ಕೊರೊನಾ: ಕರ್ನಾಟಕದಲ್ಲಿರುವ ರೆಡ್, ಆರೆಂಜ್, ಗ್ರೀನ್ ಝೋನ್ ಗಳ ಪಟ್ಟಿ
ಕರ್ನಾಟಕ, ಮೇ 2: ಡೆಡ್ಲಿ ಕೊರೊನಾ ವೈರಸ್ ಅನ್ನು ತಡೆಗಟ್ಟಲು ಸಾಮಾಜಿಕ ಅಂತರ ಬಹುದೊಡ್ಡ ಉಪಾಯವಾಗಿದ್ದು, ಬಹುತೇಕ ರಾಷ್ಟ್ರಗಳು ಲಾಕ್ ಡೌನ್ ಮಂತ್ರವನ್ನು ಜಪಿಸುತ್ತಿವೆ. ಭಾರತದಲ್ಲೂ ಮೇ 17 ರವರೆಗೂ ಲಾಕ್ ಡೌನ್ ಮುಂದುವರೆಸಲಾಗಿದ್ದು, ಕೇಂದ್ರ ಗೃಹ ಸಚಿವಾಲಯ ಹೊಸ ಮಾರ್ಗಸೂಚಿ ಹೊರಡಿಸಿದೆ.
ಹೊಸ ಮಾರ್ಗಸೂಚಿ ಅನ್ವಯ ಜಿಲ್ಲೆಗಳನ್ನು ರೆಡ್ ಝೋನ್, ಗ್ರೀನ್ ಝೋನ್ ಮತ್ತು ಆರೆಂಜ್ ಝೋನ್ ಎಂದು ವಿಂಗಡಿಸಲಾಗಿದೆ. ಕೆಲವು ವಿನಾಯಿತಿಗಳು ಗ್ರೀನ್ ಝೋನ್ ಮತ್ತು ಆರೆಂಜ್ ಝೋನ್ ಗೆ ಮಾತ್ರ ಸೀಮಿತವಾಗಿದೆ.
ಹಾಗಾದರೆ, ಕೇಂದ್ರ ಸರ್ಕಾರ ಕರ್ನಾಟಕದಲ್ಲಿ ಗುರುತಿಸಿರುವ ರೆಡ್ ಝೋನ್, ಆರೆಂಜ್ ಝೋನ್ ಮತ್ತು ಗ್ರೀನ್ ಝೋನ್ ಯಾವುವು.? ಇಲ್ಲಿದೆ ನೋಡಿ ಪಟ್ಟಿ.

ರೆಡ್ ಝೋನ್ ನಲ್ಲಿರುವ ಜಿಲ್ಲೆಗಳು
* ಬೆಂಗಳೂರು ನಗರ
* ಬೆಂಗಳೂರು ಗ್ರಾಮಾಂತರ
* ಮೈಸೂರು

ಆರೆಂಜ್ ಝೋನ್ ನಲ್ಲಿರುವ ಜಿಲ್ಲೆಗಳು
* ಬೆಳಗಾವಿ
* ವಿಜಯಪುರ
* ಕಲಬುರ್ಗಿ
* ಬಾಗಲಕೋಟೆ
* ಮಂಡ್ಯ
* ಬಳ್ಳಾರಿ
* ಧಾರವಾಡ
* ದಕ್ಷಿಣ ಕನ್ನಡ
* ಬೀದರ್
* ಚಿಕ್ಕಬಳ್ಳಾಪುರ
* ಗದಗ
* ಉತ್ತರ ಕನ್ನಡ
* ತುಮಕೂರು

ಗ್ರೀನ್ ಝೋನ್ ನಲ್ಲಿರುವ ಜಿಲ್ಲೆಗಳು
* ದಾವಣಗೆರೆ
* ಉಡುಪಿ
* ಚಾಮರಾಜನಗರ
* ಚಿಕ್ಕಮಗಳೂರು
* ಚಿತ್ರದುರ್ಗ
* ಹಾಸನ
* ಹಾವೇರಿ
* ಕೊಡಗು
* ಕೋಲಾರ
* ಕೊಪ್ಪಳ
* ರಾಯಚೂರು
* ಶಿವಮೊಗ್ಗ
* ರಾಮನಗರ
* ಯಾದಗಿರಿ

ಕರ್ನಾಟಕದಲ್ಲಿ ಕೊರೊನಾ ಅಂಕಿ-ಅಂಶ
ಕರ್ನಾಟಕದಲ್ಲಿ ಈವರೆಗೂ ಒಟ್ಟು 598 ಮಂದಿಗೆ ಕೊರೊನಾ ವೈರಸ್ ಸೋಂಕು ತಗುಲಿರುವುದು ದೃಢಪಟ್ಟಿದೆ. 25 ಜನ ಮೃತಪಟ್ಟಿದ್ದು, 255 ಮಂದಿ ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ.












Click it and Unblock the Notifications