ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಡಿಕೆ, ತೆಂಗು ಬೆಂಬಲ ಬೆಲೆಗೆ ಕಾಂಗ್ರೆಸ್ ಸಂಸದರ ಆಗ್ರಹ

By Madhusoodhan
|
Google Oneindia Kannada News

ನವದೆಹಲಿ. ಜುಲೈ, 13: ತೆಂಗು ಮತ್ತು ಅಡಿಕೆಗೆ ಕೇಂದ್ರ ಸರ್ಕಾರ ಬೆಂಬಲಬೆಲೆ ಘೋಷಿಸಬೇಕು ಎಂದು ಆಗ್ರಹಿಸಿ ರಾಜ್ಯವನ್ನು ಪ್ರತಿನಿಧಿಸುವ ಕಾಂಗ್ರೆಸ್‌ ಸಂಸದರು ಸಂಸತ್‌ ಭವನದ ಎದುರು ಶುಕ್ರವಾರ ಭಿತ್ತಿ ಪತ್ರಗಳನ್ನು ಹಿಡಿದು ಪ್ರತಿಭಟನೆ ನಡೆಸಿದರು.

ಶ್ರೀಲಂಕಾ, ಮಲೇಷಿಯಾ,ಬಾಂಗ್ಲಾದೇಶ ಮತ್ತಿತರ ದೇಶಗಳಿಂದ ಕಳಪೆ ಗುಣಮಟ್ಟದ, ಕಡಿಮೆ ಬೆಲೆಯ ಅಡಿಕೆಯನ್ನು ಆಮದು ಮಾಡಿಕೊಳ್ಳುತ್ತಿರುವುದು ದೇಶೀ ಮಾರುಕಟ್ಟೆಯಲ್ಲಿ ಅಡಿಕೆಯ ಬೆಲೆ ಕುಸಿತಕ್ಕೆ ಕಾರಣವಾಗಿದೆ. ಅವೈಜ್ಞಾನಿಕ ಆಮದು ನೀತಿಯ ಮೇಲೆ ಕೇಂದ್ರ ಸರ್ಕಾರ ನಿರ್ಬಂಧ ಹೇರಬೇಕು ಎಂದು ಒತ್ತಾಯ ಮಾಡಿದರು.[ಅಡಿಕೆ ಧಾರಣೆ ಕುಸಿತಕ್ಕೆ ನಿಜ ಕಾರಣವೇನು?]

congress

ಪ್ರತಿ ಕ್ವಿಂಟಲ್‌ ಅಡಿಕೆಗೆ ಕನಿಷ್ಠ 40,000 ರು. ಪ್ರತಿ ಕ್ವಿಂಟಲ್‌ ತೆಂಗಿಗೆ 3,000 ರು. ಬೆಂಬಲಬೆಲೆ ನೀಡಬೇಕು ಎಂದು ಒತ್ತಾಯ ಮಾಡಿದರು. ಕಾಂಗ್ರೆಸ್‌ನ ಕೇರಳದ ಸಂಸದರೂ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.[ಆಮದು ನಿಷೇಧ ಅಡಿಕೆ ಬೆಳೆಗಾರರ ಹಿತ ಕಾಯುವುದೆ?]

ಬೆಂಬಲ ಬೆಲೆಗೆ ಒಪ್ಪಿಗೆ
ಕೇಂದ್ರ ಸರ್ಕಾರ ಬೆಂಬಲ ಬೆಲೆಗೆ ನೀಡಿಕೆಗೆ ಸಮ್ಮತಿ ನೀಡಿದೆ. ಪ್ರತಿ ಕ್ವಿಂಟಾಲ್ ಕೆಂಪು ಅಡಿಕೆಗೆ 40 ಸಾವಿರ ರೂ., ಬಿಳಿ ಅಡಿಕೆಗೆ(ಚಾಲಿ) 30 ಸಾವಿರ ರೂ. ಬೆಂಬಲ ಬೆಲೆ ನೀಡಲು ಕೇಂದ್ರ ವಾಣಿಜ್ಯ ಸಚಿವಾಲಯ ಒಪ್ಪಿಗೆ ನೀಡಿದೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಸಂಸದ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ. ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕೆ ರಾಜ್ಯ ಸಚಿವೆ ನಿರ್ಮಲಾ ಸೀತಾರಾಮನ್ ಒಪ್ಪಿಗೆ ನೀಡಿದ್ದು ಸದ್ಯದಲ್ಲೇ ಸ್ಪಷ್ಟ ನಿರ್ಧಾರ ತಿಳಿಸಲಾಗುವುದು ಎಂದಿದ್ದಾರೆ.

English summary
Congress MPs stage a dharna in front of the Mahatma Gandhi statue at Parliament house demanding minimum support price for arecanut and copra, during the monsoon session in New Delhi on Friday. August 12., 2016. Congress party MPs M Veerappa Moily (Chikkaballapur), B N Chandrappa (Chitradurga), K Rahaman Khan (Rajya Sabha), Prof Rajiv Gowda (Rajya Sabha), B K Hari Prasad (Rajya Sabha), S P Muddahanume Gowda (Tumkur), R Dhruvanarayana (Chamarajanagar), D K Suresh (Bangalore Rural), and Prakash Hukeri (Chikkodi) participated in the protest.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X