ಐಶ್ವರ್ಯಾ, ಲಕ್ಷ್ಮೀ ಯಾರನ್ನೇ ವಿಚಾರಣೆ ಮಾಡಲಿ: ಡಿಕೆಶಿಗೆ ಇರೋ ಟೆನ್ಷನ್ ಒಂದೇ
Recommended Video
ನವದೆಹಲಿ, ಸೆಪ್ಟೆಂಬರ್ 20: ಡಿಕೆ ಶಿವಕುಮಾರ್ ಅಕ್ರಮ ಆಸ್ತಿ ವರ್ಗಾವಣೆಗೆ ಪ್ರಕರಣದಕ್ಕೆ ಸಂಬಂಧಿಸಿದಂತೆ ಇದೀಗ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್‌ನ್ನು ಇ.ಡಿ. ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದು, ಜೈಲಿನಲ್ಲಿ ಡಿಕೆ ಶಿವಕುಮಾರ್ ಅವರಿಗೆ ಆತಂಕ ಶುರುವಾಗಿದೆ.
ಮಗಳು ಐಶ್ವರ್ಯಾ ಅವರಿಗೆ ಜಾರಿ ನಿರ್ದೇಶನಾಲಯ ಸಮನ್ಸ್ ಜಾರಿ ಮಾಡಿ ಅವರು ಇ.ಡಿ. ಮುಂದೆ ವಿಚಾರಣೆ ಹಾಜರಾಗಿದ್ದರು. ಆ ಸಂದರ್ಭದಲ್ಲೂ ಡಿಕೆ ಶಿವಕುಮಾರ್‌ಗೆ ಆತಂಕ ಶುರುವಾಗಿ ಅನಾರೋಗ್ಯಕ್ಕೆ ತುತ್ತಾಗಿದ್ದರು.
ಇದೀಗ ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೆ ಇಡಿ ಸಮನ್ಸ್ ನೀಡಿದ್ದು ಶುಕ್ರವಾರ(ಸೆ.20)ರಂದು ಕೂಡ ವಿಚಾರಣೆ ಮುಂದುವರೆಯಲಿದೆ. ಬೆನ್ನಲ್ಲೇ ಲಕ್ಷ್ಮಿ ಹೆಬ್ಬಾಳ್ಕರ ದೆಹಲಿಗೆ ತೆರಳಿದ್ದರು. ಗುರುವಾರ ಇಡಿ ಕಚೇರಿಗೆ ತೆರಳಿದ್ದ ಅವರು, ವಿಚಾರಣೆ ಎದುರಿಸಿದ್ದಾರೆ. ನಿನ್ನೆ ಅವರು ಸೂಕ್ತ ದಾಖಲೆಗಳನ್ನು ಕೊಂಡೊಯ್ದಿರಲಿಲ್ಲ.
ಹೀಗಾಗಿ ಇಂದು ದಾಖಲೆಗಳೊಂದಿಗೆ ಬರಲು ಇಡಿ ಅಧಿಕಾರಿಗಳು ಲಕ್ಷ್ಮಿ ಹೆಬ್ಬಾಳ್ಕರ್ಗೆ ಸೂಚನೆ ನೀಡಿದ್ದಾರೆ. ಐಶ್ವರ್ಯಾ, ಲಕ್ಷ್ಮಿ ಯಾರನ್ನೇ ವಿಚಾರಣೆ ಮಾಡಲಿ ಡಿಕೆ ಶಿವಕುಮಾರ್‌ಗೆ ಇರುವ ಟೆನ್ಷನ್ ಒಂದೇ ಆಗಿದೆ.

184 ಜನರಿಗೆ ಇ.ಡಿ. ನೋಟಿಸ್
ಇತ್ತೀಚೆಗೆಇಡಿ ನೋಟಿಸ್ ನೀಡಿದ ಬಗ್ಗೆ ಮಾಹಿತಿ ಖಚಿತ ಪಡಿಸಿದ್ದ ಲಕ್ಷ್ಮಿ, "184 ಜನರಿಗೆ ಇಡಿ ನೋಟಿಸ್ ನೀಡಿದೆ. ಅವರಲ್ಲಿ ನಾನು ಒಬ್ಬ ಅಷ್ಟೆ. ಇಡಿ ಅವರು ವಿಚಾರಣೆಗೆ ಕರೆದಿದ್ದಾರೆ. ನನಗೆ ಈ ಬಗ್ಗೆ ಭಯ ಇಲ್ಲ. 2 ಸಲ ಐಟಿ ದಾಳಿಯಾದಾಗ ಏನೂ ಸಿಕ್ಕಿಲ್ಲ. ಡಿಕೆಶಿ ಜೊತೆ ವ್ಯವಹಾರದ ಬಗ್ಗೆ ದಾಖಲೆ ಇರೋದು ಗೊತ್ತಿಲ್ಲ. ಡಿಕೆಶಿ ನನ್ನ ರಾಜಕೀಯ ಗುರು," ಎಂದು ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿಕೊಂಡಿದ್ದರು.

ಏನಿದು ಡಿಕೆಶಿ ಪ್ರಕರಣ?:
ದೆಹಲಿಯಲ್ಲಿರುವ ಡಿ.ಕೆ. ಶಿವಕುಮಾರ್ ಅವರಿಗೆ ಸೇರಿದ ಫ್ಲಾಟ್ಗಳ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದರು. ಈ ವೇಳೆ ಡಿ.ಕೆ. ಶಿವಕುಮಾರ್ ಹಾಗೂ ಆಪ್ತರ ಮನೆಗಳಲ್ಲಿ ಐಟಿ ಅಧಿಕಾರಿಗಳು 8.59 ಕೋಟಿ ಹಣ ಜಪ್ತಿ ಮಾಡಿದ್ದರು. ಇದಲ್ಲದೆ ಡಿಕೆಶಿ ಬೇನಾಮಿ ಆಸ್ತಿ ವಿಚಾರಕ್ಕೆ ಸಂಬಂಧಿಸಿ 184 ಜನರಿಗೆ ನೋಟಿಸ್ ನೀಡಲಾಗಿದೆ.

ತಿಹಾರ್ ಜೈಲಿನಲ್ಲಿರುವ ಡಿಕೆಶಿಗೆ ಟೆನ್ಷನ್
ಡಿಕೆ ಶಿವಕುಮಾರ್ ಅವರ ಒಬ್ಬೊಬ್ಬರೇ ಆಪ್ತರಿಗೆ ಸಮನ್ಸ್ ನೀಡಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದು, ಜೈಲಿನಲ್ಲಿರುವ ಡಿಕೆ ಶಿವಕುಮಾರ್‌ಗೆ ಆತಂಕ ಶುರುವಾಗಿದೆ. ತಮ್ಮ ಕುರಿತು ಎಲ್ಲಿ ಮಾಹಿತಿಯನ್ನು ಬಿಚ್ಚಿಟ್ಟುಬಿಡುತ್ತಾರೋ ಎನ್ನುವ ಟೆನ್ಷನ್ ಆರಂಭವಾಗಿದೆ.

ಮಗಳು ಐಶ್ವರ್ಯಾ, ಮಾವನಿಗೂ ನೋಟಿಸ್
ಮಗಳು ಐಶ್ವರ್ಯಾ ಹಾಗೂ ಮಾವನಿಗೂ ಜಾರಿ ನಿರ್ದೇಶನಾಲಯ ಸಮನ್ಸ್ ಜಾರಿ ಮಾಡಿದೆ. ಈಗಾಗಲೇ ಐಶ್ವರ್ಯಾ ಶಿವಕುಮಾರ್ ಇ.ಡಿ. ಮುಂದೆ ವಿಚಾರಣೆಗೆ ಹಾಜರಾಗಿದ್ದಾರೆ. ಅವರ ಮಾವನಿಗೂ ನೋಟಿಸ್ ಹೋಗಿದೆ. ಇದೀಗ ಲಕ್ಷ್ಮಿ ಹೆಬ್ಬಾಳ್ಕರ್ ಅವರನ್ನು ವಿಚಾರಣೆಗೊಳಪಡಿಸಲಾಗುತ್ತಿದೆ.












Click it and Unblock the Notifications