ಮುಂಗಾರು ಕೊರತೆ, ಭಾನುವಾರದಿಂದ ಮೋಡ ಬಿತ್ತನೆ ಆರಂಭ

Subscribe to Oneindia Kannada

ಬೆಂಗಳೂರು, ಆಗಸ್ಟ್ 8: ಮುಂಗಾರು ಮಳೆ ಕೊರತೆ ಮುಂದುವರಿದಿದ್ದು ಇದೇ ಭಾನುವಾರದಿಂದ ಮೋಡ ಬಿತ್ತನೆ ಕಾರ್ಯ ಆರಂಭವಾಗಲಿದೆ. ಇದಕ್ಕೆ ಬೇಕಾದ ಎಲ್ಲಾ ಪೂರ್ವಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.

ಆ 5 ರಿಂದ ರಾಜ್ಯದಲ್ಲಿ ಮತ್ತೆ ಚುರುಕಾಗಲಿದೆ ಮುಂಗಾರು

ಇದೇ ಭಾನುವಾರ ದಕ್ಷಿಣ ಕರ್ನಾಟಕದಲ್ಲಿ ಮೋಡ ಬಿತ್ತನೆ ಆರಂಭವಾಗಲಿದೆ. ಆದರೆ ಉತ್ತರ ಕರ್ನಾಟಕದಲ್ಲಿ ಮಾತ್ರ ಒಂದು ವಾರ ತಡವಾಗಿ ಮೋಡ ಬಿತ್ತನೆ ಆರಂಭಗೊಳ್ಳಲಿದೆ.

 Deficiency Monsoon, cloud seeding starts from Sunday

ಈಗಾಗಲೇ ಮೋಡ ಬಿತ್ತನೆಗೆ ಬಳಸುವ ವಿಮಾನಕ್ಕೆ ಕೇಂದ್ರ ಸರ್ಕಾರದಿಂದ ಅನುಮತಿ ಸಿಕ್ಕಿದೆ. ಡಾಫ್ಲರ್ ರಾಡಾರ್ ಅಳವಡಿಕೆ ಪ್ರಕ್ರಿಯೆ ಬೆಂಗಳೂರಿನ ಜಿಕೆವಿಕೆ ಆವರಣದಲ್ಲಿ ನಡೆಯುತ್ತಿದೆ. ಎಮಿರೇಟ್ಸ್ ಸಂಸ್ಥೆಗೆ ಸೇರಿದ ವಿಮಾನವನ್ನು ಮೋಡ ಬಿತ್ತನೆಗೆ ಬಳಸಲಾಗುತ್ತದೆ.

35.77 ಕೋಟಿ ರೂಪಾಯಿ ವೆಚ್ಚದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‍ರಾಜ್ ಇಲಾಖೆ ಮೋಡ ಬಿತ್ತನೆ ನಡೆಸುತ್ತಿದೆ.

ಅಂದುಕೊಂಡತೆ ನಡೆದಿದ್ದರೆ ಆಗಸ್ಟ್ ಮೊದಲ ವಾರದಲ್ಲೇ ಮೋಡ ಬಿತ್ತನೆ ಆರಂಭವಾಗಬೇಕಿತ್ತು. ಆದರೆ ಕೇಂದ್ರದಿಂದ ವಿವಿಧ ಪರವಾನಗಿಗಳನ್ನು ಪಡೆಯಲು ವಿಳಂಬವಾಗಿದ್ದರಿಂದ ತಡವಾಗಿ ಮೋಡ ಬಿತ್ತನೆ ಆರಂಭವಾಗುತ್ತಿದೆ.

Monsoon Entering Karnataka Very Soon | Heavy Rainfall At Kumta, Mangaluru | Oneindia Kannada

ಮಳೆ ಬರುವ ಮೋಡಗಳಿಗೆ ಮೋಡ ಬಿತ್ತನೆ ಮಾಡುವುದರಿಂದ ಒಟ್ಟಾರೆ ಶೇಕಡಾ 10ರಷ್ಟು ಮಳೆ ಪ್ರಮಾಣ ಹೆಚ್ಚಾಗಬಹುದು ಎಂದುಕೊಳ್ಳಲಾಗಿದೆ. ಒಟ್ಟು 60 ದಿನಗಳ ಕಾಲ ರಾಜ್ಯದಲ್ಲಿ ಮೋಡ ಬಿತ್ತನೆ ನಡೆಯಲಿದೆ. ಹೊಯ್ಸಳ ಸಂಸ್ಥೆಗೆ ಈ ಮೋಡ ಬಿತ್ತನೆ ಟೆಂಡರ್ ಪಡೆದಿದ್ದು 300 ಗಂಟೆ ಬಿತ್ತನೆ ನಡೆಸಲಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
The cloud seeding process in Karnataka will begin from this Sunday. All the necessary preparations have been made.
Please Wait while comments are loading...