ರಾಮ ಮಂದಿರಕ್ಕೆ ಆಮಂತ್ರಣ ಕೊಡೋಕೆ ಇವರ್ಯಾರು, ರಾಮ ಫೋನ್ ಮಾಡಿ ಹೇಳಿದ್ನ: ಬಿ ಕೆ ಹರಿಪ್ರಸಾದ್‌

ಚಿಕ್ಕಮಗಳೂರು, ಜನವರಿ 21: ದೇವರ ಕಾರ್ಯಕ್ರಮಕ್ಕೆ ಆಮಂತ್ರಣ-ಗೀಮಂತ್ರಣ ಬೇಡ. ಆದರೆ, ಅಲ್ಲಿ ಜಗದ್ಗುರು ಇಲ್ಲ.ಇರೋದು ವಿಶ್ವಗುರು. ಅದು ಬಿಜೆಪಿಯ ವಿಶ್ವಗುರು ನಡೆಸುತ್ತಿರೋ ರಾಜಕೀಯ ಕಾರ್ಯಕ್ರಮ ಎಂದು ವಿಧಾನ ಪರಿಷತ್‌ ಸದಸ್ಯ ಬಿ ಕೆ ಹರಿ ಪ್ರಸಾದ್‌ ಹೇಳಿದರು.

ಈ ಕುರಿತು ಚಿಕ್ಕಮಗಳೂರಿನಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ದೇಶದಲ್ಲಿ ಮೊದಲು ಹೇಳಿಕೆ ನೀಡಿದ್ದೇ ನಾನು. ಚಿಕ್ಕವರಿದ್ದಾಗ ಶಂಕರಾಚಾರ್ಯರು ಹಿಂದು ಧರ್ಮದ ಮುಖ್ಯಸ್ಥರು ಎಂದು ಹೇಳಿ ಕೊಟ್ಡಿದ್ದಾರೆ. ಶಂಕರರು ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ಮಾಡಿದ್ರೆ ಧಾರ್ಮಿಕ ಕಾರ್ಯಕ್ರಮ. ಶಂಕರಾಚಾರ್ಯರು ಹೋಗಿಲ್ಲ. ವಿಶ್ವಗುರು ಅಲ್ಲಿಗೆ ಹೋಗಿರೋದು. ವಿಶ್ವಗುರು ಜಗದ್ಗುರು ಅಲ್ಲ ಎಂದು ಹೇಳಿದರು.

Congress Leader BK Hariprasad Taunts BJP Leaders

ವಿಶ್ವಗುರು ಏನೆಂದು ದೇಶಕ್ಕೆ ಗೊತ್ತು, ನಾಲ್ಕು ಶಂಕರಾಚಾರ್ಯರಲ್ಲಿ ಇಬ್ಬರು ವಿರುದ್ಧ, ಇಬ್ಬರು ತಟಸ್ಥ. ಶಂಕರಾಚಾರ್ಯರು ಮಾಡಿದ್ರೆ ನಮಗೆ ಆಮಂತ್ರಣ ಬೇಡವಾಗಿತ್ತು. ದೇಶದಲ್ಲಿ 33 ಕೋಟಿ ದೇವರಿದೆ, ಎಲ್ಲಾದ್ರು ಹೋಗ್ತೀವಿ. ದೇವರ ಬಳಿ ಹೋಗಬೇಕು, ಇಂತಾಹಾ ದೇವರ ಬಳಿಯೇ ಹೋಗಬೇಕಾ. ನಾವು ಭೂತ, ದೆವ್ವ ಪೂಜೆ ಮಾಡೋರು, ಭೂತದ ಬಳಿಯೇ ಹೋಗುತ್ತೇವೆ ಎಂದು ತಿಳಿಸಿದರು.

ನಾನು ಅಧಿಕಾರಕ್ಕಾಗಿ ಬಂದ ವಲಸೆ ಪ್ರಾಣಿ ಅಲ್ಲ. ಅಧಿಕಾರಕ್ಕಾಗಿ ಬೇರೆ-ಬೇರೆ ಪಕ್ಷಗಳನ್ನ ಬದಲಾವಣೆ ಮಾಡೋನಲ್ಲ, ಕೆಲವರು ಕಾಂಗ್ರೆಸ್ಸೇ ನಮ್ದು ಅಂತಿದ್ದಾರೆ, ಅದಕ್ಕೆ ನಮ್ಮ ಅಸಮಾಧಾನ, ಸಮಾಧಾನ-ಅಸಮಾಧಾನ ತಿಳಿದುಕೊಂಡವರಿಗೆ ಗೊತ್ತಾಗುತ್ತದೆ. ರಾಜ್ಯದ ಸಿಎಂ ಅವರು ಅವರ ಮೇಲೆ ಏಕೆ ಸಿಟ್ಟಾಗೋಣ ಎಂದು ಪರೋಕ್ಷವಾಗಿ ಸಿದ್ದರಾಮಯ್ಯ ಮಾತಿಗೆ ಕುಟುಕಿದರು.

ನಿಗಮ ಮಂಡಳಿ ನೇಮಕ ವಿಚಾರವಾಗಿ ಮಾಧ್ಯಮಗಳ ಪ್ರಶ್ನಗೆ ಉತ್ತರಿಸಿದ ಅವರು, ಅದನ್ನ ನೀವು ಸರ್ಕಾರದವರನ್ನೇ ಕೇಳಬೇಕು, ನಾನು ಸರ್ಕಾರದಲ್ಲಿ ಇಲ್ಲ. ನಾನು ಹೊರಗಡೆ ಇದ್ದೀನಿ, ಯಾವ ಮಾನದಂಡದಲ್ಲಿ ನಿಗಮ ಮಂಡಳಿ ಮಾಡ್ತಿದ್ದಾರೆ ಅವರನ್ನೇ ಕೇಳಬೇಕು. ಯಾವ ಮಾನದಂಡದಲ್ಲಿ ಮಾಡ್ತಿದ್ದಾರೆ ನನಗೇ ಗೊತ್ತಿಲ್ಲ. ಮಾಡ್ತಿರೋದು ಗೊತ್ತಿಲ್ಲ, ನಿಂತಿರೋದು ಗೊತ್ತಿಲ್ಲ, ಮುಂದಾಗೋದು ಗೊತ್ತಿಲ್ಲ. ನಾನೇಕೆ ಕಾಂಗ್ರೆಸ್ ಮೇಲೆ ಅಸಮಾಧಾನಾ ಆಗಲಿ, ನಾನು ವಿದ್ಯಾರ್ಥಿ ಆಗಿನಿಂದ ಕಾಂಗ್ರೆಸ್ಸಿನಲ್ಲಿ ಇದ್ದೀನಿ ಎಂದು ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+