"ಬಿಜೆಪಿ ಅಧಿಕಾರದಲ್ಲಿರುವ ಪಾಲಿಕೆಯಲ್ಲಿ ಕಾಂಗ್ರೆಸ್ ಸರ್ಕಾರನಿಂದ ಹಸ್ತಕ್ಷೇಪ"!
ಕರ್ನಾಟಕದ ಪ್ರಮುಖ ಪಾಲಿಕೆಗಳಲ್ಲಿ ಹುಬ್ಬಳ್ಳಿ - ಧಾರವಾಡ ಪಾಲಿಕೆಯು ಒಂದಾಗಿದೆ. ಈ ಪಾಲಿಕೆಯಲ್ಲಿ ಬಿಜೆಪಿ ಅಧಿಕಾರದಲ್ಲಿ ಇದೆ. ಧಾರವಾಡ ಭಾಗದಲ್ಲಿ ಬಿಜೆಪಿ ಬಿಗಿಹಿಡಿತ ಹೊಂದಿದ್ದು, ಇಲ್ಲಿ ಶಾಸಕರು ಹೆಚ್ಚಿನ ಸಂಖ್ಯೆಯಲ್ಲಿ ಬಿಜೆಪಿಯಿಂದಲೇ ಇದ್ದು, ಸಂಸದರು ಸಹ ಬಿಜೆಪಿ ಅವರ. ಮೇಲಾಗಿ ಪಾಲಿಕೆಯಲ್ಲೂ ಬಿಜೆಪಿ ಹಿಡಿತ ಸಾಧಿಸಿದೆ. ಆದರೆ, ಬಿಜೆಪಿ ಕೆಲಸ ಮಾಡುವುದಕ್ಕೆ ರಾಜ್ಯ ಕಾಂಗ್ರೆಸ್ ಸರ್ಕಾರ ಬಿಡುತ್ತಿಲ್ಲ ಎನ್ನುವ ಗಂಭೀರ ಆರೋಪ ಇದೀಗ ಕೇಳಿ ಬಂದಿದೆ. ರಾಜ್ಯ ಕಾಂಗ್ರೆಸ್ ಸರ್ಕಾರವು ನಮ್ಮ ಹಕ್ಕನ್ನು ಕಸಿದುಕೊಳ್ಳುತ್ತಿದೆ ಎಂದು ಸಭಾನಾಯಕ ವೀರಣ್ಣ ಸವಡಿ ದೂರಿದ್ದಾರೆ.
ಎಂಜಿಎಂವೈ ಯೋಜನೆ ಅಭಿವೃದ್ಧಿ ಕಾಮಗಾರಿ ಪೌರಾಡಳಿತದಿಂದ ಕರೆಯಲಾಗುತ್ತಿದೆ. ಇದು ಪಾಲಿಕೆ ಹಕ್ಕು ಕಸಿದು ಕೊಳ್ಳುವ ಕೆಲಸವಾಗಿದೆ ಎಂದು ಆರೋಪಿಸಲಾಗಿದೆ. ಅಲ್ಲದೇ ಪಾಲಿಕೆಯ ಅನುದಾನದಲ್ಲಿಯೂ ಬಹುದೊಡ್ಡ ತಾರತಮ್ಯ ಆಗುತ್ತಿದೆ. ಈಗಾಗಲೇ ಸರ್ಕಾರ 300 ಕೋಟಿ ಅನುದಾನ ಬಾಕಿ ಉಳಿಸಿಕೊಂಡಿದ್ದಾರೆ. ಮೇಯರ್ ಸಿಎಂಗೆ ಮನವಿ ಮಾಡಿದ್ದಾರೆ. ರಾಜ್ಯಪಾಲರಿಗೆ ಕಳುಹಿಸಲಾಗಿದೆ. ಸರ್ಕಾರದಿಂದ ಉತ್ತರ ಬಂದಿಲ್ಲ ಎಂದು ಹುಬ್ಬಳ್ಳಿ - ಧಾರವಾಡ ಪಾಲಿಕೆಯ ಸಭಾನಾಯಕ ವೀರಣ್ಣ ಸವಡಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹುಬ್ಬಳ್ಳಿ - ಧಾರವಾಡ ಪಾಲಿಕೆ 1974ರಲ್ಲಿ ಕಾಂಗ್ರೆಸ್ ನಾಯಕ ರಾಜೀವ ಗಾಂಧಿ ಸ್ಥಳಿಯ ಕಾಯ್ದೆ ಬಲಪಡಿಸಿದ್ದರು. ದುರಾದೃಷ್ಟವಶಾತ್ ಅಂದರೆ ಅದೇ ಪಕ್ಷದ ಸಿಎಂ, ಸಚಿವ ಭೈರತಿ ಸುರೇಶ ಪಾಲಿಕೆ ಬಲವನ್ನು ದುರ್ಬಲ ಮಾಡುತ್ತಿದ್ದಾರೆ. ಯಾವುದೇ ಮಾದರಿಯ ಅನುದಾನ ಬಂದರೂ ಪಾಲಿಕೆಯಿಂದ ಟೆಂಡರ್ ಕರೆಯುವುದು ಮೊದಲಿನಿಂದಲೂ ವಾಡಿಕೆ ಇದೆ. ಸರ್ಕಾರ ಅನುದಾನ ಡಿಎಂಎ ಮುಖಾಂತರ ಕರೆಯಲು ನಿರ್ಧಾರ ಕೈಗೊಂಡಿದ್ದಾರೆ ಎಂದಿದ್ದಾರೆ.
ಯಾವುದೇ ಯೋಜನೆಯನ್ನು ಟೆಂಡರ್ ಕರೆಯಲು ಹಣವಿಲ್ಲ. ಹಣ ವಿಲ್ಲದೆ ಟೆಂಡರ್ ನಲ್ಲಿ ಗುತ್ತಿಗೆದಾರರು ಭಾಗಹಿಸುತ್ತಿಲ್ಲ. ನಮ್ಮ ಹಕ್ಕಿನ ಹಣ ನೀಡುತ್ತಿಲ್ಲ. ಈ ನಿಟ್ಟಿನಲ್ಲಿ ಸಾಂಕೇತಿಕವಾಗಿ ಹೋರಾಟ ಮಾಡಲಾಗಿದೆ. ಅಧಿವೇಶನ ಮುಗಿವರೆಗೂ ಕಾಯುತ್ತೇವೆ. ಒಂದೊಮ್ಮೆ ಇದಾದ ಮೇಲೂ ಸಮಸ್ಯೆ ಬಗೆಹರಿಸದೆ ಇದ್ದರೇ ನಾವು ಮುಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅವರ ಮನೆ ಮುಂದೆ ಹೋರಾಟ ಮಾಡಲಿದ್ದೇವೆ. ಸಭಾಪತಿ ಬೆಲೆಯೇ ಇಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನು ಹುಬ್ಬಳ್ಳಿ - ಧಾರವಾಡದ ಕೆಲವು ವಿಚಾರದಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹಾಗೂ ರಾಜ್ಯ ಸಚಿವ ಸಂತೋಷ್ ಲಾಡ್ ನಡುವೆ ಭಿನ್ನಭಿಪ್ರಾಯ ಇರುವುದು ಇದೆ. ಅಲ್ಲದೇ ಸಂತೋಷ್ ಲಾಡ್ ಅವರು ಈಚೆಗೆ ಕಾರ್ಯಕ್ರಮ ಉದ್ಘಾಟನೆ ಸಮಾರಂಭವೊಂದರಿಂದ ಹೊರ ನಡೆದಿದ್ದು ಸಹ ಸುದ್ದಿಯಾಗಿತ್ತು.
ಇನ್ನು ಹುಬ್ಬಳ್ಳಿ - ಧಾರವಾಡ ಮಹಾನಗರ ಪಾಲಿಕೆಯು ಹಲವು ವಿಚಾರದಲ್ಲಿ ಉತ್ತಮ ಸೇವೆಯನ್ನು ನೀಡುತ್ತಿದೆ. ಆದರೆ, ಪಾಲಿಕೆ ವ್ಯಾಪ್ತಿಯಲ್ಲಿ ನೀರಿನ ಸಮಸ್ಯೆಗೆ ಇನ್ನೂ ಪರಿಹಾರ ಸಿಕ್ಕಿಲ್ಲ. ರಸ್ತೆಗಳು ಡಾಂಬರು ಕಾಣದೆ ಕಚ್ಚಾ ರಸ್ತೆಯಂತಾಗಿದೆ. ಮಳೆ ಬಂದರೆ ಇನ್ನೂ ಹುಬ್ಬಳ್ಳಿ - ಧಾರವಾಡದ ಹಲವು ರಸ್ತೆಗಳು ಜಲಾವೃತವಾಗುತ್ತವೆ. ಈ ಸಮಸ್ಯೆಗಳಿಗೆ ಪಾಲಿಕೆ ಪರಿಹಾರ ಕಂಡುಕೊಳ್ಳಬೇಕಿದೆ.












Click it and Unblock the Notifications