ಕಾಂಗ್ರೆಸ್ ಶಾಸಕರ ನಡುವೆ ಗಲಾಟೆ : ಯಾರು, ಏನು ಹೇಳಿದರು?

ಬೆಂಗಳೂರು, ಜನವರಿ 20 : ಕರ್ನಾಟಕದ ಕಾಂಗ್ರೆಸ್ ಶಾಸಕರು ಬೆಂಗಳೂರು ಹೊರವಲಯದ ಈಗಲ್ಟನ್ ರೆಸಾರ್ಟ್‌ನಲ್ಲಿದ್ದಾರೆ. ಇಬ್ಬರು ಶಾಸಕರು ರೆಸಾರ್ಟ್‌ನಲ್ಲಿ ಹೊಡೆದಾಡಿಕೊಂಡಿದ್ದಾರೆ ಎಂಬ ಸುದ್ದಿ ಭಾನುವಾರ ವೈರಲ್ ಆಗಿದೆ.

ಬಳ್ಳಾರಿ ಜಿಲ್ಲೆಯ ವಿಜಯನಗರ ಕ್ಷೇತ್ರದ ಶಾಸಕ ಆನಂದ್ ಸಿಂಗ್, ಕಂಪ್ಲಿ ಕ್ಷೇತ್ರದ ಶಾಸಕ ಜೆ.ಎನ್.ಗಣೇಶ್ ಅವರು ಹೊಡೆದಾಡಿಕೊಂಡಿದ್ದಾರೆ ಎಂಬುದು ಸುದ್ದಿ. ಆನಂದ್ ಸಿಂಗ್ ಅವರು ಘಟನೆಯಲ್ಲಿ ಗಾಯಗೊಂಡಿದ್ದು, ಶೇಷಾದ್ರಿಪುರಂನ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಕಾಂಗ್ರೆಸ್ ನಾಯಕರು ಗಲಾಟೆ ನಡೆದಿದೆ ಎಂಬ ವಿಚಾರವನ್ನು ತಳ್ಳಿಹಾಕಿದ್ದಾರೆ. ಆದರೆ, ಪ್ರತಿಪಕ್ಷ ಬಿಜೆಪಿ ಘಟನೆ ಬಗ್ಗೆ ಸರಣಿ ಟ್ವೀಟ್ ಮಾಡಿದೆ. ಆನಂದ್ ಸಿಂಗ್ ಅವರಿಗೆ ಏನಾಗಿದೆ? ಎಂದು ವೈದ್ಯರು ಇದುವರೆಗೂ ಮಾಹಿತಿ ನೀಡಿಲ್ಲ.

ಕಾಂಗ್ರೆಸ್ ಶಾಸಕರು ಇನ್ನೂ ಈಗಲ್ಟನ್ ರೆಸಾರ್ಟ್‌ನಲ್ಲಿಯೇ ಇದ್ದು, ಸಂಜೆ 4ಗಂಟೆಗೆ ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಅವರ ಜೊತೆ ಸಭೆ ನಿಗದಿಯಾಗಿದೆ. ಬಳಿಕ ರೆಸಾರ್ಟ್‌ನಿಂದ ಎಲ್ಲರೂ ವಾಪಸ್ ಆಗುವ ಸಾಧ್ಯತೆ ಇದೆ. ಕಾಂಗ್ರೆಸ್ ಶಾಸಕರ ಗಲಾಟೆ ಬಗ್ಗೆ ಯಾರು, ಏನು ಹೇಳಿದರು?.......

ಡಿ.ಕೆ.ಸುರೇಶ್ ಹೇಳಿದ್ದೇನು?

ಡಿ.ಕೆ.ಸುರೇಶ್ ಹೇಳಿದ್ದೇನು?

ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಸಂಸದ ಡಿ.ಕೆ.ಸುರೇಶ್ ಅವರು ಶೇಷಾದ್ರಿಪುರಂನ ಆಸ್ಪತ್ರೆಗೆ ಭೇಟಿ ನೀಡಿ ಆನಂದ್ ಸಿಂಗ್ ಆರೋಗ್ಯ ವಿಚಾರಿಸಿದರು. ಬಳಿಕ ಮಾತನಾಡಿದ ಅವರು, 'ಎದೆ ನೋವು ಎಂದು ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಈಸಿಜಿ ಸೇರಿದಂತೆ ವಿವಿಧ ಪರೀಕ್ಷೆಗಳನ್ನು ಮಾಡಿದ್ದಾರೆ. ಅವರು ಈಗ ನಿದ್ದೆ ಮಾಡುತ್ತಿದ್ದು, ಗಲಾಟೆ ನಡೆದ ವಿಚಾರವಾಗಿ ಯಾವುದೇ ಹೇಳಿಕೆ ನೀಡಿಲ್ಲ. ಸಂಜೆಯ ವೇಳೆಗೆ ಅವರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುವ ಸಾಧ್ಯತೆ ಇದೆ' ಎಂದರು.

ವೈದ್ಯರಿಂದ ಹೇಳಿಕೆ ಕೊಡಿಸಿ

ವೈದ್ಯರಿಂದ ಹೇಳಿಕೆ ಕೊಡಿಸಿ

'ಶಾಸಕರ ನಡುವೆ ಹೊಡೆದಾಟ ನಡೆದಿರುವುದು ನಾಚಿಗೇಡು. ಎದೆಗೆ ಬಾಟಲ್ ಚುಚ್ಚಿದ್ದರಿಂದ ಎದೆ ನೋವು ಬಂದಿದೆ. ಆಸ್ಪತ್ರೆ ವೈದ್ಯರಿಂದ ಕಾಂಗ್ರೆಸ್ ನಾಯಕರು ಹೇಳಿಕೆ ಕೊಡಿಸಲಿ. ತಾವು ಬಂದು ಹೇಳಿಕೆ ನೀಡಲು ನಾಯಕರು ಯಾರು?' ಎಂದು ಪ್ರಶ್ನಿಸಿದರು.

ಯಾವ ಗಲಾಟೆ ನಡೆದಿಲ್ಲ

ಯಾವ ಗಲಾಟೆ ನಡೆದಿಲ್ಲ

ಜಲಸಂಪನ್ಮೂಲ ಸಚಿವ ಡಿ.ಕೆ.ಸುರೇಶ್ ಅವರು ಈ ಕುರಿತು ಹೇಳಿಕೆ ನೀಡಿದ್ದು, 'ಶಾಸಕರ ನಡುವೆ ಯಾವುದೇ ಗಲಾಟೆ ನಡೆದಿಲ್ಲ. ಬಾಟಲಿಯೂ ಇಲ್ಲ, ಹೊಡೆದಾಟವೂ ಇಲ್ಲ. ಸ್ವಲ್ಪ ಹೊತ್ತಿನಲ್ಲಿಯೇ ಅವರೇ ಬಂದು ಮಾತನಾಡುತ್ತಾರೆ' ಎಂದು ಹೇಳಿದರು.

ಶಾಸಕರ ಜೀವಕ್ಕೂ ಭದ್ರತೆ ಇಲ್ಲ

ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಆಡಳಿತದಲ್ಲಿ ಶಾಸಕರ ಜೀವಕ್ಕೂ ಬೆಲೆ ಇಲ್ಲ ಎಂದು ಕರ್ನಾಟಕ ಬಿಜೆಪಿ ಟ್ವೀಟ್ ಮಾಡಿದೆ.

ಕೆಪಿಸಿಸಿ ಅಧ್ಯಕ್ಷರು ಹೊಣೆ

ಕೆಪಿಸಿಸಿ ಅಧ್ಯಕ್ಷರು ಶಾಸಕರ ನಡುವಿನ ಗಲಾಟೆ ತಪ್ಪಿಸಲು ವಿಫಲರಾಗಿದ್ದಾರೆ ಎಂದು ಬಿಜೆಪಿ ಟ್ವೀಟ್ ಮಾಡಿದೆ.

ಕಾಂಗ್ರೆಸ್‌ನಲ್ಲಿ ಎಲ್ಲವೂ ಸರಿ ಇಲ್ಲ

ಕಾಂಗ್ರೆಸ್ ಪಕ್ಷದಲ್ಲಿ ಎಲ್ಲವೂ ಸರಿಯಲ್ಲ ಎಂದು ಸಾಬೀತಾಗಿದೆ ಎಂದು ಬಿಜೆಪಿ ಹೇಳಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+