• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕಾಂಗ್ರೆಸ್ ಗೆಲುವನ್ನು ದೇಶ ಎದುರು ನೋಡುತ್ತಿದೆ : ಪರಮೇಶ್ವರ

By ಅನುಷಾ ರವಿ
|

ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಹೊಸ ಮುಖ್ಯಮಂತ್ರಿಯ ಆಯ್ಕೆ ಹೇಗೆ? ಚುನಾವಣೆ ಬಗ್ಗೆ ಕಾಂಗ್ರೆಸ್ಸಿಗೆ ಆತ್ಮವಿಶ್ವಾಸ ಇರುವುದೇಕೆ? ಕಳೆದ ಬಾರಿ ಸೋತ ಕ್ಷೇತ್ರಗಳಲ್ಲಿ ಗೆಲುವಿಗಾಗಿ ಏನೆಲ್ಲ ತಂತ್ರಗಾರಿಕೆ ಮಾಡಲಾಗಲಿದೆ ಎಂಬುದರ ಬಗ್ಗೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಜಿ ಪರಮೇಶ್ವರ ಅವರು ಒನ್ಇಂಡಿಯಾ ಪ್ರತಿನಿಧಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ್ದಾರೆ.

2018ರ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಕರ್ನಾಟಕದಲ್ಲಿನ ಕಾಂಗ್ರೆಸ್ ಗೆಲುವು ದೇಶದಲ್ಲಿ ಕಾಂಗ್ರೆಸ್ಸಿಗೆ ದಿಕ್ಸೂಚಿಯಾಗಲಿದೆ ಎಂದಿದ್ದಾರೆ.

* ಚುನಾವಣೆ ಹೊಸ್ತಿಲಲ್ಲಿ ಕಾಂಗ್ರೆಸ್ಸಿನಿಂದ ಈ ಬಾರಿ ಮುಖ್ಯಮಂತ್ರಿ ಅಭ್ಯರ್ಥಿ ಯಾರು ಎಂಬುದನ್ನು ನಿರೀಕ್ಷಿಸಬಹುದೇ? ಪಕ್ಷ ಈ ಬಗ್ಗೆ ಏನಾದರೂ ಘೋಷಿಸುವ ಸಾಧ್ಯತೆಯಿದೆಯೆ?

ಪರಮೇಶ್ವರ ಉತ್ತರ: ಕಾಂಗ್ರೆಸ್ಸಿನಲ್ಲಿ ಯಾವಾಗಲೂ ಎಲೆಕ್ಷನ್ ಮೂಲಕವೇ ಮುಂದಿನ ಸಿಎಂ ಆಯ್ಕೆ ಮಾಡಲಾಗುತ್ತದೆ. ಸೆಲೆಕ್ಷನ್ ಮೂಲಕ ಅಲ್ಲ. ಸಿಎಂ ಸಿದ್ದರಾಮಯ್ಯ ಅವರನ್ನು ಕೂಡಾ ಇದೇ ರೀತಿ ಆಯ್ಕೆ ಮಾಡಲಾಯಿತು. ಇದೇ ಪ್ರಕ್ರಿಯೆ ಈಗಲೂ ಮುಂದುವರೆಯಲಿದೆ. ಎಲ್ಲರ ಒಮ್ಮತದ ಆಯ್ಕೆಯಂತೆ ಸಿದ್ದರಾಮಯ್ಯ ಅವರೇ ಮುಂದಿನ ಸಿಎಂ ಆಗಬೇಕು ಎಂದಾದರೆ ಅದರಂತೆ ಆಗುತ್ತದೆ. ಇನ್ನಷ್ಟು ಮುಂದೆ...

ಕಾಂಗ್ರೆಸ್ ಗೆಲುವಿನ ಬಗ್ಗೆ ವಿಶ್ವಾಸ ಹೇಗೆ?

ಕಾಂಗ್ರೆಸ್ ಗೆಲುವಿನ ಬಗ್ಗೆ ವಿಶ್ವಾಸ ಹೇಗೆ?

ನಾವು ಅತ್ಯಂತ ಆತ್ಮವಿಶ್ವಾಸದಿಂದ ಇದ್ದೇವೆ. ನಾವು ನೀಡಿದ್ದ ಭರವಸೆಗಳನ್ನು ಬಹುತೇಕ ಈಡೇರಿಸಿದ್ದೇವೆ. ಘೋಷಣೆಗಳು, ಆಶ್ವಾಸನೆಗಳನ್ನಷ್ಟೇ ಅಲ್ಲ ಮಾಡಿಲ್ಲ, ಎಲ್ಲವನ್ನು ಅನುಷ್ಠಾನಗೊಳಿಸಿದ್ದೇವೆ. ಸರ್ಕಾರ ಸಕ್ರಿಯವಾಗಿದೆ ಎಂಬುದು ಜನರಿಗೆ ಮನವರಿಕೆಯಾಗಿದೆ. ಅನ್ನ, ಹಾಲು, ಸಾಲ ಮನ್ನಾ, ಕೃಷಿ ಯೋಜನೆಗಳು ಜನರನ್ನು ತಲುಪುವಲ್ಲಿ ಯಶಸ್ವಿಯಾಗಿದೆ.

ಈ ಬಾರಿ ಚುನಾವಣೆಗೆ ಹೇಗೆ ತಯಾರಿ ನಡೆಸಿದ್ದೀರಿ?

ಈ ಬಾರಿ ಚುನಾವಣೆಗೆ ಹೇಗೆ ತಯಾರಿ ನಡೆಸಿದ್ದೀರಿ?

ಪಕ್ಷದಲ್ಲಿ ಸಾಂಸ್ಥಿಕ ಬದಲಾವಣೆಯಾಗಿದ್ದು, ಬೂತ್ ಮಟ್ಟದಲ್ಲಿ ಸಮಿತಿಯನ್ನು ರಚಿಸಲಾಗಿದ್ದು, ಪ್ರತಿ ಸದಸ್ಯನಿಗೂ 15-20 ಮನೆಗಳ ಹೊಣೆ ನೀಡಲಾಗಿದೆ. ಕಾಂಗ್ರೆಸ್ ಪಕ್ಷದ ಬಗ್ಗೆ ಸಾರ್ವಜನಿಕರಿಗೆ ತಿಳಿಸಿ, ಸಂಘಟನೆ ಮಾಡುವುದು ಇವರ ಕೆಲಸ. ನನ್ನ ಕ್ಷೇತ್ರ ನನ್ನ ಜವಾಬ್ದಾರಿ ಎಂಬ ಯೋಜನೆ ಯಶಸ್ವಿಯಾಗಿದೆ. ಕಾಂಗ್ರೆಸ್ ತನ್ನ ಸಿದ್ದಸೂತ್ರಗಳನ್ನು ಬದಿಗೊತ್ತಿ ಜನರ ಬಳಿಗೆ ತೆರಳಿ ಕಾರ್ಯಾಚರಣೆಗೆ ಇಳಿದಿದೆ.

ಕರ್ನಾಟಕದಲ್ಲಿನ ಬದಲಾವಣೆ ರಾಷ್ಟ್ರಮಟ್ಟದಲ್ಲಿ ಸದ್ದಾಗಬಹುದೇ?

ಕರ್ನಾಟಕದಲ್ಲಿನ ಬದಲಾವಣೆ ರಾಷ್ಟ್ರಮಟ್ಟದಲ್ಲಿ ಸದ್ದಾಗಬಹುದೇ?

ಸರ್ವರನ್ನು ಸಮಾನದೃಷ್ಟಿಯಿಂದ ಕಾಣುವ ಸರ್ಕಾರದ ಅಗತ್ಯವಿದೆ. ಕಾಂಗ್ರೆಸ್ ಪಕ್ಷದಿಂದ ಜನತೆಯ ಆಶೋತ್ತರ ಈಡೇರಿಸುವ ಸಾಧ್ಯತೆಯಿದೆ. ಕರ್ನಾಟಕದ ಸರ್ಕಾರ ದೇಶಕ್ಕೆ ಮಾದರಿಯಾಗಿದ್ದು, ಮುಂದಿನ ಚುನಾವಣಾ ಫಲಿತಾಂಶ, ರಾಷ್ಟ್ರ ರಾಜಕಾರಣಕ್ಕೆ ದಿಕ್ಸೂಚಿಯಾಗಲಿದೆ. ಕರ್ನಾಟಕದ ಗೆಲುವನ್ನು ಇಡೀ ದೇಶವೇ ಎದುರು ನೋಡುತ್ತಿದೆ.

ಸೋತ ಕ್ಷೇತ್ರಗಳಲ್ಲಿ ಏನು ತಂತ್ರಗಾರಿಕೆ

ಸೋತ ಕ್ಷೇತ್ರಗಳಲ್ಲಿ ಏನು ತಂತ್ರಗಾರಿಕೆ

ನಾವು 16 ಸೀಟುಗಳನ್ನು 5,000 ಮತಗಳ ಅಂತರದಲ್ಲಿ ಕಳೆದುಕೊಂಡೆವು. 10, 000 ಮತಗಳ ಅಂತರದಲ್ಲಿ 26 ಸೀಟುಗಳನ್ನು ಕಳೆದುಕೊಂಡೆವು. ಕಳೆದ ಬಾರಿ ಗೆಲ್ಲಬಹುದಾದ ಆದರೆ, ಸೋಲು ಅನುಭವಿಸಿದ 20 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲು ಬೇಕಾದ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಸ್ಥಳೀಯ ಮುಖಂಡರೊಡನೆ ಕಾರ್ಯಕರ್ತರು ನಿರಂತರವಾಗಿ ಸಂಪರ್ಕದಲ್ಲಿದ್ದು, ಕ್ಷೇತ್ರದ ಜನತೆಗೆ ಕಾಂಗ್ರೆಸ್ ಹೇಗೆ ಅನಿವಾರ್ಯ ಎಂಬುದನ್ನು ಮನವರಿಕೆ ಮಾಡಿಕೊಡಲಾಗುತ್ತಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
In an interview to OneIndia News, the KPCC President highlighted why he believes that a win in Karnataka meant a perceptional change for the Congress across the country and how the next Chief Minister of Karnataka will be chosen if his party comes back to power.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more