Dk Shivakumar: ಸಾಧುಕೋಕಿಲ ತಲೆಗೆ ದೀಪದ ಎಣ್ಣೆ ಸವರಿದ್ರಾ ಡಿ.ಕೆ ಶಿವಕುಮಾರ್: ವಿಡಿಯೋ ವೈರಲ್, ನಟ್ಟಿಗರು ಏನಂದ್ರು?
ಸೋಷಿಯಲ್ ಮೀಡಿಯಾದಲ್ಲಿ ಈಗೆಲ್ಲ ಪ್ರತಿ ಸಣ್ಣ ವಿಷಯವೂ ಟ್ರೋಲ್ ಆಗುತ್ತದೆ. ಇದೀಗ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ - ನಟ ಹಾಗೂ ರಾಜ್ಯ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸಾಧು ಕೋಕಿಲ ಅವರು ಸಮಾರಂಭವೊಂದರ ವಿಡಿಯೋವೊಂದು ವೈರಲ್ ಆಗುತ್ತಿದೆ. ಸಾಧು ಕೋಕಿಲ ಅವರು ಇದೀಗ ರಾಜಕೀಯವಾಗಿಯೂ ಕಾಂಗ್ರೆಸ್ ಪಕ್ಷದೊಂದಿಗೆ ಗುರುತಿಸಿಕೊಂಡಿದ್ದಾರೆ. ಈ ಕಾರಣದಿಂದ ಇವರಿಬ್ಬರ ವಿಡಿಯೋ ವೈರಲ್ ಆಗುತ್ತಿದೆ. ಈಚೆಗೆ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಡಿ.ಕೆ ಶಿವಕುಮಾರ್ ಅವರು ನೀಡಿದ್ದ ನೆಟ್ಟು ಬೋಲ್ಟ್ ಹೇಳಿಕೆಗೆ ಸಾಧು ಕೋಕಿಲ ಅವರು ಬೆಂಬಲ ಸೂಚಿಸಿದ್ದರು.
ಸಾಧು ಕೋಕಿಲ ಅವರು ಕಾಂಗ್ರೆಸ್‌ನೊಂದಿಗೆ ಗುರುತಿಸಿಕೊಂಡಿದ್ದು. ಕಾಂಗ್ರೆಸ್‌ನ ಪ್ರಭಾವಿ ಸಚಿವರು ಭಾಗವಹಿಸಿದ್ದ ಸಮಾರಂಭದಲ್ಲಿ ಸಾಧುಕೋಕಿಲ ಅವರು ಸಹ ಇದ್ದರು. ಸಮಾರಂಭವೊಂದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್, ನಟ ಶಿವರಾಜ್ ಕುಮಾರ್ ಹಾಗೂ ನಟ ಕಿಶೋರ್ ಅವರು ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದ ಸಮಾರಂಭವೊಂದರ ವಿಡಿಯೋ ಈಗ ವೈರಲ್ ಆಗುತ್ತಿದೆ. ಸಮಾರಂಭದಲ್ಲಿ ದೀಪ ಹಚ್ಚಿದ ಮೇಲೆ ಡಿ.ಕೆ ಶಿವಕುಮಾರ್ ಅವರು ಎಣ್ಣೆ ಸವರಿದರು ಎನ್ನಲಾದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೋವನ್ನು ನೋಡಿದ ಜನ ಡಿ.ಕೆ ಶಿವಕುಮಾರ್ ಅವರು ಈ ರೀತಿ ಮಾಡಬಾರದಿತ್ತು ಅಂತಿದ್ದಾರೆ. news 18 ವಿಡಿಯೋ ಇದಾಗಿದ್ದು ವೈರಲ್ ಆಗುತ್ತಿದೆ.

ಸಮಾರಂಭವೊಂದರಲ್ಲಿ ಡಿ.ಕೆ ಶಿವಕುಮಾರ್ ಅವರು ದೀಪ ಹಚ್ಚಿದ ಮೇಲೆ ಸಾಧುಕೋಕಿಲ ಅವರ ತಲೆ ಸವರಿದ್ದಾರೆ ಅಂತ ಹೇಳಲಾಗಿದೆ. ಆದರೆ ಡಿ.ಕೆ ಶಿವಕುಮಾರ್ ಅವರು ಅವರ ಕೈಯಲ್ಲಿದ್ದ ಎಣ್ಣೆಯನ್ನೇ ಸಾಧುಕೋಕಿಲ ಅವರ ತಲೆಗೆ ಸವರಿದ್ದಾರೆ ಅಂತ ನೆಟ್ಟಿಗರು ಹೇಳ್ತಾ ಇದ್ದಾರೆ. ವಿಡಿಯೋದಲ್ಲೂ ಅದೇ ರೀತಿ ಕಾಣಿಸುತ್ತಿದೆ. ಈ ವಿಡಿಯೋ ಹಳೆಯ ಸಮಾರಂಭದ್ದು ಎಂದು ಹೇಳಲಾಗುತ್ತಿದೆ. ಆದರೆ ಈಗ ವೈರಲ್ ಆಗುತ್ತಿದೆ. ಡಿ.ಕೆ ಶಿವಕುಮಾರ್ ಅವರ ಕೈಯ್ಯಲ್ಲಿದ್ದ ಎಣ್ಣೆ ಪಾಪ ಸಾಧು ತಲೆ ಸೇರಿತು ಅಂತ ಜನ ಕಮೆಂಟ್ ಮಾಡಿದ್ದಾರೆ.
ಈ ವಿಡಿಯೋಗೆ ಇನ್ನೂ ಕಾಮಿಡಿ ಕಮೆಂಟ್‌ಗಳು ಬರುತ್ತಿವೆ. Dk ಕೈಗೆ ಎಣ್ಣೆ ಆಗಿತ್ತು ಒಳ್ಳೆ ಗುಂಗರು ಕೊದಲು ನೋಡಿ ಸಾಧು ತಲೆಗೆ ವರಿಸಿದ ನೋಡ್ರಪ್ಪಾ ನೋಡಿ ನಿಜನಾ ಸುಳ್ಳಾ ನೀವೆ ಹೇಳಿ ಅಂತ ಹನುಮಂತಪ್ಪ ಎನ್ನುವವರು ಕಮೆಂಟ್ ಮಾಡಿದ್ದಾರೆ. ಇದು ತಮಾಷೆಯಾಗಿ ಮಾಡಿದ್ದಾರೆ ಉದ್ದೇಶಪೂರ್ವಕವೇನಲ್ಲ ಸುಮ್ಮನ್ನೆ ಇಲ್ಲದ ಕಮೆಂಟ್ ಮಾಡಬೇಡಿ ಅಂತಲೂ ಕೆಲವರು ಕಮೆಂಟ್ ಮಾಡಿದ್ದಾರೆ.
ನೆಟ್ಟು - ಬೋಲ್ಟ್ ಹೇಳಿಕೆ ತಪ್ಪೇನು: ಇನ್ನು ಈಚೆಗೆ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಸಿನಿಮಾ ರಂಗದವರ ನೆಟ್ಟು - ಬೋಲ್ಟ್ ಟೈಟ್ ಮಾಡುವುದು ಹೇಗೆ ಅಂತ ಚೆನ್ನಾಗಿ ಗೊತ್ತಿದೆ ಎಂದು ಹೇಳಿದ್ದರು. ಈ ಹೇಳಿಕೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಆದರೆ, ಈ ಹೇಳಿಕೆಯನ್ನು ಸಾಧು ಕೋಕಿಲ ಅವರು ಸಮರ್ಥಿಸಿಕೊಂಡಿದ್ದರು. ಡಿ.ಕೆ ಶಿವಕುಮಾರ್ ಸಾಹೇಬ್ರು ಹೇಳಿರುವುದರಲ್ಲಿ ತಪ್ಪೇನು ಇಲ್ಲ. ಅವರು ಎಲ್ಲರೂ ಚಲನಚಿತ್ರೋತ್ಸವಕ್ಕೆ ಬರಲಿ ಎನ್ನುವ ಉದ್ದೇಶದಿಂದ ಈ ರೀತಿ ಹೇಳಿಕೆ ನೀಡಿದ್ದಾರೆ ಎಂದಿದ್ದರು.












Click it and Unblock the Notifications