಡಿಎಸ್ ಡಿಮಾಂಡ್ ಮಾಡುತ್ತಿದೆ ಎನ್ನುವ ಮಾಹಿತಿಯಿದೆ. ಗಮನಿಸಬೇಕಾದ ಅಂಶವೇನಂದರೆ, ಜೆಡಿಎಸ್ ಡಿಮಾಂಡ್ ಮಾಡುತ್ತಿರುವ ಈ ಕ್ಷೇತ್ರಗಳ ಪೈಕಿ ಐದು ಕ್ಷೇತ್ರದಲ್ಲಿ ಹಾಲೀ ಕಾಂಗ್ರೆಸ್ ಸಂಸದರಿದ್ದಾರೆ. ಹನ್ನೆರಡು ಕ್ಷೇತ್ರಗಳ ಪೈಕಿ ಹತ್ತು ಕ್ಷೇತ್ರವನ್ನು ಜೆಡಿಎಸ್ ಗಳಿಸಿದರೂ, ಹಾಲೀ ಕೆಲವು ಕಾಂಗ್ರೆಸ್ ಸಂಸದರು ಕ್ಷೇತ್ರ ತ್ಯಾಗ ಮಾಡಲೇ ಬೇಕಾಗುತ್ತದೆ.

English summary
JDS Supremo Deve Gowda seat sharing for the upcoming Loksabha elections directly with AICC President Rahul Gandhi and not with any Karnataka Congress leaers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X