• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ದೀಪಾವಳಿ ವೇಳೆ ಪಟಾಕಿ ಸಿಡಿಸಲು ರಾಜ್ಯ ಸರ್ಕಾರ ಮಾರ್ಗಸೂಚಿ

|

ಬೆಂಗಳೂರು, ನವೆಂಬರ್ 3: ಚಳಿಗಾಲ ಬಂತೆಂದರೆ ಮಿತಿ ಮೀರಿದ ವಾಯುಮಾಲಿನ್ಯ ಸಮಸ್ಯೆ ಎದುರಿಸುವ ನವದೆಹಲಿಯ ಜನರು ಈ ಬಾರಿ ಪಟಾಕಿಯೇ ಇಲ್ಲದೆ ದೀಪಾವಳಿ ಆಚರಿಸಬೇಕಾದ ಸನ್ನಿವೇಶಕ್ಕೆ ಬಂದು ತಲುಪಿದ್ದಾರೆ. ಕರ್ನಾಟಕದಲ್ಲೂ ಕೂಡ ಪಟಾಕಿ ಸಿಡಿಸಲು ಮಾರ್ಗಸೂಚಿಯನ್ನು ಸರ್ಕಾರ ಪ್ರಕಟಿಸಿದೆ.

ದೀಪಾವಳಿ ವಿಶೇಷ ಪುರವಣಿ

ದೀಪಾವಳಿ ಎಂದರೆ ಪಟಾಕಿ, ಆದರೆ ದೆಹಲಿಯಲ್ಲಿ ಮಾಲಿನ್ಯ ಹೆಚ್ಚಾಗಿರುವುದರಿಂದ ಹಸಿರು ಪಟಾಕಿಗಳನ್ನು ಮಾತ್ರ ಹೊಡೆಯಬಹುದು ಎಂದು ಕಳೆದ 10 ದಿನಗಳಲ್ಲಿ ಮೂರು ಬಾರಿ ಸುಪ್ರೀಂಕೋರ್ಟ್ ಕಟ್ಟುನಿಟ್ಟಿನ ತಾಕೀತು ಮಾಡಿದೆ.

ಸುಪ್ರೀಂಕೋರ್ಟ್ ತೀರ್ಪಿನಂತೆ ಹಸಿರು ಪಟಾಕಿ ಹೊಡೆಯಲು ಇನ್ನು ಮಾರುಕಟ್ಟೆಯಲ್ಲಿ ಅದು ಲಭ್ಯವಿಲ್ಲ. ಇನ್ನು ರಾಜ್ಯದಲ್ಲೂ ಕೂಡ ಪಟಾಕಿ ಸಿಡಿಸಲು ಮಾರ್ಗಸೂಚಿಯನ್ನು ಪ್ರಕಟಿಸಿದ್ದು ಇದು ಸುಪ್ರೀಂಕೋರ್ಟ್ ತೀರ್ಪಿನ ಅನ್ವಯವೇ ರಚಿಸಲಾಗಿದೆ.

ಪಟಾಕಿ ಮಾರಾಟಕ್ಕೆ ನಿಷೇಧವಿಲ್ಲ, ಸುಪ್ರೀಂ ವಿಧಿಸಿದ ಷರತ್ತುಗಳೇನು?

ದೀಪಾವಳಿಯಂದು ಪಟಾಕಿ ಸಿಡಿಸಲು ರಾಜ್ಯ ಸರ್ಕಾರವು ಮಾರ್ಗಸೂಚಿಯನ್ನು ಪ್ರಕಟಿಸಿದೆ ಸುಪ್ರೀಂಕೋರ್ಟ್ ಆದೇಶದನುಸಾರವೇ ಪಟಾಕಿ ಸಿಡಿಸಲು ಸೂಚಿಸಿದ್ದು, ನವೆಂಬರ್ 5ರಿಂದ 8ರವರೆಗೆ ರಾತ್ರಿ 8ರಿಂದ 10ರವರೆಗೆ ಮಾತ್ರ ಪಟಾಕಿ ಸಿಡಿಸಬಹುದಾಗಿದೆ.

ಸರಣಿ ಸ್ಫೋಟಕ ಪಟಾಕಿಗಳ ನಿಷೇಧ

ಸರಣಿ ಸ್ಫೋಟಕ ಪಟಾಕಿಗಳ ನಿಷೇಧ

ವಾಯುಮಾಲಿನ್ಯ , ಶಬ್ದ ಮಾಲಿನ್ಯ ಮತ್ತು ಪಟಾಕಿ ಸಿಡಿಸಿದ ನಂತರದ ಘನತ್ಯಾಜ್ಯ ವಸ್ತುಗಳಿಂದ ಮಾಲಿನ್ಯ ಉಂಟಾಗುವುದರಿಂದ ಸರಣಿ ಸ್ಫೋಟಕ ಪಟಾಕಿಗಳನ್ನು ತಯಾರಿಸುವುದು, ಮಾರಾಟ ಮಾಡುವುದು ಮತ್ತು ಬಳಕೆ ನಿಷೇಧಿಸಲಾಗಿದೆ.

ಪಟಾಕಿ ಮಾರಾಟಕ್ಕೆ ನಿಷೇಧವಿಲ್ಲ, ಆದರೆ ಷರತ್ತುಗಳು ಅನ್ವಯ: ಸುಪ್ರೀಂ

ಅಧಿಕೃತವಾಗಿ ಪರವಾನಗಿ ಪಡೆದಿರಬೇಕು

ಅಧಿಕೃತವಾಗಿ ಪರವಾನಗಿ ಪಡೆದಿರಬೇಕು

ಸ್ಫೋಟಕ ಪಟಾಕಿಗಳನ್ನು ಅಧಿಕೃತವಾಗಿ ಪರವಾನಗಿ ಪಡೆದ ಮಾರಾಟಗಾರರು ಮಾತ್ರ ಮಾರಾಟ ಮಾಡುವುದು ವಾರ್ತಾ ಮತ್ತು ಪ್ರಚಾರ ಇಲಾಖೆ ಮತ್ತು ಜಿಲ್ಲಾಡಳಿತ ಎಲ್ಲಾ ಇಲಾಖೆಗಳು ಶಾಲಾ ಕಾಲೇಜುಗಳಲ್ಲಿ, ಸಾರ್ವಜನಿಕರಲ್ಲಿ ಪಟಾಕಿ ಸಿಡಿಸುವುದರಿಂದ ಉಂಟಾಗುವ ಅಪಾಯಗಳ ಬಗ್ಗೆ ವ್ಯಾಪಕ ಪ್ರಚಾರ ಮಾಡುವುದು.

14 ದಿನಗಳ ಕಾಲ ಮಾಲಿನ್ಯ ನಿಯಂತ್ರಣ ಮಂಡಳಿ ನಿಗಾ

14 ದಿನಗಳ ಕಾಲ ಮಾಲಿನ್ಯ ನಿಯಂತ್ರಣ ಮಂಡಳಿ ನಿಗಾ

ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು 14 ದಿನಗಳ ಕಾಲ ಅಂದರೆ ದೀಪಾವಳಿ ಹಬ್ಬ ಆರಂಭವಾಗುವ 7 ದಿನಗಳ ಮೊದಲು ಮತ್ತು ದೀಪಾವಳಿ ಹಬ್ಬದ ನಂತರ 7 ದಿನಗಳು ಪಟಾಕಿ ಸಿಡಿಸುವುದರ ಬಗ್ಗೆ ಮೇಲ್ವಿಚಾರಣೆ ಮಾಡಬೇಕಿದೆ.

ಮಹಾನಗರ ಪಾಲಿಕೆ, ಜಿಲ್ಲಾ ಪಂಚಾಯ್ತಿ ಪರಿಶೀಲನೆ

ಮಹಾನಗರ ಪಾಲಿಕೆ, ಜಿಲ್ಲಾ ಪಂಚಾಯ್ತಿ ಪರಿಶೀಲನೆ

ಎಲ್ಲಾ ಮಹಾನಗರ ಪಾಲಿಕೆಗಳು, ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯ್ತಿ, ತಾಲೂಕ್ ಪಂಚಾಯ್ತಿ, ನಗರ ಸಭೆ, ಪುರಸಭೆ ಪಟಾಕಿಗಳನ್ನು ಸಾಮೂಹಿಕವಾಗಿ ಸಿಡಿಸುವ ಬಗ್ಗೆ ಪರಿಶೀಲಿಸುವುದು-ಎಲ್ಲಾ ಇಲಾಖೆಗಳು ಪ್ರಮುಖವಾಗಿ ಪೊಲೀಸ್ ಇಲಾಖೆಯ ಪಟಾಕಿ ಸಿಡಿತ ಹಾಗೆಯೇ ಪ್ರಕ್ರಿಯೆಯು ನಿಗದಿತ ಅವಧಿಯಲ್ಲಿ ನಡೆಯುವಂತೆ ನೋಡಿಕೊಳ್ಳುವುದು, ನಿಷೇಧಿತ ಸ್ಫೋಟಕ ಪಟಾಕಿಗಳನ್ನು ಮಾರಾಟ ತಡೆಗಟ್ಟುವುದು.

English summary
Karnataka government made an guideline to follow the supreme court order. So people of Karnataka can burst the cracker from November 5 to 8 from 8 pm to 10 pm
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X