ಚಿತ್ರದುರ್ಗ, ಶಿವಮೊಗ್ಗ, ಉತ್ತರ ಕನ್ನಡ ಕೊರೊನಾ ಅಪ್ ಡೇಟ್
ಶಿವಮೊಗ್ಗ ಜಿಲ್ಲೆಯಲ್ಲಿ ಇಂದು ಒಂದೇ ದಿನಕ್ಕೆ 12 ಕೊರೊನಾ ಪಾಸಿಟಿವ್ ಪ್ರಕರಣಗಳು ದಾಖಲಾಗಿವೆ. ಬಾಂಬೆ, ತಮಿಳುನಾಡು ಹಾಗೂ ಕೇರಳದಿಂದ ಬಂದು, ಸಾಂಸ್ಥಿಕ ಕ್ವಾರಂಟೈನ್ ನಲ್ಲಿದ್ದ 12 ಜನರಲ್ಲಿ ಕೊರೊನಾ ದೃಢಪಟ್ಟಿದೆ.
ಈವರೆಗೂ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 26ಕ್ಕೆ ಏರಿಕೆಯಾಗಿದೆ. ಜಿಲ್ಲೆಯಲ್ಲಿ ಇನ್ನೂ 237 ಜನರ ವೈದ್ಯಕೀಯ ವರದಿ ನಿರೀಕ್ಷೆಯಲ್ಲಿದ್ದು, ಶಿವಮೊಗ್ಗದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಇನ್ನಷ್ಟು ಹೆಚ್ಚುವ ಸಾಧ್ಯತೆ ಇದೆ ಎನ್ನಲಾಗಿದೆ.
ಚಿತ್ರದುರ್ಗದಲ್ಲಿ ಮತ್ತೊಂದು ಪ್ರಕರಣ: ಚಿತ್ರದುರ್ಗದಲ್ಲಿ ಇಂದು ಮತ್ತೊಂದು ಕೊರೊನಾ ಸೋಂಕು ದೃಢಪಟ್ಟಿದೆ. 17 ವರ್ಷದ ಯುವತಿಯಲ್ಲಿ ಸೋಂಕು ದೃಢಪಟ್ಟಿದೆ. ಇದುವರೆಗೂ ಚಿತ್ರದುರ್ಗ ಜಿಲ್ಲೆಯಲ್ಲಿ ಒಟ್ಟು 10 ಕೊರೊನಾ ಪಾಸಿಟಿವ್ ಇದ್ದು, ಇವರಲ್ಲಿ ಒಬ್ಬರು ಗುಣಮುಖವಾಗಿದ್ದಾರೆ.

ಉತ್ತರ ಕನ್ನಡದಲ್ಲಿ ನಾಲ್ವರಿಗೆ ಕೊರೊನಾ: ಉತ್ತರ ಕನ್ನಡಕ್ಕೆ ಮಹಾರಾಷ್ಟ್ರದ ಮುಂಬೈನಿಂದ ಇಬ್ಬರು, ಗುಜರಾತ್ ಹಾಗೂ ತಮಿಳುನಾಡಿನಿಂದ ಬಂದಿದ್ದ ಇಬ್ಬರನ್ನು ಸೇರಿ ಒಟ್ಟು ನಾಲ್ವರಲ್ಲಿ ಕೋವಿಡ್- 19 ಸೋಂಕು ದೃಢಪಟ್ಟಿದೆ. ಜೊಯಿಡಾಕ್ಕೆ ತಮಿಳುನಾಡಿನಿಂದ ವಾಪಸ್ಸಾಗಿದ್ದ 31 ವರ್ಷದ ಮಹಿಳೆ, ದಾಂಡೇಲಿಗೆ ಗುಜರಾತ್ ನಿಂದ ಬಂದಿದ್ದ 24 ವರ್ಷದ ಯುವಕ, ಮಹಾರಾಷ್ಟ್ರದ ಮುಂಬೈನಿಂದ ಯಲ್ಲಾಪುರಕ್ಕೆ ಬಂದಿದ್ದ 16 ವರ್ಷದ ಯುವತಿ ಹಾಗೂ ಹೊನ್ನಾವರಕ್ಕೆ ಬಂದಿದ್ದ 34 ವರ್ಷದ ಮಹಿಳೆಯಲ್ಲಿ ಕೊರೊನಾ ದೃಢಪಟ್ಟಿದೆ. ಈ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 56 ಆಗಿದ್ದು, 45 ಸಕ್ರಿಯ ಸೋಂಕಿತರು ಇದ್ದಂತಾಗಿದೆ.












Click it and Unblock the Notifications