ಸವಿತಾ ಸಮಾಜಕ್ಕೆ ಅವಮಾನ ಮಾಡಿದ್ರಾ ಸಿ.ಟಿ.ರವಿ? ಕಾಂಗ್ರೆಸ್ ಹಂಚಿಕೊಂಡ ವಿಡಿಯೋದಲ್ಲೇನಿದೆ?
ಬೆಳಗಾವಿ ಅಧಿವೇಶನದ ಸಂದರ್ಭದಲ್ಲಿ ಕಾಂಗ್ರೆಸ್ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೆ ಅಶ್ಲೀಲ ಪದ ಬಳಸಿದ ಆರೋಪ ಬಿಜೆಪಿ ಪಕ್ಷದ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಅವರ ವಿರುದ್ಧ ಕೇಳಿಬಂದಿತ್ತು. ಈ ಕೇಸ್‌ನಲ್ಲಿ ಬಂಧನ ಕೂಡ ಆಗಿ ಹೊರಬಂದಿದ್ದರು. ಇದೀಗ ಸಿ.ಟಿ.ರವಿ ಅವರ ಮೇಲೆ ಮತ್ತೊಂದು ಗಂಭೀರ ಆರೋಪ ಕೇಳಿಬಂದಿದೆ. ಸವಿತಾ ಸಮಾಜದ ಸಿ.ಟಿ.ರವಿ ತುಚ್ಛವಾಗಿ ಮಾತನಾಡಿ ಅವಮಾನಿಸಿದ್ದಾರೆ ಎಂದು ಆರೋಪಿಸಿದೆ. ಈ ಸಂಬಂಧ ಎಕ್ಸ್ ಖಾತೆಯಲ್ಲಿ ವಿಡಿಯೋ ಕೂಡ ಕಾಂಗ್ರೆಸ್ ಹಂಚಿಕೊಂಡಿದೆ.
ಸದನದೊಳಗೆ ಮಹಿಳಾ ಸಚಿವರನ್ನು ಅತ್ಯಂತ ಕೀಳಾಗಿ ನಿಂದಿಸಿ ತನ್ನ ಕೊಳಕು ನಾಲಿಗೆಯನ್ನು ಪ್ರದರ್ಸಿಸಿದ್ದ ಬಿಜೆಪಿಯ ಸ್ವಯಂ ಘೋಷಿತ ಸಂಸ್ಕೃತಿ ರಕ್ಷಕ, ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಮತ್ತೊಮ್ಮೆ ತಮ್ಮ ನಾಲಿಗೆಯನ್ನು ಹರಿಬಿಟ್ಟಿದ್ದಾರೆ ಎಂದು ಕಾಂಗ್ರೆಸ್ ಹೇಳಿದೆ. ಸವಿತಾ ಸಮಾಜದ ಬಗ್ಗೆ ತುಚ್ಛವಾಗಿ ಮಾತನಾಡಿ ಅವಮಾನಿಸಿರುವ ಮಾತುಗಳು ಅವರ ವೈಯಕ್ತಿಕ ನಿಲುವು ಮಾತ್ರವಲ್ಲ ಬಿಜೆಪಿಯ ಸಂಸ್ಕೃತಿ ಮತ್ತು ಸಂಘ ಶಿಕ್ಷಣದ ನೈಜ ಸಂಸ್ಕಾರ ಎಂದು ವಾಗ್ದಾಳಿ ನಡೆಸಿದ್ದಾರೆ.

ಮಹಿಳೆಯರು, ದಲಿತರು, ಹಿಂದುಳಿದ ಜಾತಿಗಳ ಬಗ್ಗೆ ಎಂದಿಗೂ ಗೌರವವಿಲ್ಲದ ಬಿಜೆಪಿ ನಾಯಕರಿಗೆ ಆರ್.ಎಸ್.ಎಸ್ ಹೇಳಿಕೊಟ್ಟಿರುವುದು ಇದೇ ಮನುಸ್ಮೃತಿ ಪ್ರೇರಿತ "ಜಾತಿ ನಿಂದನೆ"ಯ ಪಾಠವನ್ನೇ? ಎಂದು ಕೇಳಿದೆ. ಸವಿತಾ ಸಮಾಜದ ಗೌರವಕ್ಕೆ ಧಕ್ಕೆ ತರುವಂತಹ ಹೇಳಿಕೆ ನೀಡಿದ ಸಿ.ಟಿ.ರವಿ ಹಾಗೂ ಅವರಿಗೆ ಬೆಂಬಲವಾಗಿ ನಿಂತಿರುವ ಬಿಜೆಪಿ ಪಕ್ಷವು ಕೂಡಲೇ ರಾಜ್ಯದ ಜನರ ಹಾಗೂ ಸವಿತಾ ಸಮಾಜದ ಕ್ಷಮೆ ಕೇಳಬೇಕು ಎಂದು ಕಾಂಗ್ರೆಸ್ ಆಗ್ರಹಿಸಿದೆ. ಸಿಟಿ.ರವಿ ಅವರ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಸದನದೊಳಗೆ ಮಹಿಳಾ ಸಚಿವರನ್ನು ಅತ್ಯಂತ ಕೀಳಾಗಿ ನಿಂದಿಸಿ ತನ್ನ ಕೊಳಕು ನಾಲಿಗೆಯನ್ನು ಪ್ರದರ್ಸಿಸಿದ್ದ ಬಿಜೆಪಿಯ ಸ್ವಯಂ ಘೋಷಿತ ಸಂಸ್ಕೃತಿ ರಕ್ಷಕ, ವಿಧಾನ ಪರಿಷತ್ ಸದಸ್ಯ @CTRavi_BJP ಮತ್ತೊಮ್ಮೆ ತಮ್ಮ ನಾಲಿಗೆಯನ್ನು ಹರಿಬಿಟ್ಟಿದ್ದಾರೆ.
— Karnataka Congress (@INCKarnataka) October 29, 2025
ಸವಿತಾ ಸಮಾಜದ ಬಗ್ಗೆ ತುಚ್ಛವಾಗಿ ಮಾತನಾಡಿ ಅವಮಾನಿಸಿರುವ ಮಾತುಗಳು ಅವರ ವೈಯಕ್ತಿಕ ನಿಲುವು… pic.twitter.com/dai2fd2nxi
ಕಾನೂನು ತನ್ನಿ
ಸಿಟಿ ರವಿಯವರಿಗೆ ಸವಿತಾ ಸಮಾಜದ ಬಂಧುಗಳು ಸರಿಯಾಗಿ ಬುದ್ದಿ ಕಲಿಸಬೇಕು, ಬುದ್ಧಿ ಕಲಿಸದಿದ್ದರೆ ಇದು ಮುಂದುವರಿಯುತ್ತಲೇ ಇರುತ್ತೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಜನ ಈ ವಿಡಿಯೋಗೆ ಕಾಮೆಂಟ್ ಮಾಡುತ್ತಿದ್ದಾರೆ. ಈ ರೀತಿಯ ಪದವನ್ನು ಬಳಸಿ ಸವಿತಾ ಸಮಾಜಕ್ಕೆ ಮತ್ತು ಜನತೆಗೆ ಅಪಮಾನ ಮಾಡಿರುವ ಸಿಟಿ ರವಿ ಅವರು ಕೂಡಲೇ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸುತ್ತಿದ್ದಾರೆ. ಸವಿತಾ ಸಮಾಜದ ಮುಖಂಡರು ಕೂಡ ಇದನ್ನು ಖಂಡಿಸಿದ್ದಾರೆ. ಕೂಡಲೇ ಕ್ಷಮೆ ಕೇಳದಿದ್ದರೆ, ರಾಜ್ಯದಾದ್ಯಂತ ಪ್ರತಿಭಟನೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ. ಅಲ್ಲದೆ ಸಿಎಂ ಸಿದ್ದರಾಮಯ್ಯ ಅವರಿಗೆ ಈ ಬಗ್ಗೆ ಮನವಿ ಮಾಡಿಕೊಳ್ಳುತ್ತೇವೆ. ಇಂತಹ ಪದಬಳಕೆ ಮಾಡುವವರಿಗೆ ಶಿಕ್ಷೆ ಕೊಡಲು ಬಲವಾದ ಕಾನೂನು ತರಬೇಕು ಎಂದು ಒತ್ತಾಯಿಸುತ್ತಿದ್ದಾರೆ.












Click it and Unblock the Notifications