ಬ್ರೇಕಿಂಗ್ ನ್ಯೂಸ್: ಕರುನಾಡಿನಲ್ಲಿ 130 ಕೊರೊನಾ ವೈರಸ್ ಹೊಸ ಕೇಸ್!

ಬೆಂಗಳೂರು, ಮೇ.24: ಕರ್ನಾಟಕದಲ್ಲಿ ನೊವೆಲ್ ಕೊರೊನಾ ವೈರಸ್ ನಿರಂತರ ಮೂರನೇ ದಿನವೂ ಶತಕ ಬಾರಿಸಿದೆ. ಕಳೆದ 24 ಗಂಟೆಗಳಲ್ಲಿ ರಾಜ್ಯದಲ್ಲಿ 130 ಮಂದಿಗೆ ಕೊರೊನಾ ವೈರಸ್ ಸೋಂಕು ಪತ್ತೆಯಾಗಿದೆ.

Recommended Video

      ಲಾಕ್ ಡೌನ್ ನಲ್ಲಿ ಮಧುಮೇಹ ರೋಗಿಗಳ ಆರೋಗ್ಯ ಅಪಾಯದಲ್ಲಿ!! | Exercise is must in Lockdown | Oneindia Kannada

      ಭಾನುವಾರ ಬೆಳಗ್ಗಿನ ಬುಲೆಟಿನ್ ನಲ್ಲಿ 97 ಸೋಂಕಿತ ಪ್ರಕರಣಗಳು ಪತ್ತೆಯಾಗಿದ್ದವು. ಸಂಜೆ ರಾಜ್ಯ ಆರೋಗ್ಯ ಇಲಾಖೆ ಬಿಡುಗಡೆ ಮಾಡಿದ ಬುಲೆಟಿನ್ ನಲ್ಲಿ 33 ಮಂದಿಗೆ ಸೋಂಕು ತಗಲಿರುವುದು ದೃಢಪಟ್ಟಿದೆ. ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 2089ಕ್ಕೆ ಏರಿಕೆಯಾಗಿದೆ.

      ಚಿಕ್ಕಬಳ್ಳಾಪುರ -27, ಉಡುಪಿ - 23, ಮಂಡ್ಯ - 15, ಹಾಸನ - 14, ಯಾದಗಿರಿ - 24, ಕಲಬುರಗಿ - 6, ಬೀದರ್ 6, ದಾವಣಗೆರೆ - 4, ಶಿವಮೊಗ್ಗ - 2, ತುಮಕೂರು - 2, ಉತ್ತರ ಕನ್ನಡ -2, ದಕ್ಷಿಣ ಕನ್ನಡ -1, ಕೊಡಗು - 1, ವಿಜಯಪುರ -1, ಧಾರವಾಡ - 1, ಬೆಂಗಳೂರು ನಗರ -1, ಕೊರೊನಾ ವೈರಸ್ ಸೋಂಕಿತ ಪ್ರಕರಣಗಳು ಪತ್ತೆಯಾಗಿವೆ.

      Covid-19 Positive Cases In Karnataka: 130 Coronavirus Cases Found In Past 24 Hours

      ರಾಜ್ಯದಲ್ಲಿ ಇಂದು 654 ಸೋಂಕಿತರ ಡಿಸ್ಚಾರ್ಜ್:

      ಕರ್ನಾಟಕದಲ್ಲಿ ಕೊರೊನಾ ವೈರಸ್ ಸೋಂಕಿತ ಸಂಖ್ಯೆ 2,089ಕ್ಕೆ ಏರಿಕೆಯಾಗಿದ್ದು, ಭಾನುವಾರ 46 ಮಂದಿ ಸೋಂಕಿತರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇದುವರೆಗೂ ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿಗೆ 42 ಮಂದಿ ಬಲಿಯಾಗಿದ್ದರೆ, 654 ಸೋಂಕಿತರು ಗುಣಮುಖರಾಗಿದ್ದಾರೆ.

      ಕರಾವಳಿಯಲ್ಲಿ ಅಟ್ಟಹಾಸ ಮೆರೆದ ಕೊರೊನಾ ವೈರಸ್

      ಕೊರೊನಾ ವೈರಸ್ ಸೋಂಕು ಕರಾವಳಿ ಜನರಲ್ಲಿ ದಿನೇ ದಿನೆ ಆತಂಕವನ್ನು ಹೆಚ್ಚಿಸುತ್ತಿದೆ. ಭಾನುವಾರ ಒಂದೇ ದಿನ ಕರಾವಳಿಯಲ್ಲಿ 26 ಮಂದಿಗೆ ಸೋಂಕು ಪತ್ತೆಯಾಗಿದೆ. ಉಡುಪಿ ಜಿಲ್ಲೆಯೊಂದರಲ್ಲೇ 23 ಮಂದಿಗೆ ಸೋಂಕು ತಗಲಿದ್ದು, ಉತ್ತರ ಕನ್ನಡ ಜಿಲ್ಲೆಯಲ್ಲಿ ಒಬ್ಬರು ಹಾಗೂ ಉತ್ತರ ಕನ್ನಡದಲ್ಲಿ ಇಬ್ಬರಿಗೆ ಕೊವಿಡ್-19 ಸೋಂಕು ಕನ್ಫರ್ಮ್ ಆಗಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+