ಮೋದಿ ಅಪ್ಪನ ಮಾಹಿತಿ ನೀಡಿ, ಸೋನಿಯಾ ಅಪ್ಪ ಯಾರೆಂದು ಕೇಳಿದ ಸಿಟಿ.ರವಿ

ಬೆಂಗಳೂರು, ನವೆಂಬರ್ 27: ಕಾಂಗ್ರೆಸ್‌ನ ಮುಖಂಡರೊಬ್ಬರು ಮೋದಿ ಅವರ ಅಪ್ಪ ಯಾರೆಂದು ಯಾರಿಗೂ ಗೊತ್ತೇ ಇಲ್ಲ ಎಂದಿದ್ದು, ಬಿಜೆಪಿಗರನ್ನು ಕೆರಳಿಸಿದೆ.

'ಮೋದಿ ಅವರ ತಂದೆ ಯಾರೆಂಬುದು ಯಾರಿಗೂ ಗೊತ್ತಿಲ್ಲ' ಎಂದು ಕಾಂಗ್ರೆಸ್‌ನ ಮಾಜಿ ಸಚಿವ ವಿಲಾಸ್‌ರಾವ್ ಮುತ್ತೇಮ್‌ವಾರ್‌ ಅವರು ಹೇಳಿದ್ದರು. ಇದು ಬಿಜೆಪಿಗರಿಗೆ ಮುಖಂಡರಲ್ಲಿ ಭಾರಿ ಸಿಟ್ಟು ಕೆರಳಿಸಿತ್ತು. ಇದರ ಬಗ್ಗೆ ರಾಜ್ಯದ ಬಿಜೆಪಿ ಮುಖಂಡ ಸಿಟಿ.ರವಿ ಟ್ವೀಟ್‌ ಮಾಡಿ ಉತ್ತರಿಸಿದ್ದಾರೆ.

ಮೋದಿ ಅವರ ತಂದೆಯ ಹೆಸರು ದಾಮೋದರ ದಾಸ್ ಮುಲಚಂದ್ ಮೋದಿ, ಅವರು ಟೀ ಮಾರುವ ಕೆಲಸ ಮಾಡುತ್ತಿದ್ದರು ಎಂದು ಉತ್ತರ ನೀಡಿರುವ ಸಿ.ಟಿ.ರವಿ, ಕರ್ನಾಟಕದ ಬಿಜೆಪಿ ಕಾರ್ಯಕರ್ತರು ಮೋದಿ ಅವರ ಹಿನ್ನೆಲೆ ಬಗ್ಗೆ ಬಗ್ಗೆ ಹೆಮ್ಮೆ ಹೊಂದಿದ್ದಾರೆ ಎಂದು ಟ್ವೀಟ್‌ನಲ್ಲಿ ಹೇಳಿದ್ದಾರೆ.

CT Ravi tweet about Narendra Modi father

ಇದೇ ಟ್ವೀಟ್‌ನಲ್ಲಿ ಸೋನಿಯಾ ಗಾಂಧಿ ಅವರ ತಂದೆಯ ಬಗ್ಗೆ ಸಿ.ಟಿ.ಪ್ರಶ್ನೆ ಮಾಡಿದ್ದಾರೆ. ಸೋನಿಯಾ ಗಾಂಧಿ ಅವರ ತಂದೆಯ ಹೆಸರೇನು? ಅವರ ದೇಶ ಯಾವುದು? ಅವರು ಏನು ಕೆಲಸ ಮಾಡುತ್ತಿದ್ದರು? ಎಂದು ಸಿ.ಟಿ.ರವಿ ಕೇಳಿದ್ದಾರೆ.

ಸಿ.ಟಿ.ರವಿ ಅವರ ಈ ಟ್ವೀಟ್‌ ಅನ್ನು ಸಾವಿರಕ್ಕೂ ಹೆಚ್ಚು ಜನ ರಿಟ್ವೀಟ್ ಮಾಡಿದ್ದಾರೆ, 2300 ಕ್ಕೂ ಹೆಚ್ಚು ಜನ ಮೆಚ್ಚುಕೊಂಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+