Get Updates
Get notified of breaking news, exclusive insights, and must-see stories!

ಹೊಸ ವರ್ಷಾಚರಣೆ ದಿನವೇ ಡೆಲಿವರಿ ಸಿಬ್ಬಂದಿ ಮುಷ್ಕರಕ್ಕೆ ಕರೆ, ಆನ್‌ಲೈನ್ ಸೇವೆಯಲ್ಲಿ ವ್ಯತ್ಯಯ, ಬೇಡಿಕೆಗಳೇನು?

ಹೊಸ ವರ್ಷಾಚರಣೆಗೆ ಇನ್ನೊಂದು ದಿನವಷ್ಟೇ ಬಾಕಿ ಇದೆ. ಆ ದಿನ ಹೊರಗೆ ಹೋಗಿ ಪಾರ್ಟಿ ಮೋಜು ಮಸ್ತಿ ಮಾಡಿದರೆ, ಕೆಲವರು ತಮ್ಮ ಮನೆಗಳಲ್ಲೇ ಪಾರ್ಟಿ ಆಯೋಜಿಸಿ ಎಂಜಾಯ್‌ ಮಾಡುತ್ತಾರೆ. ಹೀಗಾಗಿ ಆನ್‌ಲೈನ್‌ ಶಾಪಿಂಗ್‌ ಕೂಡ ವರ್ಷದ ಕೊನೆಯ ದಿನ ಭರ್ಜರಿಯಾಗಿ ನಡೆಯುತ್ತಿದೆ. ಅಂದು ಡೆಲಿವರಿ ಸಿಬ್ಬಂದಿಗೂ ಆರ್ಡರ್‌ಗಳು ಹೆಚ್ಚಿನ ಸಂಖ್ಯೆಯಲ್ಲಿ ಸಿಗುತ್ತವೆ. ಆದರೆ ಸ್ವಿಗ್ಗಿ, ಜೊಮಾಟೊ, ಜೆಪ್ಟೊ, ಬ್ಲಿಂಕಿಟ್, ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್‌ನಂತಹ ಗಿಗ್ ಕಾರ್ಮಿಕರು ಡಿಸೆಂಬರ್ 31ರಂದು ರಾಷ್ಟ್ರವ್ಯಾಪಿ ಮುಷ್ಕರ ಘೋಷಿಸಿದ್ದಾರೆ. ಇದರಿಂದ ಬುಧವಾರದಂದು ಮನೆಬಾಗಿಲಿಗೆ ಡೆಲಿವರಿ ಸೇವೆಯಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆ ಇದೆ.

ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳಲ್ಲಿ ಆನ್‌ಲೈನ್‌ ಡೆಲಿವರಿ ಸೇವೆಯು ಸಾವಿರಾರು ಮಂದಿಗೆ ಉದ್ಯೋಗಾವಕಾಶ ಕಲ್ಪಿಸಿದೆ. ಆರ್ಡರ್‌ ಮಾಡಿದ ಕೆಲವೇ ನಿಮಿಷಗಳಲ್ಲಿ ನೀವು ಬಯಸಿದ ವಸ್ತು ನಿಮ್ಮ ಕೈಸೇರುತ್ತಿದೆ. ಈಗಂತೂ 10 ನಿಮಿಷದಲ್ಲೇ ಡೆಲಿವರಿ ಮಾಡುವ ವ್ಯವಸ್ಥೆಯೂ ಇದೆ. ಇದು ಗ್ರಾಹಕರಿಗೆ ಒಳ್ಳೆಯದೇ ಆದರೂ ಡೆಲಿವರಿ ಸಿಬ್ಬಂದಿ ಕಾಲಿಗೆ ಅಕ್ಷರಶಃ ಚಕ್ರ ಕಟ್ಟಿದಂತಾಗಿದೆ. ಈ ಹಿನ್ನೆಲೆ ಈ ವಲಯದಲ್ಲಿ ಕೆಲಸ ಮಾಡುತ್ತಿರುವ ಡೆಲಿವರಿ ಸಿಬ್ಬಂದಿ ಏಕಾಏಕಿ ಮುಷ್ಕರ ಮಾಡುವ ಮೂಲಕ ತಮ್ಮ ಬೇಡಿಕೆಗಳ ಈಡೇರಿಕೆಗೆ ಮುಂದಾಗಿದ್ದಾರೆ.

Delivery Workers Call Nationwide Strike on Dec 31 Online Services Likely to Be Hit on New Year Eve

ಡೆಲಿವರಿ ಸೇವೆ ಶೇ 60ರಷ್ಟು ಕುಸಿತ

ಕ್ರಿಸ್‌ಮಸ್‌ ದಿನವೂ ದೇಶದಾದ್ಯಂತ ಸುಮಾರು 40,000ಕ್ಕೂ ಹೆಚ್ಚು ಡೆಲಿವರಿ ಸಿಬ್ಬಂದಿ ಮುಷ್ಕರಕ್ಕೆ ಕರೆ ನೀಡಿದ್ದರು. ಇದರಿಂದಾಗಿ ಅನೇಕ ನಗರಗಳಲ್ಲಿ ಶೇ 50-60% ವಿತರಣಾ ಅಡಚಣೆಗಳು ಉಂಟಾದವು. ಕಾರ್ಮಿಕರ ಬೇಡಿಕೆಗಳನ್ನು ಪರಿಹರಿಸುವ ಬದಲು, ಕಂಪನಿಗಳು ಮೂರನೇ ವ್ಯಕ್ತಿಯ ವಿತರಣಾ ಏಜೆನ್ಸಿಗಳು, ಹೆಚ್ಚುವರಿ ಪ್ರೋತ್ಸಾಹಕ ಟಿಪ್ಸ್‌ ಹಾಗೂ ನಿಷ್ಕ್ರಿಯ ಐಡಿಗಳನ್ನು ಪುನಃ ಸಕ್ರಿಯಗೊಳಿಸುವ ಮೂಲಕ ಮುಷ್ಕರವನ್ನು ತಡೆಯಲು ಪ್ರಯತ್ನಿಸಿದವು. ಈಗ ಮತ್ತೆ ವರ್ಷದ ಅತ್ಯಂತ ಜನನಿಬಿಡ ವಿತರಣಾ ದಿನಗಳಲ್ಲಿ ಒಂದಾದ ಹೊಸ ವರ್ಷದ ಮುನ್ನಾದಿನವಾದ ಡಿಸೆಂಬರ್ 31ರಂದು ಸ್ವಿಗ್ಗಿ, ಜೊಮಾಟೊ, ಜೆಪ್ಟೊ, ಬ್ಲಿಂಕಿಟ್‌, ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್ ಡೆಲಿವರಿ ಸಿಬ್ಬಂದಿ ರಾಷ್ಟ್ರವ್ಯಾಪಿ ಮುಷ್ಕರವನ್ನು ಘೋಷಿಸಿದ್ದಾರೆ.

ಪ್ರಮುಖ ಬೇಡಿಕೆಗಳು

• ನ್ಯಾಯಯುತ, ಪಾರದರ್ಶಕ ವೇತನ ರಚನೆಗಳು
• ಅನಿಯಂತ್ರಿತ ಐಡಿ ಬ್ಲಾಕ್ ಮಾಡುವಿಕೆ ಮತ್ತು ದಂಡಗಳಿಗೆ ಅಂತ್ಯ ಕೊಡುವುದು
• ಕಡ್ಡಾಯ ವಿಶ್ರಾಂತಿ ವಿರಾಮಗಳು ಮತ್ತು ಸುರಕ್ಷತಾ ಸಾಧನಗಳು
• ಆರೋಗ್ಯ, ಅಪಘಾತ ವಿಮೆ, ಪಿಂಚಣಿಯಂತಹ ಸಾಮಾಜಿಕ ಭದ್ರತೆ
• ಸ್ಪಷ್ಟ ಕುಂದುಕೊರತೆ ಪರಿಹಾರ ಮತ್ತು ಪಾರದರ್ಶಕತೆ
• ಅಸುರಕ್ಷಿತ ಅತಿ-ವೇಗದ 10-ನಿಮಿಷಗಳ ವಿತರಣೆ ವ್ಯವಸ್ಥೆ ರದ್ದು ಮಾಡುವುದು

Delivery Workers Call Nationwide Strike on Dec 31 Online Services Likely to Be Hit on New Year Eve

ಡಿಸೆಂಬರ್ 31ರಂದು ಡೆಲಿವರಿ ಸೇವೆಗೆ ಗರಿಷ್ಠ ಬೇಡಿಕೆ ಇರುವುದರಿಂದ ಸಿಬ್ಬಂದಿ ಅದೇ ದಿನ ಮುಷ್ಕರಕ್ಕೆ ಕರೆ ನೀಡುವ ಮೂಲಕ ಬಿಸಿ ಮುಟ್ಟಿಸಲು ಮುಂದಾಗಿದ್ದಾರೆ. ಹೀಗಾಗಿ ಹೊಸ ವರ್ಷದ ಸಂಭ್ರಮಾಚರಣೆಗೆ ಆಹಾರ, ದಿನಸಿ ಸೇರಿದಂತೆ ಡೆಲಿವರಿ ಸೇವೆಗಳಲ್ಲಿ ವ್ಯತ್ಯಯ ಉಂಟಾಗಲಿದೆ. ಕಳಪೆ ವೇತನ, ಅಸುರಕ್ಷಿತ ಕೆಲಸದ ಪರಿಸ್ಥಿತಿಗಳು ಮತ್ತು ಕೆಲಸದ ಭದ್ರತೆಯ ಕೊರತೆಯಿಂದಾಗಿ ಅವರು ಡಿಸೆಂಬರ್ 31 ರಂದು ಮುಷ್ಕರ ನಡೆಸಲು ಯೋಜಿಸಿದ್ದಾರೆ.

ಮಾಡುವ ಎಲ್ಲ ಕೆಲಸಗಳಿಗೂ ನ್ಯಾಯಯುತ ವೇತನ, ಸುರಕ್ಷಿತ ಕೆಲಸದ ಪರಿಸ್ಥಿತಿಗಳು ಮತ್ತು ಮೂಲಭೂತ ಸಾಮಾಜಿಕ ಭದ್ರತೆಯನ್ನು ಕೋರಿದ್ದಾರೆ. ವಾಣಿಜ್ಯ ಮತ್ತು ಆಹಾರ ವಿತರಣಾ ಕಾರ್ಯಪಡೆಯು ಡಿಸೆಂಬರ್ 31ರಂದು ಅಖಿಲ ಭಾರತ ಮಟ್ಟದಲ್ಲಿ ಮುಷ್ಕರ ನಡೆಸಲಿದೆ. ಸುಮಾರು 1.5 ಲಕ್ಷ ಮಂದಿ ಮುಷ್ಕರದಲ್ಲಿ ಭಾಗಿಯಾಗಲಿದ್ದು, ಡೆಲಿವರಿ ಸೇವೆಯ ಮೇಲೆ ಪರಿಣಾಮ ಬೀರಬಹುದು ಮತ್ತು ಕಾರ್ಯಾಚರಣೆಯ ಅಡಚಣೆಗಳಿಗೆ ಕಾರಣವಾಗಬಹುದು ಎಂದು ಹೇಳಲಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+