ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರೇವಣ್ಣ, ನಿಮ್ದೂ ನಿಮ್ಮ ಪತ್ನಿ ಭವಾನಿದ್ದು ಟೈಮ್ ಸರಿಯಿಲ್ಲಾ ಬಿಡಿ..

|
Google Oneindia Kannada News

ನನ್ನ ಮತ್ತು ಸಹೋದರ ರೇವಣ್ಣನ ಜೊತೆ ಏನೂ ಭಿನ್ನಾಭಿಪ್ರಾಯವಿಲ್ಲ, ನನ್ನ ಉಸಿರಿರುವವರೆಗೆ ಸಹೋದರನ ಜೊತೆ ಜಗಳವಾಡುವುದಿಲ್ಲ. ನಮ್ಮಿಬ್ಬರ ನಡುವೆ ಮನಸ್ತಾಪವಿದೆ ಎನ್ನುವುದು ಮಾಧ್ಯಮಗಳು ಸೃಷ್ಟಿ ಎಂದು ಕುಮಾರಸ್ವಾಮಿ ಇತ್ತೀಚೆಗೆ ಹೇಳಿದ್ದರು. ಆದರೂ ಬೆಂಕಿಯಿಲ್ಲದೇ ಹೊಗೆಯಾಡಲು ಸಾಧ್ಯವೇ?

ಈ ವಿಚಾರ ಇಲ್ಲಿ ಯಾಕೆ ಪ್ರಸ್ತುತ ಎಂದರೆ, ರೇವಣ್ಣ ಮತ್ತು ಅವರ ಕುಟುಂಬದ ರಾಜಕೀಯ ಏಳಿಗೆಗೆ ಕುಮಾರಸ್ವಾಮಿ ತೊಡಕಾಗಿದ್ದಾರೆ, ಹಾಗಾಗಿ ಗೌಡ್ರ ಎದುರೇ ಎಚ್ಡಿಕೆ ಮತ್ತು ರೇವಣ್ಣ ಬಹಳಷ್ಟು ಬಾರಿ ಜಗಳವಾಡಿದ್ದುಂಟು ಎನ್ನುವ ಸುದ್ದಿ ಇಂದು ನಿನ್ನೆಯದಲ್ಲ. (ಗೌಡರ ಸೊಸೆ ಭವಾನಿ ಸಕ್ರಿಯ ರಾಜಕೀಯಕ್ಕೆ ಎಂಟ್ರಿ)

ದೇವೇಗೌಡ್ರ ಕುಟುಂಬದಲ್ಲಿ ರೇವಣ್ಣ ಮತ್ತು ಕುಮಾರಸ್ವಾಮಿ ಮಾತ್ರ ರಾಜಕೀಯದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡವರು.[ಸಾಡೇಸಾತಿ ಎಂದರೇನು, ಏನಿದರ ಮರ್ಮ?]

ಅನಿತಾ ಕುಮಾರಸ್ವಾಮಿ ಒಮ್ಮೆ ಶಾಸಕಿಯಾಗಿ, ಅವಶ್ಯಕತೆ ಬಿದ್ದಾಗ ಚುನಾವಣೆಯ ಸಮಯದಲ್ಲಿ ಪಕ್ಷದ ಅಭ್ಯರ್ಥಿಯಾಗಿದ್ದು ಬಿಟ್ಟರೆ ಕುಟುಂಬದ ಇತರರು ರಾಜಕೀಯದಲ್ಲಿ ಉತ್ಸುಕತೆ ತೋರಿದವರಲ್ಲ. ಇನ್ನು, ಗೌಡ್ರ ಮೊಮ್ಮಕ್ಕಳು ರಾಜಕೀಯದಲ್ಲಿ ಅಂಬೆಗಾಲು ಇಡುತ್ತಿದ್ದಾರಷ್ಟೇ.

ರಾಜಕೀಯದಲ್ಲಿ ತನ್ನ ಕುಟುಂಬದ ಮುಂದಿನ ಪೀಳಿಗೆಯ ಉಜ್ವಲ ಭವಿಷ್ಯವನ್ನು ಗೌಡ್ರು ಕಂಡಿದ್ದು, ರೇವಣ್ಣನಿಗಿಂತ ಹೆಚ್ಚಾಗಿ ಕುಮಾರಸ್ವಾಮಿಯವರಲ್ಲಿ. ರೇವಣ್ಣನಿಗಿಂತ ಉತ್ತಮ ಸಂಘಟನಾ ಚಾತುರ್ಯ, ಮಾತುಗಾರಿಕೆ, ರಾಜಕೀಯ ತಂತ್ರಗಾರಿಕೆ ಕುಮಾರಸ್ವಾಮಿಯವರಲ್ಲಿ ಇದೆ ಎನ್ನುವುದು ಗೌಡ್ರ ರಾಜಕೀಯ ಬ್ರೈನಿನ ಲೆಕ್ಕಾಚಾರವಾಗಿರಬಹುದು.

ಅದಕ್ಕಾಗಿಯೇ ಏನೋ, ರಾಜಕೀಯದಲ್ಲಿ ತನ್ನನ್ನು ಮೂಲೆಗುಂಪು ಮಾಡಲಾಗುತ್ತಿದೆ ಎಂದು ರೇವಣ್ಣ, ಜಮೀರ್, ಚೆಲುವರಾಯಸ್ವಾಮಿಯ ಹಾಗೇ ಪಕ್ಷದ ಕಾರ್ಯಕ್ರಮದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುದಿರುವುದಕ್ಕೆ ಕಾರಣ ಇದ್ದರೂ ಇರಬಹುದು? (ಗೌಡ್ರು ಒಪ್ಪಿದ್ರೆ ಚುನಾವಣೆಗೆ ಸ್ಪರ್ಧಿಸುವೆ)

ಕತ್ತಲೆಯಲ್ಲಿ ಭವಾನಿ ರೇವಣ್ಣ ರಾಜಕೀಯ ಭವಿಷ್ಯ, ಸ್ಲೈಡಿನಲ್ಲಿ..

ಸಿದ್ದರಾಮಯ್ಯ ಪ್ರೀತಿ ಪಾತ್ರರಾದ ರೇವಣ್ಣ

ಸಿದ್ದರಾಮಯ್ಯ ಪ್ರೀತಿ ಪಾತ್ರರಾದ ರೇವಣ್ಣ

ಹಾಸನ ಜಿಲ್ಲೆಗೆ ಮಾತ್ರ ಮೀಸಲು ಎನ್ನುವ ರೀತಿಯಲ್ಲಿ ರಾಜಕೀಯ ನಡೆಸುತ್ತಿರುವ ರೇವಣ್ಣ, ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಅತಿ ಪ್ರೀತಿಪಾತ್ರರು. ಇದನ್ನು ಬಹಳಷ್ಟು ಬಾರಿ ಅಸೆಂಬ್ಲಿಯಲ್ಲೇ ಸಿದ್ದರಾಮಯ್ಯ ಹೇಳಿದ್ದುಂಟು. ಹಾಸನ ಉಸ್ತುವಾರಿ ಮತ್ತು ಸಚಿವ ಎ ಮಂಜು, ರೇವಣ್ಣ ಸಿಎಂ ಮನೆ ಕಾಯುವವರು ಎಂದು ಲೇವಡಿಯೂ ಮಾಡಿದ್ದರು.

ಗೌಡ್ರ ಅನುಮತಿಯಿಲ್ಲ

ಗೌಡ್ರ ಅನುಮತಿಯಿಲ್ಲ

ರಾಜಕೀಯದಲ್ಲಿ ಕುಮಾರಸ್ವಾಮಿ ಬೆಳೆದ ಹಾಗೆ, ರೇವಣ್ಣ ಬೆಳೆಯಲಿಲ್ಲ,. ರಾಜಕೀಯದಲ್ಲಿ ರೇವಣ್ಣ ಪತ್ನಿಗೆ ತನ್ನನ್ನು ತೊಡಗಿಸಿಕೊಳ್ಳಬೇಕು ಎನ್ನುವ ಆಸೆ, ಹೆಮ್ಮರವಾದರೂ, ಗೌಡ್ರು ಸೊಸೆಯ ರಾಜಕೀಯ ಎಂಟ್ರಿಗೆ ಅನುಮತಿ ನೀಡಿರಲಿಲ್ಲ.

ಅನಿತಾ ಕುಮಾರಸ್ವಾಮಿ

ಅನಿತಾ ಕುಮಾರಸ್ವಾಮಿ

ಅನಿತಾ ಕುಮಾರಸ್ವಾಮಿ ರಾಜಕೀಯಕ್ಕೆ ಮೊದಲು ಧುಮುಕಿದಾಗಲೇ, ಭವಾನಿ ರೇವಣ್ಣ ತನ್ನ ರಾಜಕೀಯ ಆಸಕ್ತಿಯ ಬಗ್ಗೆ ಕುಟುಂಬದವರಲ್ಲಿ ಹೇಳಿಕೊಂಡಿದ್ದರು. ಆದರೆ, ಗೌಡ್ರ ಅನುಮತಿ ಸಿಕ್ಕಿದ್ದು ಮಾತ್ರ ಇತ್ತೀಚೆಗೆ ನಡೆದ ಜಿಲ್ಲಾ ಪಂಚಾಯತಿ ಚುನಾವಣೆಗೆ.

ಮಾವ, ಪತಿ ಪರವಾಗಿ ರಾಜಕೀಯ ಪ್ರಚಾರ

ಮಾವ, ಪತಿ ಪರವಾಗಿ ರಾಜಕೀಯ ಪ್ರಚಾರ

ಕಳೆದ ಲೋಕಸಭಾ ಚುನಾವಣೆಯಲ್ಲಿ ಹಾಸನ ಕ್ಷೇತ್ರದಲ್ಲಿ ಮಾವನ ಪರವಾಗಿ, ಅಸೆಂಬ್ಲಿ ಚುನಾವಣೆಯಲ್ಲಿ ಹೊಳೇನರಸೀಪುರ ಕ್ಷೇತ್ರದಲ್ಲಿ ಪತಿಯ ಪರವಾಗಿ ವ್ಯವಸ್ಥಿತ ರಾಜಕೀಯ ಪ್ರಚಾರ ನಡೆಸಿದ್ದ ಭವಾನಿ ರೇವಣ್ಣಗೆ ಪಂಚಾಯತಿ ಚುನಾವಣೆಗೆ ಟಿಕೆಟ್ ನೀಡಲೇಬೇಕೆಂದು ಕಾರ್ಯಕರ್ತರು ಹಠ ಹಿಡಿದಿದ್ದರು.

ಒತ್ತಡಕ್ಕೆ ಮಣಿದ ಗೌಡ್ರು

ಒತ್ತಡಕ್ಕೆ ಮಣಿದ ಗೌಡ್ರು

ಒತ್ತಡಕ್ಕೆ ಮೊದಲು ಮಣಿಯದ ದೇವೇಗೌಡ್ರು ಕಣ್ಣೀರು ಹಾಕಿ ಕಾರ್ಯಕರ್ತರ ಮನವೊಲಿಕೆಗೆ ಪ್ರಯತ್ನಿಸಿದ್ದರು. ಆದರೂ ಜೆಡಿಎಸ್ ಕಾರ್ಯಕರ್ತರು ಜಪ್ಪಯ್ಯ ಅನ್ನದಿದ್ದಾಗ, ಗೌಡ್ರು ಸೊಸೆ ಭವಾನಿಗೆ ಟಿಕೆಟ್ ನೀಡಿದ್ದರು. ನಿರೀಕ್ಷೆಯಂತೆ ಭವಾನಿ ಜಯ ಸಾಧಿಸಿದರು.

ಭವಾನಿ ಕನಸಿಗೆ ಕೊಡಲಿ ಏಟು

ಭವಾನಿ ಕನಸಿಗೆ ಕೊಡಲಿ ಏಟು

ಪಂಚಾಯತಿ ಚುನಾವಣೆ ಗೆದ್ದು ಸಚಿವ ಸ್ಥಾನಕ್ಕೆ ಸಮನಾಗಿರುವ ಜಿಲ್ಲಾ ಪಂಚಾಯತ್ ಅಧ್ಯಕ್ಷ ಸ್ಥಾನಕ್ಕೇರುವ ಭವಾನಿ ರೇವಣ್ಣ ಕನಸಿಗೆ ಮಂಗಳವಾರ (ಏ 5) ಸರಕಾರ ತಣ್ಣೀರೆರೆಚಿದೆ. ಮೀಸಲಾತಿ ಪಟ್ಟಿಯಲ್ಲಿ ಹಾಸನ ಜಿಲ್ಲಾ ಪಂಚಾಯತ್ ಅಧ್ಯಕ್ಷ ಸ್ಥಾನ ಪರಿಶಿಷ್ಟ ಪಂಗಡದ (ಮಹಿಳೆ) ಪಾಲಾಗಿದೆ.

ರೇವಣ್ಣ ಕುಟುಂಬ ಆರಕ್ಕೇರಲಿಲ್ಲ, ಮೂರಕ್ಕಿಳಿಯಲಿಲ್ಲ

ರೇವಣ್ಣ ಕುಟುಂಬ ಆರಕ್ಕೇರಲಿಲ್ಲ, ಮೂರಕ್ಕಿಳಿಯಲಿಲ್ಲ

ಜಿಲ್ಲಾ ಪಂಚಾಯತ್ ಅಧ್ಯಕ್ಷೆಯಾಗಿ ಒಂದೊಂದೆ ರಾಜಕೀಯ ಮೆಟ್ಟಲೇರುವ ಮಹತ್ವಾಕಾಂಕ್ಷೆಯಲ್ಲಿದ್ದ ಭವಾನಿ ರೇವಣ್ಣಗೆ ಸರಕಾರದ ನಿರ್ಧಾರ ಭಾರೀ ಹಿನ್ನಡೆಯುಂಟು ಮಾಡಿದೆ. ಒಟ್ಟಿನಲ್ಲಿ ಅಪಾರ ದೈವಭಕ್ತರಾದ ರೇವಣ್ಣ ಕುಟುಂಬದ ರಾಜಕೀಯ ಜೀವನ ಇನ್ನೂ ರಾಹುಕಾಲದಿಂದ ಹೊರಬಂದಂತಿಲ್ಲ, ಸಾಡೇಸಾತ್ ಅಂಟಿಕೊಂಡಂತಿದೆ.

English summary
JDS supremo HD Deve Gowda daughter-in-law, wife of HD Revanna, Bhavani Revanna's political career in dark after state government announced reservation list of Zilla Panchayat.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X