Channapatna: ಕಾಂಗ್ರೆಸ್ ಗೆದ್ದರೆ ಡಿಕೆ ಶಿವಕುಮಾರ್ ಮುಂದಿನ CM...

ಬೆಂಗಳೂರು, ಅಕ್ಟೋಬರ್ 27: ಉಪಚುನಾವಣೆ ಘೋಷಣೆಯಾದ ಮೂರು ಕ್ಷೇತ್ರಗಳ ಪೈಕಿ ರಾಮನಗರ ಜಿಲ್ಲೆಯ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರ ಕಾಂಗ್ರೆಸ್ ಮತ್ತು ಜೆಡಿಎಸ್‌ಗೆ ಪ್ರತಿಷ್ಠೆಯ ಕಣವಾಗಿದೆ. ಕ್ಷೇತ್ರದಲ್ಲಿನ ಸೋಲು ಗೆಲುವಿನ ಆಧಾರದಲ್ಲಿ ರಾಜ್ಯ ರಾಜಕಾರಣದಲ್ಲಿ ಒಂದಷ್ಟು ಬದಲಾವಣೆ ನಿರೀಕ್ಷಿಸಬಹುದಾಗಿದೆ. ಜೆಡಿಎಸ್ ಪ್ರಾಬಲ್ಯ ಇರುವ ಕ್ಷೇತ್ರಗ ಮೇಲೆ ಕಣ್ಣಿಟ್ಟಿರುವ ಕಾಂಗ್ರೆಸ್ ಒಕ್ಕಲಿಗ ನಾಯಕ ಡಿಕೆ ಶಿವಕುಮಾರ್ ಅವರು ಈ ಭಾರಿ ಸಮುದಾಯದ ಮತ ಸೆಳೆಯಲೂ ಭರ್ಜರಿ ಪ್ಲಾನ್ ಮಾಡಿಕೊಂಡಿದ್ದಾರೆ.

ಹೈವೋಲ್ಟೇಜ್ ಕ್ಷೇತ್ರವಾಗಿರುವ ಚನ್ನಪಟ್ಟಣದಲ್ಲಿ ಜೆಡಿಎಸ್ ನಿಂದ ನಿಖಲ್ ಕುಮಾರಸ್ವಾಮಿ ಹಾಗೂ ಕಾಂಗ್ರೆಸ್‌ನಿಂದ ಸಿಪಿ ಯೋಗೇಶ್ವರ ಸ್ಪರ್ಧಿಸಿದ್ದಾರೆ. ಮೊದಲಿನಿಂದಲೂ ಜೆಡಿಎಸ್ ಪ್ರಭಾವ ಇರುವ ಕಡೆಗಳಲ್ಲಿ ಒಕ್ಕಲಿಗರ ಮತಗಳು ನೀರ್ಣಾಯಕವಾಗಿವೆ. ಇದೀಗ ಈ ಕ್ಷೇತ್ರದಲ್ಲಿ ಒಕ್ಕಲಿಗರ ಮತ ಸೆಳೆಯಲು ಡಿಸಿಎಂ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ಕಾಂಗ್ರೆಸ್ ತಯಾರಿ ನಡೆಸಿದೆ.

Congress If Win in Channapatna By Election DK Shivakumar May Become CM

ಒಕ್ಕಲಿಗ ನಾಯಕ ಡಿಕೆಶಿ ಮುಂದಿನ ಸಿಎಂ?

ಚನ್ನಪಟ್ಟಣ ಕೈವಶ ಮಾಡಿಕೊಂಡು ಕಾಂಗ್ರೆಸ್ ಹಿಡಿತ ಮೆರೆಸಲು ನಾಯಕರು ರಣತಂತ್ರ ರೂಪಿಸಿದ್ದಾರೆ. ಈ ಸಂಬಂಧ ಕ್ಷೇತ್ರದ ಪ್ರಬಲ ನಾಯಕರಾಗಿದ್ದ, ಬಿಜೆಪಿಯಿಂದ ಟಿಕೆಟ್ ವಂಚಿತ ನಾಯಕ ಸಿಪಿ ಯೋಗೇಶ್ವರ ಮನವೊಳಿಸಲಾಗಿದೆ. ಒಂದು ವೇಳೆ ಎಲ್ಲವು ಅಂದುಕೊಂಡಂತೆ ಆದರೆ, ಒಕ್ಕಲಿಗರ ಅಭಿಮಾನ, ಸಮುದಾಯ ನಾಯಕ ಡಿಕೆ ಶಿವಕುಮಾರ್ ಅವರ ಮೇಲೆ ಹೆಚ್ಚಾಗುತ್ತಿದೆ. ಬದಲಾದ ರಾಜಕೀಯ ಸನ್ನಿವೇಶದಲ್ಲಿ ಕಾಂಗ್ರೆಸ್‌ನಿಂದ ಒಕ್ಕಲಿಗ ನಾಯಕ ಡಿಕೆ ಶಿವಕುಮಾರ್ ಅವರು ಮುಂದಿನ ಮುಖ್ಯಮಂತ್ರಿ ಆಗಬಹುದು ಎಂದು ವಿಶ್ಲೇಷಿಸಲಾಗುತ್ತಿದೆ.

ಹೌದು, ಒಕ್ಕಲಿಗರ ಮತ ಸೆಳೆಯಲು ತಂತ್ರ ರೂಪಿಸಿರುವ ಡಿಕೆ ಶಿವಕುಮಾರ್ ಅವರು ಸಿಎಂ ಕುರ್ಚಿ ಮೇಲೆ ಕಣ್ಣಿಟ್ಟಿದ್ದಾರೆ. ಕ್ಷೇತ್ರ ಗೆದ್ದರೆ ಸಮುದಾಯವರ ತಮ್ಮೊಂದಿಗೆ ನಿಲ್ಲಲಿದ್ದಾರೆ ಎಂಬುದು ಅವರ ಪ್ಲಾನ್. ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆಯಬೇಕೆಂಬ ಅವರ ತಂತ್ರಗಾರಿಕೆ ಎಷ್ಟರ ಮಟ್ಟಿಗೆ ಯಶಸ್ವಿಯಾಗಲಿದೆ ಎಂಬುದು ಶೀಘ್ರವೇ ಗೊತ್ತಾಗಲಿದೆ.

Congress If Win in Channapatna By Election DK Shivakumar May Become CM

ಕ್ಷೇತ್ರದಲ್ಲಿ ಓಡಾಡಿದ್ದ ಡಿಕೆಶಿ, ಒಕ್ಕಲಿಗ ಮತಗಳ ಮೇಲೆ ಕಣ್ಣು

ಕ್ಷೇತ್ರದಲ್ಲಿ ಮೂರು ತಿಂಗಳಿಂದ ಓಡಾಡಿಕೊಂಡು ಚುನಾವಣೆ ಘೋಷಣೆ ಮೊದಲು ಸುಮಾರು 600 ಕೋಟಿ ರೂ.ಅನದಾನದ ಹೊಳೆ ಹರಿಸಿದ್ದ ಡಿಕೆ ಸುರೇಶ್ ಅವರ ಸಹೋದರ ಡಿಕೆ ಸುರೇಶ್ ಅವರ ಚನ್ನಪಟ್ಟಣ ಅಭ್ಯರ್ಥಿ ಆಗಲಿದ್ದಾರೆ ಎನ್ನಲಾಗಿದೆ.

ಆದರೆ ಇಲ್ಲಿ ಡಿಕೆ ಸುರೇಶ್ ಅವರು ಒಂದು ವೇಳೆ ಸೋತರೆ ಅದು ಡಿಸಿಎಂ ಡಿಕೆ ಶಿವಕುಮಾರ್ ಅವರ ಇಮೇಜ್‌ಗೆ ಡ್ಯಾಮೇಜ್ ಆಗಲಿದೆ ಎಂಬ ಕಾರಣಕ್ಕೆ ಸಿಪಿ ಯೋಗೇಶ್ವರ ಅವರ ಮನವೊಲಿಸಲಾಯಿತು. ಒಂದು ವೇಳೆ ಸಿಪಿ ಯೋಗೇಶ್ವರ ಬಾರದ ಬಿಜೆಪಿಯಿಂದಲೂ ಕಣಕ್ಕಿಳಿಯದೇ ಪಕ್ಷೇತರವಾಗಿ ಸ್ಪರ್ಧಿಸಿದ್ದರೆ, ಕಾಂಗ್ರೆಸ್ ನಿಂದ ಡಮ್ಮಿ ಅಭ್ಯರ್ಥಿ ಹಾಕಲು, ಗೆದ್ದ ಬಳಿಕ ಸಿಪಿವೈ ಅವರನ್ನು ಪಕ್ಷಕ್ಕೆ ಸೆಳೆಯಲು ಪ್ಲಾನ್ ಮಾಡಲಾಗಿದೆ.

ಹೀಗೆ ಕೆಪಿಸಿಸಿ ಅಧ್ಯಕ್ಷರಾಗಿರುವ ಡಿಕೆ ಶಿವಕುಮಾರ್ ಅವರ ನೇತೃತ್ವದಲ್ಲಿ ಜೆಡಿಎಸ್‌ಗೆ ಟಕ್ಕರ್ ಕೊಡುವ ಮುಖೇನ್ ಬಿಜೆಪಿಗೆ ಪಾಠ ಕಲಿಸಲು ಒಂದಷ್ಟು ತಂತ್ರಗಾರಿಕೆ ರೂಪಿಸಲಾಗುತ್ತಿದೆ. ಒಕ್ಕಲಿಗರ ಮತ ಸೆಳೆಯಲು ಕಳೆದ ಮೂರು ತಿಂಗಳಿಂದ ಸಚಿವರನ್ನು ಕ್ಷೇತ್ರ ಭೇಟಿ ಮಾಡಿಸಲಾಗುತ್ತಿದೆ. ಜನರೊಂದಿಗೆ ಕಾಂಗ್ರೆಸ್ ನಿರಂತರ ಸಂಪರ್ಕ ಸಾಧಿಸುವಂತೆ ಮಾಡಿದೆ.

ಇದೆಲ್ಲ ಪ್ರಯತ್ನಗಳ ಫಲವಾಗಿ ಚನ್ನಪಟ್ಟಣದಲ್ಲಿ ಕಾಂಗ್ರೆಸ್ ಗೆದ್ದರೆ, ಡಿಕೆ ಶಿವಕುಮಾರ್ ಅವರು ಹಳೆ ಮೈಸೂರು ಭಾಗದಲ್ಲಿ ಪಕ್ಷ ನೆಲೆಗೊಳಿಸಲು, ಸಂಘಟನೆ ಜೊತೆ ಜೊತೆಗೆ ಮುಖ್ಯಮಂತ್ರಿ ಸ್ಥಾನ ಪಡೆಯಲು ಅಣಿಯಾಗುವ ಸಾಧ್ಯತೆಗಳು ಇವೆ.

ಇದೇ ಅವಧಿಯಲ್ಲಿ ಡಿಕೆಶಿ ಸಿಎಂ ಮಾಡಲು ಸಹಕರಿಸಿ:ಶಾಸಕ

ಇದಕ್ಕೆ ಪೂರಕವೆಂಬಂತೆ ಕಾಂಗ್ರೆಸ್ ಮಾಜಿ ಶಾಸಕ ಎಂಸಿ ಅಶ್ವತ್ ಅವರು, ಸಭೆಯೊಂದರಲ್ಲಿ ಸಿಪಿ ಯೋಗೇಶ್ವರ ಅವರನ್ನು ಗೆಲ್ಲಿಸುವ ಮೂಲಕ ಇದೇ ಸಾಲಿನಲ್ಲಿ ಒಕ್ಕಲಿಗ ಸಮುದಾಯ ನಾಯಕರೊಬ್ಬರನ್ನು ಮುಖ್ಯಮಂತ್ರಿಯನ್ನಾಗಿ ಮಾಡಲು ಮತದಾರರು ಆಶೀರ್ವದಿಸಬೇಕು. ಇಲ್ಲಿ ಪಕ್ಷ ಗೆದ್ದರೆ ಇದೇ ಅವಧಿಯಲ್ಲಿಯೇ ಡಿಕೆ ಶಿವಕುಮಾರ್ ಅವರನ್ನು ಸಿಎಂ ಮಾಡಬಹುದು ಎಂದು ಕೋರಿದ್ದಾರೆ. ಇದು ಸಹ ಸಾಕಷ್ಟು ಚರ್ಚೆ ಆಗುತ್ತಿದೆ.

ಕಾರ್ಯಕರ್ತರಲ್ಲಿ ಡಿಕೆಶಿ ಹುಮ್ಮಸ್ಸು

ಅಲ್ಲದೇ ಬೆಂಗಳೂರಿನ ಸಭೆಯಲ್ಲಿ ಹಿಂದಿನ ಯಾವುದೇ ಕಹಿ ಘಟನೆಗಳನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳದೇ ಚನ್ನಪಟ್ಟಣದಲ್ಲಿ ಪಕ್ಷ ಸಂಘಟನೆ, ಹೆಚ್ಚು ಮತ ಸೆಳೆಯಲು, ಪಕ್ಷ ಅಧಿಕಾರಕ್ಕೆ ತರಲು ಶ್ರಮಿಸುವಂತೆ ಮುಖಂಡರಿಗೆ, ಪಕ್ಷ ಕಾರ್ಯಕರ್ತರಿಗೆ ಸಂದೇಶ ರವಾನಿಸಿದ್ದಾರೆ.

ಮೈತ್ರಿಕೂಟದ ವಿರುದ್ಧ ಡಿಕೆ ಶಿವಕುಮಾರ್ ಹಾಗೂ ಡಿಕೆ ಸುರೇಶ್ ಅವರು ಸರಣಿ ಸಭೆ ನಡೆಸುತ್ತಿದ್ದಾರೆ. ಒಕ್ಕಲಿಗರ ಜೊತೆಗೆ ಇನ್ನಿತರ ಸಮುದಾಯಗಳ ಜೊತೆಗೆ ನಿರಂತರ ಸಂಪರ್ಕ ಸಾಧಿಸುತ್ತಿದ್ದಾರೆ. ತಳಮಟ್ಟದಲ್ಲಿ ಪ್ಲಾನ್ ಮಾಡಿಕೊಂಡಿದ್ದು, ಜೆಡಿಎಸ್ ಹಣಯಲು ಮುಂದಾಗಿದ್ದಾರೆ.

ನಿಖಿಲ್ ಪರ ಎಚ್‌ಡಿಕೆ ಗೆಲುವಿನ ತಂತ್ರಗಾರಿಕೆ

ಇತ್ತ ಹೆಚ್‌ಡಿ ಕುಮಾರಸ್ವಾಮಿ ಅವರು, ದೇವೇಗೌಡರು ಚುನಾವಣಾ ರಾಯಭಾರಿಯಾಗಿ ಕರೆದೊಯ್ಯಲಿದ್ದಾರೆ. ಬಿಜೆಪಿಯಿಂದ ಘಟಾನುಘಟಿ ನಾಯಕರಿಂದ ಕಣದಲ್ಲಿ ಪ್ರಚಾರ ಮಾಡಿಲಿಸದ್ದಾರೆ. ಮುಡಾ ಹಗರಣ, ವಾಲ್ಮಿಕಿ ಹಗರಣ ಸೇರಿದಂತೆ ಸರ್ಕಾರದ ಭ್ರಷ್ಟಾಚಾರಗಳನ್ನು ಜನರ ಮುಂದಿಟ್ಟು ಪುತ್ರನ ಪರ ಮತಯಾಚಿಸಲು ಸಜ್ಜಾಗಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+