ದಾವಣಗೆರೆ ಲೋಕಸಭಾ ಕ್ಷೇತ್ರ : ಯಾರು ಗೆಲ್ಲಬಹುದು?

ಕರ್ನಾಟಕದ ಇಪ್ಪತ್ತೆಂಟು ಲೋಕಸಭಾ ಚುನಾವಣಾ ಕಣಗಳಲ್ಲಿ ದಾವಣಗೆರೆ ಕ್ಷೇತ್ರ ಕೂಡ ಪ್ರತಿಷ್ಠಿತ ಕಣಗಳಲ್ಲೊಂದು. ಜನತಾದಳದಿಂದ ಮಹಿಮಾ ಪಟೇಲ್ ಕಣದಲ್ಲಿದ್ದರೂ ಬಿಜೆಪಿಯ ಸಿದ್ದೇಶ್ವರ್ ಮತ್ತು ಕಾಂಗ್ರೆಸ್ ನ ಮಲ್ಲಿಕಾರ್ಜುನ ನಡುವೆ ನೇರ ಹಣಾಹಣಿ ನಡೆದಿದೆ. ನರೇಂದ್ರ ಮೋದಿ ಅಲೆಯನ್ನು ಮತ್ತು ಹೆಚ್ಚಾಗಿರುವ ಮತದಾನದ ಪ್ರಮಾಣವನ್ನು ಪರಿಗಣನೆಗೆ ತೆಗೆದುಕೊಂಡರೆ ಮಲ್ಲಿಯನ್ನು ಸಿದ್ದೇಶ್ವರ್ ಚಿತ್ ಮಾಡಿದರೂ ಅಚ್ಚರಿಯಿಲ್ಲ. ಕಳೆದ ಚುನಾವಣೆಗಳನ್ನು ಗಮನಿಸಿದರೆ ವಿಧಾನಸಭೆಯಲ್ಲಾಗಲಿ, ಲೋಕಸಭೆಯಲ್ಲಾಗಲಿ ಯಾರ ಕೈ ಮೇಲಾಗಿದೆ, ಟ್ರೆಂಡ್ ಏನು ಹೇಳುತ್ತದೆ ಎಂಬುದರ ವಿಶ್ಲೇಷಣೆ ಇಲ್ಲಿದೆ.

Davanagere lok sabha election : Who will win?

2008ರವರೆಗೆ, ಭರಮಸಾಗರ ಮತ್ತು ಹೊಳಲ್ಕೆರೆ ಕ್ಷೇತ್ರಗಳನ್ನ ಒಳಗೊಂಡಿದ್ದ ದಾವಣಗೆರೆ, ತದನಂತರದಲ್ಲಿ, ಹರಪನಹಳ್ಳಿಯನ್ನು ತೆಕ್ಕೆಗೆ ಎಳೆದುಕೊಂಡು ವಿಭಿನ್ನ ಕ್ಷೇತ್ರವಾಗಿ ರೂಪುಗೊಂಡಿತು. ಕಳೆದ ಐದು ಚುನಾವಣೆಗಳಲ್ಲಿ, ಪ್ರತಿ ವಿಧಾನಸಭೆ ಕ್ಷೇತ್ರದಲ್ಲಿ ಯಾವ ಪಕ್ಷಕ್ಕೆ ಒಲಿದಿದೆ ಅನ್ನುವದನ್ನ ಕೆಳಗೆ ಪ್ರಸ್ತುತಪಡಿಸಲಾಗಿದೆ.

ಜಗಳೂರು ವಿಧಾನಸಭೆಯಲ್ಲಿ ಕಾಂಗೆಸ್ಸಿಗೆ ಮಣೆ ಹಾಕಿದ್ದರೂ, ಲೋಕಸಭೆಯಲ್ಲಿ ಮಾತ್ರ ಬಿ.ಜೆ.ಪಿಯನ್ನೇ ಆರಿಸಿದೆ. ಹರಪನಹಳ್ಳಿಯಲ್ಲಿ ಕಳೆದ ಐದು ವರ್ಷಗಳಿಂದ ಕಾಂಗ್ರೆಸ್ ಮುಂದಿದೆ. ಹರಿಹರ ಕಳೆದಬಾರಿ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಕಡೆ ವಾಲಿತ್ತಾದರೂ ಈಗಿನ ಸ್ಥಿತಿಯೇ ಬೇರೆ. ದಾವಣಗೆರೆ ದಕ್ಷಿಣ ಶಾಮನೂರು ಫ್ಯಾಮಿಲಿಯ ಜಹಗೀರಿನಂತಿದ್ದರೂ ಉತ್ತರದಲ್ಲಿ ಬಿ.ಜೆ.ಪಿ ಬಿಗಿಯಾಗಿದೆ. ಚನ್ನಗಿರಿ ಮತ್ತು ಹೊನ್ನಾಳಿ ಬಿ.ಜೆ.ಪಿ ಪರವಾಗಿದ್ದವಾಗಿದ್ದರೂ ಕಳೆದ ವಿಧಾನಸಭೆಯಲ್ಲಿ ಕಾಂಗ್ರೆಸಗೆ ಗೆಲುವು ಕೊಟ್ಟಿವೆ.

2009ರ ಲೋಕಸಭಾ ಚುನಾವಣೆಯಲ್ಲಿ ಐದು ವಿಧಾನಸಭಾ ಕ್ಷೇತ್ರದಲ್ಲಿ ಲೀಡ್ ಪಡೆದಿದ್ದ ಬಿ.ಜೆ.ಪಿ ಕೇವಲ 2024 ವೋಟಿನ ಅಂತರದಲ್ಲಿ ಜಯಗಳಿಸಿತ್ತು. ಈ ಬಾರಿಯ ಮತದಾನವನ್ನ ಅವಲೋಕಿಸಿದಾಗ ಏನಾಗಬಹುದೆಂಬ ಊಹೆಗೆ ಕಾರಣಗಳನ್ನ ಕಂಡುಹಿಡಿಯಬಹುದೇನೋ. ವೋಟ್ ಡ್ರಿಫ್ಟ್ ಕೆಳಗಿನ ಚಿತ್ರದಲ್ಲಿ ನೋಡಿ. [ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ 20ಟ್ವೆಂಟಿ ಕ್ರಿಕೆಟ್!]


ಕಳೆದ ಬಾರಿಗಿಂತಲೂ ಎರಡು ಲಕ್ಷ ವೋಟು ಹೆಚ್ಚಾಗಿ ಚಲಾವಣೆಯಾಗಿವೆ. ಕಳೆದ ಬಾರಿಯ ವೋಟುಗಳು ಬಿಜೆಪಿ ಮತ್ತು ಕಾಂಗ್ರೆಸ್ಸುಗಳ ಮಧ್ಯೆ ಹಂಚಿ ಹೋಗಿದ್ದರೆ, ಹೊಸ ಮತದಾರ ಯಾರಿಗೆ ಮಣೆ ಹಾಕಿದ್ದಾನೆ ಅನ್ನೋದು ಈ ಬಾರಿಯ ಫಲಿತಾಂಶವನ್ನ ನಿರ್ಧರಿಸಲಿದೆ. ಅತಿ ಹೆಚ್ಚಿನ ಹೊಸ ಮತಗಳು ಬಿದ್ದಿರೋದು ಹರಪನಹಳ್ಳಿಯಲ್ಲಿ. ಮಾಯಕೊಂಡದಲ್ಲಿ ಅತಿ ಕಡಿಮೆ. ಆದರೆ 2013ರ ವಿಧಾನಸಭೆಗೆ ಹೋಲಿಸಿದರೆ, ದಾವಣಗೆರೆ ಉತ್ತರ ಮತ್ತು ದಕ್ಷಿಣದಲ್ಲಿ ಅತಿ ಹೆಚ್ಚಿನ ಮತದಾನವಾಗಿದೆ.

2013ರ ಚುನಾವಣೆಯ ಲೆಕ್ಕಾಚಾರದಲ್ಲಿ ಈ ಬಾರಿಯಾಗಿರುವ ಹೊಸ ಮತದಾರರನ್ನ ನೋಡಿದರೆ, ಮಲ್ಲಿಕಾರ್ಜುನ ನಲವತ್ತು - ಐವತ್ತು ಸಾವಿರದಲ್ಲಿ ಗೆಲ್ಲಬಹುದೇನೋ! ಆದರೆ ಒಟ್ಟಾರೆಯಾಗಿ ಮೋದಿಯ ಅಲೆ ಕಂಡು ಬರುತ್ತೆ. ಆ ಲೆಕ್ಕಾಚಾರದಲ್ಲಿ ಜಿ.ಎಂ. ಸಿದ್ಧೇಶ್ವರ್ ಇಪ್ಪತ್ತೈದು ಸಾವಿರದ ಲೀಡ್ ನಲ್ಲಿ ಗೆಲ್ಲಬಹುದೇನೋ ಅನ್ನಿಸುತ್ತೆ. ಹೊನ್ನಾಳಿ, ಹರಿಹರ, ಜಗಳೂರು ಬಿ.ಜೆ.ಪಿಗೆ ಒಲಿಯವ ಸಾಧ್ಯತೆ ಇದ್ದರೆ. ದಾವಣಗೆರೆ ದಕ್ಷಿಣ, ಉತ್ತರ ಮತ್ತು ಹರಪನಹಳ್ಳಿ ಕಾಂಗ್ರೆಸ್ಸಿಗೆ ಬಲ ಕೊಡಬಹುದು. ಮಾಯಕೊಂಡ ಮತ್ತು ಚನ್ನಗಿರಿಯಲ್ಲಿ ಮಹಿಮಾ ಪಟೇಲ್ ಯಾರ ವೋಟು ಎಷ್ಟು ಕಿತ್ತಿದ್ದಾರೊ, ಅದು ಜಯಶಾಲಿಯನ್ನ ನಿರ್ಧರಿಸುತ್ತೆ.

ಸುಮಾರು ಆರು ಪ್ರತಿಶತ ಹೆಚ್ಚು ಮತ ಚಲಾವಣೆ ಆಗಿರೋದು ಮೋದಿಯ ಅಲೆ ಅಥವಾ ಮೋದಿ ವಿರೋಧಿ ಅಲೆಯನ್ನ ಪ್ರತಿಬಿಂಬಿಸುತ್ತೆ. ನಗರ ಕ್ಷೇತ್ರಗಳಲ್ಲಿ ಹೆಚ್ಚಿನ ಮತವಾಗಿರೋದ್ರಿಂದ ಇದು ಮೋದಿಯ ಅಲೆಯೇ ಅನ್ನಬಹುದು. ಇನ್ನು ದಾವಣಗೆರೆಯಲ್ಲಿ ಗೆಲುವಿನ ದಡ ಸೇರೋದು ಯಾರು? ಕಳೆದ ಚುನಾವಣೆಯಲ್ಲಿ ಅಂತರ ಕೇವಲ 2024 ಮತಗಳು. ಎಪ್ಪತ್ತೇಳರಿಂದ ಇದುವರೆಗೆ ಗೆದ್ದ ಅಭ್ಯರ್ಥಿ ಮತ್ತು ಗೆಲುವಿನ ಅಂತರವನ್ನ ಕೆಳಗಿನ ಕೋಷ್ಟಕದಲ್ಲಿ ನೀಡಲಾಗಿದೆ.

Who will win in Davanagere lok sabha constituencies?

ನೀವೇನಂತಿರಿ. ಯಾರು ಗೆಲ್ಲಬಹುದು ದಾವಣಗೆರೆಯಲ್ಲಿ?
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+