ಲೋಕಲ್ ವಾರ್ ಗೆ ಕ್ಷಣಗಣನೆ: ಗೆಲ್ಲೋರ್ಯಾರು? ಸೋಲೋರ್ಯಾರು?
ಬೆಂಗಳೂರು, ಆಗಸ್ಟ್30: ಸ್ಥಳೀಯ ಸಂಸ್ಥೆಗಳ ಚುನಾವಣೆ ಕ್ಷಣಗಣನೆ ಆರಂಭವಾಗಿದೆ. ಆಗಸ್ಟ್ 31ರಂದು ಶುಕ್ರವಾರ ರಾಜ್ಯದ 29ನಗರಸಭೆ, 53 ಪುರಸಭೆ, 23 ಪಟ್ಟಣ ಪಂಚಾಯಿತಿ ಸೇರಿ ಒಟ್ಟು 105 ಸ್ಥಳೀಯ ಸಂಸ್ಥೆಗಳಿಗೆ ಮತದಾನ ನಡೆಯಲಿದೆ.
ಈ ಚುನಾವಣೆಯಲ್ಲಿ ಗೆಲ್ಲೋರ್ಯಾರು, ಸೋಲೋರ್ಯಾರು ಎನ್ನುವ ಕುತೂಹಲ ಜನರಲ್ಲಿ ಮನೆಮಾಡಿದೆ. ಸೆಪ್ಟೆಂಬರ್ 3ರಂದು ಮತ ಎಣಿಕೆ ನಡೆಯಲಿದೆ, ನಗರಸಭೆಗೆ 2067, ಪುರಸಭೆ 1422, ಪಟ್ಟಣ ಪಂಚಾಯತಿಗೆ 407 ಸೇರಿ 3897 ಮತಗಟ್ಟೆ ಸಿದ್ಧಪಡಿಸಲಾಗಿದೆ.
ಈ ಚುನಾವಣೆಗೂ ಮತದಾನಕ್ಕೂ ಇವಿಎಂ ಬಳಕೆ, ನೋಟಾ ಸೌಲಭ್ಯ ಕಲ್ಪಿಸಿಕೊಡಲಾಗುತ್ತಿದ್ದು, ಅಭ್ಯರ್ಥಿಗಳ ಹೆಸರಿನ ಮುಂದೆ ಅವರ ಭಾವಚಿತ್ರವನ್ನು ಅಳವಡಿಸಲಾಗುತ್ತಿದೆ.

ಬುಧವಾರ ಬಹಿರಂಗ ಪ್ರಚಾರ ಅಂತ್ಯಗೊಂಡಿದೆ, ಮೂರು ಪಕ್ಷಗಳ ಮುಖಂಡರು, ಶಾಸಕರು ತಮ್ಮ ಕ್ಷೇತ್ರಗಳಲ್ಲಿ ಈಗಾಗಲೇ ಪ್ರಚಾರ ನಡೆಸಿದ್ದಾರೆ. ಉಳಿದ 120ಕ್ಕೂ ಹೆಚ್ಚು ಸ್ಥಳೀಯ ಸಂಸ್ಥೆಗಳಿಗೆ ಡಿಸೆಂಬರ್ ನಲ್ಲಿ ಚುನಾವಣೆ ನಡೆಯಲಿದೆ.ಲೋಕಸಭಾ ಚುನಾವಣೆ ಹತ್ತಿರದಲ್ಲಿರುವುದರಿಂದ ಹೆಚ್ಚಿನ ಪ್ರಚಾರ ನಂತರ ನಡೆಯಲಿದೆ.
ನಗರಸಭೆಯಲ್ಲಿ 927 ವಾರ್ಡ್ ಗಳಿದ್ದು 20,06,708 ಮತದಾರರಿದ್ದಾರೆ, ಪುರಸಭೆ ವ್ಯಾಪ್ತಿಯಲ್ಲಿ 1,247 ವಾರ್ಡ್ ಗಳಿದ್ದು 12,76,254 ಮಂದಿ ಮತದಾರರಿದ್ದಾರೆ, ಪಟ್ಟಣ ಪಂಚಾಯ್ತಿ ವ್ಯಾಪ್ತಿಯಲ್ಲಿ 400 ವಾರ್ಡ್ ಗಳಿದ್ದು, 3,20,729ಮಂದಿ ಮತದಾರರಿದ್ದಾರೆ. ಆಗಸ್ಟ್ 31ರಂದು ಶುಕ್ರವಾರ ಈ ಸಂಸ್ಥೆಗಳಿಗೆ ಮತದಾನ ನಡೆಯಲಿದೆ.












Click it and Unblock the Notifications