• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ವದಂತಿ ಹಬ್ಬಿಸಬೇಡಿ, ಸರ್ಕಾರದಿಂದಲೇ ಮಾಹಿತಿ; ಸುಧಾಕರ್

|

ಬೆಂಗಳೂರು ಮಾರ್ಚ್ 4: ಕೊರೊನಾ ಬಗ್ಗೆ ಯಾರೂ ವದಂತಿಗಳನ್ನು ಹಬ್ಬಿಸಬಾರದು. ಸರ್ಕಾರದ ವತಿಯಿಂದಲೇ ಪ್ರತಿದಿನ ಸಂಜೆ 6 ಕ್ಕೆ ಸಂಪೂರ್ಣ ವಿವರ ನೀಡುತ್ತೇವೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್ ಹೇಳಿದ್ದಾರೆ.

ಬುಧವಾರ ಸಂಜೆ ತುರ್ತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊರೊನಾ ವಿಷಯ ತುಂಬಾ ಸೂಕ್ಷ್ಮ ವಿಚಾರ ಆಗಿರುವುದರಿಂದ ನಾವು ಮಾತ್ರ ಈ ಬಗ್ಗೆ ಮಾಹಿತಿ ನೀಡುತ್ತೇವೆ. ಸಾಮಾಜಿಕ ತಾಣಗಳ ಮಾಹಿತಿ ನಂಬಬೇಡಿ ಎಂದು ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

ಡೆಡ್ಲಿ ಕೊರೊನಾ ಹತ್ತಿಕ್ಕಲು ಸಫಲವಾಯಿತಾ ಡ್ರ್ಯಾಗನ್ ಚೀನಾ...?

ಕರ್ನಾಟಕದಲ್ಲಿ ಯಾರಿಗೂ ಸೋಂಕು ತಗುಲಿಲ್ಲ. ಎಲ್ಲ ರೀತಿಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದೇವೆ. ಕೇಂದ್ರ ಸಚಿವ ಹರ್ಷವರ್ಧನ್ ಸುದ್ದಿಗೋಷ್ಠಿ ನಡೆಸಿ, 28 ಮಂದಿ ಯಲ್ಲಿ ಕೊರೋನಾ ಪತ್ತೆಯಾಗಿದೆ ಎಂದಿದ್ದಾರೆ. ಕರ್ನಾಟಕದಲ್ಲಿ ಯಾರಿಗೂ ಸೋಂಕು ತಗುಲಿಲ್ಲ. ಕೇರಳದ 3 ವರಲ್ಲಿ ಕೊರೋನಾ ಪತ್ತೆಯಾಗಿತ್ತು. ಅವರೆಲ್ಲ ಸಂಪೂರ್ಣ ಗುಣಮುಖರಾಗಿದ್ದಾರೆ. ಯಾರೂ ಹೆದರಿಕೊಳ್ಳುವ ಅಗತ್ಯವಿಲ್ಲ ಎಂದಿದ್ದಾರೆ.

ರಾಜ್ಯದಲ್ಲಿ 273 ಮಂದಿ ಮೇಲೆ ಶಂಖೆ ಇತ್ತು. ಅವರಲ್ಲಿ 253 ಮಂದಿ ಗೆ ನೆಗೆಟಿವ್ ಅಂತ ರಿಪೋರ್ಟ್ ನಲ್ಲಿ ಬಂದಿದೆ. ಉಳಿದವರಿಗೆ ಚಿಕಿತ್ಸೆ ನೀಡುತ್ತಿದ್ದೇವೆ. 104 ನಂಬರ್ ಕಾಲ್ ಸೆಂಟರಗೆ ಕಾಲ್ ಮಾಡಬಹುದು. ಇವತ್ತು 42283 ಪ್ರಯಾಣಿಕರನ್ನ ತಪಾಸಣೆ ಗೆ ಒಳಪಡಿಸಲಾಗಿದೆ. ಜಿಲ್ಲಾಧಿಕಾರಿಗಳು ನೇತೃತ್ವದಲ್ಲಿ ಸೀಮಿತಿ ರಚನೆ ಮಾಡಲಾಗಿದೆ. ಅದರಂತೆ ನಮ್ಮ ಅಧಿಕಾರಿಗಳು ಕೆಲಸ ಮಾಡುತ್ತಿದ್ದಾರೆ ಎಂದು ತಿಳಿಸಿದ್ದಾರೆ.

English summary
Deadly Coronavirus Don't Spread False News To Public says Minister Sudhakar. Medical minister said today evening at press meet.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X