Darshan Thoogudeepa: ಸುಪ್ರೀಂ ಕೋರ್ಟ್‌ನಲ್ಲಿ ದರ್ಶನ್ ಜಾಮೀನು ಭವಿಷ್ಯ: ಮತ್ತೆ ಬಂಧನ ಭೀತಿ...

Darshan Thoogudeepa: ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ನಟ ಹಾಗೂ ಕೊಲೆ ಆರೋಪಿಯಾಗಿರುವ ದರ್ಶನ್ ತೂಗುದೀಪ್‌ ಅವರ ಜಾಮೀನನ್ನು ರದ್ದುಪಡಿಸಬೇಕು ಎಂದು ಕರ್ನಾಟಕ ಪೊಲೀಸರು ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯು ಏಪ್ರಿಲ್‌ 22ರಂದು (ಮಂಗಳವಾರ) ನಡೆದಿದೆ. ಈ ವೇಳೆ ರೇಣುಕಾಸ್ವಾಮಿ ಕೊಲೆ ಕೇಸ್‌ಗೆ ಸಂಬಂಧಿಸಿದಂತೆ ಹಲವು ಪ್ರಮುಖ ವಿಚಾರಗಳು ಚರ್ಚೆಯಾಗಿದ್ದು, ನಟ ದರ್ಶನ್ ಅವರು ಮತ್ತೆ ಬಂಧನಕ್ಕೆ ಒಳಗಾಗಲಿದ್ದಾರೆಯೇ ಎನ್ನುವ ಆತಂಕ ಎದುರಾಗಿದೆ. ಇದಕ್ಕೆ ಕಾರಣ ಕರ್ನಾಟಕ ಸರ್ಕಾರದ ಪರ ವಕೀಲರು ಸ್ಟ್ರಾಂಗ್ ಆಗಿ ವಾದ ಮಂಡನೆ ಮಾಡಿರುವುದು. ರೇಣುಕಾಸ್ವಾಮಿ ಕೊಲೆ ಕೇಸ್‌ಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ ನಡೆದಿದೆ. ಸುಪ್ರೀಂ ಕೋರ್ಟ್‌ನಲ್ಲಿ ಜಾಮೀನು ಅರ್ಜಿ ರದ್ದು ಮಾಡಬೇಕು ಎನ್ನುವ ಬಗ್ಗೆ ವಿಚಾರಣೆ ನಡೆದಿದೆ. ಹಿರಿಯ ವಕೀಲರಾದ ಮನಸಿಂಘ್ವಿ ಅವರು ದರ್ಶನ್ ಪರ ವಾದ ಮಂಡನೆ ಮಾಡಿದ್ದಾರೆ.

ನಟ ದರ್ಶನ್ ಅವರು ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಜಾಮೀನಿನ ಮೇಲೆ ಹೊರಗೆ ಇದ್ದಾರೆ. ಆದರೆ, ಜಮೀನು ರದ್ದು ಮಾಡಬೇಕು ಎಂದು ಕರ್ನಾಟಕ ಸರ್ಕಾರದ ಅನುಮತಿಯನ್ನು ಪಡೆದುಕೊಂಡು ಕರ್ನಾಟಕ ಸರ್ಕಾರದ ಪೊಲೀಸರು ಸುಪ್ರೀಂ ಕೋರ್ಟ್‌ ಕದ ತಟ್ಟಿದ್ದರು. ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದ ಪ್ರಮುಖ ವಿಷಯಗಳು ಮಂಗಳವಾರ ಚರ್ಚೆಯಾಗಿವೆ.

Darshan Thoogudeepa Darshan s Bail Prospects in Supreme Court Fear of Arrest Again

ಸುಪ್ರೀಂ ಕೋರ್ಟ್‌ನಲ್ಲಿ ವಾದ ಮಂಡಿಸಿರುವ ದರ್ಶನ್ ಪರ ವಕೀಲರು, "ಅದು ದರ್ಶನ್‌ ಅವರ ಜಾಗ ಅಲ್ಲ.. ಅದಕ್ಕೂ ಅವರಿಗೂ ಸಂಬಂಧವಿಲ್ಲ.

ದರ್ಶನ್ ಆ ವಿಡಿಯೋದಲ್ಲಿ ಇಲ್ಲ. ಪ್ರಮುಖ ಸಾಕ್ಷಿಯೇ ಇಲ್ಲದೆ ದರ್ಶನ್‌ ಅವರನ್ನು ಬಂಧಿಸಲಾಗಿದೆ. ದರ್ಶನ್‌ ಅರೆಸ್ಟ್‌ ಮಾಡಿದ ನಂತರ, ಪ್ರಮುಖ ಸಾಕ್ಷಿಯ ಹೇಳಿಕೆಯನ್ನು ಪಡೆದುಕೊಳ್ಳಲಾಗಿದೆ" ಎಂದು ದರ್ಶನ್‌ ಪರ ವಕೀಲರು ವಾದ ಮಂಡನೆ ಮಾಡಿದ್ದಾರೆ.

ಈ ಕೇಸ್‌ನಲ್ಲಿ ಐ ವಿಕ್ಟ್ನೆಸ್‌ ಇಲ್ಲದೆ ಮೊದಲು ಬಂಧಿಸಲಾಗಿದೆ. ಇನ್ನು ಹತ್ಯೆ ನಡೆದ ಜಾಗದಲ್ಲಿ ಕೆಲಸಗಾರರು ಇರಲಿಲ್ಲ. ದರ್ಶನ್ ಅವರನ್ನು ಬಂಧಿಸುವುದಕ್ಕೆ ಯಾವುದೇ ಕಾರಣಗಳು ಇಲ್ಲ. ಯಾವುದೇ ಕಾರಣಗಳು ಹಾಗೂ ಕಾನೂನು ಬಾಹಿರವಾಗಿ ದರ್ಶನ್‌ ಅವರನ್ನು ಪೊಲೀಸರು ಅರೆಸ್ಟ್‌ ಮಾಡಿದ್ದಾರೆ ಎಂದು ದರ್ಶನ್‌ ಪರ ವಾದ ಮಾಡಿದ ವಕೀಲರು ವಾದಿಸಿದ್ದಾರೆ.

ಇನ್ನು ವಿಚಾರಣೆ ನಡೆಯುವಾಗ ನೀವು ಪಾರ್ಕಿಂಗ್ ಎನ್ನುತ್ತಿದ್ದೀರಿ ಅವರು ಶೆಡ್ ಎನ್ನುತ್ತಿದ್ದಾರೆ. ಜಾಗ ಯಾವುದು ಎಂದು ದರ್ಶನ್ ಪರ ವಕೀಲರನ್ನು ಜಡ್ಜ್‌ ಕೇಳಿದ್ದಾರೆ. ಪಾರ್ಕಿಂಗ್‌ ಜಾಗದಲ್ಲಿ ಹತ್ಯೆ ನಡೆದಿದೆ ಎಂದು ಹೇಳಲಾಗಿದೆ. ಇನ್ನು ಈ ಕೇಸ್‌ನಲ್ಲಿ ಎಲ್ಲರಿಗೂ ಜಾಮೀನು ಸಿಕ್ಕಿದೆಯೇ ಹಾಗೂ ದರ್ಶನ್‌ ಅವರು ಇನ್ನೂ ಸಾಕ್ಷಿಗಳ ಜೊತೆ ಸಂಪರ್ಕ ಹೊಂದಿದ್ದಾರೆ ಎನ್ನುವ ಪ್ರಶ್ನೆಗಳನ್ನು ಈ ಸಂದರ್ಭದಲ್ಲಿ ಕೇಳಲಾಗಿದೆ. ಅಲ್ಲದೇ ದರ್ಶನ್‌ ಕೊಲೆಯಲ್ಲಿ ಭಾಗಿಯಾಗಿದ್ದಾರೆಯೇ, ಯಾವ ಲೀಡ್ ಸಿಕ್ತು ಎನ್ನುವ ಪ್ರಶ್ನೆಗಳನ್ನು ಕೇಳಿದ್ದಾರೆ ಎಂದು ಹೇಳಲಾಗಿದೆ.

ಮೇ 14ಕ್ಕೆ ವಿಚಾರಣೆ ಮುಂದೂಡಿಕೆ: ಇನ್ನು ನಟ ದರ್ಶನ್‌ ಜಾಮೀನು ಅರ್ಜಿ ವಿಚಾರಣೆಯನ್ನು ಮೇ 14ಕ್ಕೆ ಮುಂದೂಡಿಕೆ ಮಾಡಿ ಸುಪ್ರೀಂ ಕೋರ್ಟ್‌ ಆದೇಶ ಮಾಡಿದೆ. ಏಪ್ರಿಲ್‌ 22ರಂದು ಸುಪ್ರೀಂ ಕೋರ್ಟ್‌ ಈ ಕೇಸ್‌ಗೆ ಸಂಬಂಧಿಸಿದಂತೆ ಪರ - ವಿರೋಧ ವಾದವನ್ನು ಆಲಿಸಿತ್ತು. ದರ್ಶನ್‌ ಪರ ವಕೀಲರು ಹಾಗೂ ಸರ್ಕಾರದ ಪರ ವಕೀಲರು ಈ ಪ್ರಕರಣದಲ್ಲಿ ವಾದ ಮಂಡನೆಯನ್ನು ಮಾಡಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+