Cyclone: ಚಂಡಮಾರುತದ ಹೊಡೆತಕ್ಕೆ ತತ್ತರಿಸಿದ ಆಂಧ್ರಕ್ಕೆ ಡಿಕೆ ಶಿವಕುಮಾರ್ ಸಾಥ್! 500 ಪವರ್‌ಮನ್‌ಗಳ ನಿಯೋಜನೆ

ಬೆಂಗಳೂರು: ಅರ್ನಾಬ್ ಚಂಡಮಾರುತದಿಂದ ತತ್ತರಿಸಿರುವ ನೆರೆಯ ಆಂಧ್ರ ಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಕರ್ನಾಟಕದ ಸಹಾಯ ಕೇಳಿದ್ದಾರೆ. ಈ ಸಂಬಂಧ ಪ್ರತಿಕ್ರಿಯಿಸಿರುವ ಸಿಎಂ ಡಿಕೆ ಶಿವಕುಮಾರ್ ಅವರು, 'ಆಂಧ್ರದ ಸಂಕಷ್ಟಕ್ಕೆ ರಾಜ್ಯ ಹೆಗಲು ಕೊಟ್ಟು ನಿಲ್ಲಲಿದೆ. ಅಗತ್ಯ ಮೂಲಸೌಕರ್ಯ ಅಭಿವೃದ್ಧಿಗೆ ಸಹಕಾರಿಸಲಾಗುವುದು' ಎಂದು ಅವರು ತಿಳಿಸಿದ್ದಾರೆ.

ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಎಕ್ಸ್ ಮೂಲಕ ಪ್ರತಿಕ್ರಿಯಿಸಿದ್ದು, 'ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರೊಂದಿಗೆ ಮಾತನಾಡಿದ್ದೇನೆ. ಅವರು 'ಅರ್ನಾಬ್' ಚಂಡಮಾರುತದಿಂದ ಉಂಟಾದ ವಿನಾಶ, ಸಂಕಷ್ಟು ಅನುಭವಿಸಿದ್ದೇವೆ ಎಂದಿದ್ದಾರೆ. ಚಂಡಮಾರುತ ಅಪ್ಪಳಿಸಿದ ಬಳಿಕ ಉಂಟಾದ ಸಮಸ್ಯೆಯನ್ನು ಹೇಳಿಕೊಂಡಿದ್ದಾರೆ.

Cyclone Arnab

15,000ಕ್ಕೂ ಹೆಚ್ಚು ವಿದ್ಯುತ್ ಕಂಬ ಧರೆಗೆ

ಚಂಡಮಾರುತ ಅಬ್ಬರಕ್ಕೆ ಆಂಧ್ರದಲ್ಲಿ 15,000ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಧರೆಗುರುಳಿವೆ. ಹೀಗಾಗಿ, ವಿದ್ಯುತ್ ಮೂಲಸೌಕರ್ಯವನ್ನು ಪುನಃಸ್ಥಾಪಿಸುವುದು ಅತ್ಯಂತ ತುರ್ತು ಅಗತ್ಯವಾಗಿದೆ. ಈ ಕಾರ್ಯದಲ್ಲಿ ಕರ್ನಾಟಕದ ನೆರವನ್ನು ಆಂಧ್ರಪ್ರದೇಶ ಕೋರಿದೆ. ನೆರೆ ರಾಜ್ಯಕ್ಕೆ ಕರ್ನಾಟಕದ ಸಂಪೂರ್ಣ ಬೆಂಬಲವಿರುತ್ತದೆ ಎಂದು ಅವರಿಗೆ ಭರವಸೆ ನೀಡಿದ್ದೇನೆ' ಎಂದು ತಿಳಿಸಿದ್ದಾರೆ.

ಕರ್ನಾಟಕ ಇಂಧನ ಇಲಾಖೆಯು ಆಂಧ್ರಕ್ಕೆ ಬೇಕಾದ ನೆರವಿನ ಕಾರ್ಯಗಳನ್ನು ಸಂಯೋಜಿಸುತ್ತಿದೆ. ರಾಜ್ಯ ಇಂಧನ ಸಚಿವ ಕೆ.ಜೆ. ಜಾರ್ಜ್ ಅವರು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಎಲ್ಲೆಲ್ಲಿ ಚಂಡಮಾರುತ ಪೀಡಿತ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜ ತೊಂದರೆ ಆಗಿದೆಯೋ ಅಲ್ಲಿ ತ್ವರಿತವಾಗಿ ಪುನಃಸ್ಥಾಪಿಸಲು ಮತ್ತು ದುರಸ್ತಿ ಕಾರ್ಯಗಳನ್ನು ಚುರುಕುಗೊಳಿಸಲಾಗುತ್ತದೆ. ಅದಕ್ಕೆ ಕರ್ನಾಟಕವು ಅಗತ್ಯ ಉಪಕರಣಗಳೊಂದಿಗೆ 500 ನುರಿತ ವಿದ್ಯುತ್ ಸಿಬ್ಬಂದಿ (Powermen) ಕಳುಹಿಸಲಿದೆ ಎಂದರು.

ವಿದ್ಯುತ್ ಮೂಲಸೌಕರ್ಯ ದುರಸ್ತಿ ನಡೆಯುವ ಸ್ಥಳಗಳಲ್ಲಿ ಮಾನವಶಕ್ತಿ ಮತ್ತು ಉಪಕರಣಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲು, ನಮ್ಮ ತಂಡಗಳು ಆಂಧ್ರ ಪ್ರದೇಶದ ಅಧಿಕಾರಿಗಳೊಂದಿಗೆ ನಿಕಟ ಸಮನ್ವಯ ಸಾಧಿಸಿ ಕೆಲಸ ಮಾಡಲಿವೆ ಎಂದು ಸಿಎಂ ಡಿಕೆ ಶಿವಕುಮಾರ್ ವಿವರಿಸಿದ್ದಾರೆ.

'ಮುರಸು' ಚಂಡಮಾರುತ ಆಗಮನ

ಅರ್ನಾಬ್ ಬೆನ್ನಲ್ಲೆ ಮುಂದೆ ಬಂಗಾಳಕೊಲ್ಲಿ ಸಮುದ್ರ ಮೇಲ್ಮೈನಿಂದ 'ಮುರಸು' ಚಂಡಮಾರುತ ಆಗಮಿಸುವ ಸಾಧ್ಯತೆ ಇದೆ. ಈ ವೈಪರೀತ್ಯವು ಹೊಸ ಸವಾಲನ್ನು ಒಡ್ಡಿದೆ. ಮುಂದಿನ ಎರಡು ದಿನಗಳ ಕಾಲ ನಾವು ಪರಿಸ್ಥಿತಿಯನ್ನು ಮತ್ತು ಅದರ ಪರಿಣಾಮಗಳನ್ನು ನಿರಂತರವಾಗಿ ಅವಲೋಕಿಸಲಿದ್ದೇವೆ. ನೆರೆ ರಾಜ್ಯಕ್ಕೆ ಸಾಧ್ಯವಿರುವ ಎಲ್ಲ ನೆರವನ್ನೂ ಒದಗಿಸಲಾಗುವುದು.

ಸಂಕಷ್ಟದ ಸಮಯದಲ್ಲಿ, ಒಗ್ಗಟ್ಟು ಕೇವಲ ಮಾತಿನಲ್ಲಿರದೆ ಕಾರ್ಯರೂಪಕ್ಕೆ ಬರಬೇಕು. ಕರ್ನಾಟಕವು ಆಂಧ್ರಪ್ರದೇಶದ ಜನರೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ನಿಲ್ಲಲಿದ್ದು, ಅಗತ್ಯವಿರುವ ಎಲ್ಲ ಬೆಂಬಲವನ್ನೂ ನೀಡಲಿದೆ ಎಂದು ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+