ಕಾಂಗ್ರೆಸ್ ನಲ್ಲಿ ಈಗ ಮೂರು ಮುಖ್ಯಮಂತ್ರಿ ಗಳನ್ನ ಕೇಳುತ್ತಿದ್ದಾರೆ: ಕೆ ಎಸ್‌ ಈಶ್ವರಪ್ಪ ಹೇಳಿದ್ದೇನು?

ಶಿವಮೊಗ್ಗ, ಸೆಪ್ಟೆಂಬರ್‌ 22: ಕಾಂಗ್ರೆಸ್‌ ಪಕ್ಷದಲ್ಲಿ ಗುಂಪುಗಾರಿಕೆ ಮಿತಿ ಮೀರಿದೆ. ಕಾಂಗ್ರೆಸ್ ಪಕ್ಷದ ಆಡಳಿತ ಇಂದು ಹಾಸ್ಯಾಸ್ಪದವಾಗಿದೆ, ಕಾಂಗ್ರೆಸ್ ನಲ್ಲಿ ಈಗ ಮೂರು ಮುಖ್ಯಮಂತ್ರಿ ಗಳನ್ನ ಕೇಳುತ್ತಿದ್ದಾರೆ. ಇದರ ಜೊತೆ ಜಾತಿಗೊಂದು ಡಿಸಿಎಂ ಕೇಳುತ್ತಿದ್ದಾರೆ ಎಂದು ಮಾಜಿ ಸಚಿವ ಕೆ ಎಸ್‌ ಈಶ್ವರಪ್ಪ ಹೇಳಿದ್ದಾರೆ.

ಈ ಕುರಿತು ಶಿವಮೊಗ್ಗದಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಕಾಂಗ್ರೆಸ್ ನ ಶಾಸಕ ರಾಜಣ್ಣ ಮೂರು ಡಿ ಸಿ ಎಂ ಹೇಳಿಕೆ ಕುರಿತು ವ್ಯಂವ್ಯವಾಡಿದ್ದು, ಕಾಂಗ್ರೆಸ್ ನ ಗುಂಪುಗಾರಿಗೆ ಮಿತಿ ಮೀರಿದೆ.ವಿದ್ಯುತ್ ಇಲ್ಲ, ನೀರಿಲ್ಲ, ಸ್ವಲ್ಪ ಆಡಳಿತವನ್ನು ಮಾಡಿ ಎಂದು ಕಾಂಗ್ರೆಸ್‌ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

ks-eshwarappa

ಇನ್ನೂ ಕಾವೇರಿ ನೀರಿನ ವಿಚಾರವಾಗಿ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ಕರ್ನಾಟಕ ರಾಜ್ಯದಲ್ಲಿ ಕಾವೇರಿ ನೀರಿನ ಸಮಸ್ಯೆ ಇಷ್ಟೊಂದು ಉಲ್ಬಣಗೊಳ್ಳಲು ಕಾರಣ ಡಿ ಕೆ ಶಿವಕುಮಾರ್‌ ಅವರು, ಕೇವಲ ಇಂಡಿಯಾ ಗ್ರೂಪ್ ಗೆ ತೃಪ್ತಿ ಗೊಳಿಸಲು ಹಾಗೂ ಸೋನಿಯಾ ಗಾಂಧಿ ತೃಪ್ತಿ ಗೊಳಿಸಲು ಕದ್ದು ಮುಚ್ಚಿ ನೀರು ಬಿಡುತ್ತಿದ್ದಾರೆ. ಮೊದಲು ನೀರು ಬಿಡುವ ಮೊದಲು ಸರ್ವ ಪಕ್ಷ ಸಭೆ ಮಾಡಬೇಕಿತ್ತು.

ಪರಿಣಿತರ ಹತ್ತಿರ ಕೇಳದೇ ಮುಟ್ಟಾಳುತನ ಮಾಡಿದ್ದಾರೆ. ಇದಾದ ಬಳಿಕ ಮುಖ್ಯಮಂತ್ರಿಗಳು ದೆಹಲಿಯಲ್ಲಿ ಸರ್ವ ಪಕ್ಷದ ಎಂಪಿಗಳ ಸಭೆ ಕರೆದು ಛೀಮಾರಿ ಹಾಕಿಸಿಕೊಂಡರು. ಈಗ ಮೈಸೂರು ಮಂಡ್ಯ ಜನರು ಕಂಗೆಟ್ಟು ಹೋಗಿದ್ದಾರೆ. ಅವರ ಆಕ್ರೋಶದ ಕಟ್ಟೆ ಯಾವಾಗ ಒಡೆಯುತ್ತದೆ ಗೊತ್ತಿಲ್ಲ. ಬಂಗಾರಪ್ಪ ಕಾಲದಲ್ಲೂ ಇದೇ ಪರಿಸ್ಥಿತಿ ಎದುರಾಗಿತ್ತು, ಆಗ ಎಲ್ಲ ಪಕ್ಷದವರು ಬಂಬಲ ನೀಡಿದ್ದರು. ಇದರಿಂದ ಬಂಗಾರಪ್ಪನವರು ದಿಟ್ಟ ಹೆಜ್ಜೆ ಇಟ್ಟಿದ್ದರು, ಸ್ಟ್ಯಾಲಿನ್ ಹಾಗೂ ಸೋನಿಯಾ ಗಾಂಧಿ ಬಳಿ ದೊಡ್ಡ ಮನುಷ್ಯ ಆಗಲು ಕದ್ದು ಮುಚ್ಚಿ ನೀರು ಬಿಟ್ಟಿದ್ದಾರೆ ಡಿ ಕೆ ಶಿವಕುಮಾರ್‌ ಎಂದು ಕಿಡಿಕಾರಿದರು.

ಈ ವಿಚಾರವಾಗಿ ಪೂರ್ಣ ಜವಾಬ್ದಾರಿ ಹೊತ್ತು ಉಪ ಮುಖ್ಯಮಂತ್ರಿ ಸ್ಥಾನಕ್ಕೆ ರಾಜಿನಾಮೆ ನೀಡಬೇಕು.ಕಾವೇರಿ ಕಾಂಗ್ರೆಸ್ ಹಾಗೂ ಡಿ ಕೆ ಶಿವಕುಮಾರ್‌ ಸ್ವತ್ತಲ್ಲ, ಈ ಸಮಯದಲ್ಲಿ ದಿವಂಗತ ಬಂಗಾರಪ್ಪನವರನ್ನು ಎಲ್ಲರೂ ನೆನಪು ಮಾಡಿಕೊಳ್ಳುತ್ತಿದ್ದಾರೆ. ಕಾನೂನು ತಜ್ಞರು ಹಾಗೂ ಎಲ್ಲ ಪಕ್ಷದ ಸಭೆ ಕರೆದಿದ್ದರೆ ಈ ಪರಿಸ್ಥಿತಿ ಬರುತ್ತಿರಲಿಲ್ಲ. ಸ್ಟ್ಯಾಲಿನ್ ಹಾಗೂ ಸೋನಿಯಾ ಗಾಂಧಿಗಾಗಿ ರಾಜ್ಯದ ಜನರಿಗೆ ಅನ್ಯಾಯ ಮಾಡಿದ್ದಾರೆ. ಇದೇ ರೀತಿ ಮುಂದುವರೆದರೆ ರಾಜ್ಯದಲ್ಲಿ ಶಾಂತಿ ಉಳಿಯುತ್ತದೆ ಎಂದು ಹೇಳಲು ಆಗಲ್ಲ ಎಂದು ಹೇಳಿದರು.

ಜೆಡಿಎಸ್ ಹಾಗೂ ಬಿಜೆಪಿ ಮೈತ್ರಿ ವಿಚಾರದಲ್ಲಿ ಮಾತಿನ ಬರದಲ್ಲಿ ಎಚ್‌ ಡಿ ಕುಮಾರಸ್ವಾಮಿ ಎನ್ನುವ ಬದಲು ಡಿಕೆಶಿ ಎಂದು ಬಳಸಿದ ಕೆಎಸ್ ಈಶ್ವರಪ್ಪ. ಈ ವೇಳೆ ಡಿ ಕೆ ಶಿವಕುಮಾರ್‌ಹೆಸರು ಬಳಸುತ್ತಿದ್ದಂತೆ ಶಾಂತಂಪಾಪಂ ಎಂದು ವ್ಯಂಗ್ಯವಾಡಿದ್ದಾರೆ.

ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ಸೇತರ ಸರ್ಕಾರ ಬರಲಿ ಎಂದು ಈಗಾಗಲೇ ಮಾಜಿ ಪ್ರಧಾನಿ ದೇವೇಗೌಡರು ಒಂದು ಹಂತದ ಮಾತುಕತೆ ಮುಗಿಸಿದ್ದಾರೆ. ರೇವಣ್ಣ ಹಾಗೂ ಹೆಚ್ ಡಿ ಕುಮಾರಸ್ವಾಮಿ ಅವರು ಅಮಿತ್ ಶಾ ಜೊತೆ ಮಾತನಾಡಬೇಕಿತ್ತು. ಕಳೆದ ರಾತ್ರಿ 12:30 ವರೆಗೂ ಪಾರ್ಲಿಮೆಂಟ್ ನಡೆದಿದೆ, ಹಾಗಾಗಿ ಮಾತನಾಡುವುದಕ್ಕೆ ಆಗಿರಲಿಲ್ಲ. ಇಂದು ಆ ಮಾತುಕತೆ ಮುಂದುವರೆಯಲಿದೆ.

ದೆಹಲಿಗೆ ಹೆಚ್ ಡಿ ಕುಮಾರಸ್ವಾಮಿ ಅವರು ಹಾಗೂ ರೇವಣ್ಣ ಅವರು ಈಗಾಗಲೇ ಹೋಗಿದ್ದಾರೆ. ಬೆಳಗ್ಗೆ ಅವರ ಜೊತೆ ಹೋಗಿರುವಂತ ಸಾರಾ ಮಹೇಶ್ ಜೊತೆ ನಾನು ಮಾತನಾಡಿದೆ. ಖಂಡಿತ ರಾಜ್ಯಕ್ಕೆ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿಯಿಂದ ರಾಜ್ಯದ ಜನರಿಗೆ ಒಳ್ಳೆಯದಾಗುತ್ತದೆ ಎಂದು ಸಾರ ಮಹೇಶ್ ಅವರು ಹೇಳಿದ್ದಾರೆ ಎಂದರು.

ಈಶ್ವರಪ್ಪರ ಸೆಟಲ್‌ಮೆಂಟ್ ಆಗಿದೆ ಎಂಬ ಡಿ.ಕೆ. ಶಿವಕುಮಾರ್ ಹೇಳಿಕೆ ವಿಚಾರವಾಗಿ ಮಾತನಾಡಿ, ಅದು ಶಿವಕುಮಾರ್ ಅಲ್ಲ. ಅವನ ವಂಶದ ಯಾರಿಂದಲೂ ಸಾಧ್ಯವಿಲ್ಲ. ನನ್ನ ಸೆಟ್ಲಮೆಂಟ್ ಮಾಡೋಕೆ ಯಾರ ಕೈಯಲ್ಲೂ ಅಗಲ್ಲ, ರಾಜಕಾರಣ ಸೈಕಲ್ ಚಕ್ರದ ರೀತಿ ತಿರುಗುತ್ತಾ ಇರುತ್ತೇ. ಅವರು ಜೈಲಿನಲ್ಲಿದ್ದಾಗ ನಾನು ಡಿಸಿಎಂ ಆಗಿದ್ದೆ. ಇದಕ್ಕೇನು ಹೇಳ್ತಾರೆ ಅವರು, ಈಗ ಬೇಲ್ ನಲ್ಲಿದ್ದಾರೆ. ನಾಳೆ ಎಲ್ಲಿಗೆ ಹೋಗ್ತಾರೋ ಗೊತ್ತಿಲ್ಲ ಎಂದು ಕಿಡಿಕಾರಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+