ಕ್ರೂರ ಕೊರೊನಾ: ಭಾವಿ ಅಮ್ಮನಿಗಾಗಿ ಮರುಗಿದ ಜಗ್ಗೇಶ್

ಬೆಂಗಳೂರು, ಮಾರ್ಚ್ 16: ಮಾರಣಾಂತಿಕ ಕೊರೊನಾ ವೈರಸ್ ಇಟಲಿಯಲ್ಲಿ ಮರಣ ಮೃದಂಗ ಬಾರಿಸುತ್ತಿದೆ. ಕೊರೊನಾ ವೈರಸ್ ಸೋಂಕಿನಿಂದಾಗಿ ಇಟಲಿಯಲ್ಲಿ ದಿನೇ ದಿನೇ ಸಾವಿನ ಸಂಖ್ಯೆ ಹೆಚ್ಚಾಗುತ್ತಿದೆ. ಇಟಲಿಯಲ್ಲಿ ಕಳೆದ 24 ಗಂಟೆಗಳಲ್ಲಿ 368 ಮಂದಿಯನ್ನ ಡೆಡ್ಲಿ ಕೊರೊನಾ ವೈರಸ್ ಬಲಿ ಪಡೆದಿದೆ.

ಕೊರೊನಾ ವೈರಸ್ ನಿಂದಾಗಿ ಹೆಣಗಾಡುತ್ತಿರುವ ಇಟಲಿಯಲ್ಲಿ ಭಾರತೀಯ ಮೂಲದ ತುಂಬು ಗರ್ಭಿಣಿಯೊಬ್ಬರು ಸಿಲುಕಿದ್ದಾರೆ. ತಾಯ್ನಾಡಿಗೆ ವಾಪಸ್ ಬರಲು ಒದ್ದಾಡುತ್ತಿರುವ ಗರ್ಭಿಣಿಯ ಸಹಾಯಕ್ಕೆ ಕನ್ನಡ ಚಲನಚಿತ್ರ ನಟ, ನವರಸ ನಾಯಕ ಜಗ್ಗೇಶ್ ಮುಂದಾಗಿದ್ದಾರೆ.

''ಸರ್ಕಾರ ಕೂಡಲೆ ಮಧ್ಯಸ್ಥಿಕೆ ವಹಿಸಬೇಕು. ಗರ್ಭಿಣಿಯನ್ನು ಭಾರತಕ್ಕೆ ಸುರಕ್ಷಿತವಾಗಿ ವಾಪಸ್ ಕರೆತರಬೇಕು'' ಎಂದು ಕೋರಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ಆರೋಗ್ಯ ಸಚಿವ ಶ್ರೀರಾಮುಲುಗೆ ನಟ ಜಗ್ಗೇಶ್ ಟ್ವೀಟ್ ಮಾಡಿದ್ದಾರೆ.

ಬೆಂಗಳೂರು ಮೂಲದ ಗರ್ಭಿಣಿ

''ಬೆಂಗಳೂರು ಮೂಲದ ಗರ್ಭಿಣಿಯೊಬ್ಬರು ರೋಮ್ ನಲ್ಲಿ ಒದ್ದಾಡುತ್ತಿದ್ದಾರೆ. ಆಕೆಯ ಪರಿಚಯ ನನಗಿಲ್ಲ. ಆದ್ರೆ, ಆಕೆಯ ಬಗ್ಗೆ ಮರುಕವುಂಟಾಗುತ್ತಿದೆ. ಆಕೆಗೆ ಈಗ ನೋವು ಕಾಣಿಸಿಕೊಂಡಿರುವುದರಿಂದ ಭಾರತಕ್ಕೆ ಬರುವುದು ಆಕೆಯ ಇಚ್ಛೆ. ಆದರೆ ಈ ಪ್ರಕ್ರಿಯೆಗೆ ಒಪ್ಪಿಗೆ ಸಿಗಬೇಕು ಅಂದ್ರೆ ಇನ್ನೂ 7 ದಿನ ಕಾಯಬೇಕು ಎಂದು ಸರ್ಕಾರ ತಿಳಿಸಿದೆ'' ಅಂತ ಟ್ವೀಟ್ ಮಾಡಿದ್ದಾರೆ ಜಗ್ಗೇಶ್.

ತಾಯ್ನಾಡು ಸೂಕ್ತ

ತಾಯ್ನಾಡು ಸೂಕ್ತ

''ಇಟಲಿಯಲ್ಲಿ ಪರಿಸ್ಥಿತಿ ಹದಗೆಟ್ಟಿರುವುದರಿಂದ, ಗರ್ಭಿಣಿ ಮಹಿಳೆಗೆ ವಿದೇಶಿ ನೆಲಕ್ಕಿಂತ ತಾಯ್ನಾಡಿನಲ್ಲಿ ಇರುವುದೇ ಸೂಕ್ತ. ಹೆರಿಗೆ ನೋವು ಕಾಣಿಸಿಕೊಂಡರೆ, ಸದ್ಯ ಇಟಲಿಯ ಆಸ್ಪತ್ರೆಗಳು ಗರ್ಭಿಣಿ ಮಹಿಳೆಗೆ ಸುರಕ್ಷಿತವಲ್ಲ. ಹೀಗಾಗಿ ಭಾರತಕ್ಕೆ ಆ ಗರ್ಭಿಣಿ ಮಹಿಳೆಯನ್ನು ಸುರಕ್ಷಿತವಾಗಿ ವಾಪಸ್ ಕರೆದುಕೊಂಡು ಬರುವಲ್ಲಿ ಸರ್ಕಾರ ಕೂಡಲೆ ಮಧ್ಯಪ್ರವೇಶ ಮಾಡಬೇಕು. ಭಾರತದಲ್ಲಿ ಪ್ರತ್ಯೇಕವಾಗಿ ಇರಲು ಸಿದ್ಧವಿರುವ ಆಕೆಗೆ ಇಟಲಿಯಲ್ಲಿ ಕೊನೆಯುಸಿರೆಳೆಯಲು ಇಷ್ಟವಿಲ್ಲ'' ಎಂದು ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರಕ್ಕೆ ಜಗ್ಗೇಶ್ ಮನವಿ ಮಾಡಿದ್ದಾರೆ. ಜಗ್ಗೇಶ್ ಮನವಿಗೆ ಸ್ಪಂದಿಸಿರುವ ಆರೋಗ್ಯ ಸಚಿವ ಬಿ.ಶ್ರೀರಾಮುಲು ''ಈ ಬಗ್ಗೆ ಗಮನ ಹರಿಸುತ್ತೇವೆ'' ಎಂದು ಟ್ವೀಟಿಸಿದ್ದಾರೆ.

ಸುಷ್ಮಾ ಸ್ವರಾಜ್ ರನ್ನ ಮಿಸ್ ಮಾಡಿಕೊಂಡ ಜಗ್ಗೇಶ್

ಸುಷ್ಮಾ ಸ್ವರಾಜ್ ರನ್ನ ಮಿಸ್ ಮಾಡಿಕೊಂಡ ಜಗ್ಗೇಶ್

ಇದೇ ಟ್ವೀಟ್ ನಲ್ಲಿ ಮಾಜಿ ವಿದೇಶಾಂಗ ಸಚಿವೆ ದಿವಂಗತ ಸುಷ್ಮಾ ಸ್ವರಾಜ್ ರನ್ನೂ ಜಗ್ಗೇಶ್ ನೆನಪಿಸಿಕೊಂಡಿದ್ದಾರೆ. ''ಈ ಸಮಯದಲ್ಲಿ ನಾನು ಸುಷ್ಮಾ ಸ್ವರಾಜ್ ರನ್ನ ಮಿಸ್ ಮಾಡಿಕೊಳ್ಳುತ್ತಿದ್ದೇನೆ. ಒಂದು ಟ್ವೀಟ್ ಮಾಡಿದರೆ ಸಾಕು, ಅವರು ಕೂಡಲೆ ಕ್ರಮ ಕೈಗೊಳ್ಳುತ್ತಿದ್ದರು'' ಎಂದು ನಟ ಜಗ್ಗೇಶ್ ತಮ್ಮ ಟ್ವೀಟ್ ನಲ್ಲಿ ಉಲ್ಲೇಖಿಸಿದ್ದಾರೆ.

ಇಟಲಿಯಲ್ಲಿ ಕೊರೊನಾ

ಇಟಲಿಯಲ್ಲಿ ಕೊರೊನಾ

ಇಟಲಿಯಲ್ಲಿ ಇಲ್ಲಿಯವರೆಗೂ 24747 ಕೊರೊನಾ ವೈರಸ್ ಸೋಂಕಿತ ಪ್ರಕರಣಗಳು ದಾಖಲಾಗಿವೆ. ಅದರಲ್ಲಿ 1809 ಮಂದಿ ಈಗಾಗಲೇ ಮೃತಪಟ್ಟಿದ್ದಾರೆ. ಕೊರೊನಾ ಸೋಂಕಿನಿಂದ 2335 ಗುಣಮುಖರಾಗಿದ್ದಾರೆ. 1672 ಮಂದಿಯ ಪರಿಸ್ಥಿತಿ ಇಟಲಿಯಲ್ಲಿ ಇನ್ನೂ ಚಿಂತಾಜನಕವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+