Siddaramaiah CM: ಕರ್ನಾಟಕದ 24ನೇ ಸಿಎಂ ಆಗಲು ಮತ್ತೆ ಕೈಹಿಡಿದ ಅದೃಷ್ಟದ 'ವರುಣಾ' ಕ್ಷೇತ್ರ
ಬೆಂಗಳೂರು, ಮೇ 18: ಕರ್ನಾಟಕದಲ್ಲಿ ಪೂರ್ಣ ಬಹುಮತ ಪಡೆದ ಕಾಂಗ್ರೆಸ್‌ನಲ್ಲಿ ಗಜಪ್ರಹಸನ ಬಳಿಕ ಕರ್ನಾಟಕದ ಮುಂದಿನ ಮುಖ್ಯಮಂತ್ರಿ ಯಾರೆಂಬುದು ಅಧಿಕೃತವಾಗಿ ಘೋಷಣೆ ಆಗಿದೆ. ರಾಜ್ಯದ 24ನೇ ಸಿಎಂ ಆಗಿ ಸಿದ್ದರಾಮಯ್ಯ ಅವರು ಎರಡನೇ ಬಾರಿಗೆ ಆಯ್ಕೆಯಾಗಿದ್ದಾರೆ.
ವಿಶೇಷವೆಂದರೆ ಸಿದ್ದರಾಮಯ್ಯ ದಶಕದ ಬಳಿಕ ಮತ್ತೆ ವರುಣಾದಿಂದ ಸ್ಪರ್ಧಿಸಿದ ಮೇಲೆಯೇ ಅವರಿಗೆ ಮತ್ತೆ ರಾಜ್ಯದ ಮುಖ್ಯಮಂತ್ರಿ ಪಟ್ಟ ಒಲಿದಿದೆ. 2013ರಲ್ಲಿ ಅವರು ಮೈಸೂರು ಜಿಲ್ಲೆಯ ವರುಣಾ ಕ್ಷೇತ್ರದಿಂದ ಸ್ಪರ್ಧಿಸಿ ಜಯಭೇರಿ ಬಾರಿಸಿದ್ದರು. ಅಲ್ಲಿಂದ 2018ರವರೆಗೆ ಕರ್ನಾಟಕದಲ್ಲಿ ಪೂರ್ಣಪ್ರಮಾಣದ ಆಡಳಿತ ನೀಡಿದ್ದರು. ಈ ಮೂಲಕ ಪೂರ್ಣಾವಧಿಕಗೆ ಆಡಳಿತ ನೀಡಿದ ಕೆಲವೇ ಕೆಲವು ರಾಜಕಾರಣಿಗಳಲ್ಲಿ ಇವರು ಒಬ್ಬರಾದರು.

ಈ ಬಾರಿಯ 2023ರ ವಿಧಾನಸಭಾ ಚುನಾವಣೆಯಲ್ಲಿ ಮೊದಲು ಕೋಲಾರದಿಂದ ಸ್ಪರ್ಧೆ ಎಂದಿದ್ದ ಸಿದ್ದರಾಮಯ್ಯನವರು ಹೈಕಮಾಂಡ್ ಸಲಹೆ-ಸೂಚನೆಗಳ ಮೇರೆಗೆ ವರುಣಾ ಕ್ಷೇತ್ರದಿಂದಲೇ ಸ್ಪರ್ಧಿಸಲು ಒಪ್ಪಿದರು. ಎಲ್ಲವು ಅಂದುಕೊಂಡಂತೆ ಆಗಿದ್ದಲ್ಲದೇ ಇಂದು ಅವರು ಮುಖ್ಯಮಂತ್ರಿಯಾಗಿ ಎರಡನೇ ಬಾರಿಗೆ ರಾಜ್ಯದ ಅಧಿಕಾರ ಹಿಡಿಯುತ್ತಿದ್ದಾರೆ. ವರುಣಾ ಅವರ ಪಾಲಿಗೆ ಅದೃಷ್ಟದ ಕ್ಷೇತ್ರ ಎಂದು ವಿಶ್ಲೇಷಿಸಲಾಗಿದೆ.
ದಶಕದ ಹಿಂದೆ ವರುಣಾದಲ್ಲಿ ಗೆದ್ದು ಸಿಎಂ ಆಗಿದ್ದ ಸಿದ್ದು
2023ರ ಚುನಾವಣೆಯಲ್ಲಿ ವರುಣಾದಲ್ಲಿ ಸಿದ್ದರಾಮಯ್ಯ ಬರೊಬ್ಬರಿ 1,19,816 ಮತ ಪಡೆದು ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣ ವಿರುದ್ಧ ಗೆದ್ದು ಬೀಗಿದ್ದಾರೆ. ಸೋಮಣ್ಣನವರು 73, 653 ಮತ ಪಡೆದು ಸೋಲುಂಡಿದ್ದಾರೆ. ಇದೇ ಸಿದ್ದರಾಮಯ್ಯನವರು 2013ರಲ್ಲಿ ಇದೇ ವರುಣಾದಲ್ಲಿ ಒಟ್ಟು 84,385 ಮತ ಪಡಿದ್ದರು. ಅದಾದ ಬಳಿಕ ಅವರು ಮೊದಲ ಬಾರಿಗೆ ಕಾಂಗ್ರೆಸ್‌ನಿಂದ ಸಿಎಂ ಆದರು.
2018ರ ವಿಧಾನಸಭಾ ಚುನಾವಣೆಯಲ್ಲಿ ವರುಣಾ ಕ್ಷೇತ್ರ ಬಿಟ್ಟಿದ್ದ ಸಿದ್ದರಾಮಯ್ಯನವರು ಬೇರೆ ಎರಡು ಪ್ರತ್ಯಕ ಕ್ಷೇತ್ರಗಳಿಂದ ಅಖಾಡಕ್ಕಿಳಿದಿದ್ದರು. ಎರಡು ಕ್ಷೇತ್ರಗಳ ಪೈಕಿ ಉತ್ತರ ಕರ್ನಾಟಕದ ಬಾದಾಮಿ ಕ್ಷೇತ್ರದಲ್ಲಿ 67599 ಮತಗಳಿಂದ ಗೆದ್ದರೆ, ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಕೇವಲ 85,283 ಮತಗಳನ್ನು ಪಡೆದು ಜೆಡಿಎಸ್‌ನ ಜಿ.ಟಿ.ದೇವೇಗೌಡ ವಿರುದ್ಧ ಸೋಲು ಕಂಡಿದ್ದರು.

ಸಿದ್ದರಾಮಯ್ಯ ಈ ಬಾರಯಿ ಪೂರ್ಣಾವಧಿ ಅಧಿಕಾರ ನೀಡುವರೇ?
1972ರಲ್ಲಿ ಮೊದಲ ಬಾರಿಗೆ ಮುಖ್ಯಮಂತ್ರಿಯಾಗಿದ್ದ ಡಿ. ದೇವರಾಜ ಅರಸು ಅವರು ಪೂರ್ಣ ಅವಧಿಗೆ ಆಡಳಿತ ನೀಡಿದ್ದರು. ಬಳಿಕ ಅವರು 2078 ಮತ್ತೊಮ್ಮೆ ಮುಖ್ಯಮಂತ್ರಿ ಆದರೂ ಸಹಿತ ಮೊದಲಿನಂತೆ ಐದು ವರ್ಷದ ಪೂರ್ಣ ಅಧಿಕಾರವಧಿವರೆಗೆ ಮುಖ್ಯಮಂತ್ರಿಯಾಗಿ ಉಳಿಯಲ್ಲಿ.
ಅದೇ ರೀತಿ 2013ರಲ್ಲಿ ಮುಖ್ಯಮಂತ್ರಿಯಾಗಿ ಪೂರ್ಣ ಅವಧಿಗೆ ಅಧಿಕಾರ ನೀಡಿ ಸೈ ಎನ್ನಿಸಿಕೊಂಡಿದ್ದ ಕಾಂಗ್ರೆಸ್‌ನ ಸಿದ್ದರಾಮಯ್ಯ ಅವರು ದಶಕದ ನಂತರ ಮತ್ತೆ 2023ರಲ್ಲಿ ಸಿಎಂ ಪಟ್ಟಕ್ಕೆ ಏರುತ್ತಿದ್ದಾರೆ. ಆದರೆ ಇವರು ಮೊದಲಿನಂತೆಯೇ ಪೂರ್ಣ ಅವಧಿಗೆ ನೀಡಲಿದ್ದಾರೆಯೇ? ಎಂಬ ಪ್ರಶ್ನೆಗೆ ಕಾದು ನೋಡಬೇಕು ಎಂಬುದೊಂದೆ ಸದ್ಯದ ಉತ್ತರ.












Click it and Unblock the Notifications