ಕೊಡಗಿನಲ್ಲಿ ಕೇಸರಿ ಕೋಟೆ ಭೇದಿಸಿದ ಕಾಂಗ್ರೆಸ್! ಈ ಸಲ ಟಿಪ್ಪು ವಿಚಾರ ಇಲ್ಲಿ ನಗಣ್ಯ!

ಕೊಡಗು,ಮೇ14: ಕರ್ನಾಟಕ ವಿಧಾನಸಭಾ ಚುನಾವಣಾ ಫಲಿತಾಂಶ ಶನಿವಾರ ಹೊರಬಿದ್ದಿದೆ. ಬಿಜೆಪಿಯ ಭದ್ರ ಕೋಟೆಯಾಗಿದ್ದ ಕೊಡಗಿನ ಎರಡು ಕ್ಷೇತ್ರಗಳನ್ನ ಕಾಂಗ್ರೆಸ್‌ ವಶಪಡಿಸಿಕೊಂಡಿದ್ದು, ಪ್ರತಿ ಬಾರಿಯೂ ಟಿಪ್ಟು ಸುಲ್ತಾನ್‌ ಹಾಗೂ ಹಿಂದುತ್ವದ ವಿಚಾರ ಹೆಚ್ಚು ಚರ್ಚೆಯಾಗುತ್ತಿತ್ತು. ಆದರೆ, ಈ ಬಾರೀ ಇಲ್ಲಿ ಚುನಾವಣಾ ಅಂಶವಾಗಿ ಕಂಡು ಬಂದಿಲ್ಲ.

ಈ ಬಾರಿ ಆಡಳಿತ ವಿರೋಧಿ ಅಲೆ, ಹೊಸ ಮುಖಗಳಿಗೆ ಮನ್ನಣೆ ಹಾಗೂ ಅಭಿವೃದ್ದಿ ಭರವಸೆಯೇ ಪ್ರಮುಖ ವಿಷಯವಾಗಿರುವುದರಿಂದ ಆಡಳಿತರೂಢ ಬಿಜೆಪಿ ತನ್ನ ಎರಡು ಕ್ಷೇತ್ರವನ್ನ ಕಳೆದುಕೊಂಡಿದ್ದು, ಕೇಸರಿ ಕೋಟೆಯನ್ನ ಕಾಂಗ್ರೆಸ್‌ ಗೆ ಬಿಟ್ಟುಕೊಟ್ಟಿದೆ.

Congress Massive Entry In BJPs Stronghold Kodagu District: Won 2 Major Seats

ಇನ್ನೂ ಪ್ರತಿ ಬಾರಿಯೂ ಕೊಡಗು ಭಾಗದಲ್ಲಿ ಟಿಪ್ಪು ಸುಲ್ತಾನ್‌ ವಿಚಾರವನ್ನೇ ಪ್ರಮುಖ ವಿಷಯವಾಗಿ ಬಿಜೆಪಿ ನಾಯಕರು ಬಳಸಿಕೊಳ್ಳುತ್ತಿದ್ದರೂ ಆದರೆ, ಈ ಬಾರಿ ಚುನಾವಣಾ ಹೊತ್ತಲಿ ಬಿಜೆಪಿ ಹೆಚ್ಚಾಗಿ ಮೋದಿ ಅಲೆ ಹಾಗೂ ಬಜರಂಗದಳ ವಿಚಾರವನ್ನ ಚುನಾವಣಾ ಅಸ್ತ್ರವನ್ನಾಗಿ ಮಾಡಿಕೊಟ್ಟಿತ್ತು. ಅದು ಅಲ್ಲದೇ ಈ ಬಾರೀ ಕಾಂಗ್ರೆಸ್‌ ಹೊಸ ಮುಖಗಳಿಗೆ ಅವಕಾಶ ಮಾಅಡಿಕೊಟ್ಟಿದ್ದು, ಬಿಜೆಪಿ ಸರ್ಕಾರದ ಅವಧಿಯಲ್ಲಿ ಉತ್ತರ ಕರ್ನಾಟಕ ಭಾಗವೂ ಸೇರಿದಂತೆ ಅತಿ ಹೆಚ್ಚಿನ ನೆರೆ ಬಂದಂತಹ ಸಂದರ್ಭದಲ್ಲಿಯೂ ಸೂಕ್ತ ರೀತಿಯ ಪರಿಹಾರ ನೀಡದೇ ಇರುವುದು ಸಹ ಬಿಜೆಪಿಯ ಸೋಲಿಗೆ ಕಾರಣವಾಗಿದೆ.

ಇನ್ನೂ ಸಿದ್ದರಾಮಯ್ಯ ಅವರು ಈ ಬಾರೀ ರಾಜ್ಯಾದ್ಯಂತ ಪ್ರವಾಸವನ್ನ ಕೈಗೊಂಡಿದ್ದಾರೆ. ಆದರೆ, ಕೊಡಗಿನಲ್ಲಿ ಯಾವುದೇ ಪ್ರಚಾರವನ್ನ ಸಿದ್ದರಾಮಯ್ಯ ಅವರು ನಡೆಸದೇ ಇರುವುದು ಸಹ ಕಾಂಗ್ರೆಸ್‌ ಅಭ್ಯರ್ಥಿಗಳಿಗೆ ಸಹಾಯಕವಾಗಿದೆ. ಏಕೆಂದರೆ ಸಿದ್ದರಾಮಯ್ಯ ಅವರು ಟಿಪ್ಪು ಜಯಂತಿಯನ್ನ ಜಾರಿಗೊಳಿಸಿದ್ದು ಸಹ ಕೊಡಗಿನ ಭಾಗದ ಜನರ ಆಕ್ರೋಶಕ್ಕೆ ಕಾರಣವಾಗಿತ್ತು. ಹೀಗಾಗಿ ಸಿದ್ದರಾಮಯ್ಯ ಅವರು ಒಮ್ಮೆಯೂ ಸಹ ಕೊಡುಗು ಭಾಗದಲ್ಲಿ ತಮ್ಮ ಅಭ್ಯರ್ಥಿಗಳ ಪರವಾಗಿ ಪ್ರಚಾರವನ್ನ ನಡೆಸಿಲ್ಲ. ಇತ್ತ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಮಾತ್ರ ಒಮ್ಮೆ ಕೊಡುಗು ಭಾಗದಲ್ಲಿ ಪ್ರಚಾರವನ್ನ ನಡೆಸಿದ್ದು, ಬಿಜೆಪಿ ಶಾಸಕರು ಕ್ಷೇತ್ರದಲ್ಲಿ ಇದ್ದಂತಹ ಆಡಳಿತ ವಿರೋಧಿ ಅಲೆ ಹಾಗೂ ಅಭಿವೃದ್ದಿ ಕಾರಣದ ಕ್ಷೇತ್ರದಿಂದ ಜನ ಬೇಸತ್ತು, ಹೊಸಬರಿಗೆ ಅವಕಾಶನ್ನ ಮಾಡಿಕೊಟ್ಟಿದ್ದಾರೆ.

Congress Massive Entry In BJPs Stronghold Kodagu District: Won 2 Major Seats

ಇನ್ನು ಸಿದ್ದರಾಮಯ್ಯ ಈ ಹಿಂದೆ ಕೊಡಗಿನಲ್ಲಿ ಮಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡು ಕೊಡಗಿನ ವಿರೋಧಿ, ಕೊಡವರ ವಿರೋಧಿ ಸಿದ್ದರಾಮಯ್ಯ' ಎಂಬ ಘೋಷಣೆಗಳನ್ನು ಕೂಗುವ ಮೂಲಕ ಬಿಜೆಪಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸುತ್ತಿದ್ದು, ಸಿದ್ದರಾಮಯ್ಯ ಅವರ ಕಾರಿಗೆ ಮೊಟ್ಟೆ ಹೊಡೆದು ಕಿಡಿಕಾರಿದ್ದರು.

ಈ ಹಿಂದೆ ರಾಜ್ಯದಲ್ಲಿ ಟಿಪ್ಪುವಿನ ಜಯಂತಿ ಆಚರಣೆ ಜಾರಿಗೆ ತಂದು ಅಮಾಯಕರ ಕೊಲೆಗೆ ಕಾರಣರಾದ ಸಿದ್ಧರಾಮಯ್ಯ ಕೊಡಗಿಗೆ ಕಾಲಿಡುವುದರಿಂದ ಮತ್ತೆ ಕೊಡಗಿನ ಶಾಂತಿ ಭಂಗವಾಗಲಿದ್ದು, ಜೊತೆಗೆ ಕೊಡವರನ್ನು ಗೋಮಾಂಸ ಭಕ್ಷಕರೆಂದು ಬಿಂಬಿಸಿರುವ ಹಿಂದು ವಿರೋಧಿ ಸಿದ್ಧರಾಮಯ್ಯ ಕೊಡಗಿಗೆ ಕಾಲಿಡಲು ಅಯೋಗ್ಯಕರವಲ್ಲ ಎಂದು ಬಿಜೆಪಿ ನಾಯಕರು ಆರೋಪಿಸಿದ್ದು, ಈ ಬಾರಿಯೂ ಚುನಾವಣಾ ಪ್ರಚಾರಕ್ಕೆ ಹೋದರೆ ಇಂತಹ ಸಮಸ್ಯೆಗಳನ್ನ ಎದುರಿಸಬೇಕಾಗುತ್ತದೆ ಎಂದು ಕಾಂಗ್ರೆಸ್‌ ಜಾಣ ನಡೆಯನ್ನ ಅನುಸರಿಸಿರುವುದು ಕಾಂಗ್ರೆಸ್‌ ಗೆಲುವಿಗೆ ಕಾರಣವಾಗಿದೆ ಎಂದು ಹೇಳಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+