ತುಂಗಭದ್ರಾ ಡ್ಯಾಂ 7 ಗೇಟ್‌ಗಳಿಗೆ ಹಾನಿ: ಕರ್ನಾಟಕದ ನಾಲ್ಕು ಜಿಲ್ಲೆಗಳಿಗೆ ಸಂಕಷ್ಟ!
ತುಂಗಭದ್ರಾ ಡ್ಯಾಂನಿಂದ ಅಪಾರ ಪ್ರಮಾಣದ ನೀರು ವ್ಯರ್ಥವಾಗುತ್ತಿದ್ದು ಸರ್ಕಾರದ ಎಡವಟ್ಟಿನಿಂದ ರೈತರಿಗೆ ಸಂಕಷ್ಟ ಎದುರಾಗಿದೆ. ಈ ವಿಚಾರವಾಗಿ ಬಿಜೆಪಿ ಸಹ ಸರಣಿ ಟ್ವೀಟ್ ಮಾಡಿದೆ. ಕಾಂಗ್ರೆಸ್ ಸರ್ಕಾರದ ದಿವ್ಯ ನಿರ್ಲಕ್ಷ್ಯದಿಂದ ತುಂಗಾಭದ್ರಾ ಡ್ಯಾಂನ ಏಳು ಗೇಟ್‌ಗಳು ಡ್ಯಾಮೇಜ್ ಆಗಿವೆ. ಇದರಿಂದ 4 ಜಿಲ್ಲೆಗಳ ಜೀವನಾಡಿಯಾಗಿರುವ ಬಳ್ಳಾರಿ, ಕೊಪ್ಪಳ, ವಿಜಯನಗರ ಹಾಗೂ ರಾಯಚೂರು ಜಿಲ್ಲೆಗಳ ರೈತರ ಬದುಕು ಕೊಚ್ಚಿ ಹೋಗುವ ಆತಂಕ ಎದುರಾಗಿದೆ ಎಂದು ಬಿಜೆಪಿ ಹೇಳಿದೆ.
ಡ್ಯಾಂ ಸೇಫ್ಟಿ ರೀವಿವ್ ಕಮೀಟಿ ವರದಿ ನೀಡಿದ್ದರೂ ಎಚ್ಚೆತ್ತುಕೊಳ್ಳದ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಅವರ ಕಡೆಗಣನೆಯಿಂದ ತುಂಗಭದ್ರಾ ಜಲಾಶಯದ 4, 11, 18, 20, 24, 27 ಹಾಗೂ 28ನೇ ಗೇಟ್ ಸೇರಿದಂತೆ 7 ಗೇಟ್‌ಗಳು ಬೆಂಡ್ ಆಗಿವೆ. ತುಂಗಾಭದ್ರ ಜಲಾಯನ ಪ್ರದೇಶ ವ್ಯಾಪ್ತಿಯಲ್ಲಿ 10 ಲಕ್ಷ ಹೆಕ್ಟೇರ್ ಪ್ರದೇಶ ನೀರಾವರಿ ವ್ಯಾಪ್ತಿಗೆ ಒಳಪಟ್ಟಿದೆ.
ಏಳು ಗೇಟ್‌ಗಳ ಡ್ಯಾಮೇಜ್‌ನಿಂದ ಲಕ್ಷಾಂತರ ರೈತ ಕುಟುಂಬಗಳ ಬದುಕಿನ ಮೇಲೆ ಕಾರ್ಮೋಡ ಕವಿದಿದೆ. ಕಳೆದ ವರ್ಷ ಕೊಚ್ಚಿ ಹೋಗಿದ್ದ 19ನೇ ಕ್ರಸ್ಟ್ ಗೇಟ್ ರಿಪೇರಿ ಮಾಡಿ ಸರ್ಕಾರ ಕೈತೊಳೆದುಕೊಂಡಿತ್ತು. ಕನಿಷ್ಠ ಹೊಸ ಗೇಟ್ ಅಳವಡಿಸುವ ಕೆಲಸ ಸಹ ಮಾಡಿಲ್ಲ. ಸಿಎಂ ಸಿದ್ದರಾಮಯ್ಯನವರೇ, ಕೂಡಲೇ ಡ್ಯಾಂ ತಜ್ಞರ ಕರೆಯಿಸಿ ಕ್ರಮ ಕೈಗೊಳ್ಳಿ, ರೈತರಲ್ಲಿ ಉಂಟಾಗಿರುವ ಆತಂಕ ದೂರ ಮಾಡಿ ಹಾಗೂ ಡ್ಯಾಂ ಭರ್ತಿಯಾಗುವ ಮುನ್ನ ಶೀಘ್ರ ಕ್ರಮ ವಹಿಸಿ ಎಂದು ಆಗ್ರಹಿಸಿದೆ.

ರೈತ ವಿರೋಧಿ ಕಾಂಗ್ರೆಸ್ ಸರ್ಕಾರ ಗಾಢನಿದ್ರೆಗೆ ಜಾರಿದೆ. ಡ್ಯಾಂ ತಜ್ಞರ ವರದಿ ಕಸದ ಬುಟ್ಟಿ ಸೇರಿದೆ. ಎಲ್ಲಾ ಗೇಟ್‌ಗಳ ಬದಲಾವಣೆ ವಿಚಾರ ಕೊಚ್ಚಿ ಹೋಗಿದೆ. 2 ಬೆಳೆ ಬೆಳೆಯುವ ಕಲ್ಯಾಣ ಕರ್ನಾಟಕದ ರೈತರ ಕನಸು ಭಗ್ನವಾಗಿದೆ. ತುಂಗಾಭದ್ರ ನೀರು ಆಂಧ್ರ, ತೆಲಂಗಾಣ ಪಾಲಾಗಿದೆ. ರೈತ ವಿರೋಧಿ ಕಾಂಗ್ರೆಸ್ ಸರ್ಕಾರಕ್ಕೆ ಧಿಕ್ಕಾರವಿರಲಿ. ಕಾಂಗ್ರೆಸ್ ಸರ್ಕಾರದ ಬೇಜವಾಬ್ದಾರಿಯಿಂದ ಟಿಬಿ ಡ್ಯಾಂನ 130 ಟಿಎಂಸಿ ನೀರು ಆಂಧ್ರ ಪ್ರದೇಶ ಹಾಗೂ ತೆಲಂಗಾಣದ ಪಾಲಾಗಿದೆ. ಕರ್ನಾಟಕದ ರೈತರಿಗಾದ ಈ ನಷ್ಟಕ್ಕೆ ಯಾರು ಹೊಣೆ ಎಂದು ಬಿಜೆಪಿ ಪ್ರಶ್ನೆ ಮಾಡಿದೆ.
ಅನ್ಯರಾಜ್ಯಗಳಿಗೆ ನೀರು, ರಾಜ್ಯದ ರೈತರಿಗೆ ಕಣ್ಣೀರು
➡️ಕಾವೇರಿ ನೀರು
ತಮಿಳುನಾಡು ಪಾಲು
➡️ತುಂಗಾಭದ್ರಾ ನೀರು
ಆಂಧ್ರ ಪಾಲು
➡️ನಾರಾಯಣಪುರ ಡ್ಯಾಂ
ನೀರು ತೆಲಂಗಾಣ ಪಾಲು
ನಮ್ಮ ನೀರು, ನಮ್ಮ ಹಕ್ಕು ಅಂತ ಪುಂಗಿದ ಸಚಿವ ಡಿ.ಕೆ.ಶಿವಕುಮಾರ್ ಅವರೇ, ತುಂಗಾಭದ್ರ ಡ್ಯಾಂ ನೀರು ಆಂಧ್ರದ ಪಾಲಾಗುವ ಮುನ್ನ ಕಣ್ತೆರೆದು ಅನ್ನದಾತರ ಹಿತ ಕಾಪಾಡಿ ಎಂದು ಬಿಜೆಪಿ ಈ ವಿಚಾರವಾಗಿ ಸರಣಿ ಟ್ವೀಟ್‌ಗಳನ್ನು ಮಾಡಿದೆ.












Click it and Unblock the Notifications