Dasara Holidays 2024: ಈ ರೀತಿ ಮಾಡಿದರೆ ಒಪ್ಪುವುದಿಲ್ಲ: ಪ್ರಮೋದ್‌ ಮುತಾಲಿಕ್‌ ಎಚ್ಚರಿಕೆ

ದಸರಾ ಹಬ್ಬದ ಬಗ್ಗೆ ಕೆಲವು ಶಾಲೆಗಳು ತಪ್ಪಾಗಿ ನಡೆದುಕೊಳುತ್ತಿವರ ಬಗ್ಗೆ ಹಿಂದೂ ಮುಖಂಡ ಹಾಗೂ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ್ ಅವರು ಕಿಡಿಕಾರಿದ್ದಾರೆ. ದಸರಾ ರಾಜ್ಯದ ನಾಡಹಬ್ಬ. ಆದರೆ, ಕೆಲವು ಕ್ರೈಸ್ತ ಶಾಲೆಗಳು ಅಧಿಕೃತ ರಜೆ ನೀಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕ್ರೈಸ್ತ ಶಾಲೆಗಳು ದಸರಾ ಸಂಭ್ರಮದ ಅವಧಿಯಲ್ಲಿ ಪರೀಕ್ಷೆಗಳನ್ನು ನಡೆಸುತ್ತಿವೆ ಎಂದು ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.

ನಾಡಹಬ್ಬ ದಸರಾಕ್ಕೆ ಸರ್ಕಾರವೇ 15 ದಿನಗಳ ಕಾಲ ಶಾಲೆಗೆ ಅಧಿಕೃತ ರಜೆ ಘೋಷಣೆ ಮಾಡಿದೆ. ಆದರೆ, ಕೆಲವು ಕ್ರೈಸ್ತ ಶಾಲೆಗಳು ಸರ್ಕಾರದ ಆದೇಶವನ್ನು ಮೀರಿ ಶಾಲೆಗಳನ್ನು ನಡೆಸುತ್ತಿವೆ. ಇದು ಒಳ್ಳೆಯ ಬೆಳವಣಿಗೆಯಲ್ಲ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ್ ಹೇಳಿದ್ದಾರೆ. ದಸರಾ ರಜೆ ನೀಡದ ಶಾಲೆ ನಡೆಸಿದ ಆರೋಪದ ಮೇಲೆ ಅವರು ಮಂಗಳವಾರ ಧಾರವಾಡದ ಬಾಸೆಲ್ ಮಿಶನ್ ಶಾಲೆಗೆ ತೆರಳಿ ಶಾಲೆಯ ಸಿಬ್ಬಂದಿಯೊಂದಿಗೆ ಮಾತನಾಡಿದರು.

Dasara Holidays 2024 Doing this on holiday is not acceptable Pramod Muthalik warns

ನಾಡಹಬ್ಬ ದಸರಾಕ್ಕೆ ರಾಜ್ಯ ಕಾಂಗ್ರೆಸ್‌ ಸರ್ಕಾರವೇ ರಜೆ ಘೋಷಣೆ ಮಾಡಿದೆ. ದಸರಾ ಹಬ್ಬದ ಸಮಯದಲ್ಲೇ ಕೆಲವು ಕ್ರೈಸ್ತ ಶಾಲೆಗಳು ಪರೀಕ್ಷೆ ನಡೆಸುವ ಮೂಲಕ ಚರ್ಚೆಗೆ ಗ್ರಾಸವಾಗಿವೆ. ಹಿಂದೂ ಸಂಪ್ರದಾಯ, ಸಂಸ್ಕೃತಿಗೆ ಈ ಕ್ರೈಸ್ತ ಶಾಲೆಗಳು ಅವಮಾನ ಮಾಡುತ್ತಿವೆ. ಸರ್ಕಾರದ ಆಜ್ಞೆಯನ್ನು ಈ ಶಾಲೆಗಳು ಉಲ್ಲಂಘನೆ ಮಾಡುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೇ ರಜೆ ಸಂದರ್ಭದಲ್ಲೂ ಪರೀಕ್ಷೆ ನಡೆಸಿದ ಕ್ರೈಸ್ತ ಶಾಲೆಗಳಿಗೆ ಭೇಟಿ ನೀಡಿ ಅಲ್ಲಿನ ಸಿಬ್ಬಂದಿಯೊಂದಿಗೆ ವಾಗ್ವಾದವನ್ನೂ ನಡೆಸಿದರು.

ನಾಡಹಬ್ಬಕ್ಕೆ ರಜೆ ಘೋಷಿಸಲಾಗಿದೆ. ಈ ಪ್ರಕಾರ ಶಾಲೆಗಳಿಗೆ ರಜೆ ಘೋಷಣೆ ಮಾಡಬೇಕು. ಇಲ್ಲದಿದ್ದರೆ ನಾವೇ ಬಂದು ಶಾಲೆಯನ್ನು ಬಂದ್ ಮಾಡಬೇಕಾಗುತ್ತದೆ ಎಂದು ಶ್ರೀರಾಮ ಸೇನೆ ಕಾರ್ಯಕರ್ತರು ಶಾಲಾ ಸಿಬ್ಬಂದಿಗೆ ಎಚ್ಚರಿಸಿದರು. ಇದಕ್ಕೆ ಒಪ್ಪಿದ ಶಾಲಾ ಆಡಳಿತ ಮಂಡಳಿ ನಾಳೆಯಿಂದ (ಬುಧವಾರದಿಂದ, ಅಕ್ಟೋಬರ್‌ 9) ರಜೆ ಘೋಷಣೆ ಮಾಡುವುದಾಗಿ ಒಪ್ಪಿಕೊಂಡರು.

ಕ್ರೈಸ್ತ ಶಾಲೆಗಳಿಗೆ ಬರುವ ಹೆಣ್ಣು ಮಕ್ಕಳು (ವಿದ್ಯಾರ್ಥಿನೀಯರು) ಬಳೆ ಹಾಕಿಕೊಳ್ಳುವಂತಿಲ್ಲ, ಕುಂಕುಮ ಹಚ್ಚಿಕೊಳ್ಳುವಂತಿಲ್ಲ. ಕಾಲ್ಗೆಜ್ಜೆ ಹಾಕಿಕೊಳ್ಳುವಂತಿಲ್ಲ ಎನ್ನುವ ಷರತ್ತುಗಳನ್ನು ವಿಧಿಸಲಾಗುತ್ತಿದೆ. ಈ ರೀತಿ ನಮ್ಮ ಸಂಪ್ರದಾಯವನ್ನು ಅವಮಾನಿಸುವ ಕೆಲಸ ನಡೆಯುತ್ತಿದೆ. ಸರ್ಕಾರದ ಆದೇಶ ಉಲ್ಲಂಘನೆ ಮಾಡಿದ ಕ್ರೈಸ್ತ ಶಾಲೆಗಳ ಮಾನ್ಯತೆ ರದ್ದು ಮಾಡಬೇಕು. ಸರ್ಕಾರದ ಅನುದಾನವನ್ನೂ ವಾಪಸ್ ಪಡೆಯಬೇಕು. ಅಲ್ಲದೇ ರಜೆ ಸಂದರ್ಭದಲ್ಲಿ ಶಾಲೆ ತೆಗೆದವರನ್ನು ಬಂಧಿಸಬೇಕು ಎಂದು ಮುತಾಲಿಕ್ ಒತ್ತಾಯಿಸಿದರು.

ಕ್ರಿಸ್‌ಮಸ್‌ ರಜೆ ಬಂದು ಮಾಡಿ: ದಸರಾ ರಜೆ ನೀಡದೆ ನಿರ್ಲಕ್ಷ್ಯ ಮಾಡುತ್ತಿರುವ ಶಾಲೆಗಳ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು. ಈ ರೀತಿ ದಸರಾ ರಜೆ ಕೊಡದೆ ಇರುವ ಕ್ರೈಸ್ತ ಶಾಲೆಗಳಿಗೆ ಕ್ರಿಸ್‌ಮಸ್ ರಜೆಯನ್ನು ರದ್ದು ಮಾಡಬೇಕು. ಬ್ರಿಟಿಷರ ಕಾಲದಿಂದಲೂ ಬಂದು ಈ ಕ್ರಿಸ್‌ಮಸ್ ರಜೆಯನ್ನು ಸರ್ಕಾರ ಕೂಡಲೇ ರದ್ದು ಮಾಡಬೇಕು ಎಂದು ಮುತಾಲಿಕ್ ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+