ರಾಜ್ಯದಲ್ಲಿ ಹೆಚ್ಚುತ್ತಿದೆ ಡೆಂಗಿ: 24 ಗಂಟೆಯಲ್ಲಿ 293 ಹೊಸ ಪ್ರಕರಣ ಪತ್ತೆ
ಕರ್ನಾಟಕದಲ್ಲಿ ಡೆಂಗಿ ಮಹಾಮಾರಿ ದಿನೇ ದಿನೇ ವ್ಯಾಪಕವಾಗಿ ಹಬ್ಬುತ್ತಿದೆ. 24 ಗಂಟೆಗಳಲ್ಲಿ ಒಟ್ಟು 293 ಡೆಂಗಿ ಪ್ರಕರಣಗಳು ದಾಖಲಾಗಿದ್ದು, 100 ಜನ ಆಸ್ಪತ್ರೆಯಲ್ಲಿ ಚಿಕತ್ಸೆ ಪಡೆಯುತ್ತಿದ್ದಾರೆ. ಈ ಮೂಲಕ ಡೆಂಗಿ ಜನರ ನಿದ್ದೆಯನ್ನು ಗೆಡಿಸಿದೆ.
ಬುಧವಾರ ಒಂದೇ ದಿನ ಒಟ್ಟು 1874 ಡೆಂಗಿ ಪ್ರಕರಣಗಳನ್ನು ಪರೀಕ್ಷಿಸಲಾಗಿದೆ. ಇನ್ನು ಒಟ್ಟಾರೆ ಈ ವರೆಗೆ ರಾಜ್ಯದಲ್ಲಿ 58534 ಜನರನ್ನು ಡೆಂಗಿ ಪರೀಕ್ಷೆಗೆ ಒಳಪಡಿಸಲಾಗಿದೆ. ಒಟ್ಟಾರೆ ರಾಜ್ಯದಲ್ಲಿ ಇದು ವರೆಗೆ 7840 ಡೆಂಗಿ ಪ್ರಕರಣಗಳು ಸಕ್ರಿಯವಾಗಿದ್ದು, 358 ಜನರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಜಿಲ್ಲಾ ವಾರು ವರದಿ
ಬಿಬಿಎಂಪಿ ವ್ಯಾಪ್ತಿಯಲ್ಲಿನ ಹೆಚ್ಚಿನ ಪ್ರಕರಣಗಳು ದಾಖಲಾಗಿವೆ. ಬುಧವಾರ ಒಟ್ಟು 118 ಪ್ರಕರಣಗಳು ದಾಖಲಾಗಿದ್ದು, 9 ಜನರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಮೂಲಕ ಬಿಬಿಎಂಪಿ ವ್ಯಾಪ್ತಿಯಲ್ಲಿ ಡೆಂಗಿ ಪ್ರಕರಣಗಳ ಸಂಖ್ಯೆ 2292ಕ್ಕೆ ಏರಿಕೆ ಆಗಿದೆ. ಉಳಿಂದ ಬೆಂಗಳೂರು ನಗರದಲ್ಲಿ 7, ಬೆಂಗಳೂರು ಗ್ರಾಮಂತರದಲ್ಲಿ 2 ಪ್ರಕರಣಗಳು ದಾಖಲಾಗಿವೆ.
ಮಂಡ್ಯ ಜಿಲ್ಲೆಯಲ್ಲಿ ಅತಿ ಹೆಚ್ಚು ಡೆಂಗಿ ಪ್ರಕರಣಗಳು ಬುಧವಾರ ದಾಖಲಾಗಿವೆ. ಜಿಲ್ಲೆಯಲ್ಲಿ ಒಟ್ಟು 30 ಪ್ರಕರಣಗಳು ದಾಖಲಾಗಿದ್ದು, 10 ಜನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನು ಜಿಲ್ಲೆಯಲ್ಲಿ ಸಕ್ರಿಯ ಡೆಂಗಿ ಪ್ರಕರಣಗಳ ಸಂಖ್ಯೆ 297ಕ್ಕೆ ಏರಿಕೆ ಆಗಿದೆ.
ಉತ್ತರ ಕರ್ನಾಟಕ ಭಾಗದ ಹಾವೇರಿ ಹಾಗೂ ಧಾರವಾಡದಲ್ಲಿ ತಲಾ 15 ಪ್ರಕರಣಗಳು ಕಾಣಿಸಿಕೊಂಡಿವೆ. ಧಾರವಾಡದಲ್ಲಿ ಸಕ್ರಿಯ 334, ಹಾವೇರಿಯಲ್ಲಿ 496 ಪ್ರಕರಣ ಪತ್ತೆಯಾಗಿವೆ.
ಉಳಿದಂತೆ ಕಳೆದ 24 ಗಂಟೆಯಲ್ಲಿ ಕಾಣಿಸಿಕೊಂಡ ಪ್ರಕರಣಗಳಲ್ಲಿ ಕೋಲಾರದಲ್ಲಿ 14, ತುಮಕೂರು 8, ದಾವಣಗೆರೆ 10, ಶಿವಮೊಗ್ಗ 7, ಬಾಗಲಕೋಟೆ 4, ಉತ್ತರ ಕನ್ನಡದಲ್ಲಿ 3, ಕಲಬುರ್ಗಿಯಲ್ಲಿ 8, ಯಾದಗಿರಿಯಲ್ಲಿ 4, ಬೀದರದಲ್ಲಿ 6, ಬಳ್ಳಾರಿಯಲ್ಲಿ 3, ವಿಜಯನಗರ 10, ಕೊಪ್ಪಳ ಹಾಗೂ ಚಾಮರಾಜನಗರ 3, ಉಡುಪಿ 6, ಚಿಕ್ಕಮಗಳೂರು 5, ಕೊಡಗು 12 ಪ್ರಕರಣಗಳು ಕಾಣಿಸಿಕೊಂಡಿವೆ.












Click it and Unblock the Notifications