Petrol Rate: ವಾಹನ ಸವಾರರನ್ನು ಆ ದೇವರೇ ಕಾಪಾಡಬೇಕು: ಪೆಟ್ರೋಲ್ & ಡೀಸೆಲ್ ಕಥೆ ಹರೋಹರ!
ವಾಹನ ಸವಾರರು ಒಂದು ರೌಂಡ್ ಹೋಗಿ ಬರಲು ಯೋಚನೆ ಮಾಡುವ ಪರಿಸ್ಥಿತಿ ಇದೀಗ ನಿರ್ಮಾಣ ಆಗಿದೆ. ಯಾಕಂದ್ರೆ ಪೆಟ್ರೋಲ್ & ಡೀಸೆಲ್ ರೇಟ್ ಆ ರೇಂಜ್‌ಗೆ ಹೋಗಿ ನಿಂತಿದೆ. ಪ್ರತಿ ತಿಂಗಳು ದುಡಿಯುವ ಸಂಬಳದಲ್ಲಿ ಕಾಲು ಭಾಗ ದುಡ್ಡನ್ನು ಪೆಟ್ರೋಲ್ & ಡೀಸೆಲ್‌ಗೆ ಸುರಿಯಬೇಕಿದೆ. ಹೀಗಿದ್ದಾಗಲೇ ವಾಹನ ಸವಾರರಿಗೆ ಮತ್ತೊಂದು ಭೀಕರ ಆಘಾತವು ಇದೀಗ ಎದುರಾಗಿದ್ದು, ಇಸ್ರೇಲ್ & ಇರಾನ್ ಯುದ್ಧದ ಪರಿಣಾಮ ಭಾರಿ ದೊಡ್ಡ ಪ್ರಮಾಣದಲ್ಲಿಯೇ ಪೆಟ್ರೋಲ್ & ಡೀಸೆಲ್ ಏರಿಕೆ ಕಾಣುವ ಭಯ ಆವರಿಸಿದೆ.
ಇಡೀ ಜಗತ್ತು ಇದೀಗ 3ನೇ ಮಹಾಯುದ್ಧದ ಭಯದಲ್ಲಿ ಬದುಕುವ ಪರಿಸ್ಥಿತಿ ಎದುರಾಗಿದೆ. ಯಾಕಂದ್ರೆ ಇರಾನ್ ದಿಢೀರ್ 200ಕ್ಕೂ ಹೆಚ್ಚು ಮಿಸೈಲ್‌ಗಳ ಮೂಲಕ ಇಸ್ರೇಲ್ ವಿರುದ್ಧ ದಾಳಿ ನಡೆಸಿದ ನಂತರ ಪರಿಸ್ಥಿತಿ ಕೈಮೀರಿ ಹೋಗಿದೆ. ಯಾಕಂದ್ರೆ ಮಧ್ಯಪ್ರಾಚ್ಯ ಸೂಕ್ಷ್ಮ ಪ್ರದೇಶ, ಇಲ್ಲಿ ಜಗಳ ಶುರುವಾದರೆ ಜಾಗತಿಕ ಆರ್ಥಿಕತೆ ಮೇಲೆ ದೊಡ್ಡ ಪರಿಣಾಮ ಬೀರುತ್ತದೆ. ಇದೇ ಕಾರಣಕ್ಕೆ ಇರಾನ್ & ಇಸ್ರೇಲ್ ದೇಶಗಳ ನಾಯಕರನ್ನು ಕರೆದು ಮಾತನಾಡಿ ಸಮಾಧಾನದ ಮಾತುಗಳನ್ನ ಹೇಳಲು ಜಗತ್ತೇ ಸಿದ್ಧವಾಗಿತ್ತು. ಆದರೆ ಇದಕ್ಕೆಲ್ಲಾ ಕೇರ್ ಮಾಡದ ಎರಡೂ ದೇಶಗಳು ಅಂದ್ರೆ ಇರಾನ್ & ಇಸ್ರೇಲ್ ಯುದ್ಧ ಆರಂಭ ಮಾಡಿಬಿಟ್ಟಿವೆ. ಇಂತಹ ಸಮಯದಲ್ಲೇ ಭಾರತದ ವಾಹನ ಸವಾರರ ಮಂಡೆ ಬಿಸಿ ಆಗುವುದು ಗ್ಯಾರಂಟಿ ಆಗಿದೆ!

ಪೆಟ್ರೋಲ್ & ಡೀಸೆಲ್ 200 ರೂಪಾಯಿ?
ಅಂದಹಾಗೆ ಇಸ್ರೇಲ್ & ಇರಾನ್ ಸಂಘರ್ಷ ಕೊತ ಕೊತ ಕುದಿಯುತ್ತಿದೆ. ಅತ್ತ ಇಸ್ರೇಲ್ ಕೂಡ ನಾವು ದಾಳಿ ಮಾಡ್ತೀವಿ, ನಾವು ರಿವೇಂಜ್ ತೆಗೆದುಕೊಳ್ತೀವಿ ಅಂತಿದೆ. ಇತ್ತ ಇರಾನ್ ಕೂಡ ನಾವು ಕೂಡ ಮತ್ತೆ ದಾಳಿ ಮಾಡ್ತೀವಿ ಅಂತಾ ಹೇಳ್ತಿದೆ. ಹೀಗೆ ಇಬ್ಬರ ನಡುವೆ ನಡೆಯುತ್ತಿರುವ ಘರ್ಷಣೆ ಜಾಗತಿಕ ಆರ್ಥಿಕತೆ ಬುಡಕ್ಕೆ ಬಾಂಬ್ ಇಡುತ್ತಿದೆ. ಇಂತಹ ಸಮಯದಲ್ಲೇ ಮತ್ತೊಂದು ಆಘಾತ ಸಿಕ್ಕಿದ್ದು, ಕಚ್ಚಾ ತೈಲದ ಬೆಲೆಯಲ್ಲಿ ಭರ್ಜರಿ ಏರಿಕೆ ಕಂಡಬಂದಿದೆ. ಈ ಮೂಲಕ ಪೆಟ್ರೋಲ್, ಡೀಸೆಲ್, ಗ್ಯಾಸ್ ಬೆಲೆಯಲ್ಲಿ ಭಾರಿ ಹೆಚ್ಚಳವಾಗುವ ಭಯ ಕಾಡುತ್ತಿದೆ.
ಕಚ್ಚಾ ತೈಲದ ಬೆಲೆ 75 ಡಾಲರ್!
ಇರಾನ್ & ಇಸ್ರೇಲ್ ದೇಶಗಳ ನಡುವೆ ಹೊತ್ತಿಕೊಂಡಿರುವ ಬೆಂಕಿ ದೊಡ್ಡ ಸಮಸ್ಯೆ ತಂದು ಇಟ್ಟಿದೆ. ಇಸ್ರೇಲ್ ಅಕಸ್ಮಾತ್ ನಮ್ಮ ಮೇಲೆ ಪ್ರತಿದಾಳಿ ನಡೆಸಿದ್ದೇ ಆದಲ್ಲಿ ಭಾರಿ ಪ್ರಮಾಣದ ಅಟ್ಯಾಕ್ ಗ್ಯಾರಂಟಿ ಅಂತಿದೆ ಇರಾನ್. ಹೀಗಾಗಿ ಜಾಗತಿಕ ತೈಲ ಮಾರುಕಟ್ಟೆ ಬುಡ ಅಲುಗಾಡಿ ಹೋಗಿದೆ. ಬಹುದೊಡ್ಡ ಗ್ಯಾಪ್ ಬಳಿಕ ಕಚ್ಚಾ ತೈಲದ ಬೆಲೆಯು ಪ್ರತಿ ಬ್ಯಾರಲ್‌ಗೆ 75 ಡಾಲರ್‌ಗೆ ತಲುಪಿದೆ.
ಹೀಗಿದ್ದಾಗ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಕೂಡ ಇರಾನ್ ವಿರುದ್ಧ ಪ್ರತಿದಾಳಿಗೆ ಸಜ್ಜಾಗಿದ್ದಾರೆ ಎನ್ನಲಾಗಿದ್ದು, ಈ ಕಾರಣಕ್ಕೆ ಪೆಟ್ರೋಲ್ & ಡೀಸೆಲ್ ಬೆಲೆ ಭಾರಿ ಹೆಚ್ಚಾತ್ತಾ? ಎಂಬ ಆತಂಕ ಕಾಡುತ್ತಿದೆ. ಮತ್ತೊಂದು ಕಡೆ ದೊಡ್ಡ ಪ್ರಮಾಣದ ಯುದ್ಧ ಶುರುವಾದರೆ, ಪೆಟ್ರೋಲ್ 200 ರೂಪಾಯಿಗೆ ಹೋದರೂ ಅಚ್ಚರಿ ಇಲ್ಲ ಎಂಬ ಮಾತುಗಳು ತಜ್ಞರಿಂದಲೇ ಕೇಳಿಬಂದಿವೆ. ಆದರೆ ಪರಿಸ್ಥಿತಿ ಆ ಹಂತಕ್ಕೆ ಹೋಗುವುದು ಅನುಮಾನ ಎನ್ನಲಾಗಿದೆ.












Click it and Unblock the Notifications