Get Updates
Get notified of breaking news, exclusive insights, and must-see stories!

CP Yogeshwar: ಕಾಂಗ್ರೆಸ್‌ ಟಾಸ್ಕ್‌ ಕೊಟ್ಟರೆ ಆ ಕೆಲಸ ಮಾಡ್ತೀನಿ: ಸಿ.ಪಿ ಯೋಗೇಶ್ವರ್, ಜೆಡಿಎಸ್ ಗಡಗಡ!

ಚನ್ನಪಟ್ಟಣದ ವಿಧಾನಸಭಾ ಕ್ಷೇತ್ರದ ನೂತನ ಕಾಂಗ್ರೆಸ್‌ ಶಾಸಕ ಸಿ.ಪಿ ಯೋಗೇಶ್ವರ್ ಅವರು ಜೆಡಿಎಸ್ ಪಕ್ಷದ ಬಗ್ಗೆ ಸ್ಫೋಟಕ ಹೇಳಿಕೆಯೊಂದನ್ನು ಕೊಟ್ಟಿದ್ದಾರೆ. ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರ ವಿರುದ್ಧ ಸಿ.ಪಿ ಯೋಗೇಶ್ವರ್ ಅವರು ಭರ್ಜರಿ ಗೆಲುವು ದಾಖಲಿಸಿದ್ದಾರೆ. ಚನ್ನಪಟ್ಟಣ ವಿಧಾನಸಭಾ ಕ್ಷೇತ್ರವೂ ಕೊನೆಯ ಕ್ಷಣದ ವರೆಗೂ ತೀವ್ರ ಕುತೂಹಲವನ್ನು ಪಡೆದುಕೊಂಡಿತ್ತು. ಇದೀಗ ವಿಧಾನಸಭೆ ಉಪ ಚುನಾವಣೆಯಲ್ಲಿ ಭರ್ಜರಿ ಗೆಲುವು ದಾಖಲಿಸುತ್ತಿದ್ದಂತೆಯೇ ಜೆಡಿಎಸ್ ಶಾಸಕರನ್ನು ಕಾಂಗ್ರೆಸ್‌ಗೆ ಕರೆದುಕೊಂಡು ಬರುವ ಬಗ್ಗೆ ಅವರು ಮಾತನಾಡಿದ್ದಾರೆ.

ಚನ್ನಪಟ್ಟಣ ಉಪ ಚುನಾವಣೆಗೆ ಇನ್ನು ಬೆರಳೆಣಿಕೆಯ ದಿನಗಳು ಬಾಕಿ ಉಳಿದಿರುವಾಗ ಸಿ.ಪಿ ಯೋಗೇಶ್ವರ್ ಅವರು ಬಿಜೆಪಿ ತೊರೆದು ಕಾಂಗ್ರೆಸ್‌ ಸೇರ್ಪಡೆಯಾಗಿದ್ದರು. ಸಿ.ಪಿ ಯೋಗೇಶ್ವರ್ ಅವರು ಚನ್ನಪಟ್ಟಣದಲ್ಲಿ ವಿಧಾನಸಭೆ ಉಪ ಚುನಾವಣೆಯಲ್ಲಿ ನಾನು ಸ್ಪರ್ಧೆ ಮಾಡುವುದು ಖಚಿತ. ಆದರೆ, ಯಾವ ಪಕ್ಷದ ಚಿಹ್ನೆಯಿಂದ ಎನ್ನುವುದಷ್ಟೇ ಈಗ ಬಾಕಿ ಉಳಿದಿರುವ ವಿಚಾರ ಎಂದು ಸಿ.ಪಿ ಯೋಗೇಶ್ವರ್ ಅವರು ಹೇಳಿದ್ದರು. ಅದರಂತೆ ಕಾಂಗ್ರೆಸ್‌ಗೆ ಬಂದು ಚುನಾವಣೆಯಲ್ಲಿ ನಿಂತು ಭರ್ಜರಿ ಗೆಲುವು ಸಹ ದಾಖಲಿಸಿದ್ದಾರೆ. ಆದರೆ, ಚುನಾವಣೆ ಫಲಿತಾಂಶ ಪ್ರಕಟವಾಗಿ ಎರಡು ದಿನಗಳಲ್ಲೇ ಅವರು ಸ್ಫೋಟಕ ಹೇಳಿಕೆಯೊಂದನ್ನು ಕೊಟ್ಟಿದ್ದಾರೆ.

CP Yogeshwar said If Congress gives me a task you will do that work Shock for JDS

ಚನ್ನಪಟ್ಟಣ ವಿಧಾನಸಭೆ ಉಪ ಚುನಾವಣೆಯಲ್ಲಿ ಜೆಡಿಎಸ್ ಸೋಲುತ್ತಿದ್ದಂತೆಯೇ ಜೆಡಿಎಸ್ ಪಕ್ಷದಲ್ಲಿ ಈಗಾಗಲೇ ಆತಂಕ ಶುರುವಾಗಿದೆ. ಮುಂದಿನ ದಿನಗಳಲ್ಲಿ ಜೆಡಿಎಸ್ ಅಸ್ತಿತ್ವವನ್ನು ಉಳಿಸಿಕೊ‌ಳ್ಳುವುದು ಹೇಗೆ ಎನ್ನುವ ಬಗ್ಗೆ ಭಾರೀ ಚರ್ಚೆ ಜೆಡಿಎಸ್‌ನಲ್ಲಿ ಶುರುವಾಗಿದೆ. ಇದರ ನಡುವೆ ಸಿ.ಪಿ ಯೋಗೇಶ್ವರ್ ಅವರು ಸಹ ಜೆಡಿಎಸ್‌ಗೆ ದೊಡ್ಡ ಶಾಕ್‌ ಕೊಟ್ಟಿದ್ದಾರೆ.

ಟಾಸ್ಕ್‌ ಕೊಟ್ಟರೆ ಜೆಡಿಎಸ್ ಒಡೆದು; ಶಾಸಕರನ್ನು ಕರ್ಕೊಂಡು ಬರ್ತೀನಿ

ಇನ್ನು ಜೆಡಿಎಸ್ ಶಾಸಕರನ್ನು ಕಾಂಗ್ರೆಸ್‌ ಪಕ್ಷಕ್ಕೆ ಕರೆದುಕೊಂಡು ಬರುವ ಬಗ್ಗೆ ಸಿ.ಪಿ ಯೋಗೇಶ್ವರ್ ಅವರು ಮಾತನಾಡಿದ್ದಾರೆ. ನನಗೆನಾದರೂ ಕಾಂಗ್ರೆಸ್‌ನಿಂದ ಟಾಸ್ಕ್‌ ಬಂದರೆ, ನಾನು ಇನ್ನೊಂದೇ ತಿಂಗಳಲ್ಲಿ ಜೆಡಿಎಸ್ ಪಕ್ಷವನ್ನು ಒಡೆದು ಜೆಡಿಎಸ್‌ ಪಕ್ಷದ ಶಾಸಕರನ್ನು ಕಾಂಗ್ರೆಸ್‌ಎ ಕರೆದುಕೊಂಡು ಬರ್ತೀನಿ ಅಂತ ಅಚ್ಚರಿಯ ಹೇಳಿಕೆಯನ್ನು ಕಾಂಗ್ರೆಸ್‌ ಶಾಸಕ ಸಿ.ಪಿ ಯೋಗೇಶ್ವರ್ ಅವರು ಕೊಟ್ಟಿದ್ದಾರೆ.

ಕನ್ನಡ ಸುದ್ದಿ ವಾಹಿನಿ ಸುವರ್ಣ ನ್ಯೂಸ್‌ನಲ್ಲಿ ನಡೆದ ಸಂದರ್ಶನದಲ್ಲಿ ಅವರು ಈ ಮಾತುಗಳನ್ನು ಹೇಳಿದ್ದಾರೆ. ಅವರ ಮಾತು ಅಚ್ಚರಿ ಮೂಡಿಸಿದೆ. ಜೆಡಿಎಸ್ ಪಕ್ಷವು ಈಗಾಗಲೇ ಚನ್ನಪಟ್ಟಣ ಉಪ ಚುನಾವಣೆ ಸೋಲಿನಿಂದ ಆಘಾತಕ್ಕೆ ಒಳಗಾಗಿದೆ. ರಾಜ್ಯದಲ್ಲಿ ಜೆಡಿಎಸ್ ಪಕ್ಷವು ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡ ಮೇಲೆ ಅದಕ್ಕೆ ಹಿನ್ನಡೆಯಾಗಿದೆಯೇ ಎನ್ನುವ ಪ್ರಶ್ನೆ ಎದುರಾಗಿದೆ.

ಇನ್ನು ಕೇಂದ್ರ ಮಂತ್ರಿ ಹಾಗೂ ಮಾಜಿ ಮುಖ್ಯಮಂತ್ರಿ ಎಚ್‌.ಡಿ ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಕುಮಾರಸ್ವಾಮಿ ಅವರು ಇದೀಗ ಮೂರನೇ ಬಾರಿ ಚುನಾವಣೆಯೊಂದರಲ್ಲಿ ಸೋತಿದ್ದು, ಇದು ಜೆಡಿಎಸ್‌ ಪಕ್ಷಕ್ಕೆ ನುಂಗಲಾರದ ತುಪ್ಪವಾಗಿದೆ. ಈ ಬಾರಿ ಜೆಡಿಎಸ್ ಗೆಲ್ಲಲಿದೆ. ಉಪ ಚುನಾವಣೆಯಲ್ಲಿ ನಿಖಿಲ್‌ ಕುಮಾರಸ್ವಾಮಿಗೆ ಜನ ಮತ ಚಲಾಯಿಸಲಿದ್ದಾರೆ ಎಂದೇ ಹೇಳಲಾಗಿತ್ತು. ಆದರೆ, ಆ ಲೆಕ್ಕಾಚಾರ ತಲೆಕೆಳಗಾಗಿದೆ. ಇದೀಗ ಸಿ.ಪಿ ಯೋಗೇಶ್ವರ್‌ ಅವರು ಜೆಡಿಎಸ್‌ ಪಕ್ಷವನ್ನೇ ಒಡೆಯುವ ಬಗ್ಗೆ ಮಾತನಾಡಿದ್ದಾರೆ.

ಸಿ.ಪಿ ಯೋಗೇಶ್ವರ್‌ ಅವರ ಮಾತು ರಾಜಕೀಯದಲ್ಲಿ ಭಾರೀ ಸಂಚಲವನ್ನೇ ಸೃಷ್ಟಿ ಮಾಡಿದೆ. ಎಚ್‌.ಡಿ ಕುಮಾರಸ್ವಾಮಿ ಅವರು ರಾಷ್ಟ್ರ ರಾಜಕೀಯಕ್ಕೆ ಹೋದ ಮೇಲೆ ರಾಜ್ಯದಲ್ಲಿ ಜೆಡಿಎಸ್‌ನಿಂದ ಗುಡುಗುವವರು ಕಡಿಮೆಯಾಗಿದ್ದಾರೆ. ವಿಧಾನಸಭೆ ಯಲ್ಲಿ ಜೆಡಿಎಸ್‌ನಿಂದ ಗುಡುಗುವವರು ಇಲ್ಲ. ಆ ಸ್ಥಾನವನ್ನು ಜೆಡಿಎಸ್‌ ನಾಯಕ ನಿಖಿಲ್‌ ಕುಮಾರಸ್ವಾಮಿ ಅವರು ತುಂಬಲಿದ್ದಾರೆ ಎಂದುಕೊಳ್ಳಲಾಗಿತ್ತು. ಆದರೆ, ಆ ಕನಸು ಈಡೇರಿಲ್ಲ.

ಜಿ. ಪರಮೇಶ್ವರ್ ಹೇಳಿದ್ದೇನು ?

ಇನ್ನು ಸಿ.ಪಿ ಯೋಗೇಶ್ವರ್ ಅವರ ಹೇಳಿಕೆಯ ಬಗ್ಗೆ ಗೃಹ ಸಚಿವ ಜಿ. ಪರಮೇಶ್ವರ್‌ ಅವರು ಮಾತನಾಡಿದ್ದಾರೆ. ಜೆಡಿಎಸ್‌ ಶಾಸಕರನ್ನು ಕರೆದುಕೊಂಡು ಬರುವ ಬಗ್ಗೆ ಮಾತನಾಡಿರುವ ಅವರು, ಅದರ ಅಗತ್ಯ ನಮಗೆ ಇಲ್ಲ. ಸಾಮಾನ್ಯವಾಗಿ ಕಾಂಗ್ರೆಸ್‌ನಲ್ಲಿ ನಾವು ಬಿಜೆಪಿಯವರು ಮಾಡಿದ ರೀತಿ ಆಪರೇಷನ್ ಕಮಲ ಮಾಡಲ್ಲ. ಆಪರೇಷನ್‌ ಹಸ್ತ ನಾವು ಮಾಡುವುದಕ್ಕೆ ಹೋಗಲ್ಲ. ಸಿ.ಪಿ ಯೋಗೇಶ್ವರ್ ಅವರು ಈ ರೀತಿ ಹೇಳಿದ್ದರೆ ಅದರ ಅವಶ್ಯಕತೆ ಇಲ್ಲ. ನಾವು ಈಗ (ಕಾಂಗ್ರೆಸ್‌ ಶಾಸಕರು) 138 ಜನ ಇದ್ದೀವಿ. ಇನ್ಯಾರನ್ನು ಕರೆದುಕೊಂಡು ಬರಬೇಕು. ನಮ್ಮ ಸರ್ಕಾರ ಈಗಾಗಲೇ ಸುಭದ್ರವಾಗಿದೆ ಎಂದು ಪರಮೇಶ್ವರ್ ಹೇಳಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+