Dengue: ಡೆಂಗ್ಯೂ ನಿಯಂತ್ರಣ, ಆರೋಗ್ಯ ಇಲಾಖೆಯಿಂದ ಸುತ್ತೋಲೆ

ಬೆಂಗಳೂರು, ಜುಲೈ 11: ಕರ್ನಾಟಕದಲ್ಲಿ ಡೆಂಗ್ಯೂ (ಡೆಂಗಿ) ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಇದರ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಕರ್ನಾಟಕ ಹೈಕೋರ್ಟ್ ಸಹ ಡೆಂಗ್ಯೂ ಕುರಿತು ಸ್ವಯಂ ಪ್ರೇರಿತ ಪಿಐಎಲ್ ದಾಖಲು ಮಾಡಿಕೊಂಡಿದೆ.

ಗುರುವಾರ ಹರ್ಷ ಗುಪ್ತ, ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಡೆಂಗ್ಯೂ ನಿಯಂತ್ರಣದ ಕುರಿತು ಎಲ್ಲಾ ಜಿಲ್ಲಾಧಿಕಾರಿಗಳಿಗೆ ಸುತ್ತೋಲೆ ಹೊರಡಿಸಿದ್ದಾರೆ. ಈ ಸುತ್ತೋಲೆ ಎನ್‌ವಿಬಿಡಿಸಿಪಿ ಡೆಂಗ್ಯೂ ಜ್ವರ ಮುಂಜಾಗ್ರತೆ ಹಾಗೂ ನಿಯಂತ್ರಣ ಹೆಚ್ಚುವರಿ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಸೂಚನೆ ಎಂಬ ವಿಷಯವನ್ನು ಒಳಗೊಂಡಿದೆ.

Dengue Fever Control Circular By Karnataka Health Department

ಮುಖ್ಯ ಮಂತ್ರಿಗಳ ಅಧ್ಯಕ್ಷತೆಯಲ್ಲಿ ದಿನಾಂಕ 9/7/2024ರಂದು ನಡೆದ ಜಿಲ್ಲಾಧಿಕಾರಿ ಹಾಗೂ ಮುಖ್ಯಕಾರ್ಯನಿರ್ವಹಣಾಧಿಕಾರಿಗಳು, ಜಿಲ್ಲಾ ಪಂಚಾಯತ್, ಸಮ್ಮೇಳನದಲ್ಲಿ ಚರ್ಚಿಸಿದಂತೆ ಎಂದು ಸುತ್ತೋಲೆಯಲ್ಲಿ ಉಲ್ಲೇಖ ಮಾಡಲಾಗಿದೆ. ಸುತ್ತೋಲೆಯಲ್ಲಿ ಪ್ರಸ್ತುತ ರಾಜ್ಯದ ಡೆಂಗ್ಯೂ ಜ್ವರದ ಪರಿಸ್ಥಿತಿ ಹಾಗೂ ಮಳೆಗಾಲದ ಹಿನ್ನೆಲೆಯಲ್ಲಿ, ಡೆಂಗ್ಯೂ ಜ್ವರ ಪ್ರಕರಣಗಳ ಚಿಕಿತ್ಸೆ ಹಾಗೂ ಸಮರ್ಪಕ ನಿರ್ವಹಣೆಯು ಪ್ರಮುಖವಾಗಿದ್ದು, ಫಲಿತಾಂಶ ಆಧಾರಿತವಾಗಿರುವುದು ಅಗತ್ಯವಾಗಿದೆ. ಅದರಂತೆ, ಸಂಬಂಧಪಟ್ಟವರು ಹೆಚ್ಚುವರಿ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಸೂಚಿಸಿದೆ ಎಂದು ಹೇಳಿದ್ದಾರೆ.

ಯಾವ-ಯಾವ ಕ್ರಮಗಳು

* ರಾಜ್ಯದ ದೈನಂದಿನ ಡೆಂಗ್ಯೂ ಜ್ವರ ಪರಿಸ್ಥಿತಿಯ ಸೂಕ್ಷ್ಮ ಮೇಲ್ವಿಚಾರಣೆ ಹಾಗೂ ಉಸ್ತುವಾರಿಗಾಗಿ, ಎನ್ ವಿಬಿಡಿಸಿಪಿ ವಿಭಾಗದಿಂದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ನಿರ್ದೇಶನಾಲಯ, ಆರೋಗ್ಯಸೌಧ, ಬೆಂಗಳೂರು, ಇಲ್ಲಿ ಡೆಂಗ್ಯೂ ವಾರ್ ರೂಮ್ ಅನ್ನು ಸಕ್ರಿಯಗೊಳಿಸುವುದು.

* ಎಲ್ಲಾ ಜಿಲ್ಲೆಗಳು/ ಬಿಬಿಎಂಪಿ ವ್ಯಾಪ್ತಿಯ ಡೆಂಗ್ಯೂ ಜ್ವರ ಪರಿಸ್ಥಿತಿಯ ಮೇಲ್ವಿಚಾರಣೆ ಹಾಗೂ ದತ್ತಾಂಶ/ ಮಾಹಿತಿ ಸಂಗ್ರಹಣೆಗಾಗಿ ಕಂಟ್ರೋಲ್ ರೂಂ/ ಡೆಂಗ್ಯೂ ವಾರ್ ರೂಂ ಅನ್ನು ಸಕ್ರಿಯಗೊಳಿಸುವುದು.

* ಡೆಂಗ್ಯೂ ಪರಿಸ್ಥಿತಿಯ ದೈನಂದಿನ ನಿಗಾವಣೆಗಾಗಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಟಾಸ್ಕ್ ಫೋರ್ಸ್ ಅನ್ನು ರಚಿಸುವುದು, ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಜಿಲ್ಲಾ ಪಂಚಾಯತಿ, ಪ್ರಾಜೆಕ್ಟ್ ಡೈರೆಕ್ಟರ್ ನಗರಾಭಿವೃದ್ಧಿ, ವಿಭಾಗ ಮುಖ್ಯಸ್ಥರು - P & SM, ಮೆಡಿಕಲ್ ಕಾಲೇಜು, ಜಿಲ್ಲಾ ಆರೋಗ್ಯಾಧಿಕಾರಿಗಳು, ಜಿಲ್ಲಾಧ್ಯಕ್ಷರು - IMA & IAP, ಉಪನಿರ್ದೇಶಕರು - ಸಾರ್ವಜನಿಕ ಶಿಕ್ಷಣ, ಇವರುಗಳು ಸದರಿ ಟಾಸ್ಕ್ ಫೋರ್ಸ್‌ನ ಸದಸ್ಯರಾಗಿರುತ್ತಾರೆ ಹಾಗೂ ಜಿಲ್ಲಾ ವಿಬಿಡಿ ನಿಯಂತ್ರಣಾಧಿಕಾರಿಗಳು, ಜಿಲ್ಲಾ ಟಾಸ್ಕ್ ಫೋರ್ಸ್‌ನ ಸದಸ್ಯ ಕಾರ್ಯದರ್ಶಿಗಳಾಗಿರುತ್ತಾರೆ. ವಾರಕ್ಕೊಮ್ಮೆ ಟಾಸ್ಕ್ ಫೋರ್ಸ್‌ ಸಭೆ ಸೇರಿ, ಡೆಂಗ್ಯೂ ಜ್ವರ ನಿಯಂತ್ರಣ ನಿಯಂತ್ರಣಗಳನ್ನು ಪರಿಶೀಲಿಸಿ, ಸ್ಥಳೀಯ ಪರಿಸ್ಥಿತಿಯ ಅನ್ವಯ ಅಗತ್ಯ ಸಲಹೆ ಸೂಚನೆಗಳನ್ನು ನೀಡುವುದು.

* ಆರೋಗ್ಯ ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತರು ತಮ್ಮ ವ್ಯಾಪ್ತಿಯ ಎಲ್ಲಾ ಮನೆಗಳು, ಶಾಲಾ-ಕಾಲೇಜು, ಕಛೇರಿಗಳಲ್ಲಿ ಪ್ರತಿ 15 ದಿನಗಳಿಗೊಮ್ಮೆ ಈಡಿಸ್ ಲಾರ್ವಾ ಸಮೀಕ್ಷೆ ಹಾಗೂ ಉತ್ಪತ್ತಿ ತಾಣ ಚಟುವಟಿಕೆಯನ್ನು ಪೂರ್ಣಗೊಳಿಸುವುದು. ಪಟ್ಟಣ/ ನಗರ ಪ್ರದೇಶದಲ್ಲಿ ಸದರಿ ಚಟುವಟಿಕೆಗೆ ಆರೋಗ್ಯ ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತರೊಂದಿಗೆ, ಆಯಾ ಸ್ಥಳೀಯ ಸಂಸ್ಥೆಗಳು (Urban Local Body) ದಿನ ಒಂದಕ್ಕೆ ರೂ. 200 ಗಳ ಗೌರವಧನದಂತೆ ಅಗತ್ಯ ಸಂಖ್ಯೆಯ ಸ್ವಯಂ ಸೇವಕರನ್ನು ಒದಗಿಸುವುದು.

* ಜೊತೆಗೆ ಡೆಂಗ್ಯೂ ಜ್ವರ ನಿಯಂತ್ರಣ, ಚಿಕಿತ್ಸೆಯ ಸಂಬಂಧ ಅಗತ್ಯ ಆರೋಗ್ಯ ಶಿಕ್ಷಣ ಸಾಮಗ್ರಿಗಳೊಂದಿಗೆ, ಈಡಿಸ್ ಲಾರ್ವಾ ನಾಶ ಚಟುವಟಿಕೆಗೆ ಪ್ರತಿ ಶುಕ್ರವಾರ ಬೆಳಗ್ಗೆ (ಅಥವಾ ಜಿಲ್ಲಾ ಟಾಸ್ಕ್ ಫೋರ್ಸ್ ನಿರ್ಧರಿಸಿದ ವಾರದ ಇತರ ದಿನದಂದು) ಗ್ರಾಮ, ಪಟ್ಟಣ ಹಾಗೂ ಜಿಲ್ಲಾ ಮಟ್ಟದಲ್ಲಿ, ಚುನಾಯಿತ ಪ್ರತಿನಿಧಿಗಳು, ಸಾರ್ವಜನಿಕರು ಹಾಗೂ ಇತರ ಇಲಾಖೆಗಳ ಸಕ್ರಿಯ ಪಾಲ್ಗೊಳ್ಳುವಿಕೆಯಿಂದ ವ್ಯಾಪಕ ಪ್ರಚಾರ ನೀಡುವುದು. ಇದರಿಂದ, ಸಾರ್ವಜನಿಕರು ತಮ್ಮ ಮನೆಯ ಒಳಗೆ ಹಾಗೂ ಹೊರಗೆ ಲಾರ್ವಾ ನಿರ್ಮೂಲನೆ ಕಾರ್ಯವನ್ನು ಹಾಗೂ ನೀರಿನ ಸಂಗ್ರಹಣೆಗಳನ್ನು ಉಜ್ಜಿ ತೊಳೆದು ಸ್ವಚ್ಛಗೊಳಿಸುವ ಚಟುವಟಿಕೆಯನ್ನು ಸ್ವಯಂಪ್ರೇರಿತರಾಗಿ ಕೈಗೊಳ್ಳುವಂತೆ ಪ್ರೇರೇಪಿಸುವುದು.

* ಸದರಿ ಚಟುವಟಿಕೆಯು ನಡೆದ ದಿನ ಮಧ್ಯಾಹ್ನ ನೀರು ಸರಬರಾಜು ವ್ಯವಸ್ಥೆಯನ್ನು ಖಚಿತಪಡಿಸಿಕೊಳ್ಳುವುದು ಸ್ಥಳೀಯ ಆಡಳಿತದ ಜವಾಬ್ದಾರಿಯಾಗಿದೆ, ಇದರಿಂದ ಸಾರ್ವಜನಿಕರು ಪುನಃ ಅಗತ್ಯ ನೀರಿನ ಸಂಗ್ರಹಣೆಯನ್ನು ಮಾಡಬಹುದಾಗಿದೆ

* ಬಿಬಿಎಂಪಿ/ ಜಿಲ್ಲೆಗಳು Hotspot ಅನ್ನು ಗುರುತಿಸಿ ನಿಖರ ಮಾಹಿತಿ (ಗ್ರಾಮ/ ಸ್ಥಳ/ ವಾರ್ಡ್)ಯನ್ನು ನಿಗದಿತ ನಮೂನೆಯಲ್ಲಿ State War Roomಗೆ ಸಲ್ಲಿಸುವುದು. ಸದರಿ ಕೆಳಕಂಡ ಕ್ರಮಗಳಿಂದ Hotspotಗಳ ಸಂಖ್ಯೆಯು ಇಳಿಮುಖವಾಗುವುದನ್ನು ಖಚಿತಪಡಿಸಿಕೊಳ್ಳುವುದೂ ಸಹ ಕಡ್ಡಾಯ. ಸದರಿ Hotspot ಗಳಲ್ಲಿ ಲಾರ್ವಾ ನಾಶ ಚಟುವಟಿಕೆಯನ್ನು ತೀವ್ರಗೊಳಿಸುವುದು ಒಳಾಂಗಣ/ ಹೊರಾಂಗಣದಲ್ಲಿ ಲಾರ್ವಾನಾಶಕಗಳ ಬಳಕೆ ಹಾಗೂ ಒಳಾಂಗಣದಲ್ಲಿ indoor space spray ಯನ್ನು ಕೈಗೊಂಡು ಮನೆಯ ಸದಸ್ಯರನ್ನು ಕನಿಷ್ಠ 30 ನಿಮಿಷಗಳ ಕಾಲ ಮನೆಗಳಿಂದ ಹೊರಗೆ ಇರುವಂತೆ ಸೂಚಿಸುವುದು.

* ಸದರಿ ಸ್ಥಳಗಳಲ್ಲಿ Fever clinicಗಳನ್ನು ತುರ್ತಾಗಿ ಸಕ್ರಿಯಗೊಳಿಸುವುದು. ಈ ಪ್ರದೇಶಗಳಲ್ಲಿ, ಬಿಪಿಎಲ್ ಕುಟುಂಬಗಳಿಗೆ ಸೊಳ್ಳೆ ನಿರೋಧಕ ಬೇವಿನ ಎಣ್ಣೆಯ ವಿತರಣೆಯನ್ನು ಖಚಿತಪಡಿಸಿಕೊಳ್ಳುವುದು ಹಾಗೂ ಕೈ-ಕಾಲು ಹಾಗೂ ಕುತ್ತಿಗೆಯ ಭಾಗದಲ್ಲಿ ಹಚ್ಚಿಕೊಳ್ಳುವಂತೆ ತಿಳಿಸುವುದು. ಸದರಿ ಉತ್ಪನ್ನವು ಲಭ್ಯವಿಲ್ಲದಿದ್ದಲ್ಲಿ, Citronella oil/ lemon grass oil ಗಳನ್ನು ಅಥವಾ DEET (N,N-diethyl-meta-toluamide) ಆಧಾರಿತ ಕ್ರೀಂ ಗಳನ್ನು ವಿತರಣೆಯನ್ನು ಸ್ಥಳೀಯ ಜಿಲ್ಲಾ ಆರೋಗ್ಯಾಧಿಕಾರಿಗಳು/ ಮುಖ್ಯ ಆರೋಗ್ಯಾಧಿಕಾರಿಗಳು ಸಾರ್ವಜನಿಕ ಆರೋಗ್ಯ, ಬಿಬಿಎಂಪಿ, ಇವರು ಪರಿಗಣಿಸಬಹುದಾಗಿದೆ.

* ಸದರಿ ಸೊಳ್ಳೆ ನಿರೋಧಕ ಎಣ್ಣೆ/ ಕೀಂ ಗಳನ್ನು ನಿಯಮಾನುಸಾರ ಸ್ಥಳೀಯವಾಗಿ ಖರೀದಿಸಲು CSR/ ದಾನಿಗಳ ವಂತಿಕೆಯನ್ನು ಅಥವಾ ಸಂಬಂಧಪಟ್ಟ ಪ್ರಾಥಮಿಕ ಆರೋಗ್ಯ ಕೇಂದ್ರ/ ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಲಭ್ಯವಿರುವ ARS/ABAr- K ಅನುದಾನವನ್ನು ನಿಯಮಾನುಸಾರ ಬಳಸುವುದು. ಆದಾಗ್ಯೂ, ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರ/ ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಹೆಚ್ಚುವರಿ ಅನುದಾನದ ಬೇಡಿಕೆಯನ್ನು ಸಂಬಂಧಪಟ್ಟ ಜಿಲ್ಲಾ ಪಂಚಾಯತ್/ ತಾಲ್ಲೂಕು ಪಂಚಾಯತಿಗಳು ಭರಿಸುವುದು.

* ಸೊಳ್ಳೆ ನಿರೋಧಕ ಎಣ್ಣೆ/ ಕ್ರೀಂ ಗಳನ್ನು ಪಡೆದ ಮನೆಯ ಸದಸ್ಯರ ಹೆಸರು, ರೇಷನ್ ಕಾರ್ಡ್ ಸಂಖ್ಯೆ ಮೊಬೈಲ್ ಸಂಖ್ಯೆ, ಇತ್ಯಾದಿ ಅಗತ್ಯ ಮಾಹಿತಿಯನ್ನು ಒಳಗೊಂಡ ದಾಖಲೆಗಳನ್ನು ನಿರ್ವಹಿಸಬೇಕು. ಪ್ರತಿ ಡೆಂಗ್ಯೂ ಜ್ವರ ಪ್ರಕರಣವನ್ನು, ರೋಗ ಲಕ್ಷಣಗಳು ಕಂಡು ಬಂದ ದಿನದಿಂದ, ಸದರಿಯವರ ಆರೋಗ್ಯ ಸ್ಥಿತಿಯ ಕುರಿತು 14 ದಿನಗಳು ಅನುಪಾಲನೆ ಮಾಡುವುದು ಹಾಗೂ ನಿಗದಿತ ವರದಿ ನಮೂನೆಯಲ್ಲಿ State War Room ಗೆ ವರದಿಯನ್ನು ಸಲ್ಲಿಸುವುದು.
* ಡೆಂಗ್ಯೂ ಪ್ರಕರಣಗಳಿಗೆ, ಸಾಧಾರಣ ಡೆಂಗ್ಯೂ ಜ್ವರವು ಮಧ್ಯಮ/ ತೀವ್ರ ಡೆಂಗ್ಯೂ ಜ್ವರವಾಗಿ ಪರಿಣಮಿಸುವಲ್ಲಿ ಕಂಡುಬರುವ ಅಪಾಯದ ಚಿನ್ನೆಗಳ (early warning signs) ಕುರಿತು ಶಿಕ್ಷಣ ನೀಡುವುದು. Hotspot ನಿಂದ ಹೊರಗಿರುವ ಪ್ರಕರಣಗಳಿಗೂ ಸಹ ಈ ನಿರ್ದೇಶನವನ್ನು ಅನುಪಾಲನೆ ಮಾಡುವುದು ಕಡ್ಡಾಯವಾಗಿದೆ.

* ಡೆಂಗ್ಯೂ ಜ್ವರ ಪಕರಣಗಳ ಅಗತ್ಯ ನಿರ್ವಹಣೆಗಾಗಿ ತಾಲ್ಲೂಕು ಹಾಗೂ ಜಿಲ್ಲಾಸ್ಪತ್ರೆಗಳಲ್ಲಿ ಕನಿಷ್ಠ ತಲಾ 5 ಹಾಗೂ 8-10 ಬೆಡ್ ಗಳನ್ನು ಮೀಸಲಿಡುವುದು. ಈ ಸಂಖ್ಯೆಯ ಡೆಂಗ್ಯೂ ಜ್ವರ ಪ್ರಕರಣಗಳಿಲ್ಲದಿದ್ದಲ್ಲಿ, ಸದರಿ ಬೆಡ್ ಗಳನ್ನು ಇತರೆ ರೋಗಿಗಳ ಆರೈಕೆಗೆ ಬಳಸುವುದು.

* ಜ್ವರ ಪ್ರಕರಣಗಳ ಪರೀಕ್ಷೆ, ಚಿಕಿತ್ಸೆ ಹಾಗೂ ನಿರ್ವಹಣೆಯ ಸೌಲಭ್ಯಗಳನ್ನು (ICU ಸೇರಿದಂತೆ) ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವ್ಯಾಪ್ತಿಯಲ್ಲಿನ ಎಲ್ಲಾ ಆರೋಗ್ಯ ಸಂಸ್ಥೆಗಳಲ್ಲಿ ಸಂಪೂರ್ಣ ಉಚಿತವಾಗಿ ಒದಗಿಸುವುದು (BPL & APL ವರ್ಗದವರಿಗೆ).

* ಡೆಂಗ್ಯೂ ಜ್ವರ ಪ್ರಕರಣಗಳ ಸೂಕ್ತ ನಿರ್ವಹಣೆಗಾಗಿ ಎಲ್ಲಾ ಆರೋಗ್ಯ ಸಂಸ್ಥೆಗಳಲ್ಲಿ ಟೆಸ್ಟಿಂಗ್ ಕಿಟ್ ಗಳು, ಅಗತ್ಯ ಪ್ರಮಾಣದ ಔಷಧಿ ಹಾಗೂ IV Fluids ನ ದಾಸ್ತಾನು ಲಭ್ಯತೆಯನ್ನು ಖಚಿತಪಡಿಸಿಕೊಳ್ಳುವುದು. ಅಗತ್ಯವಿದ್ದಲ್ಲಿ ನಿಯಮಾನುಸಾರ ಸ್ಥಳೀಯವಾಗಿ ಖರೀದಿ ಪ್ರಕ್ರಿಯೆಯನ್ನು ಪಾಲಿಸುವುದು. ಅದರಂತೆ, ಜಿಲ್ಲಾವಾರು ಸರ್ಕಾರಿ ಹಾಗೂ ಖಾಸಗಿ ರಕ್ತನಿಧಿಗಳಿಂದ Platelet, Fresh Frozen Plasma ಹಾಗೂ ಇತರ Component ಗಳ ದೈನಂದಿನ ಮಾಹಿತಿಯ ಲಭ್ಯತೆಯನ್ನು e-Rakt Kosh ನಲ್ಲಿ ಖಚಿತಪಡಿಸಿಕೊಳ್ಳುವುದು.

* ಜ್ವರ ನಿರ್ವಹಣೆಯ ಸಂಬಂಧ National Guidelines on Dengue fever management (as specified in Gol 2023 guidelines) 3200 J I IL ಕಡ್ಡಾಯವಾಗಿ ಎಲ್ಲಾ ವೈದ್ಯರು ಪಾಲಿಸುವುದು. ಮುಂದುವರೆದು, Tele ICU ಸೌಲಭ್ಯವಿದ್ದಲ್ಲಿ, ಜ್ವರ ಪ್ರಕರಣಗಳನ್ನು ಮೇಲ್ವಿಚಾರಣೆಯನ್ನು ಮಾಡುವುದು.

* ಮೆಡಿಕಲ್ ಕಾಲೇಜುಗಳ Family Adoption Programme ಅನ್ನು ಡೆಂಗ್ಯೂ ಸಮಸ್ಯಾತ್ಮಕ ಗ್ರಾಮ/ ವಾರ್ಡ್ ಗಳಿಗೆ ವಿಸ್ತರಿಸುವುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+